ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದೇವರೆ, ನಿನಗೆ ಸಮಯ ಬೇಡವೆ ಸ್ವಲ್ಪ ವಿಶ್ರಮಿಸಲು....

ಅಡಗುವ ಮುನ್ನ ಮುಗುಳ್ನಕ್ಕನಾ ಭಾನು
ಮೆರೆದಾಗ ರ೦ಗಿನಲ್ಲಿ ಈ ಇರುಳ ಬಾನು
ಎನ್ನ ಮನವದು ಪ್ರಶ್ನಿಸಿತು ನಿತ್ಯದಾ ಈ ಸತ್ಯವನು
ಸುಸ್ತು ಬೇಸರವಿಲ್ಲವೇ ಇವಗೆ ನೀಡಲು ನಿತ್ಯಬೆಳಕನು
ಕೇಳಿತಾಗ ಅವನ ನಗು ಮೂಲ ಪ್ರಶ್ನೆಯೊ೦ದನು
ನಾ ಬೇಸರಿಸಿದರೆ ನೀ ತಿನ್ನುವೆ ಏನನ್ನು?

ದೇವರೇ ನೀನು ಹೀಗೆಯೇ, ಬಲೂ ಪಕ್ಶಪಾತಿ
ಮಾಡಿಕೊ೦ಡೆ ನಿನಗೆ೦ದೇ ಒ೦ದು ನೀತಿ

ಕಾಡು ಮತ್ತು ನದಿ

"ನಾನು ನೀನಾಗಬೇಕಿತ್ತು"
ಕಾಡು ಹೇಳಿತು ಭೊರ್ಗರೆದು ಹರಿವ ನದಿಗೆ
"ಸದಾ ಪಯಣಿಸುತ್ತಾ
ಅತ್ತಿತ್ತ ನೋಡುತ್ತಾ
ಸುಂದರ ತಾಣಗಳ ವೀಕ್ಷಿಸುತ್ತಾ
ನುಗ್ಗುತ್ತಿ ಕಡಲಿನ ಪರಿಶುದ್ಧವಲಯಕ್ಕೆ
ಜಲರಾಶಿಯ ಸಾಮ್ರಾಜ್ಞಕ್ಕೆ
ನೀರದುವೆ ಭಾವ ತೀವ್ರತೆಯ
ಉತ್ಸಾಹ ಚಿಮ್ಮಿಸುವ ಜೀವ ಚೈತನ್ಯ!"
ಆದರೆ ನಾನು?
ನಾನು ಈ ಭೂಮಿಗೆ ಸರಪಳಿಯಿಂದ
ಬಂಧಿಸಲ್ಪಟ್ಟ ಒಬ್ಬ ಖೈದಿ

ಬೆಳದಿಂಗಳ ಬಾಲೆ

ಬೆಳದಿಂಗಳ ಬೆಳಕಿನಲಿ.

ಬರುವಾಗ ನೀ ಬಳಕುತಲಿ..

ನಿನ್ನ ಕಣ್ಣೋಟ ನನ್ನ ಮನಸು ಕೆಣಕುತಲಿ....

ಹುಚ್ಚೆದ್ದು ಕುಣಿದೆನು ಹರುಷದಲಿ....

ನನ್ನ ಹುಚ್ಚು ಕಂಡ ಆ ಚಂದ್ರ ಬಾನಲಿ

ಮರೆಯಾದನು ಮೋಡದ ಮರೆಯಲಿ ...

ಸುಮ್ಮನೆ ಬರುವುದಿಲ್ಲ ಇಲ್ಲಿ ಸಂಜೆ..!

ಸಂಜೆಯಾಯಿತು.

ಬೆಂಗಳೂರಿನಲ್ಲಿ ಸಂಜೆ ಎನ್ನುವುದು ಸುಮ್ಮನೇ ಬರುವುದಿಲ್ಲ. ಸೂರ್ಯ ಇದಕ್ಕಿದ್ದಂತೆ ತನ್ನ ಉರಿ ಕಳೆದುಕೊಂಡು, ಅನಗತ್ಯವಾಗಿ ಕೆಂಪೇರಿ, ಏನೋ ಅರ್ಜೆಂಟ್ ಕೆಲಸವಿದ್ದವನಂತೆ ದುಂಡಗಾಗಿ ಪಶ್ಚಿಮದೆಡೆಗೆ ಹೊರಡುವಾಗ, ಸಂಜೆಯಾಗುತ್ತದೆ.

ಮೆಜೆಸ್ಟಿಕ್ ಬಸ್ ನಿಲ್ದಾಣದ ಸುತ್ತಮುತ್ತಲ ಪ್ರದೇಶಗಳಲ್ಲಿ ಇನ್ನೂ ಉಳಿದಿರುವ ಮರಗಳಲ್ಲಿ ಸಾವಿರಾರು ಹಕ್ಕಿಗಳ ಸಂಜೆ ಸಂಭ್ರಮದ ಗೀತೆ ವಾಹನಗಳ ಕರ್ಕಶ ಸದ್ದಿನಲ್ಲಿ ಅಡಗಿ ಹೋಗುತ್ತಿರುವಾಗ, ಸಂಜೆಯಾಗುತ್ತದೆ.

ಅದೇ ಮೆಜೆಸ್ಟಿಕ್‌ನ ಸಿಟಿ ಬಸ್ ನಿಲ್ದಾಣದಲ್ಲಿ, ತಮ್ಮ ಕಾಂಕ್ರೀಟ್ ಗೂಡು ಸೇರುವ ಕಾತರದಲ್ಲಿ ನಿಂತ ಲಕ್ಷಾಂತರ ಜನ, ‘ಈ ಹಾಳಾದ ಬಸ್ ಇನ್ನೂ ಬರಲಿಲ್ಲವಲ್ಲ’ ಎಂದು ಮನಸ್ಸಿನೊಳಗೇ ಶಪಿಸುತ್ತಿರುವಾಗ, ಸಂಜೆಯಾಗುತ್ತದೆ. ಮುಖ್ಯ ರಸ್ತೆಗಳಲ್ಲಿ, ಜನರಿಗೆ ನಡೆದಾಡಲೂ ಜಾಗವಿಲ್ಲದಂತೆ ತುಂಬಿಕೊಂಡ ವಾಹನಗಳು, ಮುಂದಕ್ಕೆ ಹೋಗಲಾಗದೇ ಹೊಗೆಯುಗುಳುತ್ತ ಅಸಹನೆಯಿಂದ ಕಿರಿಚಿಕೊಳ್ಳುವಾಗ, ಸಂಜೆಯಾಗುತ್ತದೆ. ಒಳ ಭಾಗದಲ್ಲಿರುವ ಸಣ್ಣ ರಸ್ತೆಗಳನ್ನೇ ತಾತ್ಕಾಲಿಕ ಆಟದ ಮೈದಾನವನ್ನಾಗಿ ಮಾಡಿಕೊಂಡ ಮಕ್ಕಳು ಆಟ ಆಡುತ್ತ ಕೇಕೆ ಹಾಕುತ್ತಿರುವಾಗ, ಸಂಜೆಯಾಗುತ್ತದೆ.

ನಮ್ಮ ಸುತ್ತಮುತ್ತ ಅದೆಷ್ಟು ಸಂಪತ್ತಿದೆ ಗೊತ್ತೆ? (ರೈತರೇ ಬದುಕಲು ಕಲಿಯಿರಿ-೨)

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)

ಭಾರತದಲ್ಲಿರುವಂತಹ ನೈಸರ್ಗಿಕ ವೈವಿಧ್ಯತೆ ಹಾಗೂ ಅನುಕೂಲಗಳು ಜಗತ್ತಿನ ಯಾವ ದೇಶದಲ್ಲಿಯೂ ಇಲ್ಲ.

ಇಲ್ಲಿ ಅತ್ಯುತ್ತಮವಾದ ಮಣ್ಣಿದೆ. ವಿವಿಧ ಪ್ರಮಾಣದ ಮಳೆ ಬೀಳುತ್ತದೆ. ಶಕ್ತಿದಾಯಕ ಬಿಸಿಲು ನಮ್ಮಲ್ಲಿ ಹೇರಳವಾಗಿದೆ. ಜಗತ್ತಿನ ಇತರ ದೇಶಗಳು ಅನಾಗರಿಕ ಸ್ಥಿತಿಯಲ್ಲಿದ್ದಾಗ ಭಾರತ ಸರ್ವಸಂಪನ್ನವಾಗಿತ್ತು. ಅದ್ಭುತವಾದ ಕೃಷಿ ಪದ್ಧತಿ ನಮ್ಮಲ್ಲಿತ್ತು. ಹೆಚ್ಚು ಬೆಳೆಯುತ್ತಿದ್ದುದರಿಂದ ನಾಗರಿಕತೆಯನ್ನು ಪೋಷಿಸುವುದು ಸುಲಭವಾಗಿ, ಕಲೆ ಮತ್ತು ಸಂಸ್ಕೃತಿ ಬೆಳೆದವು. ಇತರ ದೇಶಗಳು ಸರಿಯಾಗಿ ಬಟ್ಟೆ ಕೂಡ ಹಾಕಿಕೊಳ್ಳದ ಸ್ಥಿತಿಯಲ್ಲಿದ್ದಾಗ ಭಾರತದಲ್ಲಿ ಬಂಗಾರದ ಹೊಗೆ ಹಾಯುತ್ತಿತ್ತು.

ಇದು ಖಂಡಿತವಾಗಿ ಉತ್ಪ್ರೇಕ್ಷೆಯಲ್ಲ. ನಮ್ಮ ಸಮೃದ್ಧ ಸ್ಥಿತಿ ದಾಳಿಕೋರರನ್ನು ಆಕರ್ಷಿಸಿತು. ಆದರೆ ದಂಡೆತ್ತಿ ಬಂದ ಗ್ರೀಕರು, ಮುಸ್ಲಿಂರು ಹಾಗೂ ಇತರ ಹಲವಾರು ಬುಡಕಟ್ಟು ಜನಾಂಗದವರು ಮೊದಮೊದಲು ಸಂಪತ್ತನ್ನು ಕೊಳ್ಳೆ ಹೊಡೆದರೂ ನಮ್ಮ ಸಂಸ್ಕೃತಿಯಿಂದ ಪ್ರಭಾವಿತರಾಗಿ ಇಲ್ಲಿಯೇ ನೆಲೆ ನಿಂತರು. ಇಷ್ಟೊಂದು ಸಮೃದ್ಧ ದೇಶ ಬಿಟ್ಟು, ಇದ್ದ ಕೊಳ್ಳೆಯೊಂದಿಗೆ ದೂರದಲ್ಲಿರುವ ತಮ್ಮ ದೇಶಕ್ಕೆ ಹೋಗಿ ನೆಲೆಸುವುದು ಸಾರಿಗೆ ವ್ಯವಸ್ಥೆ ಕಠಿಣವಾಗಿದ್ದ ಆಗಿನ ದಿನಗಳಲ್ಲಿ ಅಷ್ಟು ಸುಲಭವೂ ಆಗಿರಲಿಲ್ಲ.

ಪ್ರೇಮ ನಿವೇದನೆ......ಕೆಲವು ಹಾಡುಗಳು......

ಕೆಲವು ಹಾಡುಗಳು ಬಹಳ ಆತ್ಮೀಯವಾಗುತ್ತವೆ ನಾನು ಹೇಳಹೊರಟಿರುವುದು ಹಳೆಯ ಹಾಡುಗಳ ಬಗ್ಗೆ... ಇಲ್ಲಿ ವಿಶೇಶವೆಂದರೆ

ನಾಯಕಿಯರು ಮುಂದಾಗಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ....

೧) " ಸಿಟ್ಟ್ಯಾಕೋ ಸಿಡಕ್ಯಾಕೋ ನನ್ ಜಾಣ...." ಎಲ್ ಆರ್ ಈಶ್ವರಿ ಹಾಡಿದ ಈ ಹಾಡು ಎಂದಿಗೂ ಹಸಿರಾಗಿದೆ. ನಾಯಕಿ ಇಲ್ಲಿ

ಓದಿದ್ದು ಕೇಳಿದ್ದು ನೋಡಿದ್ದು -131 ಡಬ್ಲ್ಯೂದಿಂದ ಜಿಯೆಡೆಗೆ...

  ಡಬ್ಲ್ಯೂದಿಂದ ಜಿಯೆಡೆಗೆ...

 

-----------------------------------------

ಹಲವಾರು ಗಂಡಸರು ಕಚೇರಿಯಲ್ಲಿ ಸಿಂಹದ ಹಾಗಿರುತ್ತಾರೆ

ಮನೆಯಲ್ಲೂ ಸಿಂಹದಂತಿರುತ್ತಾರೆ-ಆದರೆ..

ಅದರ ಮೇಲೊಂದು ದುರ್ಗೆ ಕುಳಿತಿರುತ್ತಾಳೆ!

-----------------------------------------------

ನನ್ ಫ್ರೆಂಡ್ಸು

ನನ್ ಫ್ರೆಂಡ್ಸ್ದೆಲ್ಲಾ ಒಂದೆ ಪ್ರಶ್ನೆ
ಯಾಕ್ ಮಾಡ್ತಿರ್ತ್ಯ ಇಷ್ಟೊಂದ್ ಜಾಗರಣೆ
ಅವ್ರಿಗ್ ಹೇಗ್ ಹೇಳ್ಲಿ ನನ್ ಯಾತ್ನೆ
ಅದಕ್ ಸ್ವಲ್ಪ ಹಾಕ್ತೀನಿ ಒಂಚೂರ್ ಒಗ್ಗರಣೆ

ಬರುತ್ತೆ ಸಖತ್ ಕೆಲ್ಸ ನನ್ ಹುಡುಕ್ಬಿಟ್ಟು
ಅದಕ್ ನೋಡ್ರಪ್ಪ  ಮೈಲು, ಲೆಟ್ರು,  ಸ್ಪ್ರೆಡ್ಶೀಟು
ಇದ್ರ ಜೊತೆಗ್ ಮತ್ ಮತ್ತೆ ಪಿಂಗೋ ಛಾಟು

ಋಣ

ನನ್ನ ಕವನದ ಒಂದು ಸಾಲು ಹೀಗಿದೆ- "ಜಗಕೆಲ್ಲ ಬೆಳಕ ಕೊಡುವಂತ ರವಿಗೆ ನಾನೆಂಬ ಗರ್ವವಿಲ್ಲ| ಹಗಲೆಲ್ಲ ದುಡಿದು ಕತ್ತಲೆಯ ರಾತ್ರಿಯಲಿ ರವಿ ಮಾಯಾದನಲ್ಲ"