ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಡೆಯಬಹುದೇ ಈ ಸಾರಿ ಯುದ್ಧ?

ಸಖೀ,
ದಿನ ಪತ್ರಿಕೆ ಓದುತ್ತಿದ್ದ
ನನ್ನಾಕೆ ಕರೆದು ಕೇಳಿದಳು:
ರೀ .. ನೀವೇನಂತೀರಿ,
ನಡೆದು ಬಿಡಬಹುದೇ
ಈ ಸಾರಿ ಯುದ್ಧ?
ನಾನೆಂದೆ:
ಜಾಸ್ತಿ ಮಾತನಾಡದೇ ನಾನು
ಮೌನದ ಮೊರೆ ಹೋದರೆ
ನಡೆಯದೇ ಇರಬಹುದು
ಕಣೇ ಯುದ್ಧ!
******

ನಿನ್ನ ನೆನಪಾಗುವುದೇಕೆ?

ಸಖೀ,
ಬೆಟ್ಟದಾ ತಪ್ಪಲಲಿ
ಸಣ್ಣಗೆ ಹುಟ್ಟಿ,
ತಣ್ಣಗೆ ಇರುವವಳು,
ಅದ್ಯಾವುದೋ
ಅವ್ಯಕ್ತ ಸೆಳೆತಕ್ಕೊಳಗಾಗಿ,
ಮುನ್ನುಗ್ಗಿ, ಬಿದ್ದು, ಎದ್ದು,
ಬೆಟ್ಟ ಗುಡ್ಡಗಳ ಸುತ್ತಿ,
ಜಾರಿ ಜಲಪಾತವಾಗಿ,
ಬಯಲಿಗಿಳಿದು,
ಕಾವೇರಿಸಿಕೊಂಡು,
ಮೈ ಹಿಗ್ಗಿಸಿಕೊಂಡು
ಅತ್ತ ಇತ್ತ ಕೈಚಾಚಿ,
ಸಿಕ್ಕಿದ್ದನ್ನೆಲ್ಲಾ ಬಾಚಿ
ತನ್ನೊಳಗೆ ಸೆಳೆದು,
ಸಮುದ್ರರಾಜನೊಂದಿಗಿನ

ನೀ ನಿಂತಾಗೆನಗೆ ದೇವ ದರ್ಶನವಾಯ್ತು

ಸಖೀ,

ನಿನ್ನ ನಗುವಲ್ಲೇ ನಾ ಚಂದಿರನ ಚೆಲುವ ಕಂಡೆ
ಚಂದಿರನ ಚೆಲುವಲ್ಲಿ ನಾ ನಿನ್ನ ಮೊಗವ ಕಂಡೆ

ನಿನ್ನ ಒಯ್ಯಾರ ನನ್ನ ಮನದಲಿ ಚಿತ್ತಾರವಾಯ್ತು
ನಾ ಬಿಡಿಸಿದ ಚಿತ್ರದಲಿ ನಿನ್ನನ್ನೇ ಕಂಡಂತಾಯ್ತು

ನಡೆಯಲ್ಲಿ ನೀ ಆ ಹಂಸವನೇ ನಾಚಿಸಿದ ಕಂಡೆ
ಹಂಸದ ಆ ನಡೆಯಲ್ಲಿ ನಿನ್ನ ನಾ ನೆನಪಿಸಿಕೊಂಡೆ

ನನ್ನ ನೀ ಕೂಗೆ ಕೋಗಿಲೆಯೇ ಕೂಗಿದಂತಾಯ್ತು

"ಕಾಲ"

ಓಂಟಿತನದ ಬೇಗೆಯಲ್ಲಿ ಬೆಂದು ನೊಂದಿದ್ದ
ಹಕ್ಕಿಯೊಂದು ಕಾದು ಕುಳಿತ್ತಿತ್ತು
ತನ್ನ ಜೊತೆಗಾಗಿ ಅಂದು...

ಎಲ್ಲಿಂದಲ್ಲೊ ಬಂದಿತೊಂದು ಹಕ್ಕಿ
ಗೊತ್ತೊ ಗೊತ್ತಿಲ್ಲದಂತೆಯ
ಮೊಡಿತು ಬಿಸಿತು ಮೊಹದ ಅಲೆಯು ಆ ಹಕ್ಕಿಯ ಮೇಲೆ...

ಜೊತೆ ಗೊಡಿದವು ಆಡಿದವು ಕೊಡಿದವು
ಸುಖ ದುಃಖದಲ್ಲಿ ಬಾಗಿಯಾದವು
ಬಿಟ್ಟುದಿಡದಂತೆ ಬಾಳಿದವು ಅಂದು....

ಬೀಗುತ್ತಿದ್ದವು ಸುಖದಲ್ಲಿ

ಎಲ್ಲವೂ ನಮಗಾಗಿ

ನನ್ನ ಮಿತ್ರನೊಬ್ಬ "ದೇವರು ಈ ಪ್ರಪಂಚದ ಸಕಲ ಜೀವಿಗಳನ್ನು ಮನುಷ್ಯನಿಗಾಗಿಯೇ ಮಾಡಿದ್ದಾನೆ, ಆದ್ದರಿಂದ ಅವನ್ನು ತಿನ್ನುವುದು ಏನೂ ಅಪರಾಧವಲ್ಲ. ಮಾಂಸಾಹಾರ ಪ್ರಾಣಿ ಹಿಂಸೆ ಆದ್ರೆ ಸಸ್ಯಾಹಾರ ಸಸ್ಯ ಹಿಂಸೆ ಅಲ್ವೆ, ಅದಕ್ಕೆ ಕೂಡ ಜೀವ ಇರುತ್ತೆ ಅಂತ ಜಗದೀಶಚಂದ್ರ ಭೋಸರು ತೋರಿಸಿಕೊಟ್ಟಿಲ್ಲವೇ" ಎಂದು ನಾನ್ ವೆಜ್ ಹೋಟೆಲ್ನಲ್ಲಿ ಚಿತ್ರಾನ್ನ ತಿನ್ನುತ್ತಿದ್ದ ನನ್ನನ್ನು ಪ್ರಶ್ನಿಸಿದ. ನಾನೇನೂ "ನಾನು ಮಾಂಸಾಹಾರಿ ಅಲ್ಲ, ತುಂಬಾ ಒಳ್ಳೆಯ ಕೆಲಸ ಮಾಡ್ತಾ ಇದೀನಿ" ಅಂತ ಅವನ ಬಳಿ ಹೇಳಿಕೊಂಡಿರಲಿಲ್ಲ. ಆದರೂ ನಾನು ತಿನ್ನುತ್ತಾ ಇರೋ ಚಿತ್ರಾನ್ನ ಅವನಿಗೆ ಆ ರೀತಿ ಹೇಳ್ತೋ ಎನೋ. ಹಿಂದಿನಿಂದಲೂ ಕೇಳುತ್ತಾ ಬರುತ್ತಿದ್ದ, ಮಾನವ ಜನ್ಮ ಎಲ್ಲದಕ್ಕಿಂತ ಶ್ರೇಷ್ಠ ಎಂಬುದನ್ನು ಕಣ್ಮುಚ್ಚಿ ಒಪ್ಪಿಕೊಂಡ ನನಗೆ ಇವನು ಹೇಳಿದ "ದೇವರು ಈ ಪ್ರಪಂಚದ ಸಕಲ ಜೀವಿಗಳನ್ನು ಮನುಷ್ಯನಿಗಾಗಿಯೇ ಮಾಡಿದ್ದಾನೆ" ಎಂಬ ಮಾತೂ ಸರಿಯಾಗಿ ಕಾಣಿಸಿತು. ನಂತರ ಆ ವಿಷಯದ ಮೇಲೆ ಮಂಥನ ನಡೆಸಿದಾಗ ಕಂಡುಕೊಂಡ ಸತ್ಯದ ಕೆಲವು ತುಣುಕನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಾಸೆ.

ಕೋಳಿ: ಮಾಂಸವನ್ನೊಳಗೊಂಡಂತೆ ಅದರ ತತ್ತಿಯನ್ನು ಕೂಡಾ ತಿನ್ನಬಹುದಾಗಿದೆ. ಇದರ ಹಿಕ್ಕೆ ವ್ಯವಸಾಯಕ್ಕೆ ಉತ್ತಮ ಗೊಬ್ಬರವೂ ಹೌದು.

ಮೀನು: ತಿನ್ನಲು ಉಪಯೋಗ. ಮೀನಿನ ಯಕೃತ್ತಿನ ಎಣ್ಣೆಯನ್ನು ಔಷಧವಾಗಿಯೂ, ಹಿಂಡಿ ಉಳಿದ ಜಗಟಿಯನ್ನು ಹೊಗೆಸೊಪ್ಪಿನ ಕೃಷಿಗೂ ಬಳಸಬಹುದು. ತಿನ್ನಲು ಯೋಗ್ಯವಲ್ಲದ ಬಣ್ಣ ಬಣ್ಣದ ಮೀನುಗಳನ್ನು ಹಿಡಿದು, ಅಕ್ವೇರಿಯಂ ಒಳಗಿಟ್ಟು ಆನಂದಿಸಬಹುದು.

ಮಳೆ ನೀರು ಸಂಗ್ರಹಣೆ ಪಾಠ ಹೇಳುವ ’ಗ್ರಾಮೋದಯ’

ತಿಪಟೂರು-ಹಾಸನ ರಸ್ತೆಯಲ್ಲಿರುವ ಬೈಫ್ ಗ್ರಾಮೋದಯ ಕೇಂದ್ರವು ತಿಪಟೂರಿನಿಂದ ೧೧ ಕಿ.ಮೀ. ದೂರದಲ್ಲಿರುವ ಎಸ್.ಲಕ್ಕಿಹಳ್ಳಿ ಗ್ರಾಮದಲ್ಲಿದೆ. ಇದು ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ತರಬೇತಿ ಮತ್ತು ಸಂಶೋಧನಾ ಉದ್ದೇಶಗಳನ್ನು ನಿರ್ವಹಿಸುವ ತಾಣ. ಗ್ರಾಮೀಣಾಭಿವೃದ್ಧಿಯ ಅನೇಕ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕೆಗಳ ಮೂಲಕ ಮಾಹಿತಿ ನೀಡುವ ರಾಜ್ಯದ ಪ್ರಮುಖ ಕೇಂದ್ರ.

ತರಬೇತಿ ಕೇಂದ್ರವು 500 ಎಕರೆ ವಿಸ್ತೀರ್ಣದಲ್ಲಿದೆ. ಕೇಂದ್ರದಲ್ಲಿ ತರಬೇತಿಗಳು, ಸಸ್ಯಾಭಿವೃದ್ಧಿ, ನರ್ಸರಿ, ರೇಷ್ಮೆಸಾಕಾಣಿಕೆ, ಔಷಧಿ ವನ ಮುಂತಾದ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಗಮನ ಸೆಳೆಯುವ ಮತ್ತೊಂದು ಅಂಶ ಇಲ್ಲಿನ ಮಳೆ ನೀರು ಸಂಗ್ರಹಣೆ. ಒಂದು ದಶಕದ ಹಿಂದೆಯೇ ಮಳೆ ನೀರು ಸಂಗ್ರಹಣೆಗೆ ತೊಡಗಿದ್ದು ಸಂಸ್ಥೆಯ ದೂರದೃಷ್ಟಿಗೆ ಸಾಕ್ಷಿ. ಎರಡು ಕಡೆ ಮಳೆ ನೀರು ಸಂಗ್ರಹಣೆಗೆ ವ್ಯವಸ್ಥೆ ಮಾಡಿದ್ದು ಕ್ರಮವಾಗಿ 60 ಸಾವಿರ ಮತ್ತು 1 ಲಕ್ಷ 60 ಸಾವಿರ ಲೀಟರ್ ನೀರು ಸಂಗ್ರಹಣೆ ನಡೆಯುತ್ತಿದೆ.

ಸಂಸ್ಥೆಯು ಲಕ್ಕಿಹಳ್ಳಿಯ ವ್ಯಾಪ್ತಿಯಲ್ಲಿ ಅಂತರ್ಜಲ ಕುಸಿದಿರುವುದು, ಯೋಗ್ಯವಾದ ಕುಡಿಯುವ ನೀರಿನ ಅಲಭ್ಯತೆ ಹಾಗೂ ಲಭ್ಯವಿರುವ ಕುಡಿಯುವ ನೀರೂ ಸಹ ಫ್ಲೋರೈಡ್ ಯುಕ್ತವಾಗಿರುವುದನ್ನು ಪ್ರತ್ಯಕ್ಷ ಅನುಭವದಿಂದ ಅರಿತುಕೊಂಡು 1998 ರಲ್ಲಿ ಛಾವಣಿ ಮಳೆ ನೀರು ಸಂಗ್ರಹಣೆಗೆ ಪ್ರಾರಂಭಿಸಿತು.

ಬುಡದೆನ್ನುಡಿ ಅಥವಾ ಮೂಲದ್ರಾವಿಡ ಒಂದು ಪರಿಕಲ್ಪನೆಯಷ್ಟೆ.

ಬಡನುಡಿಗಳಿಗೆಲ್ಲ (ಉತ್ತರಭಾರತದ ಭಾಷೆಗಳು) ಮೂಲ ಸಕ್ಕದ (ಸಂಸ್ಕೃತ) ಅಥವಾ ಪಾಗದ (ಪ್ರಾಕೃತ) ಎಂದು ಹೇೞಬಹುದು. ಅದಕ್ಕೆ ಕಾರಣ ಈ ಭಾಷೆಗಳಲ್ಲಿರುವ ಶಬ್ದಗಳ ಮೂಲ ಸಕ್ಕದದ ಅಪಭ್ರಂಶರೂಪವಾಗಿಯೋ ಅಥವಾ ಪಾಗದದಲ್ಲಿ ಕಂಡುಬರುತ್ತದೆ. ಅಲ್ಲದೆ ಸಂಸ್ಕೃತ ಮತ್ತು ಪಾಗದಗಳು ಆಡುಭಾಷೆಗಳಾಗಿದ್ದುವು.