ನಂಬಿಕೆ.
ಶತ್ರುಗಳನೋಡೆದೊಡಿಸಿ ದೇಶದ ಪ್ರೀತಿ ಗಳಿಸಿ ಸೈನಿಕ
ಮತ್ತೆ ಹಿತಿರುಗಿ ಬರುವನೆಂಬ ನಂಬಿಕೆ ತಾಯಿಗೆ
ನನಗಾಗಿ ಲಾಲಿ ಹಾಡಿಸಿ ಬೆಚ್ಚಗಿನ
ಅಪ್ಪುಗೆಯನ್ನು ಕೊಟ್ಟು ಹಾಲುಣಿಸುತ್ತಾಳೆ
ನನ್ನ ಅವ್ವ ಎಂಬ ನಂಬಿಕೆ ತೊಟ್ಟಿಲಲ್ಲಿರುವ ಮುದ್ದು ಕಂದನಿಗೆ
ಅವನನ್ನೆ ನಂಬಿ ಬಂದಿರುವ ನನ್ನನ್ನು ರಾಣಿಯ ಹಾಗೆ
ಸಾಕಲು ದುಡಿಯಲು ಹೊರಟ ಗಂಡನನ್ನು ಕಾಯುತ್ತ
ತುಸು ನಾಚಿ ಕಣ್ಣಂಚಿನಲ್ಲಿ ಸ್ವಾಗತಿಸಲು ಬಾಗಿಲ ಬಳಿ
ಕಾಯುತ್ತಿರುವ ಮಡದಿಗೆ ಪತಿ ಮತ್ತೆ ತಿರುಗಿ ಬರುವನೆಂಬ ನಂಬಿಕೆ.
ಪ್ರೀತಿಸಿದ ಪ್ರೀಯಕರ ನಡು ನೀರಲ್ಲಿ
ಕೈ ಬಿಡದೆ ದಡ ಸೇರುಸುವನೆಂಬ ನಂಬಿಕೆ ಪ್ರೀಯತಮೆಗೆ...
ಕತ್ತಲಿನಲ್ಲಿರುವವರು ಇಂದಲ್ಲ ನಾಳೆ ಬೆಳಕು
ಬಂದು ಜೀವನ ಬೆಳಗಿಸುವುದೆಂಬ ನಂಬಿಕೆ...
ತುತ್ತು ಕೂಳಿಗಾಗಿ ಹೂತ್ತು ಹುಟ್ಟುವ ಮುಂಚೆ
ಗೂಡು ಬಿಟ್ಟು ಹೋದ ಹಕ್ಕಿಯು ತನಗಾಗಿ
ಏನನಾದರು ತಂದೆ ತರುತ್ತದೆ ಎಂದು
ಗೂಡಿನಲ್ಲಿ ಬೆಚ್ಚಗೆ ಮಲಗಿರುವ ಮರಿಹಕ್ಕಿಗೆ ನಂಬಿಕೆ......
ಕಣ್ಣಿಗೆ ಕಾಣದಷ್ಟು ಸಣ್ಣ ಕಾಳನು ಭೂಮಿಯಲ್ಲಿ
ಹುತ್ತಿ,ಬಿತ್ತಿ ನಾಳೆ ಫಲವನ್ನು ಕೊಟ್ಟೆ ಕೋಡುತ್ತದೆ
ಎಂಬ ನೇಗಿಲ ಯೋಗಿಯ ನಂಬಿಕೆ.........
ಪ್ರತಿದಿನ ಗುಡಿಗೆ ಹೋಗಿ ಕಲ್ಲನು
ಪೂಜಿಸುತ್ತಾ, ಅದಕ್ಕೆ ಕೈ ಮುಗಿದು
ಬರುವ ಜನರಿಗೆ ದೇವರಿರುವನೆಂಬ ನಂಬಿಕೆ...
ಹಾಗೆ ತಾನೆ ಕಲಿಯಲು ಹೊರಟ ಮಗುವು
ತಾನೆ ಮುಂದೆನಾದರು ಸಾಧಿಸುತಾನೆ
ಎಂಬ ನಂಬಿಕೆ ತಂದೆ ತಾಯಿಗೆ..........
"ನಂಬಿಕೆಯೇ ಜೀವನ
ನಂಬಿಕೆಯೇ ಜನ, ಧನ"
-ಧನು