ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮೇಲ್ಮಣ್ಣು ಎಂಬ ಬಂಗಾರ (ರೈತರೇ ಬದುಕಲು ಕಲಿಯಿರಿ-೬)

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)

ಹೊಲದಲ್ಲಿರುವ ಮೇಲ್ಮಣ್ಣು ನಿಜಕ್ಕೂ ಅಮೂಲ್ಯ ಸಂಪತ್ತು. ಹಾಲಿನ ಸತ್ವ ಕೆನೆಯಲ್ಲಿರುವಂತೆ ಭೂಮಿಯ ಸತ್ವ ಮೇಲ್ಪದರದ ಮಣ್ಣಿನಲ್ಲಿರುತ್ತದೆ.

ಸುಭಾಷ ಪಾಳೇಕರ ಪ್ರಕಾರ ಭೂಮಿಯ ಮೇಲ್ಪದರದ ೪ರಿಂದ ೫ ಇಂಚು ಮಣ್ಣು ಭೂಮಿಯ ಕೆನೆ ಇದ್ದಂತೆ. ಅತ್ಯಂತ ಸತ್ವಯುತವಾಗಿರುವ ಈ ಮಣ್ಣು ಸೂಕ್ಷ್ಮಜೀವಿಗಳ ಆವಾಸಸ್ಥಾನ. ಕೃಷಿ ತ್ಯಾಜ್ಯಗಳು ಪೋಷಕಾಂಶಗಳಾಗಿ ಪರಿವರ್ತನೆಯಾಗುವುದು ಇಲ್ಲಿಯೇ. ಈ ೪ರಿಂದ ೫ ಇಂಚು ಆಳದ ಮಣ್ಣೇ ನೀರನ್ನು ಹೀರಿಕೊಂಡು ಆಳಕ್ಕೆ ಕಳಿಸುವುದು. ಎರೆಹುಳು ತನ್ನ ಹಿಕ್ಕೆ ಬಿಡುವುದು ಈ ಮಣ್ಣಿನಲ್ಲಿಯೇ. ಬೀಜ ಮೊಳಕೆಯೊಡೆಯಲು ಬಳಸುವುದು ಈ ಮಣ್ಣನ್ನೇ. ಕೃಷಿಯ ಶೇ.೯೦ರಷ್ಟು ಜೀವಜಾಲ ತನ್ನ ಅಸ್ತಿತ್ವಕ್ಕೆ ಮೇಲ್ಪದರದ ಈ ಮಣ್ಣನ್ನೇ ಅವಲಂಬಿಸಿದೆ.

ಹೀಗಿರುವಾಗ ಈ ಭಾಗಕ್ಕೆ ಎರಚುವ ರಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳು ಸೂಕ್ಷ್ಮಜೀವಿಗಳನ್ನು ಕೊಂದುಬಿಡುವುದರಿಂದ ಮಣ್ಣಿನ ಸತ್ವ ಕಡಿಮೆಯಾಗುತ್ತದೆ. ಅಲ್ಲದೇ ಆಳವಾದ ಉಳುಮೆ ಮಾಡುವುದರಿಂದ ಅಮೂಲ್ಯ ಮೇಲ್ಮಣ್ಣು ಭೂಮಿಯ ಕೆಳಕ್ಕೆ ಹೋಗಿ ವ್ಯರ್ಥವಾಗುತ್ತದೆ. ಮಳೆ ನೀರಿಗೆ ತಡೆ ಒಡ್ಡುವ ಕೃಷಿ ತ್ಯಾಜ್ಯಗಳು ಹಾಗೂ ಮುಚ್ಚುಗೆ ಹೊಲದಲ್ಲಿ ಇಲ್ಲದಿದ್ದರೆ ನೀರಿನೊಂದಿಗೆ ಮೇಲ್ಮಣ್ಣೂ ಹರಿದುಹೋಗಿ ರೈತನಿಗೆ ತುಂಬಲಾರದ ನಷ್ಟ ಉಂಟಾಗುತ್ತದೆ.

ಆದ್ದರಿಂದ ಮೇಲ್ಮಣ್ಣನ್ನು ಜತನದಿಂದ ರಕ್ಷಿಸಬೇಕು. ಇದು ನಮ್ಮ ಭೂಮಿಗೆ ಇರುವ ಮೊದಲ ಹೊದಿಕೆ. ಕೃಷಿ ತ್ಯಾಜ್ಯ ವಸ್ತುಗಳಿಂದ ಭೂಮಿಯನ್ನು ಮುಚ್ಚುವ ಮೂಲಕ ಸೂಕ್ಷ್ಮಜೀವಿಗಳು ಬದುಕುವ ವಾತಾವರಣ ಸೃಷ್ಟಿಸಬೇಕು. ಈ ರೀತಿಯ ಹೊದಿಕೆ ಇರುವಾಗ ಸೂರ್ಯನ ಬಿಸಿಲು ನೇರವಾಗಿ ಮಣ್ಣಿನ ಮೇಲೆ ಬೀಳುವುದಿಲ್ಲ. ಮಳೆ ಬಿದ್ದಾಗ ಅದನ್ನು ಹೀರಿಕೊಳ್ಳುವ ಕೃಷಿ ತ್ಯಾಜ್ಯ ನೀರು ಇಂಗಲು ಅವಕಾಶ ಮಾಡಿಕೊಡುತ್ತದೆ. ಮಳೆ ನೇರವಾಗಿ ಮಣ್ಣಿನ ಮೇಲೆ ಬೀಳದಂತೆ ಕಾಪಾಡುತ್ತದೆ. ಎಲ್ಲಕ್ಕಿಂತ ಮುಖ್ಯ: ಅದು ನೀರನ್ನು ಬೇಗ ಆವಿಯಾಗಲು ಬಿಡುವುದಿಲ್ಲ. ಮುಚ್ಚುಗೆ ಎಂಬುದು ಮೇಲ್ಮಣ್ಣು ಹಾಗೂ ವಾತಾವರಣದ ನಡುವೆ ಪೊರೆಯಂತೆ, ಅಮ್ಮನ ಸೆರಗಿನಂತೆ ಕೆಲಸ ಮಾಡುವ ಮೂಲಕ ಸಸ್ಯಗಳ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸುತ್ತದೆ.

ಖು(ಕೃ)ಷಿ ಕಾರ್ಟೂನುಗಳು ಮತ್ತು ಹಸಿರು ಮಾತು

ಮಂಗಳೂರಿನಲ್ಲಿ "ನೀರ ನಿಶ್ಚಿಂತೆ" ಕಾರ್ಯಕ್ರಮದಲ್ಲಿ ನೀರಿನ ಬಗ್ಗೆ ಮಾತ್ರವಲ್ಲ, ಬ್ಲಾಗ್ ಬರವಣಿಗೆ ಮತ್ತು ತಂತ್ರಜ್ಞಾನವನ್ನು

ನೀರ ನಿಶ್ಚಿಂತೆಯಲ್ಲಿ ಬಳಸುವುದು ಹೇಗೆ ಎಂಬ ಬಗ್ಗೆಯೂ ಚರ್ಚೆ ನಡೆಯಿತು. ಶಿಬಿರಾರ್ಥಿಗಳು ಬ್ಲಾಗ್ ಬರೆಯಲು ಆರಂಭಿಸುವ ಆಶ್ವಾಸನೆ ನೀಡಿದ್ದರು. ಶ್ರೀಪಡ್ರೆಯವರ ಬ್ಲಾಗು ಆರಂಭವಾದದ್ದು ನಿಮಗೆ ಗೊತ್ತಿದೆ.

ಸೀ ಅಪ್ಪು ಮತ್ತು ಲಾಲಿ ಪಪ್ಪು

ಕುವೆಂಪು "ನೆನಪಿನ ದೋಣಿಯಲ್ಲಿ" ತಮ್ಮ ಅಜ್ಜಿಯನ್ನು ನೆನಪಿಸಿಕೊಳ್ಳುವ ಸಂದರ್ಭ ಸ್ವಾರಸ್ಯಕರವಾಗಿದೆ. ಅಡುಗೆ ಮನೆಯಲ್ಲಿ ಮೊಮ್ಮಗನಿಗಾಗಿ, ಅನ್ನ ಅಕ್ಕಿ ಹಿಟ್ಟಿಗೆ ಬಾಳೆಯ ಹಣ್ಣನ್ನು ಕಲಸಿ ನುರಿದು, ಸೀ ಅಪ್ಪು ತಯಾರಿಸುತ್ತಿರುತ್ತಾರೆ. ನಂತರ ದಪ್ಪ ರೊಟ್ಟಿ ತಟ್ಟಿ ಹೆಂಚಿನಲ್ಲಿ ಬೇಯಿಸುತ್ತಿರುತ್ತಾರೆ.

ಬದುಕಿದ್ದಾಗ ವಿಘ್ನವಿನಾಶಕ. ಸತ್ತಾಗ.. ?

ಇತ್ತೀಚೆಗೆ ನಾಡಿನ ಪಳಗಿದ ಆನೆಗಳು ಕೊಡಗಿನಲ್ಲಿ ಕಾಡಿನ ಪುಂಡಾನೆಯನ್ನು ಬಂಧಿಸಲು ಹೆಣಗಿದ ಸುದ್ದಿ ನೀವೆಲ್ಲ ಮಾಧ್ಯಮಗಳಲ್ಲಿ ಓದಿದ್ದೀರಿ. ಹಾಗೆಯೇ ತರಬೇತಿ ಶಿಬಿರದ ವರೆಗೆ ಬಂಧಿಸಿ ತರುವಾಗ ಆಘಾತಗೊಂಡು ಆ ಕಾಡಿನ ಸಲಗ ಸತ್ತಿದ್ದು ಸಹ ತಮ್ಮ ಅರಿವಿಗಿದೆ. ಒಟ್ಟಾರೆ ನಮ್ಮ ಕೆಲಸಗಳೆಲ್ಲ ದುರಂತಕ್ಕೆ ನಾಂದಿ ಹಾಡುತ್ತವೆ. ಏಕೆಂದರೆ ನಮ್ಮ ಕಾರ್ಯಾಚರಣೆಗಳೆಲ್ಲ "Trial & error method!" ಮಾದರಿಯವು.

ಕಾಡಾನೆ ಸತ್ತ ಪ್ರದೇಶದ ನ್ಯಾಯಿಕ ಅಧಿಕಾರ ಹೊಂದಿರುವ ಅರಣ್ಯ ವಲಯದ ಅಧಿಕಾರಿಗಳು ಮೊದಲು ಸ್ಥಳಕ್ಕೆ ಭೇಟಿ ನೀಡುತ್ತಾರೆ. ಆಶ್ಚರ್ಯ ಎಂದರೆ ಸ್ಥಳೀಯರಿಗೆ ಗೊತ್ತಿರುವ ಮಾಹಿತಿ, ಗೊಂಡಾರಣ್ಯದ ಆಯಕಟ್ಟಿನ ಸ್ಥಳಗಳ ಪರಿಚಯ ಆ ವ್ಯಾಪ್ತಿಯ ಅರಣ್ಯ ರಕ್ಷಕರಿಗೂ ಇರುವುದಿಲ್ಲ! ಇನ್ನು ಪ್ರತಿಶತ ೭೦ ರಷ್ಟು ಅಧಿಕಾರಿಗಳು ಇಂತಹ ಘಟನೆ ನಡೆದಾಗಲೇ ಸ್ಥಳದ ಭೇಟಿಗೆ ಹೊರಡುವವರು. ಏಕೆಂದರೆ, ಅರಣ್ಯ ಪಾಲಕರಾದಿಯಾಗಿ ಅವರಿಗೆ ಇದು ಆಸಕ್ತಿಯ ವಿಷಯವಲ್ಲ. ಸರಕಾರಿ ನೌಕರಿ. ಒಂದರ್ಥದಲ್ಲಿ ಸರಕಾರಿ ಶ್ರಾದ್ಧ. ಮೇಜಿನ ಬುಡದ ಗಳಿಕೆಯ ಹಾದಿ. ಸ್ಥಳೀಯರ ಸಹಾಯ, ಸಹಕಾರ ಯಾಚಿಸುತ್ತಾರೆ. ಹಾಗೆಯೇ ತಮ್ಮ ‘ಕರ್ತವ್ಯ ಪರಾಯಣತೆ’ ಪ್ರದರ್ಶಿಸಿ, ಸ್ಥಳೀಯರ ಮೇಲೂ ಪ್ರಕರಣ ದಾಖಲಿಸಿ, ತಾವು ಇಲಾಖಾ ವಿಚಾರಣೆಯಿಂದ ಪಾರಾಗುವಲ್ಲಿ ನಿಸ್ಸೀಮರಿದ್ದಾರೆ.

ನೂರಾನಲವತ್ತು ವರ್ಷ ವಯಸ್ಸಿನ ಲಾಬ್ಸ್ಟರ್ ಕಡಲ ಏಡಿಗೆ ಜೀವದಾನ

ಲಾಬ್ಸ್ಟರ್ ಅಥವಾ ಕಡಲ ಏಡಿ ಎಷ್ಟು ವರ್ಷ ಬಾಳಬಹುದು? ಬಲಗೆ ಸಿಕ್ಕಿಬಿದ್ದರೆ ಒಂದು ವರ್ಷ ಮಾತ್ರ. ಆದರೆ ನ್ಯೂಯಾರ್ಕ್ ನಗರದ ಸಿಟಿ ಕ್ರಾಬ್ ಅಂಡ್ ಸೀಫುಡ್ ಎಂಬ ರೆಸ್ಟೋರೆಂಟ್ ಒಂದಕ್ಕೆ ಲಭ್ಯವಾಗಿದ್ದ ಒಂಭತ್ತು ಕೇಜಿ ತೂಕದ ಲಾಬ್ಸ್ಟರ್ ಏಡಿ ಈಗ ಸುದ್ದಿಯಲ್ಲಿದೆ.

ಇಡೀ ಜೀವನವೇ ಪವಿತ್ರ- ಓಶೋ ಕ೦ಡ೦ತೆ

ಕೆಲ ದಿನಗಳ ಹಿ೦ದೆ ನಾನು ಜರ್ಮನಿಯ ಖ್ಯಾತ ತತ್ವಶಾಸ್ತ್ರಜ್ಞ ಮಾರ್ಟಿನ್ ಹೈಡಿಗರ್ ನ ವಾಕ್ಯಗಳನ್ನು ಓದುತಿದ್ದೆ. ಆತ ಹೇಳುತ್ತಾನೆ, 'ನಾನು ಜೀವನದಲ್ಲಿ ಪವಿತ್ರ ಎ೦ದೆನ್ನುಬಹುದಾದ ಏನನ್ನೂ ಕ೦ಡೇ ಇಲ್ಲ.' ಎ೦ದು.

ವಿಚಿತ್ರ ಆದರೂ ಸತ್ಯ !

ವಿಚಿತ್ರಗಳು ಜಗತ್ತಿನಲ್ಲಿ ಎಷ್ಟಿವೆ ಯಾರಿಗೆ ಗೊತ್ತು !
ಅಂಥ ಒಂದು ವಿಚಿತ್ರದ ಬಗ್ಗೆ ಬರೆಯುವ ಪ್ರಯತ್ನ ಇಲ್ಲಿದೆ. ಆರ್ಥಿಕ ಹಿಂಜರಿತ ದಿಂದ ಅಮೇರಿಕಾದ ಬ್ಯಾಂಕ್, ಕಾರ್ ತಯಾರಿಸುವ ಕಂಪನಿಗಳು ನಾವು ಕಂಗಲಾಗಿದ್ದೇವೆ, ನಮ್ಮನ್ನು ಉಳಿಸಿ ಎಂದು ಬೊಬ್ಬೆ ಹೊಡೆಯುತ್ತಿವೆ ಹಾಗು ಅವಗಳನ್ನು ಉಳಿಸುವ ಎಲ್ಲ ಪ್ರಯತ್ನಗಳು ನಡೀತಾ ಇವೆ.