ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂಸ್ಕೃತದ ರಕಾರ. ಕನ್ನಡದ ರಕಾರ ಮತ್ತು ಱಕಾರ

ಒಟ್ಟು ಮೂಱು ತೆಱನಾದ ರಕಾರಗಳು ಒಂದು ಸಂಸ್ಕೃತದ ರಕಾರ ಅಥವಾ ರೇಫ. ಇದು ಋಟುರಷಾಣಾಂ ಮೂರ್ಧಾ ಎಂಬಂತೆ ಮೂರ್ಧನ್ಯ ರಕಾರ. ಅಂದರೆ ಪ್ರತಿವೇಷ್ಟಿತ ರ. ಕನ್ನಡದ ರಕಾರ ದಂತಮೂಲೀಯ ತಾಡಿತ. ಅಂದರೆ ಹಲ್ಲಿನ ಬುಡವನ್ನು ತಟ್ಟುವ ರ. ಇನ್ನೊಂದು ಱಕಾರ ದಂತಮೂಲೀಯ ಕಂಪಿತ. ಅಂದರೆ ಹಲ್ಲಿನ ಬುಡದಲ್ಲಿ ನಾಲಿಗೆ ಱಕಾರ ಉಚ್ಚರಿಸುವಾಗ ಕಂಪಿಸುತ್ತದೆ.

** ನೆನಪು **

ಮರೆಯಲೆಂದು ಕಿಚ್ಚಿಟ್ಟೆ
ನೀನು ಬಿಟ್ಟುಹೋದ
ನೆನಪುಗಳಿಗೆ
ಬೆಂಕಿಯ ಕೆಂಬೆಳಕಿನಲ್ಲೂ
ಕಾಣುತ್ತಿದೆ
ನಿನ್ನ ಮೊಗವು

’ಏ ಮೇರಾ ಡ್ಯಾಡಿ ಹೈ” !

ನಮಗೆ, ರವಿ ಹಾಗೂ ಪ್ರಕಾಶ್ ಅಂತ ಇಬ್ಬರು ಮಕ್ಕಳು. ಹಿರಿಯವ, ರವಿ, ಚಿಕ್ಕವ, ಹಾಗೂ ಕೊನೆಯವ, ಪ್ರಕಾಶ್. ಅವರಿಬ್ಬರೂ ದಾದರ್ ನ, 'ಆಂಟೋನಿಯೊ ಡ ಸಿಲ್ವ' ಕಾನ್ವೆಂಟ್ ಶಾಲೆಯಲ್ಲಿ ಓದುತ್ತಿದ್ದರು. ಆದಿನ ಎರಡನೆಯ ಶನಿವಾರ. ನನ್ನ ಆಫೀಸಿಗೆ ಸುಟ್ಟಿ. ಮಕ್ಕಳಿಗಿಬ್ಬರಿಗೂ ಯೂನಿಫಾರಂ ತೊಡಿಸಿ, ಶೂ ಹಾಕಿದ್ದಾಯಿತು.

ಕಾಪ್!!!

ಕಾಪ್ ಅಂತ ಕರೆಸಿಕೊಳ್ಳುವ ಈ ಅಮೇರಿಕಾದ ಪೋಲೀಸಪ್ಪನ ನೋಡಿದಾಗಲೆಲ್ಲಾ ಇವನ ಮೇಲೆ ಒಂದು ಕವಿತೆ ಬರೆಯಬೇಕೆನಿಸುತ್ತಿತ್ತು. ಸೂಟು-ಬೂಟು ಹಾಕ್ಕೊಂಡು, ಟಾಕು-ಟೀಕಾಗಿ ನಡ್ಕೊಂಡು, ಮೈಕ್ರೋ-ಫೋನಲ್ಲಿ ಕೂಗ್ಕೊಂಡು, ವಾಕಿ-ಟಾಕೀಲಿ ಮಾತಾಡ್ಕೊಂಡು ಇರೋ ಈ ಮಹಾನುಭಾವನಿಗೆ ಚಡ್ಡಿ ಯೂನಿಫಾರ್ಮ್ ಗೆ ಮಾತ್ರ ಇನ್ನೂ ಯಾಕೋ ಕ್ವಾಲಿಫೈ ಆಗಲಿಲ್ಲ? ಇವನನ್ನು ಹೀಗೆ ಗುಣಗಾನ ಮಾಡಬಹುದೇ?

ಕಾಲಾನಂತರ !

ಹಿಂದಿನ ರಾತ್ರಿ ಬಹಳ ಯಾತನೆಯಾಗಿ ಆಸ್ಪತ್ರೆಗೆ ಸೇರಿದ್ದೆ. ಹೊರಗೆ ಏನು ನೆಡೆದಿದೆ ಎಂದಾಗಲಿ, ನನಗಾಗಿ ಯಾರು ಕಾದಿದ್ದರೆ ಎಂದಾಗಲಿ ಒಂದೂ ಅರಿಯೆ. ಬೆಳಿಗ್ಗೆಯೂ ಹಾಗೇ ನೋವು ಇದ್ದೇ ಇತ್ತು. ಕಣ್ತೆರೆಯ ಹೊರಟರೆ ರೆಪ್ಪೆಗಳು ಅನುಮತಿ ನೀಡಲಿಲ್ಲ. ಮನವೂ ಒಪ್ಪಲಿಲ್ಲ. ಹಾಗಾಗಿ ಕಣ್ಣು ಮುಚ್ಚಿಯೇ ಇದ್ದೆ. ಯಾರೋ ಬಂದು ಹಾಗೇ ಸೂಜಿ ಚುಚ್ಚಿ ಹೋದರು.

ದಾರಿ ಯಾವುದಯ್ಯಾ ವೈಕುಂಠಕೆ?

ನನ್ನ ಕೇಳಿದ್ರೆ ’ದಾರಿಯಾವುದಯ್ಯಾ, ವೈಕುಂಠಕೆ ದಾರಿತೋರಿಸಯ್ಯ’ ಅಂತ ಕೇಳ್ಬೇಕಾಗೇ ಇಲ್ಲ. ಯಾಕಂತಂದ್ರೆ, ಸಂಸ್ಕೃತದಲ್ಲೊಂದು ಮಾತೇ ಇದೆಯಲ್ಲ?

आकाशात् पतितम् तोयम् यथा गच्छति सागरम् ।
सर्वदेव नमस्कारः केशवम् प्रति गच्छति ॥

ಆಮೀರ್‍ಗೆ ಧಿಕ್ಕಾರ

ಮೊನ್ನೆ ಏನಾಯ್ತು ಗೊತ್ತಾ? ಬೆಳಗ್ಗೆ ಕಣ್ಣು ತೆರೆಯುತ್ತಿರುವಂತೆ ಎದುರಿಗೆ
ಭಯೋತ್ಪಾದಕ !! ಯಾವಾಗಲೂ ಭಯೋತ್ಪಾದಕಿಯನ್ನು ನೋಡಿ ಅಭ್ಯಾಸವಿದ್ದುದರಿಂದ ನಾನು ಭಯಬೀಳಲಿಲ್ಲ.

ಸಮುದ್ರದೊಡನೆ ಒಬ್ಬ ನಿರ್ಭಾಗ್ಯವಂತ

--> ಸಮುದ್ರದೊಡನೆ ಒಬ್ಬ ನಿರ್ಭಾಗ್ಯವಂತ <--

1. ಕಡಲತೀರದಲಿ ಬರೆದೆ ಆಕೆಯ ಹೆಸರು. ಮೊದಲಾಗಿ ನಾನೇ ಅಳಿಸಿದೆ. ನಂತರ ಬಂದ ಅಲೆಯೊಂದು ಸಹಾ ಅದನ್ನು ನಿರ್ದಾಕ್ಷಿಣ್ಯವಾಗಿ ನಾಶಮಾಡಿ ವಾಪಾಸಾಯಿತು!

ಸಾಕ್ಷಾತ್ಕಾರ

ಸಾಕ್ಷಾತ್ಕಾರ
ಹೊತ್ತಿಗೆಗಳಲಿ ಹುಡುಕಿದೆ ಪರಬೊಮ್ಮನ
ಮುಗಿಯಿತಿದೇ ಹುಡುಕಾಟದಲಿ ಜೀವನದ ಕೆಲಚಣ
ಅವುಗಳಲೇನಿದೆ ಬರಿದೆ ದಾರಿ ಅವನಿಲ್ಲವಲ್ಲಿ

ಮತ್ತೆ ಶೋಧಿಸಿದೆ ಅವನ ವೈಣಿಕರ ನಾದದಲಿ
ಮಾರುಹೋದೆ ಅದೇ ನಾದಕೆ ಆದರ
ವನಿಲ್ಲವಲ್ಲಿ ಬರಿದೆ ಅವನ ಕುರುಹದರಲ್ಲಿ

ಅರಿಯದೆ ಆಲಿಸಿದೆ ಕಪಟ ಸಾಧುಗಳ ವಚನ
ಕಳೆಯಿತಿದರಲಿ ಮತ್ತನೇಕ ಸಾಧನೆಯ ಸಮಯ