ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಏನು, ’ಡಿಸ್ನಿ ಲ್ಯಾಂಡ್,’ ನಲ್ಲಿ ಕೂತ್ಕೊಂಡ್. ಗುಬ್ಬಿಗಳ್ನ್, ನೋಡ್ತಿದ್ರಾ ? ಸರ್ಹೋಯ್ತು-ನನ್ನ ಇನ್ನೊಬ್ ಮಗ, ನಗೆಯಾಡಿದ್ದ !

ಹೌದು. ನೋಡಿ ನಾವು ಬೆಳಿಗ್ಯ, ೯ ಗಂಟೆ ಒಳ್ಗೆ, ಡಿಸ್ನಿ ಲ್ಯಾಂಡ್ ಒಳ್ಗೆ ಹೋದ್ವಿ. ಎಲ್ಲ ಕಡೆ ಲೈನ್ ನಲ್ಲಿ ನಿಂತ್ಗೊಬೇಕಲ್ವ. ನಾನು ಸುಮಾರಾಗಿ ಎಲ್ಲಕಡೆನೂ ಸಹಕರಿಸಿದೆ. ಅಂದ್ರೆ, ನನಗೆ ಆರ್ಥರಿಟೀಸ್ ಇದೆಯಲ್ಲ. ಅದಕ್ಕೆ. ಆಮೇಲೆ, ೧೨ ಗಂಟೆ ಹೊತ್ಗೆ, ಸಬ್ಮೆರೀನ್ ಯಾನದ ಸರದಿಬಂತಪ್ಪ. ಸರಿ. ಶುರುವಾಯಿತ್ ನೋಡಿ, ನನ್ ಕಾಲ್ ನೋವಿನ ಗೋಳು ! ಪಾಪ ನಮ್ಮ ಮಗ, ಹಾಗೂ ಹೆಂಡತಿಗೆ ಬೇಸರ.

ಲಿನಕ್ಸಾಯಣ - ೩೩ - ಲಿನಕ್ಸ್ ಮಾಸ ಪತ್ರಿಕೆಗಳು

ಗ್ನು/ಲಿನಕ್ಸ್ ಬಗ್ಗೆ ನಿಮ್ಮೆಲ್ಲರ ಜೊತೆ ವಿಷಯಗಳನ್ನ ಇದುವರೆಗೂ ಹಂಚಿಕೊಳ್ತಾ ಬರ್ತಿದ್ದೇನೆ. ಅದರ ಜೊತೆ ಗ್ನು/ಲಿನಕ್ಸ್ ಅಂತರಾಳವನ್ನ ಅರಿಯಲು ಸಹಾಯ ಮಾಡಿದ ಕೆಲವು ರಹಸ್ಯಗಳನ್ನೂ ನಿಮ್ಮೊಂದಿಗೆ ಹಂಚಿಕೊಳ್ತಿದ್ದೇನೆ. ಆ ರಹಸ್ಯಗಳಲ್ಲೊಂದು ನಮಗೆ ಲಭ್ಯವಿರುವ ಗ್ನು/ಲಿನಕ್ಸ್ ಮಾಸಪತ್ರಿಕೆಗಳು.

ಆಸೆ

ಒಂದಾನೊಂದು ಕಾಲದಲ್ಲಿ ನನಗೆ ಎಂತಹ ಆಸೆ ಇತ್ತೂಂತಿರಿ, ಕಂಡ ಕಂಡ ವಸ್ತುಗಳೆಲ್ಲ ನನ್ನದಾಗಿದ್ದರೆ ಅಂತ ಮನಸ್ಸು ಆಸೆ ಪಡುತ್ತಿತ್ತು. ಆಗ ಕೈಯಲ್ಲಿ ಕಾಸಿರಲಿಲ್ಲ, ಮನೆಯಲ್ಲಿ ಪರಿಸ್ಥಿತಿ ಸರಿಯಿರಲಿಲ್ಲ. ಆ ಆಸೆಯೇ ನನ್ನನ್ನು ಕಷ್ಟಪಟ್ಟು ಓದಿ, ಸಂಪಾದಿಸಿ, ಒಂದು ನೆಲೆ ಕಂಡುಕೊಳ್ಳುವ ಹಾಗೆ ಪ್ರೇರೇಪಿಸಿತು.

DLI ನಿಂದ ಪುಸ್ತಕದ ಪುಟ ಇಳಿಸಿಕೊಳ್ಳಲು ನಾನು ಮಾಡಿಕೊಂಡ ವ್ಯವಸ್ಥೆ.

ಹಿಂದೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಕೊಂಡಿಗಳು ಸಿಕ್ಕ ಕೂಡಲೇ ಅಲ್ಲಿದ್ದ ಪುಸ್ತಕಗಳ ಪಟ್ಟಿಯನ್ನು ನೋಡಿ ಇಟ್ಟುಕೊಂಡಿದ್ದೆ , ಕಂಡ ಕೆಲವು ಒಳ್ಳೆಯ ಪುಸ್ತಕಗಳ ಕೊಂಡಿಯನ್ನೂ ನಿಮಗೆ ಈ ಬ್ಲಾಗ್ ಮೂಲಕ ಕೊಟ್ಟಿದ್ದೆ .

ಹಕ್ಕಿಯ ಬಲೆ

ಮರದ ಪಕ್ಕದಲ್ಲೇ ಕುಳಿತೆ ತಬ್ಬಿಕೊಂಡೇ ಬಲೆಗೆ
ಸುಳಿವು ಹತ್ತಿತೇನೋ ಹಕ್ಕಿಗೆ ಓಡಿಹೋಯಿತು ಒಳಗೆ

ಸಂಜೆಯಾಗಲು ಬಲೆ ಬದಿಗಿರಿಸಿ
ಕುಳಿತೆ ಸುಮ್ಮನೆ ಧ್ಯಾನಿಸಿ
ಕೈ ಎತ್ತಿ ಕರೆದೆ ಹಕ್ಕಿಯ
ಬಂತು ಹೊರಗದು ಧಾವಿಸಿ

ಬೊಗಸೆ ಕೈಯೊಳು ಹಿಡಿದು ಮುತ್ತಿಕ್ಕಿ
ಹಾರಿ ಬಿಟ್ಟೆ ಬಾನಿಗೆ
ಆತನಿಗೆ ಆಗಾದ ಖುಷಿಯನು
ಯಾರಿಗೆ ಹೇಳಲಿ ? ಹೇಗೆ ?

ಬದಿಗೆ ಇರಿಸಿದ ಬಲೆಯು ಏತಕೋ

ಪೂರ್ಣವಿರಾಮ .

ಪರಕೀಯರು ವಿಭಜಿಸಿದ ಸುಸಂಸ್ಕೃತ ದೇಶಗಳು
ದ್ವೇಷದ ದೀಪಗಳಾದವು ಧಗ ಧಗ ಉರಿದು

ಹಿಡಿಯ ಬಯಸಿದಾಗ ಬಿಳಿಪಾರಿವಾಳವನು
ಕಪಟ ದೇಶವು ಸಾರಿತು ಅಘೋಷಿತ ಕದನವನು

ತಮ್ಮದಲ್ಲದ ಭುವಿಯೊಡೆತನಕೆ
ಭಾಡಗಿ ಸೈನ್ಯವ ತಂದಿತು
ರಕ್ತದ ಕಾಲುವೆ ಹರಿಸಿದರೂ
ಒಂದಿಂಚನೂ ಪಡೆಯದಾಯಿತು

ಅಚಲವಾದ ಆಟಲನ ಸೈನ್ಯವು
ನವಾಜನ ಆವಾಜ್ ಮುಚ್ಚಿಸಿತು
ಜಗವು ಬಯಸಿದ ಶಾಂತಿವಾಕ್ಯಕೆ

ಕಿಟಕಿಯಲ್ಲಿ ಮಳೆ

ಮಟ ಮಟ ಮಧ್ಯಾಹ್ನದೊಳು
ತಪನನ ತಾಪವು ತುಂಬಿರಲು
ಉದಯವಾಯಿತಾಗ ಕಾರ್ಮೋಡ ಸಾಮ್ರಾಜ್ಯ
ಗುಡು ಗುಡು ಎಂದು ಎದೆ ನಡುಗಿಸುತ
ಪ್ರಕಾಶಮಾನವಾದ ಬೆಳಕನು ಫಕ್ಕನೆ ಬೀರುತ
ಎತ್ತಿ ಒಗೆಯುವ ವೇಗದಿ ಬರುತಿರುವ
ಮಾರುತದ ಎದುರು ಕುಬ್ಜನಾದ ಆ ರವಿ

ಒಮ್ಮೆಲೇ ತಲೆ ಸೀಳುವ ಹನಿಗಳೊಡನೆ
ಧರೆಗೆ ದಂಡೆತ್ತಿ ಬಂದ ಮಳೆರಾಯ
ನಡು ನಡುವೆ ಘರ್ಜಿಸುತ ತಲೆ ಎತ್ತಿ ನಿಂತ

ಮಳೆ ಮತ್ತು ಅವಳು

ಇಂದು ಮಳೆ ಬಂತು. ಋತುವಿನ ಮೊದಲ ಮಳೆ. "ಮೊದಲ ಮಳೆ ಚಂದ, ಬೆಳೆದ ಯೌವನ ಚಂದ", ಎಷ್ಟು ಸತ್ಯ ಆಲ್ವ.
ಬಿಸಿಲ ಬೇಗೆಯಲಿ ಬೆಂದು ಬಸವಳಿದ ಭೂರಮೆಗೆ ಇಂದು ಪನ್ನೀರ ಸಿಂಚನ.
ಒಂದು ವಿಷಯ ಗೊತ್ತಾ?... ಪ್ರತಿಯೊಂದು ಹನಿಯಲ್ಲೂ ನಿನ್ನ ನಗುವಿತ್ತು, ನಿನ್ನ ನಲಿವಿತ್ತು, ನಿನ್ನ ತುಂಟಾಟವಿತ್ತು. ಅದಕ್ಕೆ ಇರಬೇಕು ಮಸಲ ಧಾರೆಗೆ ಮೈ ಚಲ್ಲಿ ನಿಂತಾಗ ಎಂತದ್ದೋ ರೋಮಾಂಚಾನ.