ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ರಾಮಣ್ಣಿಯ ಹೊಸ ವರ್ಷದ resolution !

ಭಾನುವಾರ ಬೆಳಿಗ್ಗೆ. ನಗರದ ಹೊರವಲಯ ಒಂದು ಸಾಮಾನ್ಯ ಬೀದಿ. ನೆಡೆಯಲು ಜಾಗವಿಲ್ಲದೇ ಇದ್ದರೂ ಮೋಟಾರುಬೈಕು, ಆಟೋಗಳು ನುಗ್ಗಬಲ್ಲ ಸಾಮಾನ್ಯ ಬೀದಿ. ಇಂದು ರಜಾ ದಿನವಾದ್ದರಿಂದ ಗಲಾಟೆ ಸ್ವಲ್ಪ ಕಡಿಮೆ ಇತ್ತು... ಮೂಲೆಯ ಅಂಗಡಿಯ ಕಾಕ ಯಾವುದೋ ಗಿರಾಕಿಗೆ ಟೋಪಿ ಹಾಕುವುದರಲ್ಲಿ ನಿರತನಾಗಿದ್ದ ... ಯಾವುದೋ ಮನೆಯಲ್ಲಿ ಮಗು ಅಳುತ್ತಿತ್ತು... ಇನ್ಯಾರದೋ ಮನೆಯ ಕುಕ್ಕರ್ ಶಿಳ್ಳಿ ಹಾಕುತ್ತಿತ್ತು.... ಮತ್ಯಾರದೋ ಮನೆಯವರು, ಯಾರ ಮೇಲೆ ಸಿಟ್ಟೋ ಏನೋ, ಸಿಕ್ಕಾಪಟ್ಟೆ ರೋಷದಿಂದ ಬಟ್ಟೆಯನ್ನು ಬಂಡೆಗೆ ಬಡೀತಿದ್ದರು ... ಎದುರು ಮನೆಯವರ ಅಡಿಗೆ ಮನೆಯಿಂದ ಸ್ಟೀಲ್ ಡಬರಿ ಕೆಳಗೆ ಬಿದ್ದ ಸದ್ದು .. ಅದರ ಹಿಂದೆಯೇ ’ನಿಧಾನಕ್ಕೆ ಇಡ್ರೀ... ಅದು ನಮ್ಮಮ್ಮನ ಮನೇದು’ ಎಂಬೋ ಮನೆಯಾಕೆಯ ಕೂಗು... ಬೀದಿ ಮೂಲೆಯಲ್ಲಿ ನಿಂತ ಒಣಕಲು ನಾಯಿ ಬೊಗಳಲೋ ಬೇಡವೋ ಎಂದು ಯೋಚಿಸುತ್ತಿತ್ತು.... ಹೀಗಿರುವಾಗ ...

ವಾಕಿಂಗ್ ಅಂತ ಹೊರಟ ಅನಸೂಯಾಬಾಯಿ ಎದುರು ಮನೆ ಸುಂದರಮ್ಮ ಸಿಕ್ಕ ಮೇಲೆ, ಬರೀ ಟಾಕಿಂಗ್ ಮಾಡುತ್ತಿದ್ದರೇ ವಿನ: ಎರಡು ಹೆಜ್ಜೆ ಮುಂದೆ ಹೋಗಲಿಲ್ಲ... ಮಾತಿನ ಮಧ್ಯೆ ನುಗ್ಗಿ, ಬಿಸಿ ಕಾಫೀ ಕೊಡ್ತೀಯಾ ಎಂದು ಕೇಳುವ ಧೈರ್ಯ ರಮಣಮೂರ್ತಿಯವರಿಗೆ ಇಲ್ಲ... ವಿಶಾಲೂ’ಗೆ ಬೂತ್’ನಿಂದ ಹಾಲು ತಂದುಕೊಟ್ಟು ನಾನು, ಅರ್ಥಾತ್ ರಾಮಣ್ಣಿ ಹಾಗೇ ಬಾಗಿಲ ಬಳಿ ಚೇರ್ ಹಾಕಿಕೊಂಡು ಕೂತು, ಬೀದಿಯಿಂದ ಬರುವ ಧೂಳನ್ನು ನಾನೇ ಹೀರುತ್ತ "ಧೂಳುಕಂಠ" ನಾಗಿ, ಹಳೇ ಹಾಲಿನ ಹೊಸ ಕಾಫಿಯನ್ನು ಸಶಬ್ದವಾಗಿ ಹೀರುತ್ತ ಪೇಪರ್ ಓದತೊಡಗಿದ್ದೆ.

ವಿಮಾ ರಂಗದ ಮೇಲೆ ಉದಾರೀಕರಣದ ಕರಿನೆರಳು

ಸದ್ಯೋವರ್ತಮಾನದ ಜಾಗತಿಕ ಹಣಕಾಸು ಪರಿಸ್ಥಿತಿ ತಿಳಿದವರಿಗೆ ಈಗಿನ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ವಿವರಿಸಬೇಕಿಲ್ಲ. ಈಗಾಗಲೇ ನಮ್ಮ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಹಲವು ‘ದೈತ್ಯ' ಕಂಪನಿಗಳು  ಮತ್ತವುಗಳ ಒಡೆತನದಲ್ಲಿದ್ದ ಬ್ಯಾಂಕು, ವಿಮೆ, ಇತರೆ ಹಣಕಾಸು ವ್ಯವಹಾರಗಳೆಲ್ಲ ಕುಸಿದುಬಿದ್ದು ಆ ಕಂಪನಿಗಳು ದಿವಾಳಿಯಾಗಿರುವ , ಆಗುತ್ತಿರುವ ಸಂದರ್ಭ ಇದು. ಅಮೇರಿಕಾದಲ್ಲಾದ ತಲ್ಲಣಗಳು ಹೀಗೆ ಇಡೀ ವಿಶ್ವವನ್ನೇ ಅಲ್ಲಾಡಿಸಬಹುದೆಂದು ಜಾಗತೀಕರಣ ಪ್ರಕ್ರಿಯೆ ಶುರುವಾಗುವ ಮುನ್ನ ಊಹಿಸಲು ಸಾಧ್ಯವೂ ಇರಲಿಲ್ಲ. ಆದರೆ ಈಗ ಜಾಗತೀಕರಣದ ಬಲೆ ಬೀಸಿ ಎಲ್ಲ ಸಾರ್ವಭೌಮ ದೇಶಗಳನ್ನೂ ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಅಮೆರಿಕಕ್ಕೆ ನೆಗಡಿಯಾದರೆ ಈ ದೇಶಗಳ ಮೂಗಿನಲ್ಲಿ ನೀರು ಸೋರತೊಡಗುತ್ತದೆ. ಅದು ಕೆಮ್ಮಿದರೆ ಈ ದೇಶಗಳು ಆಸ್ಪತ್ರೆ ಸೇರುತ್ತವೆ.

ಅಮೇರಿಕದ ಆರ್ಥಿಕತೆ ಅಪಾಯದ ಅಂಚು ತಲುಪಿದೆ ಎಂದು ಹೇಳಲು ನಾವೇನು ಆರ್ಥಿಕ ತಜ್ಞರಾಗಿರಬೇಕಿಲ್ಲ. ಜಾಗತೀಕರಣ ಮತ್ತು ಉದಾರೀಕರಣದ ಹುಚ್ಚು ಹತ್ತಿಸಿ ಎಲ್ಲ ಅರ್ಥವ್ಯವಸ್ಥೆಯನ್ನೂ ಖಾಸಗಿಯವರಿಗೆ ಒಪ್ಪಿಸಿದ ಪರಿಣಾಮ ಇದು. ಜಗತ್ತಿನ ಎಲ್ಲ ದೇಶಗಳೂ ಪರಸ್ಪರ ವ್ಯಾವಹಾರಿಕವಾಗಿ ಬೆಸೆದುಕೊಂಡಿರುವ ಕಾರಣ ಅಮೆರಿಕದ ಬಿಕ್ಕಟ್ಟು ಎಲ್ಲ ದೇಶಗಳ ಅರ್ಥ ವ್ಯವಸ್ಥೆಯ ಮೇಲೂ ತನ್ನ ಪರಿಣಾಮ ತೋರುತ್ತ ಸಾಗಿದೆ. ಬ್ರಜಿಲ್ ಮತ್ತು ಇಂಡೋನೇಷಿಯಾದ ಪರಿಸ್ಥಿತಿಯಂತೂ ಶೋಚನೀಯವಾಗಿದೆ. ನಮ್ಮ ದೇಶದ ಮೇಲೆ  ಈ ಕಂಪನದ ಪರಿಣಾಮ ತೀವ್ರವಾಗಿಲ್ಲವಾದರೂ ಅಲ್ಪ ಸ್ವಲ್ಪ ನಷ್ಟ ಉಂಟುಮಾಡಿದೆ. ಅಮೆರಿಕ ಮತ್ತು ಸಾಫ್ಟ್‌ವೇರನ್ನು ನಂಬಿದ್ದ ಬಹುತೇಕ ಖಾಸಗಿ ಸಂಸ್ಥೆಗಳು ತಮ್ಮ ನೌಕರರ ಸಂಖ್ಯೆ ತಗ್ಗಿಸುತ್ತಲೋ, ಅಥವಾ ಅವರ ಸಂಬಳ ಕಡಿತಗೊಳಿಸಿಯೋ ಸುದ್ದಿ ಮಾಡುತ್ತಲೇ ಇವೆ. ಮಾಧ್ಯಮ ಕ್ಷೇತ್ರದ ಮೇಲೂ ಇದರ ಕರಿನೆರಳು ಬಿದ್ದ ಕಾರಣ ನಿಯತಕಾಲಿಕೆಗಳ ಅವಧಿ ಬದಲಾಗತೊಡಗಿದೆ. ಕನ್ನಡದಲ್ಲೂ ಪ್ರಕಟವಾಗುವ ‘ದಿ ಸಂಡೆ ಇಂಡಿಯನ್' ಪತ್ರಿಕೆಯ ಸ್ಥಳೀಯ ಸಾಪ್ತಾಹಿಕ ಆವೃತ್ತಿಗಳು ಪಾಕ್ಷಿಕ ಪತ್ರಿಕೆಗಳಾಗಿ ಬದಲಾಗಿವೆ.

ಸಂವತ್ಸರ

ಮುಂಜಾನೆಯ ಮಂಜಿನಲಿ ಇಬ್ಬನಿಯ ದಿಬ್ಬದಲಿ ಬಳಿಗೆ ಬಂದಿದೆ ಹೊಸ ವರುಷ...
ಚುಮು ಚುಮು ಚಳಿಯಲ್ಲಿ ನಿಮಗೆಲ್ಲ ತರಲಿ ಬೆಚ್ಚಗಿನ ಹೊಸ ಹರುಷ...

ಹೊಸ ಸಂವತ್ಸರದ ಹಾರ್ದಿಕ ಶುಭಾಶಯಗಳು...

ನಾಳೆ ಮನೆಗೆ ಹೊರಟಿದ್ದೇನೆ.. ಸಂಪದಕ್ಕೆ ಇನ್ನು ಹದಿನೈದು ದಿನ ರಜಾ..

ಒಮ್ಮೆ ಓದಿ ಈ ಭಾವಗೀತೆ

ನನ್ನ ನೆಚ್ಚಿನ ಕವಿ ಲಕ್ಷ್ಮಿನಾರಾಯಣ ಭಟ್ಟರ ಭಾವಗೀತೆ ತಮ್ಮೊಂದಿಗೆ ಹಂಚಿಕೊಳ್ಳುವಾಸೆಯಾಯಿತು. ನಿಮಗೂ ಇಷ್ಟವಾಗಬಹುದು ಓದಿನೋಡಿ!

ಏಕೆ ಅರ್ಥ ಬಾಳಿಗೆ
ಏಕೆ ಅರ್ಥ ನಾಳೆಗೆ
ಅರ್ಥ ಒಂದು ಏಕೆ ಬೇಕು
ಅರಳಿ ನಗುವ ಹೂವಿಗೆ,

ಏಕೆ ಅರ್ಥ ಬಾಳಿಗೆ
ಏಕೆ ಅರ್ಥ ನಾಳೆಗೆ
ಕಳೆದು ಹೋದ ನೆನ್ನೆಗೆ
ಕಂಡು ಮರೆವ ನಾಳೆಗೆ
ಬರೆದುದೆಲ್ಲ ಅಳೆಸಿಬಿಡುವ
ಖಾಲಿ ಹಾಳೆಗೆ

ನೀನೊಂದು ವಿಶ್ ಮಾಡ್ತಿಯ ಅನ್ಕೊಂಡಿದ್ದೆ…

2008 ನನ್ನ ಪಾಲಿಗೆ ಸುಖ ದುಃಖಗಳ ಮಿಶ್ರಣ… ಕಳೆದ ವರ್ಷ ನನಗೆ ನೀನು ಸಿಕ್ಕಿದ ವರ್ಷ, ನಿನ್ನನ್ನ ನಂಗೆ ಕೊಟ್ಟ ಅದ್ಭುತ ವರ್ಷ… ಆ ಕಾರಣಕ್ಕೆ ನಾನು 2008ಕ್ಕೆ ಋಣಿ..

ಹೊಸ ವರ್ಷಕ್ಕೆ ಶುಭ ಹಾರೈಸುತ್ತಾ

ಹೂವಿನ ಮೇಲಿನ ಮಂಜಾನೆಯ ಮಂಜಿನಂತೆ ತಾಜಾತನದಿಂದ ಕೂಡಿದ ನಿಮ್ಮೆಲ್ಲರ ಹೊಸ ವರ್ಷದ ಆಕಾಂಕ್ಷೆಗಳು ಸಾಕಾರಗೊಳ್ಳಲಿ ಎಂಬ ಹಾರೈಕೆಯೊಡನೆ

ಖಗೋಳ ವಿಜ್ಞಾನ ವರ್ಷ - ೨೦೦೯

ಈ ೨೦೦೯ ರ ವರ್ಷವನ್ನ ಖಗೋಳ ವಿಜ್ಞಾನವರ್ಷ ಎಂದು ಘೋಷಿಸಲಾಗಿದೆ!

ಮಾನವನ ಇತಿಹಾಸದ ಸಾವಿರಾರು ವರ್ಷಗಳಲ್ಲಾಗದಷ್ಟು ಬದಲಾವಣೆಗಳು ಕಳೆದ ಐವತ್ತು ವರ್ಷಗಳಲ್ಲಾಗಿವೆ.
ಅದರಲ್ಲಿ ಒಂದು ಬೆಳಕು ತರುವ ಕೊಳಕು. ಅಂದ್ರೆ ಲೈಟ್ ಪಲ್ಯೂಶನ್.
ಅದರ ದೆಸೆಯಿಂದಾಗಿ, ಬಹಳ ಜನಕ್ಕೆ ಆಕಾಶದಲ್ಲಿ ಏನಿರಬಹುದೆಂಬ ಹೊಳಹೂ ಇರದೇ‌ ಹೋಗಿದೆ.