ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮೇಣದ ಅರಮನೆ

ನನ್ನ ಮದುವೆಗೆ ಮುನ್ನ
ಅಮ್ಮ ಕನಸಿನಲ್ಲಿ ಬೆಚ್ಚಿಬಿದ್ದು ಕೂಗುತ್ತಿದ್ದಳು
ಅವಳ ಭಯಾನಕ ಕೂಗು ನನ್ನ ಎಬ್ಬಿಸುತ್ತಿತ್ತು
ಅವಳೆನ್ನೆಬ್ಬಿಸಿ ಕೇಳುತ್ತಿದ್ದೆ ಯಾಕೆಂದು
ತನ್ನ ಖಾಲಿ ಕಣ್ಣುಗಳಿಂದ ಸುಮ್ಮನೆ ದಿಟ್ಟಿಸುತ್ತಾ ಹೇಳುತ್ತಿದ್ದಳು
ತನ್ನ ಕನಸಿನ ಬಗ್ಗೆ ಏನೊಂದೂ ನೆನಪಿಲ್ಲವೆಂದು.
ಹೀಗೊಂದು ದಿನ ಅಮ್ಮ ಕನಸಲ್ಲಿ ಹೆದರಿದಳು
ಆದರೆ ಈ ಸಾರಿ ಕೂಗಲಿಲ್ಲ.

ನಾವು ಏನಾಗಬಹುದು ಮುಂದಿನ ಜನ್ಮವೊಂದಿದ್ದರೆ?

ಮೊನ್ನೆ ಮೊನ್ನೆ ನಮ್ಮೊಬ್ಬ ಸ್ನೇಹಿತರು ಪುನರ್ಜನ್ಮದ ಬಗ್ಗೆ ಮಾತನಾಡುತ್ತಿದ್ದರು. ಅವರಿಗೆ ಈ ಬಗ್ಗೆ ಆಸಕ್ತಿ, ಬಲವಾದ ನಂಬಿಕೆ. ಈ ಜನ್ಮದ ಕಷ್ಟ ಕಾರ್ಪಣ್ಯಗಳಿಗೆ ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳು ಕಾರಣವಂತೆ. ಅಲ್ಲಿ ಕಟ್ಟಿದ ಬುತ್ತಿಯ ಊಟ ಇಲ್ಲಗೆ. ನಾವು ಏನಾಗಬಹುದು ಮುಂದಿನ ಜನ್ಮದಲ್ಲಿ? ಎಷ್ಟೊಂದು ಕುತೂಹಲ ಮತ್ತು ರೋಚಕವಾದದ್ದು ಇದು.

ಪಕ್ಷಿ ವೀಕ್ಷಣೆ

ಪಕ್ಷಿಗಳು ಪುಟ್ಟ ಗಾತ್ರದ್ದಾಗಿರಲಿ, ದೊಡ್ಡ ಗಾತ್ರದ್ದಾಗಿರಲಿ, ಪ್ರಕೃತಿಯ ಅದ್ಭುತ ಸೃಷ್ಟಿ ಎಂಬುದರಲ್ಲಿ ಸಂಶಯವಿಲ್ಲ. ಅವು ತಮ್ಮ ವೈವಿಧ್ಯಮಯವಾದ ಇಂಚರದಿಂದ, ಚೈತನ್ಯದಾಯಕ ಹಾರಾಟದಿಂದ, ಆಕರ್ಷಕ ಬಣ್ಣದಿಂದ ನಿಸರ್ಗಕ್ಕೆ ಜೀವ ತುಂಬುವ ಪುಟ್ಟ ಜೀವಿಗಳು.

ಪ್ರತಿದಿನ, ನಮ್ಮ ಅಂಗಳದಲ್ಲಿ ಹಾಜರಾಗುವ, ಮನೆಯ ಸೂರಿನಲ್ಲಿ ಅಥವಾ ಸಮೀಪದ ಮರಗಳಲ್ಲಿ ಗೂಡು ಕಟ್ಟಿ ವಾಸಿಸುವ ಹಕ್ಕಿಗಳು ಕೆಲವಾದರೆ, ಊರಾಚೆಗಿನ ತೋಪುಗಳಲ್ಲಿ, ತೋಟಗಳಲ್ಲಿ, ಕಾಡುಗಳಲ್ಲಿ ವಾಸಿಸುವ ಪಕ್ಷಿಗಳು ಹಲವಾರು. ಅವುಗಳ ಬಣ್ಣ, ಆಕಾರ, ದನಿ, ಸ್ವಭಾವ, ನೆಲೆ, ಆಹಾರ, ಗೂಡುಕಟ್ಟುವ ಹಾಗೂ ಮರಿಗಳನ್ನು ಸಾಕುವ ವಿಧಾನ ಸಹ ವೈವಿಧ್ಯಮಯ.

’ಪಕ್ಷಿ ವೀಕ್ಷಣೆ’ ಕುತೂಹಲಕಾರಿಯಾದ, ಹೆಚ್ಚು ದುಬಾರಿಯಲ್ಲದ, ಪರಿಸರದ ಬಗ್ಗೆ, ಪಕ್ಷಿಗಳ ಬಗ್ಗೆ ಆಸಕ್ತಿಯನ್ನು, ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸುವ ಹವ್ಯಾಸ. ಇದನ್ನು ಒಂದು ಅಧ್ಯಯನ ಎಂದು ಹೇಳಲೂಬಹುದು.

'ಮತಾಂತರ ಸತ್ಯದ ಮೇಲೆ ಹಲ್ಲೆ'

'ಮತಾಂತರ ಸತ್ಯದ ಮೇಲೆ ಹಲ್ಲೆ' (Conversion An Assault on Truth) ವಿಷಯದ ಮೇಲೆ ಚರ್ಚಾಕೂಟವನ್ನು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಜ 4 ಭಾನುವಾರ ಬೆಳಗ್ಗೆ 10.30ಕ್ಕೆ ಆಯೋಜಿಸಲಾಗಿದೆ.

ನಮ್ಮೂರಿನ ಪೋಸ್ಟಾಫೀಸ್ ನಲ್ಲೊಂದು ದುಃಖದ ಪ್ರಸಂಗ :(

ಜಾಗತೀಕ ಹಿಂಜರಿತದಿಂದ ನಾನು ಕೆಲಸ ಮಾಡೋ ಕಂಪನಿಯಲ್ಲೂ ಹತ್ತು ದಿನ ರಜೆ ಕೊಟ್ಟಿದ್ರು. ತುಂಬಾ ದಿನದಿಂದ ಊರಿಗೆ ಹೋಗದೆ ಇದ್ದ ನಾನು, ಇದೇ ಅವಕಾಶಾ ಬಳಸ್ಕೊಂಡು ಕೆಲ ಮಟ್ಟಿಗೆ ಕರ್ನಾಟಕ ಸುತ್ತಿದೆ. ಎಲ್ಲ ಕಡೆ ಮುಖ್ಯವಾಗಿ ಗಮನಿಸಿದ್ದೆನೆಂದರೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ, ಸಣ್ಣ ಸಣ್ಣ ಊರಲ್ಲೂ ಹಿಂದಿ ಹೇರಿಕೆಯ ನಿರಂತರ ಪ್ರಯತ್ನ ನಡಿತಾ ಇದೆ. ಮೊನ್ನೆ ದಿನ ಊರಲ್ಲಿ ಅಪ್ಪನ ಜೊತೆ ನನ್ನೂರು ಕಲಘಟಗಿಯ ( ಧಾರವಾಡ ಜಿಲ್ಲೆಯಲ್ಲಿದೆ) ಅಂಚೆ ಕಛೇರಿಗೆ ಹೋಗಿದ್ದೆ. ನಮ್ಮಮ್ಮ ಅಂಚೆ ಇಲಾಖೆಯ ಉಳಿತಾಯ ಖಾತೆಯಲ್ಲಿ ಚಿಕ್ಕದೊಂದು ಹೂಡಿಕೆ ಮಾಡಿದ್ದಾಳೆ. ಆಕೆಗೆ ಹುಶಾರಿಲ್ಲದ ಕಾರಣ ನಾನು, ಅಪ್ಪ ಒಂದು ಡಿಪಾಸಿಟ್ ಮಾಡೋಕೆ ಅಂತ ಹೋಗಿದ್ವಿ. ಅಲ್ಲಿ ನೋಡಿದ ಒಂದು ದೃಶ್ಯದಿಂದ ನಿಜಕ್ಕೂ ಅವಕ್ಕಾದೆ !

ನಾನು ಹಣ ಡಿಪಾಸಿಟ್ ಮಾಡೋಕೆ ಅರ್ಜಿ ಹುಡುಕುತ್ತಾ ಇದ್ದೆ. ಅಷ್ಟರಲ್ಲಿ ಒಬ್ಬ ಮಧ್ಯ ವಯಸ್ಸಿನ ಹಳ್ಳಿಯ ಹೆಣ್ಣು ಮಗಳು ಬಂದು " ಅಣ್ಣಾರೆ, ಈ ಫಾರಮ್ ಸ್ವಲ್ಪ ತುಂಬಿಸಿ ಕೊಡ್ರಿ " ಅಂದ್ರು. ನಾನು ಅಕ್ಷರ ಕಲಿತಿಲ್ಲವೇನೋ ಅಂದುಕೊಂಡು ಆಕೆಯ ಅರ್ಜಿ ಇಸಿದುಕೊಳ್ಳಲು ಹೋದೆ, ಆ ಕ್ಷಣ ಕಂಡದ್ದು ಆಕೆಯ ಇನ್ನೊಂದು ಕೈಯಲ್ಲಿ ಆವತ್ತಿನ ಕನ್ನಡ ಪ್ರಭ ಪತ್ರಿಕೆ. ಅದನ್ನು ನೋಡಿ, ಆಶ್ಚರ್ಯಗೊಂಡು ನಾನು ಕೇಳಿದೆ " ಅಲ್ರಿ ಅಕ್ಕಾರೆ, ನಿಮಗೆ ಓದಾಕ್ ಬಂದ್ರೂ ನನ್ನ ಕಡೆ ಏದಕ್ ತುಂಬಸಾಕ್ ಕೊಟ್ರಿ ಅರ್ಜಿ?"  ಅಂತ, ಅದಕ್ಕೆ ಆಕೆ ಉತ್ತರಿಸಿದ್ದು, " ನಾನು ಐದನೆತ್ತ ತಂಕ ಶಾಲಿಗೆ ಹೋಗೆನ್ರಿ.  ನನಗ್ ಓದಾಕ್, ಬರೆಯಾಕ್ ಎರಡು ಬರತೆತ್ರಿ.. ಆದ್ರ ಬರೇ ಕನ್ನಡ ಒಂದಾ ರೀ,, ಆದ್ರ ಇಲ್ಲಿ ಅರ್ಜಿ ಇಂಗ್ಲೀಶ್ ಬಿಟ್ರ ಹಿಂದಿದಾಗ್ ಐತ್ರಿ, ಹಿಂಗಾಗಿ ನಿಮ್ಮ ಕಡೆ ತುಂಬಸಾಕ ಕೊಟ್ಟೆ ರೀ" ಎಂದು ಹಿಂದಿ, ಇಂಗ್ಲಿಷ್ ಕಲಿಯದೇ ಜೀವನದಲ್ಲೆನೋ ದೊಡ್ಡ ತಪ್ಪು ಮಾಡಿದೆ ಅನ್ನುವಂತ ಮುಖಭಾವ ತೋರಿಸಿದರು

ಓದುಗರೇ ನಿಮಗೆ ಈ ಮನ ಕಲಕುವ , 'ಮಾಯಾ' ರಾಕ್ಚಸಿಯ, ರಕ್ಕಸ ರಾಜ್ಯದ / ಪ್ರಜೆಗಳ ದೌರ್ಭಾಗ್ಯದ ಕಥೆ ಗೊತ್ತೇ?

ನಿಮಗೆ (ನೀವು ಈ ಎರಡು ದಿನಗಳ ಹಿಂದಿನ ಪೇಪರ್  ಓದಿದ್ದರೆ, ಟಿ ವಿ ನೋಡಿದ್ದರೆ ಇದು ಖಂಡಿತ ಗೊತ್ತಿರುತ್ತೆ)..


ಈ ಸುದ್ಧಿ ಓದಿ ಏನನಿಸುತ್ತೆ ಖಂಡಿತ ತಿಳಿಸಿ...

ಇದು 'ಮಾಯಾವತಿ' ಎನ್ನುವ ದುರುಳ ಹೆಂಗಸಿನ ಕಥೆ...

ಈ ಮಾಯಾ ಕನ್ಯೆ( ಅವರು ಇನ್ನು ಕುಮಾರಿ ಮಾಯಾವತಿ) ಗೆ , ಅವರ ಹುಟ್ಟಿದ ದಿನಕ್ಕೆ ವಿದೇಶದ ಹೂವು, ಬೇಕು,

ನಾ ಕಂಡ ಅಪರೂಪದ ಚೆಲುವೆ

ಸಮಯ ಸಾಯಂಕಾಲ ೬ ಘಂಟೆ ನಾನು ಎಂದಿನಂತೆ ಕೆಲಸ ಮುಗಿಸಿ ಜಯನಗರದ ಬಸ್ ಸ್ಟಾಪ್ ನಲ್ಲಿ ನಿಂತಿದ್ದೆ. ಕೆಲಸದ ಜಂಜಾಟವನ್ನು ಮುಗಿಸಿ ನಿಂತ ನನ್ನ ಕಣ್ಣುಗಳು ಸೊತು ಸೊರಗಿದ್ದರು ಅಲ್ಲಿಗೆ ಬರುವ ಬಸ್ಸಿನ ಬೊರ್ಡನ್ನೆ ನೊಡುತ್ತಿತ್ತು. ಬರುವ ಎಲ್ಲಾ ಬಸ್ಸುಗಳಿಗೆ ಯಾವಗಲಾದರೊಮ್ಮೆ ಬೆಲ್ಲ ಸಿಗುವ ಇರುವೆಗಳಂತೆ ಜನರು ಮುಗಿ ಬೀಳುತ್ತಿದ್ದಾರೆ.

ಗ್ರೇ ಫ್ಯಾನ್ಸಿ

ಬೆಳಿಗ್ಗಿನ ಚುಮು ಚುಮು ಚಳಿ, ಕಾಫಿ ಹೀರುತ್ತಾ ತೋಟದ ಕಡೆ ಕಣ್ಣು ಹಾಯಿಸಿದರೆ ಅರಳುತ್ತಿರುವ ಹೂವಿನ ಮೇಲೆ ಹಾರುತ್ತಿರುವ ಹಲವು ಬಗೆಯ ಚಿಟ್ಟೆಗಳು. ದೂರದಿಂದ, ಅದು ಹಾರುವ ಪರಿ, ಅದರ ಬಣ್ಣಗಳಿಂದ ವ್ಯಾಮೋಹಿತನಾಗಿದ್ದೆನಾದರೂ ಹತ್ತಿರದಿಂದ ಅದನ್ನು ವೀಕ್ಷಿಸಿ, ಅದರ ಜಾತಕ ತಿಳಿಯುವ ಪ್ರಯತ್ನ, ನನ್ನ ಕೈಗೆ ಕ್ಯಾಮಾರ ಬರುವವರೆಗೂ ಮಾಡಿರಲಿಲ್ಲ.