ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರಿಯ ಓದುಗರೇ ನಿಮಗೆ ಹೆಸರಾಂತ ಪತ್ತೇದಾರಿ ಸಾಹಿತಿ 'ಕೌಂಡಿನ್ಯ' ಅಥವಾ ವೈ ಏನ್ ನಾಗೇಶ್ ಗೊತ್ತ? ಅವರ ಕಾದಂಬರಿಗಳನ್ನ ಓದಿದ್ದೀರ? ಹೇಗನ್ನಿಸಿತು?

ನಾನು ಮೊದಲ ಸಾರಿ ಕೌಂಡಿನ್ಯ ಅವರ ಕಾದಂಬರಿಯನ್ನ ಬುಕ್ ಸ್ಟಾಲ್ ಒಂದರಲ್ಲಿ(ರಾಯಚೂರು) ಖರೀದಿಸಿ ಟೈಮ್ ಪಾಸ್ಗೆ ಅಂಥ ಓದಲು ಶುರು ಮಾಡ್ದೆ.

ಮೊದಲಲ್ಲಿ ಓದು ಒಂಥರಾ ವಿಶೇಷ ಅನ್ನಿಸಿತು... ನಂತರ ಅವರ ಕೌಂಡಿನ್ಯ ವಿಶೇಷ ಹೆಸರಿನ ಬುಕ್ ಅನ್ನು ಪ್ರತಿ ತಿಂಗಳು ಕೊಂದು ಓದಲು ಶುರು ಮಾಡ್ದೆ .

ಅವರ ಹಾಸ್ಯ, ಕ್ರೈಂ,ಶೃಂಗಾರ,ವನ್ನು ಅವರ ಕಾದಂಬರಿಗಳಲ್ಲಿ ಬಳಸುವ ರೀತಿ ಅಮೋಘ....

ಒಮ್ಮೊಮ್ಮೆ ಹೀಗೂ ಆಗುವುದು

ನಂಗೆ ಆ ದಿನವೇ ಅನ್ನಿಸಿತ್ತು ಈ ಮುದುಕನ ನೋಟದಲ್ಲಿ ಅದೇನೋ ಇದೆ ಅಂತ.
ಇಲ್ಲವಾದರೆ ಅವತ್ತು ಇಂಟರ್‌ವ್ಯೂನಲ್ಲಿ ಯಾವ ಪ್ರಶ್ನೇನು ಕೇಳದೆ "ಯು ಆರ್ ಸೆಲೆಕ್ಟೆಡ್ " ಅಂತ ಕೈಕುಲಕಲು ಬರುತ್ತಿದ್ದನಾ?

ಇನ್ನೂ ಹೊಗೆಯಾಡುತ್ತಲೇ ಇದೆ!!

ನಿಮಗೆ ನೆನಪಿದೆಯಾ? ಅಂದು ಗಾಂಧೀಜಿಯವರ ಹುಟ್ಟಿದ ಹಬ್ಬದ ದಿನ ಎಲ್ಲ ಪತ್ರಿಕೆಗಳಲ್ಲಿ,ಚಾನೆಲ್ಗಳಲ್ಲಿ ಒಂದೇ ಸುದ್ದಿ ಗಿರಕಿ ಹೊಡೆಯುತ್ತಿತ್ತು.ಅದೇ 'ಸಾರ್ವಜನಿಕ ಹಾಗು ಖಾಸಗಿ ಜನನಿಬಿಡ ಪ್ರದೇಶಗಳಲ್ಲಿ ಧೂಮಪಾನ ನಿಷೇದ' ಮಾಡಿರುವ ಬಗ್ಗೆ.

ಕವನಗಳು ಕುವೆಂಪು ಮತ್ತು ದ.ರಾ. ಬೇಂದ್ರೆ

ಸಂಪದ ಮಿತ್ರರಿಗೆ
ಇಲ್ಲಿ ಕುವೆಂಪು ಮತ್ತು ದ.ರಾ. ಬೇಂದ್ರೆಯವರ ಕೆಲವು ಕವನಗಳು ಅಡಕ ಮಾಡಿದ್ದೇನೆ,

ಓದುಗ ಮಿತ್ರರೆ ಬಾಲ್ಯದಲ್ಲಿ ದಿನವೂ ಕಂಠಪಾಠ ಮಾಡಲು ಹೇಳುತ್ತಿದ್ದ ನಮ್ಮೆಲ್ಲರ ಮಾಸ್ತರರ ನೆನೆಪು ಬರಲಿಕ್ಕೆ

ಹಾಗೂ ನಾವು ಮರೆತಿರುವ ಕವಿವಾಣಿಗಳ ಜ್ಣಾಪಕಕ್ಕಾಗಿ

 http://docs.google.com/gview?attid=0.1&thid=11ebabeb5ca68979&a=v

ಕೃಪೆ : ಮಧುಸೂದನ್ ಗೌಡ.

ಶ್ರೀಪಡ್ರೆ ಬ್ಲಾಗ್ "ಜೀವಜಲ"

 ಕಳೆದವಾರ ಮಂಗಳೂರಿನಲ್ಲಿ ನೀರ ನಿಶ್ಚಿಂತೆ ಕಾರ್ಯಾಗಾರ ನಡೆಯಿತು.

ಬ್ಲಾಗುಗಳನ್ನು ಬರೆಯುವುದು ಹೇಗೆ, ಅಂತರ್ಜಾಲದಲ್ಲಿ ಪ್ರಕಟಿಸುವುದು ಹೇಗೆ ,ಕನ್ನಡದಲ್ಲಿ ಟೈಪಿಸುವ ಬಗ್ಗೆ ವಿಚಾರ ವಿನಿಮಯ ಆಯಿತು. ಶ್ರೀಪಡ್ರೆಯವರಂತವರು ಇದುವರೆಗೆ ಬ್ಲಾಗು ಬರವಣಿಗೆ ನಡೆಸದ ಬಗ್ಗೆ ಅಚ್ಚರಿಯೂ ವ್ಯಕ್ತವಾಯಿತು.

ರಾತ್ರಿಯಲ್ಲಿ: ಕಾಫ್ಕಾ ಕಥೆ

ತಲೆ ಬಗ್ಗಿಸಿಕೊಂಡು ಯೋಚನೆಯಲ್ಲೇ ಕಳೆದು ಹೋಗುವ ಹಾಗೆ ಕತ್ತಲಲ್ಲಿ ಕಳೆದುಹೋಗಿರುವೆ. ಸುತ್ತಲೂ ಜನ ಮಲಗಿ ನಿದ್ರೆ ಹೋಗಿದಾರೆ. ಮನೆಯಲ್ಲಿ ಮಲಗಿದೇವೆ, ಕ್ಷೇಮವಾಗಿ ಹಾಸಿಗೆಯ ಮೇಲೆ, ಸುರಕ್ಷಿತವಾಗಿ ನಮ್ಮ ಮನೆಯ ಕೋಣೆಯಲ್ಲಿ ಮೈ ಚಾಚಿ, ಮುದುರಿಕೊಂಡು, ದುಪಟಿ ಹೊದ್ದು, ಕಂಬಳಿ ಸುತ್ತಿಕೊಂಡು ಮಲಗಿದೇವೆ ಅನ್ನುವುದು ಸುಮ್ಮನೆ ಆಡುತ್ತಿರುವ ನಾಟಕ, ಮುಗ್ಧ ಆತ್ಮವಂಚನೆ. ನಿಜವಾಗಿ ಅವರೆಲ್ಲರೂ ಹಿಂದೆ ಒಂದಾನೊಂದು ಕಾಲದಲ್ಲಿ ಕುರಿಮಂದೆಯ ಹಾಗೆ ಒಗ್ಗೂಡಿಕೊಂಡು, ಆಮೇಲೆ ನಿರ್ಜನ ಬಯಲಿನಲ್ಲಿ ಕ್ಯಾಂಪು ಮಾಡಿಕೊಂಡು ಇದ್ದ ಹಾಗೆಯೇ ಇದಾರೆ. ಅಸಂಖ್ಯಾತ ಜನ. ಬತ್ತಲೆ ಆಕಾಶದ ಕೆಳಗೆ, ಕೊರೆಯುವ ಬರಿ ನೆಲದ ಮೇಲೆ ತಾವು ನಿಂತಿದ್ದ ಜಾಗದಲ್ಲೇ ಕುಸಿದು ಬಿದ್ದ ಸೈನಿಕರು, ಮೊಳಕೈಗೆ ಹಣೆಯೊತ್ತಿ, ಸದ್ದಿಲ್ಲದೆ ಉಸಿರಾಡುತ್ತಾ ಬಿದ್ದುಕೊಂಡಿರುವವರು. ನೋಡುತ್ತಾ ಇರುವ ನೀನು ಕಾವಲುಗಾರರಲ್ಲಿ ಒಬ್ಬ. ಪಕ್ಕದಲ್ಲಿ ಬಿದ್ದಿರುವ ಕಟ್ಟಿಗೆ ರಾಶಿಯಿಂದ ಕೋಲೆಳೆದುಕೊಂಡು ಪಂಜು ಮಾಡಿ ಆಡಿಸುತ್ತಾ ಇನ್ನೊಬ್ಬ ಕಾವಲಿನವನು ಇದ್ದಾನೋ ಅಂತ ನೋಡುವೆ. 

ಏನು ನೋಡುತಾ ಇದೀಯ?

ನೋಡುತಾ ಇರುವವರು, ಕಾಯುತಾ ಇರುವವರು ಇರಬೇಕು ಅನ್ನುತಾರೆ. ಇನ್ನೂ ಯಾರೋ ಇರಲೇ ಬೇಕು.