ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೀರುತ್ತಿವೆ ಮನುಶ್ಯರೂಪಿಯ ಜಿರಳೆಗಳು

ಹೀರುತ್ತಿವೆ ಮನುಶ್ಯರೂಪಿಯ ಜಿರಳೆಗಳು ಬಾರತವನ್ನು. ಕೆಳಗಿನ ಮಿಂಬಲೆ ಕೊಂಡಿಯನ್ನು ತೆರೆದು ನೊಡಿ. ಈಗ ನಮ್ಮೆದುರಿಗೆ ಇರುವ ಸಾವಾಲು ಈ ನಿಟ್ಟಿನಲ್ಲಿ ನಾವೇನು ಮಾಡುವುದು?

http://timesofindia.indiatimes.com/Germany_offers_black_money_data_to_India/articleshow/3057422.cms

http://timesofindia.indiatimes.com/articleshow/msid-3057422,prtpage-1.cms

ಕೆಟ್ಟ ಸುದ್ದಿ ಯಾವುದು?

ಪತ್ರಿಕೆ ಓದುತ್ತಿದ್ದ ಸುರೇಶನನ್ನು ರಮೇಶ ಕೇಳಿದ, "ಏನಪ್ಪಾ, ಏನಾದರೂ ವಿಶೇಷವಾರ್ತೆ ಇದೆಯಾ?'
'ಇ೦ದು ಒಳ್ಳೆಯ ಸುದ್ದಿ, ಇನ್ನೊ೦ದು ಕೆಟ್ಟ ಸುದ್ದಿ ಇದೆ.'
'ಒಳ್ಳೆಯ ಸುದ್ದಿ ಯಾವುದು?'
'ಬುದ್ಧಿಜೀವಿಗಳನ್ನು ತು೦ಬಿಕೊ೦ಡು ಹೋಗುತ್ತಿದ್ದ ಬಸ್ಸು ಕೆರೆಗೆ ಅಯ ತಪ್ಪಿ ಬಿದ್ದು ಬಿಟ್ಟಿತ೦ತೆ. ಬಸ್ಸಿನಲ್ಲಿದ್ದವರು ಯಾರೂ ಉಳಿಯಲಿಲ್ಲವ೦ತೆ.'

ಓದಿದ್ದು ಕೇಳಿದ್ದು ನೋಡಿದ್ದು-141 ನಿಮ್ಮ ವೈರಿಯನ್ನು ಸಾಯಿಸುವುದು ಹೇಗೆ?

ನಿಮ್ಮ ವೈರಿಯನ್ನು ಸಾಯಿಸುವುದು ಹೇಗೆ?
ತಲವಾರು ಹಿಡಿದು ಕೊಚ್ಚಿ ಬಿಡಬೇಕ? ಬೇಡ, ಸುಲಭವಾದ ದಾರಿಯೊಂದಿದೆ! ನೀವು ಆತನ ಗೆಳೆತನ ಬೆಳೆಸಿಕೊಳ್ಳಿ.
ಮಿತ್ರತ್ವವಿದ್ದಲ್ಲಿ ವೈರತ್ವ ಸಾಯುತ್ತದೆ.

ಅನಾಮಿ -ಉದಯವಾಣಿಯ ಮಾತಿನ ಹಾರ ಅಂಕಣದಿಂದ

----------------------------------------------------------------------------

’ಭಕ್ತಾಷ್ಟಕ'- ಪರಮಪೂಜ್ಯ, ಶ್ರೀ. ವಿರಜಾನಂದ ಸರಸ್ವತಿ ಮಹರಾಜ್ ರವರ, ಭಗವದ್ಗೀತಾ-ಉಪನ್ಯಾಸಮಾಲೆಯ ಸಂಪಾದಿತ ಗ್ರಂಥ !

"ಭಕ್ತಾಷ್ಟಕ," ಪುಸ್ತಕದ ಸಂಪಾದಕ ಕರ್ತೃ, ಡಾ. ಶ್ರೀಪಾದ್ ರವರು, ಒಬ್ಬ ಭೌತಶಾಸ್ತ್ರದ ವಿದ್ಯಾರ್ಥಿ. ತಮ್ಮ ಪ್ರಮುಖ ಕೃಷಿ, ವಿಜ್ಞಾನವಾದಾಗ್ಯೂ ಪಾರಮಾರ್ಥದಲ್ಲಿ ವಿಶೇಷವಾದ ಆಸಕ್ತಿ, ಗೌರವ, ಹಾಗೂ ಒಲವುಳ್ಳವರು. ಇದಕ್ಕೆ ಅವರ ಮನೆತನದ ಪರಿಸರವೇ ಪ್ರಮುಖಕಾರಣ. ವಿಚಾರವಂತ ತಂದೆತಾಯಿ, ಅಜ್ಜ ಅಜ್ಜಿ, ಚಿಕ್ಕಪ್ಪ ಇವರುಗಳ ಆಶೀರ್ವಾದ ಹಾಗೂ ಜೀವನಶೈಲಿ, ಲೇಖಕರ ಹೃದಯದಲ್ಲಿ ಎಲ್ಲೋ ಒಂದು ಕಡೆ ಅಚ್ಚಾಗಿರುವ ಕಾರಣದಿಂದಲೇ, ಶ್ರೀಯವರ ಉಪನ್ಯಾಸಗಳನ್ನು ಆಲಿಸುತ್ತಿದ್ದಂತೆಯೇ ಆ ಸಂಸ್ಕಾರ ಅವರಲ್ಲಿ ಜಾಗೃತವಾಗಿ, ಈ ಒಂದು ಸತ್ಕಾರ್ಯಕ್ಕೆ ಎಡೆಮಾಡಿ ಕೊಟ್ಟಿರುವುದು, ಅವರನ್ನು ತೀರಾ ಹತ್ತಿರದಿಂದ ಗಮನಿಸುತ್ತಿರುವ ನನ್ನ ಗಮನಕ್ಕೆ ಬರುತ್ತಿದೆ.

’ಭಕ್ತಾಷ್ಟಕ'- ಪರಮಪೂಜ್ಯ, ಶ್ರೀ. ವಿರಜಾನಂದ ಸರಸ್ವತಿ ಮಹರಾಜ್ ರವರ, ಭಗವದ್ಗೀತಾ-ಉಪನ್ಯಾಸಮಾಲೆಯ ಸಂಪಾದಿತ ಗ್ರಂಥ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಹೊ. ರಾ. ಶ್ರೀಪಾದ್

"ಭಕ್ತಾಷ್ಟಕ," ಪುಸ್ತಕದ ಸಂಪಾದಕ ಕರ್ತೃ, ಡಾ. ಶ್ರೀಪಾದ್ ರವರು, ಒಬ್ಬ ಭೌತಶಾಸ್ತ್ರದ ವಿದ್ಯಾರ್ಥಿ. ತಮ್ಮ ಪ್ರಮುಖ ಕೃಷಿ, ವಿಜ್ಞಾನವಾದಾಗ್ಯೂ ಪಾರಮಾರ್ಥದಲ್ಲಿ ವಿಶೇಷವಾದ ಆಸಕ್ತಿ, ಗೌರವ, ಹಾಗೂ ಒಲವುಳ್ಳವರು. ಇದಕ್ಕೆ ಅವರ ಮನೆತನದ ಪರಿಸರವೇ ಪ್ರಮುಖಕಾರಣ. ವಿಚಾರವಂತ ತಂದೆತಾಯಿ, ಅಜ್ಜ ಅಜ್ಜಿ, ಚಿಕ್ಕಪ್ಪ ಇವರುಗಳ ಆಶೀರ್ವಾದ ಹಾಗೂ ಜೀವನಶೈಲಿ, ಲೇಖಕರ ಹೃದಯದಲ್ಲಿ ಎಲ್ಲೋ ಒಂದು ಕಡೆ ಅಚ್ಚಾಗಿರುವ ಕಾರಣದಿಂದಲೇ, ಶ್ರೀಯವರ ಉಪನ್ಯಾಸಗಳನ್ನು ಆಲಿಸುತ್ತಿದ್ದಂತೆಯೇ ಆ ಸಂಸ್ಕಾರ ಅವರಲ್ಲಿ ಜಾಗೃತವಾಗಿ, ಈ ಒಂದು ಸತ್ಕಾರ್ಯಕ್ಕೆ ಎಡೆಮಾಡಿ ಕೊಟ್ಟಿರುವುದು, ಅವರನ್ನು ತೀರಾ ಹತ್ತಿರದಿಂದ ಗಮನಿಸುತ್ತಿರುವ ನನ್ನ ಗಮನಕ್ಕೆ ಬರುತ್ತಿದೆ.

ಒಂದು ಉತ್ತಮ ಬ್ಲಾಗ್

http://balavana.wordpress.com

ಮಕ್ಕಳಿಗೆ ಹೇಳಲು ಒಳ್ಳೆ ಕಥೆಗಳು ಇವೆ....  ಬ್ಲಾಗ್ ಬರೆಯುತ್ತಿರುವವರಿಗೆ ನನ್ನಿ

http://www.puttiprapancha.blogspot.com/

ಕನ್ನಡಪ್ರಭದಲ್ಲಿ ಸಿಕ್ಕಿತು..   ಈಗಾಗಲೆ ಸಂಪದಕ್ಕೆ ಇದರ ಪರಿಚಯ ಆಗಿದಲ್ಲಿ, ಕ್ಷಮಿಸಿ :)  ಹರಿ ಅವರೆ..  ಇದು repeat  ಆಗಿದಲ್ಲಿ ದಯವಿಟ್ಟು ತೆಗೆದು ಬಿಡಿ.

 

 

ಒಂದು ಮುಂಜಾವಿನಲೀ....

ಜನವರಿಯ ಕೆಟ್ಟ ಚಳಿಗೂ ಕರುಣೆ ತೋರದ ಅಲಾರಾಂ ಸರಿಯಾದ ಸಮಯಕ್ಕೆ ಹೊಡ್ಕೋಳುತ್ತೆ. ನಿದ್ದೆಗಣ್ಣಲ್ಲೇ ತಡಕಾಡಿ ಫೋನ್ ನಲ್ಲಿ ಟೈಮ್ ನೋಡಿದ್ರೆ 5.07. ಮುಖ ತೊಳೆದು ಕೆದರಿರೋ ಕೂದಲಿಗೆ ರಿಬ್ಬನ್ ಬಿಗಿದು, ಶೂಸ್ ಏರಿಸಿ ಟಪ ಟಪ ಸದ್ದು ಮಾಡುತ್ತ ರೋಡಿಗಿಳಿದ್ರೆ, ಕಾಲಿಂದ ತಲೇವರ್ಗೂ ಗಡ ಗಡ ನಡುಗಿಸುವ ಚಳಿ. ಫೋನಿಗೆ ಹ್ಯಾಂಡ್ಸ್ ಫ್ರೀ ಕನೆಕ್ಟ್ ಮಾಡಿದ ಕೂಡಲೇ ಭಾಗ್ಯಾದಾ ಲಕ್ಷ್ಮಿ ಬಾರಮ್ಮಾ, ಸುಪ್ರಭಾತ ತೇಲಿ ಬರುತಿತ್ತು, ಮುಷ್ಟಿಯನ್ನು ಟ್ರೌಶರ್ ಜೇಬಿನಲ್ಲಿಳಿಸಿ ಸಣ್ಣಗೆ ವಿಷಲ್ ಹಾಕ್ತಾ ನಡೆದೆ. ಚಳೀಗೆ ವಿಷಲ್ಲೂ ಸರೀಗೆ ಬರ್ತಿಲ್ಲ.

ಗೃಹಿಣಿಯೊಬ್ಬಳು ಮನೆಯಂಗಳವನ್ನು ಗುಡಿಸೋ ಸದ್ದು ಎಷ್ಟೋ ದೂರದಿಂದ ಕೇಳಿ ಬರ್ತಲೇ ಇತ್ತು. ಕೈಗೆಟುಕುವಷ್ಟು ಸನಿಹದಲ್ಲಿ ಹೆಸರರಿಯದ ಪಕ್ಷಿ ಸೊಯ್ಯನೆ ಹಾರಿಹೋಯ್ತು. ಅಯ್ಯಪ್ಪ ಸ್ವಾಮಿ ಭಕ್ತನೊಬ್ಬ ಬೀದಿ ನಲ್ಲಿಗೇ ತನ್ನ ನಡುಗುವ ಮೈಯೊಡ್ಡಿ ನೆನೆಯುತ್ತಿದ್ದ. ಅವರಿವರು ಕೇಳುವ ಹಾಡನ್ನು ಹಾಕುತ್ತಿದ್ದ ಎಫ್.ಎಮ್ ನ ರೇಡಿಯೋ ಜಾಕಿ ಅಷ್ಟು ಬೆಳಿಗ್ಗೆಯೂ ಉತ್ಸಾಹದಿಂದ ಚಿಮ್ಮುತ್ತಿದ್ದ. ಪೇಪರ್ ಹಾಕೋ ಹುಡುಗ್ರು ನಿದ್ದೆ ಮುಗಿಯದ ಮುಖ ಹೊತ್ತು ತಮ್ಮದೇ ಲೋಕದಲ್ಲಿ ಸೈಕಲ್ ಮೇಲೆ ಹೊರಟಿದ್ರು. ಕಣ್ಣು ಮಾತ್ರ ಕಾಣೋ ಹಾಗೆ ಸ್ಕಾರ್ಫ್ ಕಟ್ಟಿದ್ದ ಹೆಣ್ಣೊಬ್ಬಳು ಬ್ಯಾಗ್ ಹಿಡಿದು ಹೂ ತರಲು ಮಾರ್ಕೆಟ್ಟಿನ ದಾರಿ ಹಿಡಿದಿದ್ದಳು. ಬೆಳಗ್ಗಿನ ಮೊದಲ ಬಸ್ಸಿಗೆ ಕಾದು ನಿಂತಿರೋ ಬಸ್ ಸ್ಟಾಪಿನ ಜನ, ಚಳಿಯಲ್ಲಿ ಮುಳುಗೇಳುತ್ತಿದ್ದಾರೆನಿಸಿತು. ಚಳಿಗೆ ಮೈ ಚೂರು ಒಗ್ಗಿಕೊಂಡಂತೆನಿಸಿ ಪಾರ್ಕಿನೊಳಗಡಿಯಿಟ್ಟೆ.

ಕನ್ನಡ ಪ್ರಭ, ಪ್ರಜಾವಾಣಿ ಯುನಿ ಕೋಡಿನಲ್ಲಿ?

ಇಂದು ಗೂಗಲಿಸುತ್ತಿರುವಾಗ ಗಮನಿಸಿದ ಒಂದು ವಿಚಾರ:
ನಾನು ಯುನಿಕೋಡ್ ಕನ್ನಡದಲ್ಲಿ ಗೂಗಲಿಸಿದಾಗಲೂ ಪ್ರಜಾವಾಣಿ, ಕನ್ನಡಪ್ರಭ ಪುಟಗಳು ಬರುತ್ತವೆ. ಆದರೆ ಆ ಪುಟಗಳು ಆನ್ಸಿಯಲ್ಲಿವೆ. ಗೂಗಲ್ ಕೇಶ್ ಹೋಗಿ ನೋಡಿದೆ(ಕೊಂಡಿ ಕೆಳಗಿದೆ), ಅದು ಯುನಿಕೋಡಿನಲ್ಲಿ ಸ್ಪಷ್ಠವಾಗಿದೆ. ಯಾಕೆ ಹೀಗೆ?

ನಿರೀಕ್ಷೆಯಲ್ಲಿ...ಹಾಗೇ ಸುಮ್ಮನೆ

ನಾವು ಚಿಕ್ಕವರಿರುವಾಗ ಮಕ್ಕಳೆಲ್ಲರೂ ಸೇರಿ ನೆಲದ ಮೇಲೆ ಎರಡೂ ಕೈಗಳನ್ನಿರಿಸಿ "ಅಟ್ಟಾ ಮುಟ್ಟಾ" ಆಟವಾಡುವಾಗ ಅದರಲ್ಲಿ ಬರುವಂತಹ "ನಿನ್ನ ಗಂಡ ಎಲ್ಲಿಗೆ ಹೋದ? ಕಾಶಿಗೆ ಹೋದ..ಏನು ತಂದ? ಗಿರಿಗಿಟಿ ತಂದ.. ಯಾರಿಗೆ ಕೊಟ್ಟ? ಅರಸನ ಮಗಳಿಗೆ ಕೊಟ್ಟ..."ಎಂದು ಹೇಳಿ ಮುಗಿಸುವಾಗ 'ಏನು ತಂದ? ಯಾರಿಗೆ ಕೊಟ್ಟ ?'ಎಂಬ ಪ್ರಶ್ನೆಗಳು ನನ್ನನ್ನು ಅಷ್ಟೊಂದು ಚಿಂತೆಗೀಡು ಮಾಡಿರಲಿಲ್ಲ. ಹುಂ!