’ಏ ಮೇರಾ ಡ್ಯಾಡಿ ಹೈ” !

’ಏ ಮೇರಾ ಡ್ಯಾಡಿ ಹೈ” !

ಬರಹ

ನಮಗೆ, ರವಿ ಹಾಗೂ ಪ್ರಕಾಶ್ ಅಂತ ಇಬ್ಬರು ಮಕ್ಕಳು. ಹಿರಿಯವ, ರವಿ, ಚಿಕ್ಕವ, ಹಾಗೂ ಕೊನೆಯವ, ಪ್ರಕಾಶ್. ಅವರಿಬ್ಬರೂ ದಾದರ್ ನ, 'ಆಂಟೋನಿಯೊ ಡ ಸಿಲ್ವ' ಕಾನ್ವೆಂಟ್ ಶಾಲೆಯಲ್ಲಿ ಓದುತ್ತಿದ್ದರು. ಆದಿನ ಎರಡನೆಯ ಶನಿವಾರ. ನನ್ನ ಆಫೀಸಿಗೆ ಸುಟ್ಟಿ. ಮಕ್ಕಳಿಗಿಬ್ಬರಿಗೂ ಯೂನಿಫಾರಂ ತೊಡಿಸಿ, ಶೂ ಹಾಕಿದ್ದಾಯಿತು. ಕೈನಲ್ಲಿ ವಾಟರ್ ಬಾಟಲ್, ಮತ್ತೆ, ಒಂದು ಪ್ಲಾಸ್ಟಿ ಕವರಿನಲ್ಲಿ ಅವರ ಸಬ್ಮಿಶನ್ ಡ್ರಾಯಿಂಗ್ ಕೂಡ ಹೊಂದಿಸಿಕೊಟ್ಟಿದ್ದಾಯಿತು. ಸ್ಕೂಲ್ ಬಸ್, ಬರೆಗೆ ಬಿಟ್ಟುಬಂದೆ. ಆಮೇಲೆ ನನಗೆ ಅರಿವಾಗಿದ್ದು, ಮಿಸ್ ಹೇಳಿದ್ದರಂತೆ, ’ಫ್ಲವರ್ ವಾಝ್,’ ಮಾಡಿತರಲು. ನಾವು ಅದನ್ನು ನೀಟಾಗಿ ಮಾಡಿ ಇಟ್ಟೆದ್ದೆವು. ಅದನ್ನು ತೆಗೆದುಕೊಂಡು ಹೋಗಲು ಮರೆತಿವೆ, ನಮ್ಮ ಮಕ್ಕಳು. ಅವರುತಾನೇ ಏನುಮಾಡಿಯಾರು, ಪುಸ್ತಕಗಳ ಹೊರೆ, ಹೋಮ್ ವರ್ಕ್ ಗಳು, ಅದು-ಇದು, ಇರತ್ತಲ್ವ್ಯಾ ? ಬಸ್ ಹೊರಟುಹೋದಮೇಲೆ ನನಗೆ ಜ್ಞಾಪಕಕ್ಕೆ ಬಂತು. ಆಗ ಫೋನ್ ಕೆಲವರ ಮನೆಯಲ್ಲಿ ಮಾತ್ರಇತ್ತು. ಮೊಬೈಲ್ ಫೋನ್ ಆಗಿನ ಕಾಲದಲ್ಲಿ ಇರಲಿಲ್ಲ.

ನಾನು ಆ ಫ್ಲವರ್ ವಾಝ್ ತೆಗೆದುಕೊಂಡು, ಟ್ಯಾಕ್ಸಿಯಲ್ಲಿ, ಸ್ಕೂಲ್ ತಲುಪಿದೆ. ಅದನ್ನು ಶಾಲೆಯ ಮಿಸ್ ಅಪ್ಪಣೆಪಡೆದು ಪ್ರಕಾಶನಿಗೆ ತಲುಪಿಸಿದ್ದು ಆಯಿತು. ಹೊರಗೆ ಬಂದಾಗ, ನಮ್ಮ ಮಗ, ಕಿಟಕಿಯ ಕಬ್ಬಿಣದ ಸರಳುಗಳನ್ನು ಹಿಡಿದುಕೊಂಡು, ಅವನ ಗೆಳೆಯನಿಗೆ, ’ ಏ ಮೇರ ಡ್ಯಾಡಿ ಹೈ”...ಎಂದು ಹೇಳುತ್ತಿದ್ದ ಮಾತು, ಇನ್ನೂ ನನ್ನ ಹೃದಯದಲ್ಲಿ ಹಸಿರಾಗಿದೆ. ಪುಟ್ಟ ಮಕ್ಕಳು ಮಾತಾಡುವ ಸೊಗಸು, ನಿಮಗೆಲ್ಲಾ ತಿಳಿದಿದೆಯಲ್ಲಾ ! ಆ ಮಗು, ನನ್ನ ಮಗನ ಫ್ರೆಂಡ್, ಹಗಲು-ಕನಸಿನ ಕಣ್ಣುಗಳ ಮುದ್ದು ಮರಿ, ಏನೋ ಮಹಾಗೊತ್ತಿಲ್ಲದಿದ್ದ, ವಿಷಯವನ್ನು ತಿಳಿದುಕೊಂಡಂತೆ, ಸಮಾಧಾನವಾಗಿ, ಕೇಳಿಸಿಕೊಳ್ಳುತ್ತಿತ್ತು. ’ ತೇರಾ ಮಮ್ಮಿ, ನಹೀ ಆತೀಹೈ” ? ಎಂದು ಕೇಳಿತಂತೆ. ಅಲ್ಲೂ ನನ್ನ ತಲೆಯಮೇಲೆ ಮತ್ತೊಂದು ನವಿಲುಗರಿ !! ನಹಿರೇ, ’ ಆಜ್ ಡ್ಯಾಡಿ ಕೊ ಆಫೀಸ್ ನಹಿ ಹೈ,’ ”ಛುಟ್ಟಿ ಹೈನ,’ ? ’ನಹಿ ತೊ , ಮಮ್ಮಹಿ, ಹಮೇಷ ಆತೀ ಹೈ,’ ಎಂದನಂತೆ.

ಹಾಗೆಯೇ, ನಂಗೆ ಬಾತ್ ಕೋಳಿ ಅಂದ್ರೆ ಬಹಳ ಬಹಳ ಇಷ್ಟಾ. ಅಂತ ದೊಡ್ಡವನು ಹೇಳಿದ್ರೆ, ಚಿಕ್ಕವನೂ ದನಗೂಡಿಸಿ, ನಂಗೂ ಅಷ್ಟೆ. ಇವನ್ನು ಈದಿನ ಕೇಳಿದಷ್ಟು ಹೊಸದಾಗಿವೆ. ನಾನು ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ, ಕ್ಲಿಕ್ಕಿಸಿದ ಬಾತ್ ಕೋಳಿಗಳ-ಚಿತ್ರ ನೋಡಿದಾಗ, ನನಗೇ ಗೊತ್ತಾಗದಂತೆ, ಆ ಮಕ್ಕಳ ಬಾಲ್ಯದ ದಿನಗಳ ನೆನಪುಗಳು, ಉಮ್ಮಳಿಸಿಬಂದವು. ಇದು ಂತಹ ಒಂದು ಘಟನೆಗಳಲ್ಲೊಂದು.