ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸುಖಪುರುಷನ ನಾಲ್ಕು ಸೂತ್ರಗಳು

(ಅಮೆರಿಕಾದಲ್ಲಿ ಕೆಲಸ ಮಾಡುವ ಒಂದಷ್ಟು ವಿದೇಶೀ ಮನಸ್ಸುಗಳು ಬೆರೆಯುವ ಪರಿ ಹೇಗಿದ್ದೀತು? ಎರಡು ಹೆಸರಿಟ್ಟುಕೊಂಡ ಒಬ್ಬ ಚೀನೀಯ, ಅಮೆರಿಕನ್ ಲಾಭದ ಲೆಕ್ಕಾಚಾರ ಹಾಕುವ ವಿದ್ಯಾರ್ಥಿ- ಇವರ ನಡುವೆ ಭಾರತನಾರಿಯ ಹುಡುಕಾಟದಲ್ಲಿರುವ ಭಾರತೀಯ ಹಾಗೂ ಈತನ ಸುಖಸೂತ್ರ ! -- ಮಲ್ಲಿ ಸಣ್ಣಪ್ಪನವರ್)
ನಾನು ಆಫೀಸಿನಿಂದ ಮನೆಗೆ ಬರುವುದನ್ನೇ ಕಾಯುತ್ತಾ ಇರುತ್ತಾನೆ ನನ್ನ ಚೈನೀಸ್ ರೂಮ್ಮೇಟ್। ಅವನ ಹೆಸರು `ಮೀಂಗ್ ಚಾ'। `ಪೀಟರ್' ಅನ್ನೋದೂ ಅವನ ಹೆಸರೇ। ಅವನ್ಯಾಕೆ ಎರಡು ಹೆಸರು ಇಟ್ಟುಕೊಂಡ್ಡಿದ್ದಾನೆ ಎಂದು ನೀವು ಕೇಳಬಹುದು. ಚೈನಾದಿಂದ ಅಮೆರಿಕಾಗೆ ಬರುವ ಬಹಳಷ್ಟು ಮಂದಿ ಹೆಸರನ್ನು ಬದಲಾಯಿಸುವುದು ರೂಢಿ. ಕಾರಣ- ಅಮೆರಿಕಾದವರಿಗೆ ಇವರ ಹೆಸರನ್ನು ಉಚ್ಚಾರ ಮಾಡುವುದು ಸ್ವಲ್ಪ ಕಷ್ಟ ಎಂಬುದು ಇವರ ವಾದ. ಅವರಷ್ಟೇ ಏಕೆ ? ನಮ್ಮ ದೇಶಿಯರೇನು ಕಮ್ಮಿ ಇಲ್ಲ, ನಮ್ಮ `ಜೈಕಿಶನ್' ಇಲ್ಲಿಗೆ ಬಂದು `ಜಾಕ್ಸನ್' ಆಗುತ್ತಾನೆ, `ಹರೀಶ' `ಹ್ಯಾರಿ' ಆಗುತ್ತಾನೆ, ಅಷ್ಟೇ ಏಕೆ ಬಸಪ್ಪ ಇಲ್ಲಿ bus ಆಗುವುದೂ ಉಂಟು! ಕೆಲವು ಸನ್ನಿವೇಶಗಳಲ್ಲಿ ಇದು ವಿಪರೀತಕ್ಕೆ ಹೋಗುತ್ತದೆ. ಉದಾಹರಣೆಗೆ ನನ್ನ ಒಬ್ಬ ಸಹಪಾಠಿಯ ಹೆಸರು `ವಿಶ್ವನಾಥ್'. ಆದರೆ ಇಲ್ಲಿಗೆ ಬಂದ ಮೇಲೆ ಅವನು ಹೆಸರನ್ನು `ವಿಷ್' ಅಂತ ಬದಲಿಸಿಕೊಂಡಿದ್ದಾನೆ. ಇದನ್ನು ಹಿಂದಿಗೆ ಅನುವಾದಿಸಿದಾಗ ಇದರ ಅರ್ಥ `ವಿಷ' ಎಂದಾಗುವುದು ತುಂಬಾ ವಿಷಾದದ ಸಂಗತಿ.

ವಾಲ್‍ಸ್ಟ್ರೀಟ್‍ನಲ್ಲಿ ರಕ್ತಪಾತ!

ಪ್ರಪಂಚದ ಹಣಕಾಸು ಪರಿಸ್ಥಿತಿ ಕೆಟ್ಟು ಮೂರಾಬಟ್ಟೆಯಾಗುತ್ತಿರುವುದಕ್ಕೆ ಚಪ್ಪರ ಶಾಸ್ತ್ರ ಆಗಿದ್ದು ಇದೇ ರಸ್ತೆಯಲ್ಲಿ. ಡಾಲರುಗಳ ಮತ್ತು ನಮ್ಮ ರೂಪಾಯಿಗಳ ಮಾರಣಹೋಮಕ್ಕೆ ಸಾಕ್ಷಿಯಾದ ಈ ರಕ್ತಸಿಕ್ತ ಬಸವನಗುಡಿ ರಸ್ತೆಯಲ್ಲಿ ಒಂದು ಹಿಮ್ಮುಖ ನಡಿಗೆ...

ಹನ್ನೆರಡು ಜ್ಯೋತಿರ್ಲಿಂಗಗಳು - ೧ [ಸೌರಾಷ್ಟ್ರದ ಸೋಮನಾಥ].

ಭಾರತದ ವಿವಿಧ ಭಾಗಗಳಲ್ಲಿ ಜ್ಯೋತಿರ್ಲಿಂಗಗಳು ಹರಡಿಕೊಂಡಿವೆ.
ಈ ಹನ್ನೆರಡು ಜ್ಯೋತಿರ್ಲಿಂಗಗಳ ಯಾತ್ರೆ ಹೇಗೆ ಎಂದು ತಿಳಿಯೋಣ.

ಸೌರಾಷ್ಟ್ರೇ ಸೋಮನಾಥ೦ ಚ |
ಶ್ರೀಶೈಲೇ ಮಲ್ಲಿಕಾರ್ಜುನ೦ |
ಉಜ್ಜಯಿನ್ಯಾಂ ಮಹಾಕಾಲ೦ ಚ |
ಓ೦ಕಾರಮಮಲೇಶ್ವರಂ |
ಪರಾಲ್ಯಾ೦ ವೈದ್ಯನಾಥ೦ ಚ |
ಡಾಕಿಣ್ಯಾ೦ ಭೀಮಶಂಕರಂ |
ಸೇತುಬ೦ಧೇ ತು ರಾಮೇಶ೦ |
ನಾಗೇಶ೦ ಧಾರುಕಾವನೆ |
ವಾರಣಸ್ಯಾ೦ತು ವಿಶ್ವೇಶಂ |
ತ್ರ್ಯ೦ಬಕ೦ ಗೌತಮೀತಟೆ |
ಹಿಮಾಲಯೇ ತು ಕೇದಾರ೦ |
ಘುಷ್ಮೇಶ್ವರಂ ಚ ಶಿವಾಲಯೇ ||
ಏತಾನಿ ಜ್ಯೋತಿರ್ಲಿ೦ಗಾನಿ ಸಾಯ೦ ಪ್ರಾತಃ ಪಠೇನ್ನರಃ
ಸಪ್ತ ಜನ್ಮ ಕೃತ೦ ಪಾಪ೦ ಸ್ಮರಣೇನ ವಿನಶ್ಯತಿ ||

ಮೇಲೆ ಹೇಳಿದ ಶ್ಲೋಕವು ಸುಪ್ರಸಿದ್ಧ "ರುದ್ರಸಂಹಿತೆ"ಯಲ್ಲಿದೆ.

ಇ-ಕನ್ನಡ ಛಾಯಾಗ್ರಹಣ ಪತ್ರಿಕೆ

ನಮ್ಮ ಪ್ರಸಿದ್ಧ ಛಾಯಾಚಿತ್ರಕಾರಾದ ಶಿವು, ಘನಶ್ಯಾಮ್, ಪ್ರವೀಣ್ ಕುಮಾರ್, ಮಲ್ಲಿಕಾರ್ಜುನ್ ಇವರುಗಳೆಲ್ಲಾ ಸೇರಿ ಕನ್ನಡದಲ್ಲಿ "ಇ-ಕನ್ನಡ ಛಾಯಾಗ್ರಹಣ ಪತ್ರಿಕೆ" ಬಗ್ಗೆ ಇಲ್ಲಿ http://chaayakannadi.blogspot.com/2009/01/blog-post_08.html ಪ್ರಸ್ತಾಪಿಸಿದ್ದಾರೆ. ಆಸಕ್ತರು ತಮ್ಮ ಯೋಚನೆಯನ್ನು ಶಿವುರವರೊಂದಿಗೆ ಮೇಲಿನ ಕೊಂಡಿಯಲ್ಲಿ ಹಂಚಿಕೊಳ್ಳಬಹುದು.

ಒಬ್ಬ ಹಿಂದುವಾಗಿ

ಒಬ್ಬ ಹಿಂದುವಾಗಿ

ನೋವನ್ನು ನಿಮ್ಮ ಮುಂದೆ ಇಡಲು ಇಷ್ಟ ಪಡುತ್ತೇನೆ:

ಮುಖ್ಯವಾಗಿ ವಿಷಯಕ್ಕೆ ಬರುತ್ತೇನೆ.

ಎಲ್ಲ ಧರ್ಮಗಳ ಗುರಿ ಮುಕ್ತಿಯನ್ನು ಸಾಧಿಸುವುದು, ಅದನ್ನು ಬೇರೆ ಬೇರೆ ರೀತಿಯಲ್ಲಿ ಸಾಧಿಸುವ ದಾರಿಯನ್ನು ಅನುಸರಿಸುತ್ತೇವೆ

ನಾವು ಮುಕ್ತಿ ಹೊಂದಲು ೩ ದಾರಿಗಳು

ಕರ್ಮ - ಮನುಷ್ಯ ತಾನು ಮಾಡುವ ಕ್ರಿಯೆ.
ಭಕ್ತಿ - ದೇವರ ಸೇವೆ.

ನವ್ಯ ಕವಿತೆ!

ಆತ "ಓದು" ಅಂದ
ಓದಿದೆ:
"ಆಟೋಟ, ಶಾಲೆ, ಕಾಲೇಜು,
ಕನಸುಗಳು, ಮದುವೆ,
ಯಜಮಾನಿಕೆ, ಮಕ್ಕಳು,
ಜವಾಬ್ದಾರಿ, ತಾಪತ್ರಯಗಳು,
ಪಶ್ಚಾತ್ತಾಪ, ಜಿಗುಪ್ಸೆ"
"ಏನು" ಅಂದೆ
"ನವ್ಯ ಕವಿತೆ" ಅಂದ.
**********

ಪ್ರೇಮ ಭಾಷೆ!

ಪ್ರೇಮ ಭಾಷೆಯ
ಗಂಧ ಗಾಳಿಯೂ ಇಲ್ಲದ
ನಲ್ಲನೋರ್ವ ತನ್ನ ನಲ್ಲೆಯ
ಪ್ರತಿಯೊಂದು ಮಾತನ್ನೂ
ತನ್ನ ನಿಘಂಟಿನಿಂದ
ಅರ್ಥೈಸಿಕೊಳ್ಳುತ್ತಿರುವಾಗಲೇ
ಬೆಳಗಾಗಿ ಬಿಟ್ಟಿತ್ತು.
*********

ನಂಬಿಕೆ.

ಶತ್ರುಗಳನೋಡೆದೊಡಿಸಿ ದೇಶದ ಪ್ರೀತಿ ಗಳಿಸಿ ಸೈನಿಕ
ಮತ್ತೆ ಹಿತಿರುಗಿ ಬರುವನೆಂಬ ನಂಬಿಕೆ ತಾಯಿಗೆ

ನನಗಾಗಿ ಲಾಲಿ ಹಾಡಿಸಿ ಬೆಚ್ಚಗಿನ
ಅಪ್ಪುಗೆಯನ್ನು ಕೊಟ್ಟು ಹಾಲುಣಿಸುತ್ತಾಳೆ
ನನ್ನ ಅವ್ವ ಎಂಬ ನಂಬಿಕೆ ತೊಟ್ಟಿಲಲ್ಲಿರುವ ಮುದ್ದು ಕಂದನಿಗೆ

ಅವನನ್ನೆ ನಂಬಿ ಬಂದಿರುವ ನನ್ನನ್ನು ರಾಣಿಯ ಹಾಗೆ
ಸಾಕಲು ದುಡಿಯಲು ಹೊರಟ ಗಂಡನನ್ನು ಕಾಯುತ್ತ

ಬದು ಕಲಿಸುವ ಬದುಕು (ರೈತರೇ ಬದುಕಲು ಕಲಿಯಿರಿ-೫)

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)

ಭೂಮಿ ತಾಯಿ ನಿಜಕ್ಕೂ ಲಜ್ಜಾವತಿ. ಆಕೆ ಮೈಬಿಟ್ಟುಕೊಂಡು ಇರಲಾರಳು. ಮನುಷ್ಯನ ಹಸ್ತಕ್ಷೇಪ ಇಲ್ಲದ ಕಡೆ ಆಕೆ ತನ್ನ ಮೈಯನ್ನು ಮುಚ್ಚಿಕೊಂಡಿರುವ ದೃಶ್ಯ ನಿಮಗೆ ಕಾಣಸಿಗುತ್ತದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಬದು.

ಹೊಲದ ಸುತ್ತಲೂ ಇರುವ ಬದು ನಿಜಕ್ಕೂ ಸಮೃದ್ಧ ಬದುಕಿನ ಸಂಕೇತ. ನಿಮ್ಮ ಹೊಲ ಒಣಗಿ ಬರಡಾಗಿದ್ದರೆ ಅದಕ್ಕೆ ಕಾರಣ ನೀವು. ಆದರೆ ನಿಮ್ಮ ಹೊಲದ ಬದುಗಳು ಹಸಿರಿನಿಂದ, ಗಿಡ ಮರಗಳಿಂದ ನಳನಳಿಸುತ್ತಿದ್ದರೆ ಅದಕ್ಕೆ ಕಾರಣ ಭೂಮಿತಾಯಿಯ ಜೀವಂತಿಕೆ.

ರೈತರ ದೃಷ್ಟಿ ಸಾಮಾನ್ಯವಾಗಿ ಬದುವಿನ ಕಡೆ ಹರಿಯುವುದೇ ಇಲ್ಲ. ಅದು ಕಸ ಚೆಲ್ಲುವ ಜಾಗ. ಮಳೆಗಾಲದಲ್ಲಿ ದನಗಳನ್ನು ಮೇಯಿಸುವ ಸ್ಥಳ. ಅದರ ಮೇಲೆ ಕೂತು ಹೊಲದಲ್ಲಿ ಸಾಯುತ್ತಿರುವ ಬೆಳೆ ನೋಡಿ ಮರುಗುತ್ತಾರೆಯೇ ಹೊರತು, ಬದುವೇಕೆ ಹಸಿರಿನಿಂದ ಸಮೃದ್ಧವಾಗಿದೆ ಎಂದು ಯೋಚಿಸುವುದಿಲ್ಲ.

ಒಂದು ಹಾಯಿಕು

ಮುಂಜಾನೆ ಹೊತ್ತು ,
ಹೊಸತು ಟ್ರೇನು, ಖಾಲಿ.
ಹೊರಗೆ ಎಳೆಯ ಬಿಸಿಲು,
ಒಳಗೆ ನೆರಳು, ನೆಮ್ಮದಿ.

( ಹತ್ತು ಪದ ಬೇಡುತ್ತಲ್ಲ ? ಇಲ್ಲಿ ಹನ್ನೊಂದಿತ್ತಲ್ಲ ? ಈಗ ಸರಿ ಹೋಗುತ್ತೇನೋ )