ನಿನ್ನ ನೆನಪಾಗುವುದೇಕೆ?

ನಿನ್ನ ನೆನಪಾಗುವುದೇಕೆ?

ಬರಹ

ಸಖೀ,
ಬೆಟ್ಟದಾ ತಪ್ಪಲಲಿ
ಸಣ್ಣಗೆ ಹುಟ್ಟಿ,
ತಣ್ಣಗೆ ಇರುವವಳು,
ಅದ್ಯಾವುದೋ
ಅವ್ಯಕ್ತ ಸೆಳೆತಕ್ಕೊಳಗಾಗಿ,
ಮುನ್ನುಗ್ಗಿ, ಬಿದ್ದು, ಎದ್ದು,
ಬೆಟ್ಟ ಗುಡ್ಡಗಳ ಸುತ್ತಿ,
ಜಾರಿ ಜಲಪಾತವಾಗಿ,
ಬಯಲಿಗಿಳಿದು,
ಕಾವೇರಿಸಿಕೊಂಡು,
ಮೈ ಹಿಗ್ಗಿಸಿಕೊಂಡು
ಅತ್ತ ಇತ್ತ ಕೈಚಾಚಿ,
ಸಿಕ್ಕಿದ್ದನ್ನೆಲ್ಲಾ ಬಾಚಿ
ತನ್ನೊಳಗೆ ಸೆಳೆದು,
ಸಮುದ್ರರಾಜನೊಂದಿಗಿನ
ತನ್ನ ಮಧುರ ಮಿಲನಕ್ಕೆ
ಹಾತೊರೆದು, ಅನವರತ
ಮೈನೆರೆತು ಮೈಮರೆತು ಹರಿವ,
ನದಿಯ ಕಂಡಾಗಲೆಲ್ಲಾ,
ನನಗೆ, ಬಿಡದೆ, ನಿನ್ನ
ನೆನಪಾಗುವುದೇಕೆ?
**********