ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೀಗೊಂದು ಬ್ಲಾಗು

ಹೀಗೇಬ್ಲಾಗುಗಳಲ್ಲಿ ಸುತ್ತಾಡುತ್ತಿದ್ದಾಗಇಂಥದೊಂದು ಕಣ್ಣಿಗೆ ಬಿತ್ತು.ವರ್ಷಾರಂಭದದಿನ ಇದನ್ನು ಸಂಪದದೊಂದಿಗೆಹಂಚಿಕೊಳ್ಳೋಣವೆನಿಸಿತು.

ಪ್ರೀತಿಯಿಂದ

ಸಿಮರಿಜೋಸೆಫ್

ಕಳಚಿದ ಕಾಲಗರ್ಭದ ಸವಿಸವಿ ನೆನಪು

ಕೊನೆಗೂ ೨೦೦೮ ಕಾಲನ ಕಾಳ್ತುಳಿತಕ್ಕೆ ಸಿಕ್ಕಿ ಕಾಲಗರ್ಭವನ್ನು ಸೇರಿದೆ. ಹತ್ತು ಹಲವು ವಿವಾದಗಳನ್ನು, ನೂರಾರು ಸಮಸ್ಯೆಗಳನ್ನು ತನ್ನ ಒಡಲಾಳದಲ್ಲಿ ನುಂಗಿಕೊಂಡು ವಿದಾಯ ಹಾಡಿದೆ.
ಎಂಟು ಸಾವಿರದ ಎಂಟರೊಳಗಿನ ನಂಟು ಇದೀಗ ತಾನೇ ಸಡಿಲಗೊಂಡಿದೆ. ನೆನಪಿನ ಗಂಟು ಭಾರವಾಗಿದೆ.
ಜಗವಿಹುದನಾದಿಯದು, ಮೊದಲಿಲ್ಲ, ಕೊನೆಯಿಲ್ಲ,
ಯುಗದಿಂದ ಯುಗಕೆ ಹರಿವುದು ಜೀವನದಿ.

ಮನುಷ್ಯ ಉಳಿಯಬೇಕಾದರೆ ಸಸ್ಯಾಹಾರದತ್ತ ತಿರುಗಬೇಕು...

ಈಗ ಓದುತ್ತಿರುವ ಗಾಂಧಿಯ ಪುಸ್ತಕದಲ್ಲಿ ಸಸ್ಯಾಹಾರದ ಬಗ್ಗೆ ಗಾಂಧಿ ಮಾಡಿದ ಕೆಲವು ಪ್ರಯೋಗಗಳು ಮತ್ತು ಅವರು ಲಂಡನ್ನಿನಲ್ಲಿ ಓದುತ್ತಿರುವಾಗ ಸಸ್ಯಾಹಾರಿ ರೆಸ್ಟಾರೆಂಟ್‌ಗಳನ್ನು ಹುಡುಕಿಕೊಂಡು ಮೈಲುಗಟ್ಟಲೆ ನಡೆದೇ ಹೋಗುತ್ತಿದ್ದ ಚಿತ್ರಣವಿದೆ.

ಹೊಸ ವರ್ಷದ ಕಲ್ಪನೆಗಳು

ಮೊದಲಿಗೆ, ಸಂಪದಿಗರೆಲ್ಲರಿಗೂ ಹೊಸ ವರ್ಷಕ್ಕೆ ಶುಭ ಹಾರೈಕೆಗಳು.

ಇನ್ನು ಪಾರ್ಟಿಗೆ ಹೋಗುವ ಮುಂಚೆ, ನನ್ನ ಹೊಸ ವರ್ಷದ ರೆಸೊಲೂಷನ್ಸ್ಗಳನ್ನು ಅವಸವಸರವಾಗಿ ಇಲ್ಲಿ ಹೊರ ಚೆಲ್ಲುತ್ತಿರುವ ಅರ್ಥ ಇಷ್ಟೆ. ನಾಳೆ, ನಶೆ ಇಳಿದು, ಹ್ಯಾಂಗೋವರ್ ಇದ್ದಾಗ ಇದನ್ನು ಓದಿದರೆ, ನಾನು ಏಕೆ ಬದುಕಿರಬೇಕೆನ್ನುವುದಕ್ಕೆ ಕಾರಣ ಸಿಗಲೆಂದು :-)

ಹೊಸವರ್ಷದ ಮುನ್ನಾದಿನ ಒಂದಷ್ಟು ಪುಡಿ ನೆನಪುಗಳು

ಮತ್ತೊಂದು ವರ್ಷ ಕಳೆದು ಹೋಯ್ತು. ಸಾಧಿಸಿದ್ದೇನಾದ್ರೂ ಉಂಟೇ ಅಂದ್ರೆ ಉತ್ತರಕ್ಕೆ ತಡಕಾಡಬೇಕು. ಅದಿರಲಿ, ಎಲ್ಲಾದನ್ನೂ ನಾವು ಯಾವುದಾದರೂ ಸಾಧನೆಗಾಗಿ ಅಂತಲೇ ಯಾಕೆ ಮಾಡ್ಬೇಕು? ನಾಕು ಜನರಿಗೆ ತೊಂದ್ರೆ ಆಗದ್‍ಹಾಗೆ ನಡ್ಕೊಂಡು, ಆಗೋದಾದ್ರೆ ಒಂದೋ ಎರಡೋ ಒಳ್ಳೇ ಕೆಲಸ ಮಾಡಿ, ಕಷ್ಟದಲ್ಲಿದ್ದೋರಿಗೆ ಅಯ್ಯೋ ಪಾಪ ಅಂದು ಕೈಲಾದ ಸಹಾಯ ಮಾಡಿದ್ರೆ ಸಾಕಲ್ಲಪ್ಪ? ಎತ್ತೆತ್ತರದ ಗುರಿಗಳನ್ನ ಇಟ್ಟುಕೊಂಡಿರುವವರಿಗೆ ಅದು ಸಾಕು ಅನ್ನಿಸದಿರಬಹುದು. ಆದರೆ ನನ್ನ ಮಟ್ಟಿಗೆ ಅದು ಸಾಕು. ಯಾಕಂದ್ರೆ, ಬಸವಣ್ಣೋರು ಹೇಳಿರೋದು ಕೇಳಿದ್ದೀವಲ್ಲ?

ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ.

ಹಾಗಿದ್ದ ಮೇಲೆ, ನಮ್ಮ ನಮ್ಮ ತನು-ಮನಕ್ಕೆ ಹಿತವಾಗೋ ಕೆಲಸ ನಾವು ಮಾಡ್ಕೊಂಡು ಹೋಗ್ತಾ ಇದ್ರೆ ಸಾಕು. ಈ ವರ್ಷ ಅಂತಾ ಒಂದು ಕೆಲಸದಲ್ಲಿ ಕೈಯಿಟ್ಟ ನೆಮ್ಮದಿ ನನಗಿದೆ.  ಹಿಂದೆ ಯಾವಾಗಲೋ ಒಂದು ಪೇಪರ್ ಬರೆಯೋವಾಗ ದಾಸಸಾಹಿತ್ಯ ಅಂತರ್ಜಾಲದಲ್ಲಿ ಸಿಗೋ ಹಾಗೆ ಮಾಡ್ಬೇಕು ಅನ್ನೋದು ನನ್ನ ಕನಸು ಅಂತ ಬರೆದಿದ್ದರ ನೆನಪಿದೆ. ಆದರೆ ಆ ಗಳಿಗೆಯಲ್ಲಿ ನನಗೆ ಅದಕ್ಕೆ ಯಾವರೀತಿ ತಾಂತ್ರಿಕ ಪರಿಣತಿ ಬೇಕಾಗುತ್ತೆ ಅನ್ನೋದೂ ಕೂಡ ಗೊತ್ತಿರಲಿಲ್ಲ. ಆದರೆ ಆ ಪರಿಣತಿ ನನ್ನಲ್ಲಿಲ್ಲದಿದ್ದರೂ, ಒಂದಲ್ಲ ಒಂದು ದಿವಸ ಕನಸು ನನಸು ಮಾಡಬೇಕು ಅನ್ನೋ ಆಸೆಯಂತೂ ಇತ್ತು.