ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಾನು ನಿದ್ದೆಯಲ್ಲಿಯೂ ಕಣ್ಮುಚ್ಚುವುದಿಲ್ಲ

ಪದಗಳ ನೆರವು ಪಡೆದು ಯುದ್ಧ ಸಾರಿದ್ದೇನೆ
ನಿನ್ನೊಳಡಗಿರುವ ರೂಪನಿಧಿ ಪಡೆಯಲು
*** *** ***
ಯೌವ್ವನದ ಬೆತ್ತಲ ಮೈಯ ಸವರಿದ ಗಾಳಿ
ಕೈಗೆ ಸಿಕ್ಕ ಸಿಕ್ಕ ವಸ್ತುಗಳ ಚುಂಬಿಸುತ್ತಿದೆ
*** *** ***
ಗುಡಿ ಮಸೀದಿ ಚಚರ್ಿನ ಗೋಡೆಗಳು ತಲ್ಲಣಿಸಿವೆ

ಹೂ ತೋಟ

"ಅಬ್ಬಾ ಏನೋ ಇದು ಇಷ್ಟು ಚೆನ್ನಾಗಿದೆ ಈ ಗಾರ್ಡನ್" ರವಿ ಉದ್ಗರಿಸಿದ , ಕಣ್ಣನ್ನು ಅಲ್ಲಿಂದ ಕೀಳಲಾಗಲಿಲ್ಲ.
ಅದೊಂದು ಸುಂದರ ತೋಟ , ಎಂಥ ತೋಟವೆಂದರೆ ನೋಡಿದ ಕಣ್ಣು ಕಾಲಿಗೆ ಮುಂದೆ ಹೋಗದಂತೆ ಆದೇಶ ನೀಡುತ್ತಿತ್ತು.. ತೋಟದ ತುಂಬೆಲ್ಲಾ ಹೂವಿನ ಘಮಘಮ , ಚೆಲುವಾದ ಗುಲಾಬಿಯಿಂದ ಹಿಡಿದು ಎಲ್ಲಾ ರೀತಿಯ ಹೂಗಳು ಅರಳಿದ್ದವು.

ಒಂಟಿ ಮನಸಿನ ಪಯಣ

ಒಂಟಿ ಮನಸಿಗೆ ಜಂಟಿಯಾಗಲು
ಜೊತೆಗಾರರು ಯಾರು ಇಲ್ಲ
ಮಾತುಗಳು ಬಹಳ ಕೇಳುವವರು ವಿರಳ
ಶುರುವಿಟ್ಟಿಹುದು ತಂತಾನೆ ಮಾತಾಡಿಕೊಳ್ಳುವುದು

ಅರಿವುಂಟು ಈ ಮನಕೆ ಕೇಳುವ ಕಿವಿಗಳು
ಈ ಜಗದಲ್ಲಿ ಇಲ್ಲ ಎಂದು
ಭಯವೂ ಇಲ್ಲ ಕರೆಯುವರು ಇದನ್ನ ಹುಚ್ಚು ಎಂದು

ದುಃಖ ಉಮ್ಮಳಿಸಿದಾಗ ಕಣ್ಣೀರು ಹರಿದಾಗ
ಬತ್ತಿ ಹೋಗುತಿದೆ ತಂತಾನೆ ಒರೆಸುವರು ಇಲ್ಲದಂತಾಗಿ

ಪರಮವೀರ ಚಕ್ರ

ಇದು ಸಂಸ್ಕೃತದ ಪದ, ಭಾರತದ ಹೆಮ್ಮೆಯ ವೀರರಿಗೆ ನೀಡುವ ಈ ಬಿರುದು ಶುರುವಾದದ್ದು ೧೯೫೦ ರ ಜನವರಿ ೨೬ ರಂದು, ಭಾರತದ ರಾಷ್ಟ್ರಪತಿಗಳು ಸೇನೆಯಲ್ಲಿ ಮಹೋನ್ನತ ಕೆಲಸ ಮಾಡಿದ ಹೆಮ್ಮೆಯ ವೀರಪುತ್ರರಿಗೆ ನೀಡುವ ಗೌರವ, ಇದು ಇಂಗ್ಲೆಂಡಿನ ವಿಕ್ಟೋರಿಯಾ ಕ್ರಾಸ್, ಅಮೇರಿಕಾದ ಮೆಡಲ್ ಆಫ್ ಹಾನರ್, ಹಾಗೂ

ಬಾಳ ಪಯಣದಲ್ಲಿ

ನಾನು ತು೦ಬಾ ಖುಶಿಯಲ್ಲಿದ್ದೆ, ಏನನ್ನೋ ಸಾಧಿಸಿಧಿದ ಸ೦ತ್ರುಪ್ತಿ ನನ್ನ ಮನದಲ್ಲಿ ಇತ್ತು.ಬಹುದಿನಗಳ ಕನಸು, ನನಗೆ ಕೆಲಸ ಸಿಕ್ಕಿತ್ತು. ಕುಣಿಯುತ್ತಲೇ ಬ೦ದು ರೈಲು ಹತ್ತಿದೆ. ವಿಚಿತ್ರವೆ೦ಬ೦ತೆ ನಾನು ಅಡಿಯಿಟ್ಟ ಆ ಲೋಕಲ್ ಅ೦ದು ಖಾಲಿಯಿತ್ತು.

ಎಂಥಾ ಹದವಿತ್ತೇ ಗೆಳತಿ... (ರೈತರೇ ಬದುಕಲು ಕಲಿಯಿರಿ-೩)

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)

ನಿಜಕ್ಕೂ ಒಂದು ಕಾಲವಿತ್ತು.

ಆಗ ಮಳೆ ಸರಿಯಾಗಿ ಬರುತ್ತಿತ್ತು. ಅಂದರೆ ಸರಿಯಾದ ಸಮಯಕ್ಕೆ, ಸರಿಯಾದ ಪ್ರಮಾಣದಲ್ಲಿ, ನಾವು ಹೇಗೆ ಇಷ್ಟಪಡುತ್ತೇವೆಯೋ ಹಾಗೆ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಮಳೆ ನಕ್ಷತ್ರಗಳು, ತಿಥಿಗಳು ರೂಪಿತವಾದವು. ಇಂತಿಂಥ ಮಳೆ ಇಂತಿಂಥ ದಿನದಲ್ಲಿ ಪ್ರಾರಂಭವಾಗಿ ಇಷ್ಟು ದಿನಗಳವರೆಗೆ ಬರುತ್ತದೆ. ನಂತರ ಇಂತಹ ಮಳೆ ಪ್ರವೇಶ ಮಾಡುತ್ತದೆ ಎಂದು ಪಂಚಾಂಗ ನೋಡದೇ ಹೇಳುವಷ್ಟು ಕರಾರುವಾಕ್ಕಾಗಿ ಮಳೆಯ ದಿನಚರಿ ಇರುತ್ತಿತ್ತು. ನಮ್ಮ ಇಡೀ ಒಕ್ಕಲುತನ ರೂಪಿತವಾಗಿದ್ದೇ ಇಂತಹ ಕರಾರುವಾಕ್ಕಾದ ವ್ಯವಸ್ಥೆಯಿಂದ. ಒಂದೆರಡು ಬಾರಿ ದಿನಚರಿಯಲ್ಲಿ ಏರುಪೇರಾದರೂ ಮುಂದಿನ ಮಳೆ ಅದನ್ನು ಸರಿಪಡಿಸುತ್ತಿತ್ತು.

ಆದರೆ ಕ್ರಮೇಣ ಮಳೆ ಕಣ್ಣಾಮುಚ್ಚಾಲೆ ಶುರು ಮಾಡಿತು.

ಅವಳು

ದೂರ ಸರಿದರು ಅವರು. ಹತ್ತು ಸ೦ವತ್ಸರಗಳ ಸ೦ಸಾರ ನಡೆಸಿ ಅವಳಿ೦ದಾಗಿ ಬೇರೆಯಾದರು. ಅವಳು ಬದುಕಿರುವವರೇಗೂ ಒ೦ದಾಗಿದ್ದ ಅವರುಗಳನ್ನು ಅವಳು ಸತ್ತ ಸುದ್ದಿಯು ಬೇರ್ಪಡಿಸಿದ೦ತಿತ್ತು. ಅವರ ವಿಛ್ಛೇದನಕ್ಕೆ ಕಾರಣಗಳ ಅರಿಯ ಹೊರಟ ನನಗೆ ಅವಳು ಬರಿಯ ಕಾರಣ ಮಾತ್ರವಾಗಿರದೇ ಅವರುಗಳ ಮನೋಭಾವದ ಪುಸ್ಠಿಕರಣಕ್ಕೆ ಬೇಕಾದ ಆಧಾರವಾಗಿದ್ದಳು ಅನ್ನಿಸದಿರಲಿಲ್ಲ.