ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

pre-indexing ಮತ್ತು post indexing ಎಂದರೆ ಏನು?

Computer science students ಯಾರಾದರೂ ಇದ್ದರೆ , ಗೊತ್ತಿದ್ದರೆ
ಈ ಮೇಲಿನವುಗಳಿಗೆ ಉತ್ತರ ಕೊಟ್ತು ಉಪಕರಿಸಿ.
ಈಗಾಗಲೆ ಗೂಗಲ್ ಸರ್ಚ್ ಮಾಡಿಯಾಗಿದೆ ಆದರೂ ಸಿಕ್ಕಿಲ್ಲ.

ನಮ್ಮಲ್ಲಿರುವ Skills.

ಮರಕಡಿಯುವವ

ಒಂದಾನೊಂದು ಕಾಲದಲ್ಲಿ ಒಬ್ಬ ಮರಕಡಿಯುವ ವ್ಯಕ್ತಿ ಒಬ್ಬ ದೊಡ್ಡ ಸೌದೆ ವ್ಯಾಪಾರಿಯ ಬಳಿ ಬಂದು ಕೆಲಸಕೊಡುವಂತೆ ಕೇಳಿದ. ಕೆಲಸವೂ ಸಿಕ್ಕಿತು.

ಒಳ್ಳೇ ಸಂಬಳ, ಕೈ ತುಂಬಾ ಕೆಲಸ, ಕೆಲಸ ಮಾಡುವ ವಾತವರಣವೂ ಚೆನ್ನಾಗಿತ್ತು.

ಅದಕ್ಕಾಗಿ ಆ ಮರ ಕಡಿಯುವವ ತುಂಬಾ ಹುಮ್ಮಸ್ಸಿನಿಂದ ಕೆಲಸವನ್ನು ಮಾಡಲು ಒಪ್ಪಿಕೊಂಡ.

ಬಿಡುಗಡೆಯಾಗಿರುವುದರಲ್ಲಿ ತುಂಬಾ ಚೆನ್ನಾಗಿರುವ ಚಿತ್ರ ಯಾವುದು ?

ಪತ್ರಿಕಾ ವಿಮರ್ಶೆ ಚೆನ್ನಾಗಿದೆ ಎಂದ ಯಾವ ಚಿತ್ರವೂ ಚೆನ್ನಾಗಿಲ್ಲ . ಅಕ್ಸಿಡೆಂಟ್‍ ಮೇಲೆ ಭಾರಿ ನಿರೀಕ್ಷ್ತೆ ಇಟ್ಟುಕೊಂಡು ಹೋಗಿ ಡಿಸ್ ಅಪಾಯಿಂಟ್ ಆಯ್ತು.
ಆದ್ದರಿಂದ ಸಂಪದದ ವಿಮರ್ಶಕರೇ ನಿಮ್ಮ ಪ್ರಕಾರ ಈಗ ಬಿಡುಗಡೆಯಾಗಿರುವ ಚಿತ್ರಗಳಲ್ಲಿ ತುಂಬಾ ಚೆನ್ನಾಗಿದೆ ಎನ್ನುವ ಚಿತ್ರ ಯಾವುದು ಎಂದು ತಿಳಿಸಿ.
ಸುಮಾರು ಆರು ತಿಂಗಳಾದ ನಂತರ ಹೋಗುತ್ತಿದ್ದೇವೆ.

ಇಂದು ಓದಿದ ವಚನ: ಚಿಂತೆ ಎಂಬ ಹೂವಿನ ಗಿಡ: ಘಟ್ಟಿವಾಳಯ್ಯ

ಚಿಂತೆಯೆಂಬ ಹೂವಿನ ಗಿಡುವನು ನೋಡಿರೆ

ಹೊಲಗೇರಿಯಲಿ ಬಿತ್ತುವನೆ ನೋಡಿರೆ

ಜಲಶೇಖರನ ಉದಕರವನೆರದಡೆ

ಆಸೆಯೆಂಬ ಹೂವ ಕೊಯ್ದು ಕಾಮಂಗೇರಿಸುವೆನು

ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ

ಜನವರಿ ತುಷಾರ ಉಡುಪಿ ವಿಶೇಷ

ಈ ತಿಂಗಳ "ತುಷಾರ" ಉಡುಪಿ ಜಿಲ್ಲೆಯ ಪರಿಚಯ ಮಾಡಿಸಿಕೊಡ್ಡುತ್ತಿದೆ.ಪ್ರತಿ ತಿಂಗಳೂ ಬೇರೆ ಬೇರೆ ಜಿಲ್ಲೆಯ ಪರಿಚಯ ಮಾಡಿಸುವ ವಿಶೇಷ ಸಂಚಿಕೆಯಾಗಿ "ತುಷಾರ" ಮೂಡಿಬರುತ್ತಿದೆ.ಬೆಲೆ ಬರೇ ಏಳು ರೂಪಾಯಿ!
ಅಂತರ್ಜಾಲದಲ್ಲಿ ಸಿಗದು.
udayavani

 

ಆ ಒಂದು ತುಂಟ ಗಳಿಗೆ..!

ಸಂಪದದಲ್ಲಿ ತಿರುಗಾಡುತ್ತಿರುವಾಗ (ಬ್ಲಾಗ್ ಲೋಕದಲ್ಲಿ) ಸವಿತಾರವರು ಬರೆದಿರುವ ಒಂದು ಅನುಬವ ಬರಹ ಸಿಕ್ಕಿತು. ಆ ಬರಹಕ್ಕೆ ತಲೆನಾಮ ಕನ್ನಡ ಇಂಬ್ಲೀಚ್ ಬೆರೆಕೆಯಲ್ಲಿ ಈಗೆ ಬರೆಯಲಾಗಿತ್ತು "ನನ್ನ Some ಶೋಧನೆ!!" ಈ ಬರಹ ಓದಿದೊಡನೆಯೇ ನಾನು ಎಂಟನೆಯ ತರಗತಿಯಲ್ಲಿ ಓದುತ್ತಿದ್ದಾಗ ಮಾಡಿದ ಪ್ರಯೋಗದ ನೆನಪು ಬಂತು.

ರಾಮ ಮತ್ತು ರಾವಣ ಚೇತನ- ಓಶೋ ಕ೦ಡ೦ತೆ.

ಪ್ರಶ್ನೆ: ನಾವು ಅಧರ್ಮದಲ್ಲಿ ಇಲ್ಲವೇ ಧರ್ಮದಲ್ಲಿ, ಬ೦ಧನದಲ್ಲಿ ಇಲ್ಲವೇ ಮೋಕ್ಷದಲ್ಲಿ, ರಾವಣನಲ್ಲಿ ಇಲ್ಲವೇ ರಾಮನಲ್ಲಿ ಇರುತ್ತೇವೆ. ಪ್ರಾಯಶಃ ಮಧ್ಯದ ಸ್ಥಿತಿ ಯಾವುದೂ ಇಲ್ಲವೇನೋ?

ಓಶೋ ಉತ್ತರಿಸಿದ್ದು: ನಿಶ್ಚಯವಾಗಿಯೂ ಮಧ್ಯದ ಸ್ಥಿತಿ ಇಲ್ಲ. ಇರುವುದು ಸಾಧ್ಯವೂ ಇಲ್ಲ. ಇದು ಸ್ವಲ್ಪ ಕಠಿಣವಾದದ್ದು. ಆದ್ದರಿ೦ದ ಗಮನವಿಟ್ಟು ತಿಳಿದುಕೊಳ್ಳಿ. ಮಧ್ಯಸ್ಥಿತಿ ಇಲ್ಲವೆ೦ಬುದು ಮನಸ್ಸಿಗೆ ತೀವ್ರ ನಿರಾಶೆಯನ್ನು ಹುಟ್ಟಿಸುತ್ತದೆ.
ಮನಸ್ಸು ಮಧ್ಯದ ಸ್ಥಿತಿಯನ್ನು ಹುಟ್ಟಿಸುತ್ತದೆ. ಇದರಿ೦ದ ನಮಗೆ , ನಾವು ರಾಮನಲ್ಲದಿದ್ದರೂ ರಾವಣನ೦ತೂ ಅಲ್ಲವೆ೦ಬ ಭರವಸೆ ಮೂಡುತ್ತದೆ. ಅರ್ಧದವರೆಗೂ ತಲುಪಿದ್ದೇವೆ, ಸಾಕಷ್ಟು ದೂರ ಬ೦ದಿದ್ದೇವೆ, ಮೋಕ್ಷ ದೊರಕದಿದ್ದರೂ ಸಹ ಸ೦ಸಾರದಿ೦ದ೦ತೂ ಬಿಡುಗಡೇ ಹೊ೦ದಿದ್ದೇವೆ. ಪರಮ ಜ್ಞಾನ ದೊರೆಯದಿರಬಹುದು, ಸಾಕಷ್ಟು ಜ್ಞಾನ ಬ೦ದಿದೆಯಲ್ಲ. ಇನ್ನು ಕೊ೦ಚ ದೂರವಷ್ಟೆ ಎ೦ಬ ಭರವಸೆ ಮೂಡುವುದು.

ಆದರೆ ಜ್ಞಾನವನ್ನು ಭಾಗಗಳಾಗಿಸಬಹುದೇನು? ನೀವು ಅರ್ಧ ಜ್ಞಾನಿಯಾಗಬಹುದೇನು? ಅರ್ಧ ಬುದ್ಧತ್ವ ಸಾಧ್ಯವೇ? ಅಲ್ಲದೆ ಅರ್ಧ ಬುದ್ಧತ್ವವನ್ನು ಹೊ೦ದಿದ ವ್ಯಕ್ತಿ ಇನ್ನರ್ಧ ನಿರ್ಬುದ್ಧತ್ವವನ್ನು ಹೊತ್ತುಕೊ೦ಡು ಏಕೆ ತಿರುಗುವನು? ಯಾರ ಆ೦ತರ್ಯದಲ್ಲಿ ಅರ್ಧ ಪ್ರಕಾಶ ಉ೦ಟಾಗಿದೆಯೋ, ಆ ಪ್ರಕಾಶಕ್ಕೆ ಇನ್ನರ್ಧ ಅ೦ಧಕಾರವನ್ನು ಹೋಗಲಾಡಿಸುವಷ್ಟು ಸಾಮರ್ಥ್ಯ ಇಲ್ಲವೇ? ಯಾರಿಗೆ ಅರ್ಧ ಬಯಕೆಗಳು ಇಲ್ಲವಾಗಿವೆಯೋ ಆತ ಉಳಿದರ್ಧ ಬಯಕೆಗಳನ್ನು ಹೇಗೆ ತಾನೆ ಉಳಿಸಿಟ್ಟುಕೊಳ್ಳಬಲ್ಲ?
ಆದರೆ ಮನಸ್ಸಿನ ನೂರಾರು ಕಿಲಾಡಿತನಗಳಲ್ಲಿ, "ನಿಮ್ಮಲ್ಲಿ ವಿಕಾಸವಾಗುತ್ತಿದೆ" ಎ೦ದು ನ೦ಬಿಸುವ ಕಿಲಾಡಿತನವೂ ಒ೦ದು. ಇದರಿ೦ದಾಗಿ ನಿಮ್ಮಲ್ಲಿ ಆಸೆ ಮೂಡುತ್ತದೆ. ಮನಸ್ಸು ಹೇಳುತ್ತಿರುತ್ತದೆ, "ಒ೦ದೊ೦ದಾಗಿ ಮೆಟ್ಟಲುಗಳನ್ನು ಹತ್ತುತ್ತಿದ್ದೇವೆ. ಇನ್ನು ಉಳಿದಿರುವುದು ಕೆಲವೇ ಕೆಲವು ಮಾತ್ರ. ಏನೂ ಅವಸರವಿಲ್ಲ. ಹೆದರಲು ಕಾರಣವಿಲ್ಲ. ಚಿ೦ತಿತರಾಗುವುದು ಬೇಕಿಲ್ಲ. ಇಷ್ಟೆಲಾ ಮೆಟ್ಟಲುಗಳನ್ನು ಹತ್ತಿದ್ದಾಗಿದೆ. ಇನ್ನು ಕೆಲವು ಮಾತ್ರ. ಅವೂ ಮುಗಿದುಹೋಗುತ್ತವೆ. ಮನಸ್ಸು ಮೆಟ್ಟಲುಗಳು ಇಲ್ಲದ ಕಡೆ ಮೆಟ್ಟಲನ್ನು ಸೃಷ್ಟಿಸುತ್ತದೆ. ಎಲ್ಲಿ 'ಡಿಗ್ರಿ' ಗಳಿಲ್ಲವೋ, ಎಲ್ಲಿ 'ಡಿಗ್ರಿಗಳಿರುವುದು ಸಾಧ್ಯವಿಲ್ಲವೋ ಅಲ್ಲಿ ಡಿಗ್ರಿಗಳನ್ನು ಸೃಷ್ಟಿಸುತ್ತದೆ.