ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇನ್ನಿಷ್ಟು ಸಹನೆ ತೋರಿದ್ದರೆ!

ಅದೊ೦ದು ನದೀತೀರ. ಅಲ್ಲಿ ನೂರಾರು ಶಿಲಾಖ೦ಡಗಳು ಬಿದ್ದಿದ್ದವು.ಮೂರ್ತಿನಿರ್ಮಾಣಕ್ಕಾಗಿ ಶಿಲ್ಪಿಯೊಬ್ಬ ಅಖ೦ಡ ಶಿಲೆಯೊ೦ದನ್ನು ಆಯ್ದುಕೊ೦ಡು ಕೆತ್ತಲಾರ೦ಭಿಸಿದ. ಉಳಿಯ ಏಟುಗಳಿ೦ದ ಶಿಲೆ ತತ್ತರಿಸಲಾರ೦ಭಿಸಿತು. ಅಕ್ಕಪಕ್ಕದಲ್ಲಿದ್ದ ಕಲ್ಲಿನ ತು೦ಡುಗಳನ್ನು ನೋಡಿತು. ತಾನು ಸಿಡಿದರೆ ತನಗೆ ಮುಕ್ತಿಯೆ೦ದು ಅದು ಯೋಚಿಸಿತು. ಮರು ಏಟಿಗೆ ಅದು ಸೀಳು ಬಿಟ್ಟಿತು. ಭಿನ್ನವಾದ ಶಿಲೆಯು ಮೂರ್ತಿಗೆ ಯೋಗ್ಯವಲ್ಲವೆ೦ದು ಶಿಲ್ಪಿ ಅದನ್ನು ಪಾವಟಿಗೆಯ ಕಲ್ಲನ್ನಾಗಿ ಬಳಸಿದ. ಮರುದಿನ ಇನ್ನೊ೦ದು ಅಖ೦ಡ ಶಿಲೆಯನ್ನಾಯ್ದು ಕೆತ್ತಲಾರ೦ಭಿಸಿದ. ಮೊದಲಿಗೆ ಅದು ಶಿಲ್ಪಿಯ ಏಟುಗಳನ್ನು ಸಹಿಸಿತಾದರೂ ಕೊನೆಗೆ ತನ್ನ ಪ್ರತಿ ಭಾಗಕ್ಕೂ ಮೇಲಿ೦ದ ಮೇಲೆ ಒ೦ದರ ಮೇಲೊ೦ದರ೦ತೆ ಏಟುಗಳನ್ನು ಬೀಳುತ್ತಿರುವುದನ್ನು ಅದೂ ತಾಳಲಾರದಾಯಿತು. ಬದಿಯಲ್ಲಿ ಬಿದ್ದಿದ್ದ ಸೀಳು ಶಿಲೆಗಳನ್ನು ನೋಡಿತು. ಏಟುಗಳಿ೦ದ ಪಾರಾಗಲು ಅದು ತನ್ನನ್ನು ಸೀಳು ಮಾಡಿಕೊ೦ಡಿತು.
'ಇನ್ನಿಷ್ಟು ಸಹನೆ ತೋರಿದ್ದರೆ ಈ ಶಿಲೆಯೇ ಮೂರ್ತಿಯಾಗುತ್ತಿತ್ತಲ್ಲ' ಎ೦ದು ಶಿಲ್ಪಿ ಮರುಗಿದ.

ಬತ್ತದ ತೊರೆ

ನಿನ್ನೆ ಬೆಳಿಗ್ಗೆ ಪಾರ್ವತಜ್ಜಿ ಸತ್ತ ಸುದ್ದಿ ಬಂತು. ಮೊನ್ನೆ ರಾತ್ರಿ ೯ ರ ನಂತರ ತೀರಿಕೊಂಡಳಂತೆ. ನನಗೆ ನಮ್ಮ ಮನೆಯ ಒಂದು ತಲೆಮಾರು ಮುಕ್ತಾಯವಾದೆಂತೆನಿಸಿತು. ದೂರದ ಲಿಬಿಯಾದಿಂದ ಅವಳ ಮಣ್ಣಿಗೆ ಹೋಗಲಾಗದ ಅಸಹಾಯಕತೆ ಮತ್ತು ಚಡಪಡಿಕೆಯೊಂದಿಗೆ ಈ ಲೇಖನ ಬರೆಯುತ್ತಿದ್ದೇನೆ. ಇದು ನಾನು ಆಕೆಗೆ ಸಲ್ಲಿಸುವ ಶ್ರದ್ದಾಂಜಲಿಯೂ ಹೌದು.

ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ

ಇಂದು ಬೆಳಗ್ಗೆ ಘಜನಿ ಚಿತ್ರದ ಹಾಡೊಂದನ್ನು ಟಿ. ವಿ ಯಲ್ಲಿ ಹಾಕಿದ್ದರು
ನನ್ನ ಮಗಳ ಜೊತೆಗೆ ಹಾಡು ನೋಡುತ್ತಾ ಕುಳಿತಿದ್ದೆ.
ನನ್ನ ಮಗಳು ಗೊತ್ತಲ್ಲ, ಪ್ರಶ್ನ್ಗೆ ಶುರು ಮಾಡಿದಳು
"ಅಮ್ಮ ಅವನ್ಯಾಕೆ ಬಟ್ಟೆ ಹಾಕೊಂಡಿಲ್ಲ"(ಹಾಡಿನಲ್ಲಿ ಅಮೀರ್‌ಖಾನ್ ಮುಂದಿನ ಭಾಗಕ್ಕೆ ಸಾಕಾಗದಷ್ಟು ಷರ್ಟ್ ಹಾಕಿದ್ದ, ಒಂದೇ ಮಾತಲ್ಲಿ ಹೇಳುವುದಾದರೆ ಫ್ರಂಟ್‍ಲೆಸ್ಸ್ ಜಾಕೇಟ್ )

ಮುಖಬಂಗ.........

ನಿನ್ನ ಮೇಲೆ ಕವನ ಬರೆಯಲೆಂದು ಲೇಖನಿ ಹಿಡಿದೆ...
ತೋಚಿದು ಗೀಚುತ್ತಾ ಕುಳಿತೆ....
ಕೂತು ಒಂದು ತಾಸು ಕಳೆದಿದೆ ಆದರೂ ಒಂದು ಪದವನ್ನು ಬರೆಯಲಾಗಲಿಲ್ಲ
ಗೀಚಿ ಗೀಚಿ ಬರೆದ ಹಾಳೆಗಳೆಲ್ಲ ನಾವೆನು ತಪ್ಪು ಮಾಡಿದೆವು
ಎಂದು ಗೋಗರಿಯುತ್ತಿವೆ, ನಾನು ಹಿಡಿದ ಲೇಖನಿ ಇದು ಯಾವ ಜನ್ಮದ ಕರ್ಮವೆಂದು ಬಳಲಿ ಕಣ್ಣೀರನ್ನೆ ಶಾಹಿಯಾಗಿಸಿದೆ.....

nanna kiru parichaya

ellarigu hello,
nanu nagendra anta, nanu hasana jilleya arsikere yavanu. nanu ninne monne tane bangaloreige bandu kelsa hudkondidini. sadyakke nanu banashankari 2nd stage alliro fututre business tech anno companili printer service engineer agi seridini. nanu b.tech in it madidini. nan appa seetharam anta arsikere yalle railway station master agidare, amma prema anta house wife, nange ibbaru tammandiriddare vasuki and bharadwaja anta.

ಮುಸ್ಸಂಜೆಯ ಪಾಠ........

ನಾನು ಆಗ ತಾನೆ ಹತ್ತನೆ ತರಗತಿ ಮುಗಿಸಿ ಕಾಲೇಜಿಗೆ ಸೇರಬೇಕೆಂದು ಹತ್ತಾರು ನನ್ನದೆ ಕನಸುಗಳನು ಕಟ್ಟಿಕೊಂಡು ಕಾಲೇಜ್ ಅಂದರೆ ಸಾಕು ಹಾಗಿರುತ್ತದೆ ಹೀಗಿರುತ್ತದೆ ಎಂದು ಕನಸು ಕಾಣುತ್ತಿದೆ.ಆದರೆ ಕೊನೆಗೆ ನನ್ನ ಲೆಕ್ಕಚಾರವೆಲ್ಲ ತಲೆಕೆಳಗಾಗಿ ಹೋಯಿತು, ಏಕೆಂದರೆ ನಾನು ಹೋಗಿ ಸೇರಿದ್ದು ಸಂಜೆ ಕಾಲೇಜಿಗೆ, ಅಲ್ಲಿಯವೆರೆಗೂ ನನಗೆ ಈ ತರಹ ಕಾಲೇಜುಗಳು ಇರುವ ಬಗ್ಗೆ ತಿಳಿದಿ

"ಸತ್ಯವೇ ಗೊತ್ತಿಲ್ಲದ ಸತ್ಯಮ್"

ಕೋಟಿ ಕೋಟಿ ಹಣ ವಿದ್ದ ಮನುಷ್ಯ, ಎಲ್ಲವನ್ನೂ ಕಳೆದುಕೊಂಡಾಗ, ಜನ ಯಾವ ರೀತಿಯಲ್ಲಿ ಆಡಿ ಕೊಳ್ಳೂತ್ತರೋ, ಅದೇ ರೀತಿ ಆಗಿದೆ "ಸತ್ಯಂ ಕಂಪ್ಯುಟರ್ಸ್ ನ ಸ್ಥಿತಿ.ಅದಕ್ಕೆ ಮತ್ತು ಅಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯ ದಿನಗಳು ಬರಲಿ ಎಂದು ಆಶಿಸೋಣ.

ಸೇತುವೆ: ಕಾಫ್ಕಾ ಕಥೆ

ಚಳಿಗೆ ಸೆಟೆದು ಹೋಗಿದ್ದೆ. ನಾನು ಸೇತುವೆ. ಕಮರಿಯ ಮೇಲೆ ಒರಗಿದ್ದೆ. ಕಾಲ ಬೆರಳು ಒಂದು ತುದಿಯಲ್ಲಿ, ಕೈ ಬೆರಳು ಇನ್ನೊಂದು ತುದಿಯಲ್ಲಿ, ಕುಸಿಯುತ್ತಿರುವ ಮಣ್ಣನ್ನು ಬಿಗಿಯಾಗಿ ಹಿಡಿದಿದ್ದವು. ನನ್ನ ಎರಡೂ ಪಕ್ಕದಲ್ಲಿ ಕೋಟಿನ ತುದಿಗಳು ಗಾಳಿಗೆ ಪಟಪಟಿಸುತ್ತಾ ಇದ್ದವು. ತೀರ ತೀರ ಕೆಳಗೆ ಹರಿಯುತ್ತಿರುವ ಹಿಮದಷ್ಟು ಕೊರೆಯುವ ನದಿ. ಎಷ್ಟು ಎತ್ತರದ ಜಾಗಕ್ಕೆ ಯಾವ ಪ್ರವಾಸಿಗರೂ ಬರುತ್ತಿರಲಿಲ್ಲ. ಯಾವ ಮ್ಯಾಪಿನಲ್ಲೂ ಈ ಸೇತುವೆಯ ಗುರುತು ಇರಲಿಲ್ಲ. ಸುಮ್ಮನೆ ಒರಗಿ ಕಾಯುತ್ತಿದ್ದೆ. ಕಾಯುತ್ತಲೇ ಇರಬೇಕು. ಕುಸಿದು ಬೀಳದೆ ಇದ್ದರೆ ಒಮ್ಮೆ ಕಟ್ಟಿದ ಸೇತುವೆ ಯಾವಾಗಲೂ ಸೇತುವೆಯಾಗೇ ಇರದೆ ವಿಧಿಯಿಲ್ಲ. 
ಒಂದು ದಿನ ಸಂಜೆ-ಯಾವತ್ತು, ಮೊದಲ ದಿನವೋ ಸಾವಿರದ ನೂರನೆಯ ದಿನವೋ ಹೇಳಲಾರೆ-ನನ್ನ ಯೋಚನೆಗಳು ಇದ್ದಲ್ಲದೇ ಗಿರಕಿ ಹೊಡೆಯುತ್ತಾ ಸುತ್ತುತ್ತಾ ಇದ್ದವು. ಬೇಸಗೆ ಕಾಲದ ಸಂಜೆ. ಕೆಳಗೆ ಹರಿಯುವ ನದಿಯ ಮೊರೆತ ಹೆಚ್ಚಾಗಿತ್ತು. ಯಾರೋ ಮನುಷ್ಯನ ಹೆಜ್ಜೆಯ ಸದ್ದು ಕೇಳಿಸಿತು! ನನ್ನತ್ತ, ನನ್ನತ್ತ ಬರುತ್ತಿರುವ ಹೆಜ್ಜೆ ಸದ್ದು. ಸೇತುವೇ, ಸಿದ್ಧವಾಗು, ಕಟಕಟೆ ಇಲ್ಲದ ತೊಲೆಗಳೇ ನಿಮ್ಮನ್ನು ನಂಬಿ ನಿಮ್ಮ ವಶಕ್ಕೆ ಒಪ್ಪಿಸಿಕೊಳ್ಳುವ ಸಂಚಾರಿಯನ್ನು ಎತ್ತಿ ಹಿಡಿಯಲು ಸಿದ್ಧರಾಗಿ. ಅವನ ಹೆಜ್ಜೆ ತಡವರಿಸುತ್ತಿದ್ದರೆ ಸ್ಥಿರಗೊಳಿಸಿ, ಅವನಿಗೆ ಅಡಚಣೆ ಆಗದ ಹಾಗೆ. ಅವನು ಮುಗ್ಗರಿಸಿದರೆ ಸಾವರಿಸಿಕೊಳ್ಳಲು ಸಹಾಯಮಾಡಿ, ಪರ್ವತದ ದೇವತೆಯ ಹಾಗೆ. ಕ್ಷೇಮವಾಗಿ ಆಚೆಯ ನೆಲಕ್ಕೆ ತಲುಪಿಸಿ. 

ಕಾಗದ ಬಂದಿದೆ-ಓದುವಿರಾ?

ಯಾವುದೋ ಹಳೆಯಪುಸ್ತಕ ಓದುತ್ತಿದ್ದೆ. ಅದರಲ್ಲಿದ್ದ ಒಂದು ಕಾಗದ ನನ್ನನ್ನು ಆಕರ್ಷಿಸಿತು.೧೯೪೫ ರಲ್ಲಿ ನಮ್ಮ ಸೋದರಮಾವ ನಮ್ಮ ತಾತನಿಗೆ ಬರೆದಿರುವ ಪತ್ರವದು. ಆ ಮೋಡಿ ಅಕ್ಷರವನ್ನು ಸಂಪದ ಓದುಗರಿಗೆ ತೋರಿಸ ಬೇಕೆನಿಸಿತು. ಫೋಟೋ ತೆಗೆದು ಅಪ್ ಲೋಡ್ ಮಾಡಿರುವೆ.