ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮೂರನೇ ದಾರಿ

ಸಂಪದದಲ್ಲಿ ಆರೋಗ್ಯಕರ ಚರ್ಚೆಗಳು ಆಗುತ್ತಲೇ ಇವೆ.ಇದೊಂದು ಶುಭಸೂಚನೆ ಎಂದು ನನ್ನ ನಂಬಿಕೆ. ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ಸರಳವಾಗಿ ಬರೆಯುವೆ.ಇದಕ್ಕೆ ಸಂಪದಿಗರ ಸ್ಪಂಧನ ಬೇಕು.

ಮೂರನೇ ದಾರಿ:

ಇಂದು ಓದಿದ ವಚನ: ಅಸಾಧ್ಯ: ಘಟ್ಟಿವಾಳಯ್ಯ

ಅರಿವಿಂಗೆ ಸಿಕ್ಕದುದ ನೆನೆಯಲಮ್ಮಬಹುದೆ  

ಅಯ್ಯಾ

ನೆನಹಿಂಗೆ ಬಾರದುದ ಕಾಂಬುದು ಹುಸಿ 

ಮುಟ್ಟಿ ಪೂಜಿಸುವ ಮಾತು ಮುನ್ನವೇ ದೂರ 

ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲನಿಲ್ಲು ಮಾಣು

 

ಛಾಯಾಗ್ರಹಣ ಮತ್ತು ISO

ನೀವು ಯಾವುದೋ ಮ್ಯೂಸಿಯಂಗೋ, ದೇವಸ್ಥಾನಕ್ಕೋ ಹೋಗಿರುವಿರಿ. ಒಳಗಡೆ ಬೆಳಕು ಕಡಿಮೆ ಇದ್ದು, ಫ್ಲಾಷ್ ಉಪಯೋಗಿಸುವುದನ್ನು ನಿಷೇದಿಸಿರುತ್ತಾರೆ. ಫ್ಲಾಷ್ ಆಫ್ ಮಾಡಿ ಚಿತ್ರ ತೆಗೆದು, ಮನೆಗೆ ಬಂದು ಕಂಪ್ಯೂಟರಿನಲ್ಲಿ ನೋಡಿದರೆ ಎಲ್ಲವೂ ಅಸ್ಪಷ್ಟ! ಬೆಳಕು ಕಡಿಮೆಯಾದ್ದರಿಂದ, ಫ್ಲಾಷ್ ಕೂಡ ಬಳಸದಿದ್ದುದರಿಂದ ನಿಮ್ಮ ಕ್ಯಾಮಾರದ Shutter Speed ಕಡಿಮೆಯಾದುದ್ದೇ ಇದಕ್ಕೆ ಕಾರಣ. ಕ್ಯಾಮರಾ ಹಿಡಿದ ನಮ್ಮ ಕೈ ಇಷ್ಟೊಂದು ದೀರ್ಘಾವಧಿಯವರೆಗೆ ಒಂದುಚೂರೂ ಚಲಿಸದೆ ಇರುವುದು ಕಷ್ಟ. ಇಂತಹ ಸಂದರ್ಭದಲ್ಲಿ ಟ್ರೈಪಾಡ್ ಅಥವಾ ಸ್ಥಿರವಾದ ವಸ್ತುವಿನ ಮೇಲೆ ಕ್ಯಾಮರಾ ಇರಿಸಿ ಚಿತ್ರ ತೆಗೆಯಬಹುದು. ಒಂದುವೇಳೆ ಇವೆರಡೂ ಇಲ್ಲದಿದ್ದಲ್ಲಿ? ಇಂತಹ ಸಂದರ್ಭದಲ್ಲಿ ಕ್ಯಾಮರಾದ ISO ಜಾಸ್ತಿ ಮಾಡಬಹುದು. ISO ಜಾಸ್ತಿ ಮಾಡಿದಂತೆಲ್ಲಾ ಹೆಚ್ಚಿನ Shutter Speed ಮೂಲಕ ಚಿತ್ರ ತೆಗೆಯಬಹುದು. ಹಾಗಿದ್ದಲ್ಲಿ ಎಲ್ಲಾ ಸಮಯದಲ್ಲೂ ISO ಜಾಸ್ತಿ ಇರಿಸಿಕೊಳ್ಳಬಹುದಲ್ಲಾ? ಆದರೆ ISO ಜಾಸ್ತಿ ಮಾಡಿದಂತೆಲ್ಲ ನಿಮ್ಮ ಚಿತ್ರದ ಗುಣಮಟ್ಟ ಕುಸಿಯುತ್ತದೆ.

ನೀವು ಈ ಹಿಂದೆ ಅನಲಾಗ್ ಕ್ಯಾಮರಾ ಉಪಯೋಗಿಸಿದ್ದಲ್ಲಿ, ಫಿಲ್ಮ್ ಕೊಳ್ಳುವಾಗ ಅದರ ಡಬ್ಬಿಯಲ್ಲಿ ೧೦೦, ೨೦೦, ೪೦೦ ಅಥವಾ ೮೦೦ ಮುಂತಾದ ಸಂಖ್ಯೆಯನ್ನು ಗುರುತಿಸಿರಬಹುದು. ಈ ಸಂಖ್ಯೆ ಬೆಳಕಿಗೆ, ಫಿಲ್ಮಿನ ಸಂವೇದನೆಯನ್ನು ಸೂಚಿಸುತ್ತದೆ. ಅಂದರೆ ಈ ಸಂಖ್ಯೆಯ ಬೆಲೆ ಕಡಿಮೆಯಾದಂತೆಲ್ಲಾ ಫಿಲ್ಮ್ ಚಿತ್ರವನ್ನು ಸೆರೆಹಿಡಿಯಲು ಹೆಚ್ಚಿನ ಕಾಲವಧಿ ತೆಗೆದುಕೊಳ್ಳುತ್ತದೆ. ಇದನ್ನೇ ಡಿಜಿಟಲ್ ಕ್ಯಾಮರಾಕ್ಕೆ ಅನ್ವಯಿಸುವುದಾದರೆ, ISO ಸೆನ್ಸರ್ನ್ ಸಂವೇದನೆ ಎನ್ನಬಹುದು. ISOವನ್ನು ೧೦೦, ೨೦೦, ೪೦೦, ೮೦೦, ೧೬೦೦ ಹೀಗೆ ಮೊದಲಾದ ಸಂಖ್ಯೆಯಿಂದ ಗುರುತಿಸುತ್ತಾರೆ. ISO ಹೆಚ್ಚು ಮಾಡಿದಂತೆಲ್ಲಾ ಹೆಚ್ಚಿನ Shutter Speed ಅಥವಾ ಕಡಿಮೆ Aperture ಮೂಲಕ ಚಿತ್ರ ತೆಗೆಯಲು ಅನುಕೂಲ.

ಭಾರತೀಯ ಶಿಕ್ಷಣ ಪದ್ಧತಿ.....

ಮೆಕಾಲೆ ಶಿಕ್ಷಣಪದ್ಧತಿಯನ್ನು ಅನುಷ್ಠಾನ ಮಾಡುವ ಮುನ್ನ, ಭಾರತೀಯ ಶಿಕ್ಷಣ ಪದ್ಧತಿ ಅದರಲ್ಲೂ ತಾಂತ್ರಿಕ ಶಿಕ್ಷಣ ಹೇಗಿತ್ತು?
ಏಕೆಂದರೆ, ಭಾರತೀಯರ ಏಕತೆ, ಸಮಗ್ರತೆಯನ್ನು ಒಡೆಯಲು ಬ್ರಿಟಿಷರು ಮೆಕಾಲೆ ಶಿಕ್ಷಣವನ್ನು ಆರಂಭಿಸಿದರೆಂದು ಎಲ್ಲೋ ಓದಿದ ನೆನಪು.

ವಿಜಯ ಕರ್ನಾಟಕ ಕಣ್ಮುಚ್ಚಲಿದೆಯೇ?

ಇದು ವದಂತಿ.

ವದಂತಿಯಾಗಿಯೇ ಉಳಿಯಲಿ.

ಅತ್ಯಧಿಕ ಪ್ರಸಾರದ ಪತ್ರಿಕೆ ಮುಚ್ಚುವುದು ಯಾಕೆ?

ಹೆಸರು ಬದಲಾಯಿಸಲು ಈ ದಾರಿಯೇ?

ಇಲ್ಲಿ ಕ್ಲಿಕ್ಕಿಸಿ ನೋಡಿ