ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವೈಕುಂಠ ಏಕಾದಶಿ

ನಗರದೆಲ್ಲೆಡೆ ಹಬ್ಬದ ವಾತಾವರಣ ಇದೆ ಇವತ್ತು. ವಿಶೇಶವಾಗಿ ವಿಷ್ಣು ದೇವಾಲಯಗಳ ಮುಂದೆ ಮೈಲುಗಟ್ಟಳೆ ಸಾಲು ಇರುತ್ತದೆ. ೩೩ ಕೋಟಿ ದೇವತೆಗಳು ಮತ್ತು ಸಪ್ತರ್ಷಿಗಳು ವೇಂಕಟೇಶ ದರ್ಶನ ಮಾಡುವ ವಿಶೇಶ ದಿವಸವಿದಂತೆ.

ಸಾಮಾನ್ಯವಾಗಿ ಈ ದಿನವನ್ನು ನೀವು ಯಾವ ರೀತಿಯಲ್ಲಿ ಆಚರಿಸುವಿರಿ? ವೆಂಕಟೇಶ ದರ್ಶನ ಮತ್ತು ಉಪವಾಸ ವ್ರತದಿಂದಲೇ?

ಸ್ನೇಹಮಿಲನ ಹಾಜರಾತಿ

ಪ್ರಿಯ ಸಂಪದೀ ಮಿತ್ರರೇ

http://sampada.net/blog/%E0%B2%85%E0%B2%B0%E0%B2%B5%E0%B2%BF%E0%B2%82%E0%B2%A6%E0%B3%8D/31/12/2008/15197

೧೮ರ ಭಾನುವಾರದಂದು ಸಂಪದ ಮಿತ್ರರ ಸ್ನೇಹ ಮಿಲನ ಕಾರ್ಯಕ್ರಮ ಬೆಂಗಳೂರಿನಲ್ಲಿ ಸಂಜೆ ೪ ಘಂಟೆಗೆ ನಿಗದಿಯಾಗಿದೆ, ಆದರೆ ಸ್ಥಳದ ಬಗ್ಗೆ ಖಾತರಿ ಮಾಡಲು ತಾವುಗಳು ದಯಮಾಡಿ ಸಹಕರಿಸಿ, ತಮ್ಮ ಹಾಜರಾತಿಯನ್ನು ತಿಳಿಸಿದರೆ ಬಹಳ ಉಪಯೋಗ

ಮಾತೆಂಬ ಜ್ಯೋತಿರ್ಲಿಂಗ-೧ (ಸರ್ವಜ್ಞನ ಸಗ್ಗ)

ಮಾತನ್ನು ಬಲ್ಲಾತಗೆ ಏತವದು ಸುರಿದಂತೆ
ಮಾತಾಡಲು ಅರಿಯದಾತಂಗೆ| ಬರಿ ಏತ
ನೇತಾಡಿದಂತೆ - ಸರ್ವಜ್ಞ

ಮೌನ ಜಗತ್ತಿನ ಸಮೃದ್ಧ ಭಾಷೆಯಾದರೂ ಮಾತೆಂಬುದು ಮನುಷ್ಯನಾದವನಿಗೆ ಮಾತ್ರ ಸಿದ್ಧಿಸಿದ ಕಲೆ. ಮಾತು ಮನಸ್ಸು ಅರಳಿಸುತ್ತದೆ, ಕೆರಳಿಸುತ್ತದೆ. ಸಂಬಂಧ ಬೆಳೆಸುವುದರ ಜೊತೆಗೆ ಸಂಬಂಧವನ್ನೂ ಮುರಿಯುತ್ತದೆ. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು.

** ಹರೆಯದ ಹೊರೆ **

ಎವೆ ಮುಚ್ಚಿದಾಗ
ಕನಸು ಚಿಗುರೊಡೆದಾಗ
ಕಣ್ಣ ಕತ್ತಲ ತೆರೆಯಮೇಲೆ
ಮೂಡುವುದು ನವಿರಾಗಿ
ತಂಗಾಳಿಗೆ ಬೀಸಿದಂತೆ
ಸರಿದಾಡುವ ನಿನ್ನ
ಮುಂಗುರುಳ ರಾಸಿ
ಚೆಲುವಾದ ಮೊಗದಲ್ಲಿ
ಹೂವಂತೆ ತುಂಬಿದ
ತುಟಿಯಮೇಲಿನ
ಮುಗುಳು ನಗೆಹೂ

ವಿಶ್ವದ ಅತ್ಯಂತ ಬಲಿಷ್ಠ ಬಾಲಿಕೆ : ವಾರ್ಯಾ ಅಕುಲೋವಾ

ಉತ್ತಮ ದೇಹದಾರ್ಢ್ಯತೆ ಹೊಂದಿರುವ ಪುರುಷರು ಈ ಲೋಕದಲ್ಲಿ ಬೇಕಾದಷ್ಟಿದ್ದಾರೆ. ಆದರೆ ಮಹಿಳೆಯರಲ್ಲಿ ಇದು ಕಡಿಮೆ. ಅದರಲ್ಲೂ ಕೋಮಲಾಂಗವೇ ಸ್ತ್ರೀಲಕ್ಷಣವಾಗಿರುವಾಗ ಬಲಿಷ್ಠ ತನುವನ್ನು ಹೊಂದುವುದು ಹೆಚ್ಚಿನವರ ಅಪೇಕ್ಷೆಗೆ ದೂರ.

ಸಾಮ್ರಾಟನ ಸಂದೇಶ: ಫ್ರಾನ್ಜ್ ಕಾಫ್ಕಾ

[ಇಪ್ಪತ್ತನೆಯ ಶತಮಾನದ ಬಹುಮುಖ್ಯ ಲೇಖಕರಲ್ಲಿ ಒಬ್ಬನಾದ ಫ್ರಾನ್ಜ್ ಕಾಫ್ಕಾನ ಕಿರು ಕಥೆಯ ಅನುವಾದ ಇದು]
 
ಹೀಗೊಂದು ಸಾಮತಿ ಇದೆ. ಸಾಮ್ರಾಟರು ನಿನಗಾಗಿ, ಸೂರ್ಯನಂಥ ಪ್ರಭುಗಳಿಂದ ಅತಿ ಅತಿ ದೂರದಲ್ಲಿ ಅಂಜುತ್ತಾ, ನೆರಳಿನಂತೆ ಅಡಗಿ ಕುಳಿತಿರುವ ನಿನಗಾಗಿ, ಸಂದೇಶವೊಂದನ್ನು ಕಳುಹಿಸಿದ್ದಾರೆ. ಮರಣಶಯ್ಯೆಯಲ್ಲಿದ್ದ ಪ್ರಭುಗಳು ನಿನಗಾಗಿಯೇ ಆ ಸಂದೇಶ ಕಳುಹಿಸಿದ್ದಾರೆ. ದೂತನನ್ನು ಹಾಸುಗೆಯ ಬಳಿಗೆ ಕರೆದು, ಪಕ್ಕದಲ್ಲೇ ಮೊಳಕಾಲೂರಿ ಕೂರುವಂತೆ ಹೇಳಿ, ಅವನ ಕಿವಿಯಲ್ಲಿ ಸಂದೇಶವನ್ನು ಪಿಸುನುಡಿದಿದ್ದಾರೆ. ಸಂದೇಶಕ್ಕೆ ಎಷ್ಟು ಮಹತ್ವಕೊಟ್ಟಿದ್ದರೆಂದರೆ ದೂತನು ಅದನ್ನೆಲ್ಲ ಮರಳಿ ತಮ್ಮ ಕಿವಿಯಲ್ಲಿ ಹೇಳಬೇಕು ಎಂದರು. ಹಾಗೆ ಹೇಳಿದ ಮೇಲೆ ಸರಿಯಾಗಿದೆ ಅನ್ನುವ ಹಾಗೆ ತಲೆದೂಗಿದರು. ಅಡ್ಡಿಯಾಗಿದ್ದ ಗೋಡೆಗಳನ್ನೆಲ್ಲ ಕೆಡವಿದ್ದರು, ವಿಶಾಲವೂ ಉನ್ನತವೂ ಆದ ಮೆಟ್ಟಿಲುಗಳ ಮೇಲೆ ಸಾಮ್ರಾಜ್ಯದ ಸಾಮಂತರೆಲ್ಲ ನಿಂತು ನೋಡುತ್ತಿದ್ದರು. ಅಡ್ಡಿಯಾಗಿದ್ದ ಗೋಡೆಗಳನ್ನೆಲ್ಲ ಕೆಡವಿದ್ದರು, ವಿಶಾಲವೂ ಉನ್ನತವೂ ಆದ ಮೆಟ್ಟಿಲುಗಳ ಮೇಲೆ ಸಾಮ್ರಾಜ್ಯದ ಸಾಮಂತರೆಲ್ಲ ನಿಂತು ನೋಡುತ್ತಿದ್ದರು. ಹೌದು, ಮರಣದ ಪ್ರೇಕ್ಷಕರಾಗಿ ಸೇರಿದ್ದ ಎಲ್ಲ ಸಾಮಂತರು, ರಾಜಕುಮಾರರುಗಳ ಎದುರಿನಲ್ಲಿ ಅವರು ಈ ಸಂದೇಶ ನೀಡಿದರು. ದೂತನು ತಟ್ಟನೆ ಹೊರಟುಬಿಟ್ಟ. ದಣಿವರಿಯದ ಮಹಾ ಶಕ್ತಿವಂತ. ಈಗ ಬಲಗೈ ಬೀಸುತ್ತಾ ಈಗ ಎಡಗೈ ಬೀಸುತ್ತಾ ಜನರ ಗುಂಪಿನಲ್ಲಿ ಜಾಗಮಾಡಿಕೊಂಡು ನಡೆದ. ಜನ ದಾರಿ ಬಿಡದಿದ್ದಾಗ ಎದೆಯ ಮೇಲಿದ್ದ ಸೂರ್ಯ ಲಾಂಛನವನ್ನು ಬೆರಳು ಮಾಡಿ ತೋರಿಸುತ್ತಿದ್ದ. ದಾರಿಯಾಗುತ್ತಿತ್ತು. ಅವನಲ್ಲದೆ ಬೇರೆ ಯಾರೇ ಆಗಿದ್ದರೂ ಅಷ್ಟು ಸುಲಭವಾಗುತ್ತಿರಲಿಲ್ಲ. ಆದರೇನು, ನೆರೆದ ಜನ ಅಪಾರ, ಕೊನೆಯೇ ಇಲ್ಲದ ಸಂದಣಿ. ಅವನೊಮ್ಮೆ ಬಯಲಿಗೆ ಹೋದರೆ ಸಾಕು, ನೀನಿರುವಲ್ಲಿಗೆ ಹಾರಿ ಬಂದುಬಿಡಬಹುದು;

ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು

ಸಂಪದ ಬಳಗಕ್ಕೆ ಬಂದಾಗಿನಿಂದ ಹಲವರನ್ನು ನೋಡುತ್ತಾ ಬಂದಿದ್ದೇನೆ. ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ವಿಶೇಷ ವ್ಯಕ್ತಿಗಳೇ.