ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರಕೃತಿ ದೇವತೆ ದೇವಕುಂದ

೧೬ ಅಕ್ಟೋಬರ್ ೨೦೦೮.


ಮೇಗಣಿಯಿಂದ ದೂರದಲ್ಲಿ ತಲೆಯೆತ್ತಿ ನಿಂತಿರುವ ಬೆಟ್ಟವೊಂದು ಗೋಚರಿಸುತ್ತದೆ. ಇದೇ ದೇವಕುಂದ. ಈ ಶ್ರೇಣಿಯ ಬೆಟ್ಟಗಳಲ್ಲಿ ಎತ್ತರದಲ್ಲಿ ಕೊಡಚಾದ್ರಿಯ ನಂತರದ ಸ್ಥಾನ ಇದಕ್ಕೆ. ಮುಂಜಾನೆ ಬಿಸಿಲೇರುವ ಮೊದಲೇ ದೇವಕುಂದದ ತುದಿಯಲ್ಲಿರಬೇಕು ಎಂಬ ಪ್ಲ್ಯಾನ್ ಹಾಕಿ ಮುನ್ನಾ ದಿನವೇ ಮೇಗಣಿ ತಲುಪಿ ಪ್ರಶಸ್ತ ಸ್ಥಳವನ್ನು ಆಯ್ಕೆ ಮಾಡಿ ಡೇರೆ ಹಾಕಿದೆವು. ನಾವು ಡೇರೆ ಹಾಕಿದ ಸ್ಥಳವಂತೂ ಅದ್ಭುತವಾಗಿತ್ತು. ಒಂದೆಡೆ ಕೊಡಚಾದ್ರಿಯ ರಮಣೀಯ ನೋಟ. ವಿರುದ್ಧ ದಿಕ್ಕಿನಲ್ಲಿ ಕೈ ಬೀಸಿ ಕರೆಯುತ್ತಿದ್ದ ದೇವಕುಂದ. ಇನ್ನೊಂದೆಡೆ ಬಹಳ ಉದ್ದದವರೆಗೂ ಚಾಚಿ ನಿಂತಿರುವ ಹುಲ್ಲುಮಡಿ ಬೆಟ್ಟ ಮತ್ತು ಮಗದೊಂದೆಡೆ ಕುನ್ನಿಕಟ್ಟೆ ಬೆಟ್ಟ. ಪ್ರಕೃತಿಯ ಅಪೂರ್ವ ನೋಟ.

ಅಂದು ಆ ಚಾರಣಕ್ಕೆ ನಾವು ನಾಲ್ವರೇ ಹೊರಟಿದ್ದೆವು. ಅಡಿಗ ಸಾರ್ ನಮ್ಮ ಲೀಡರ್. ಹುಣ್ಣಿಮೆ ಚಂದ್ರನ ಬೆಳಕಿನಲ್ಲಿ ರಾಗಣ್ಣ ಮತ್ತು ಮಾಧವರ ಸಹಾಯದಿಂದ ಅಡಿಗರು ಟೆಂಟನ್ನು ಹಾಕಿದರು. ನಂತರ ಕೂಡಲೇ ಅಡಿಗರು ಅಡಿಗೆ ಮಾಡಲು ಆರಂಭಿಸಿದರು. ನಾವು ಅವರಿಗೆ ಸಣ್ಣ ಪುಟ್ಟ ಸಹಾಯವನ್ನಷ್ಟೇ ಮಾಡುತ್ತಿದ್ದೆವು. ಸ್ವಲ್ಪ ಹೊತ್ತಿನಲ್ಲೇ ಊಟ ರೆಡಿ. ಅಡಿಗರ ಕೈ ರುಚಿಯೇ ಸೂಪರ್. ಆ ಹುಣ್ಣಿಮೆ ರಾತ್ರಿಯಲ್ಲಿ, ಡೇರೆ ಹೊರಗೆ ತಣ್ಣಗೆ ಗಾಳಿಯಲ್ಲಿ ಕುಳಿತು, ಬೆಳದಿಂಗಳ ರಾತ್ರಿಯಲ್ಲಿ ಮಿನುಗುತ್ತಿದ್ದ ಕೊಡಾಚಾದ್ರಿ ಮತ್ತು ದೇವಕುಂದಗಳ ಮನತಣಿಯುವ ನೋಟವನ್ನು ಆನಂದಿಸುತ್ತಾ, ಬಾಳೆ ಎಲೆ ಊಟ ಮಾಡುವಾಗ ಅನುಭವಿಸಿದ ಪರಮಾನಂದ ಇನ್ನೆಲ್ಲಾದರೂ ಸಿಗಬಹುದೇ.

ಇವತ್ತಿನ DLI ಓದು - ನಾ.ಕಸ್ತೂರಿ ಅವರ 'ಗಾಳಿಗೋಪುರ'

DLI ನಿಂದ ಇವತ್ತು ಗಾಳಿಗೋಪುರ ಎ೦ಬ ನಾ.ಕಸ್ತೂರಿಯವರ ಪುಸ್ತಕ ಡೌನ್ಲೋಡ್ ಮಾಡಿಕೊಂಡೆ . ಸುಮಾರು 200 ಪುಟಗಳು , ೧೦ MB ಗಳು . ಅಂದರೆ ಸುಮಾರು ೧೦ ರೂಪಾಯಿ ನನಗೆ ಖರ್ಚು . ಅದರಲ್ಲಿ ನೂರು ಪುಟ ಇವತ್ತೇ ಓದಿದೆ . ಇದು ಹಾಸ್ಯಮಯ ಸಾಮಾಜಿಕ ಕದಂಬರಿ ಎನ್ನಬಹುದು . ನಾ.ಕಸ್ತೂರಿಯವರು ಗೊತ್ತಲ್ಲ ? 'ಅನರ್ಥಕೋಶ' ಕ್ಕಾಗಿ ಪ್ರಸಿದ್ಧರು. ಅವರ 'ಯದ್ವಾ ತದ್ವಾ ' ತುಂಬ ಚೆನ್ನಾಗಿತ್ತು .

ಮುಂಗಾರು ಮಳೆ ಬಂದ ಮೇಲೆ ಕ್ವಾಲಿಟಿ ಬಂತಾ???

ಮಧ್ಯಾನ್ಹದ ಊಟ ಮುಗಿಸಿ ಸಹುದ್ಯೋಗಿಗಳೊಂದಿಗೆ ಸೇರಿ ಒಂದು ರೌಂಡ್ಸ್ ಹೋಗೋ ಅಭ್ಯಾಸ ಇದೆ.ನಿನ್ನೆ ಹಾಗೆ ಹೋಗುವಾಗ, ಗೆಳೆಯ ಕಾರ್ತಿಕ್ ಹೇಳಿದ್ರು 'ಬೆಳಿಗ್ಗೆ ಎದ್ದ ತಕ್ಷಣ ನಾನು ರೇಡಿಯೋ ಕೇಳೋ ಅಭ್ಯಾಸ ಮಾಡ್ಕೊಂಡಿದ್ದೀನಿ'. ಓಹೋ,ಇದೇನೋ ಹೊಸ ಅಭ್ಯಾಸ ಅಂತ ಸವಿತ ಕೇಳಿದ್ರು.

ಯಾರು ಹೇಳುತ್ತಾರೆ ಇಲ್ಲಿ ಗೌಡರ ಆಡಳಿತ ಮುಗಿದಿದೆ ಎಂದು...

ಯಾರು ಹೇಳುತ್ತಾರೆ ಇಲ್ಲಿ ಗೌಡರ ಆಡಳಿತ ಮುಗಿದಿದೆ ಎಂದು
ನಮ್ಮ ರಾಜ್ಯದಲ್ಲಿ ನಡೆಯುತ್ತಿದೆ ಗೌಡಾರ ಆಡಳಿತವೇ ಇಂದು

ಅಂದು ದೇವೇಗೌಡರ ನಂತರ ಅವರ ಮಗ ಕುಮಾರ ಗೌಡಾ
ಹಾಗೀಗ ನಮ್ಮ ಯಡ್ಯೂರಪ್ಪನವರೂ ಆಗಿಲ್ಲವೇ ಹೇಳಿ ಗೌಡಾ

ಗೌಡರ ಮಕ್ಕಳೀ ಹೊಸಾ ಗೌಡಾರಿಗೆ ಅದೆಲ್ಲಿ ಗೌರವ ಕೊಡುತ್ತಾರೆ
ಆದರೆ ರಾಜ್ಯದ ಉದ್ದಗಲಕ್ಕೂ ಜನ ಇವರನ್ನು ಗೌಡಾ ಅನ್ನುತ್ತಾರೆ

ಕಚ್ಚಾ ತೈಲ ಬೆಲೆ $೩೬ ಕ್ಕೆ ಇಳಿಕೆ.

ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ $೩೬ ಕ್ಕೆ ಇಳಿದಿದೆ.

ಈ ಕೊಂಡಿಯನ್ನು ವೀಕ್ಷಿಸಿ

http://www.nymex.com/index.aspx

ನಮ್ಮ ಸರ್ಕಾರ ಯಾವಾಗ ತೈಲ ಬೆಲೆ ಇಳಿಸುತ್ತದೆಯೋ?

ಹೊಸ ವರ್ಷಕ್ಕೆ ನಿಮ್ಮ ಸಂಕಲ್ಪ (Resolution) ಏನು?

ಸಾಮಾನ್ಯವಾಗಿ ಮಾಡುವ ಸಂಕಲ್ಪಗಳ (Resolutions) ಪಟ್ಟಿ ಇಲ್ಲಿದೆ:

೧.ಧೂಮಪಾನ ತ್ಯಜಿಸುವುದು.

೨. ಮದ್ಯಪಾನ ತ್ಯಜಿಸುವುದು.

೩. ಬೆಳಿಗ್ಗೆ ಬೇಗ ಏಳುವುದು.

೪. ಪ್ರತಿದಿನ ಹೊಸದೇನಾದರೂ ಕಲಿಯುವುದು.

೫. ಸಾಲದಿಂದ ಮುಕ್ತವಾಗುವುದು.

೬. Get Organised. 

೭. ತೂಕ ಇಳಿಸುವುದು. (Body Weight).