ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ರದ್ದಿಯಲ್ಲೊಂದು ಚಿಂತನಾರ್ಹ ವಿಚಾರ

"ಆನೋ ಭದ್ರಾಃ ಕತವೋ ಯಂತು ವಿಶ್ವತ್ಃ"
ಶ್ರೇಷ್ಠ ವಿಚಾರಗಳು ಜಗತ್ತಿನ ಎಲ್ಲೆಡೆಯಿಂದ ನಮಗೆ ಬರಲಿ
- ಉಪನಿಃಷತ್

ಹೀಗೊಮ್ಮೆ ನಕ್ಕು ಬಿಡು ಗೆಳತಿ

ಹೀಗೊಮ್ಮೆ ನಕ್ಕು ಬಿಡು ಗೆಳತಿ
ಭಾವ ರಹಿತ ಬದುಕಿನಲಿ
ಭಾವ ಗಂಗೆ ಹರಿದು ಬರಲಿ
ಆಶಾ ಸೌಧವೆ ತೇಲಿ ಬರಲಿ

ಹೀಗೊಮ್ಮೆ ನಕ್ಕು ಬಿಡು ಗೆಳತಿ
ನಿನ್ನ ನಗು ಚಂದ್ರಿಕೆಯಲಿ
ಸ್ನೇಹ ಗಂಗೆ ಹರಿದು ಬರಲಿ
ನನ್ನ ನೋವು ಇಲ್ಲವಾಗಲಿ

ಹೀಗೊಮ್ಮೆ ನಕ್ಕು ಬಿಡು ಗೆಳತಿ
ಬರಡಾದ ಎದೆಗೊಳದಿ
ಪ್ರೇಮ ಗಂಗೆ ಹರಿದು ಬರಲಿ
ಪ್ರೀತಿ ಪಲ್ಲವ ತಾ ಚಿಗುರಲಿ

ಹೀಗೊಮ್ಮೆ ನಕ್ಕು ಬಿಡು ಗೆಳತಿ

ಹಂದರ - ಕಂದರ!

ಸಖೀ,

ಅಂದು ನೀನಾರೋ ನಾನಾರೋ?

ಆಕಸ್ಮಿಕವಾಗಿ ಆಯಿತು ಆ ಭೇಟಿ,
ಭೇಟಿಗಳಿಂದ ಬೆಳೆಸಿದ ಪರಿಚಯ,
ಪರಿಚಯದಿಂದ ಬಂತು ಆತ್ಮೀಯತೆ,
ಆತ್ಮೀಯತೆಯಿಂದ ಚಿಗುರಿತು ಪ್ರೀತಿ,

ಪ್ರೀತಿಯಿಂದ ವ್ಯಾಪಿಸಿತು ಅಧಿಕಾರ,
ಅಧಿಕಾರದಿಂದಾಗಿ ಹೆಚ್ಚಿದ ನಿರೀಕ್ಷೆ,
ನಿರೀಕ್ಷೆ ಸುಳ್ಳಾದಾಗ ಅಸಮಾಧಾನ,
ಅಸಮಾಧಾನದಿಂದಾಗಿ ಅನುಮಾನ,
ಅನುಮಾನದೊಂದಿಗೆ ಬಿಗುಮಾನ,

'ಹೆಣ್ಣಾಗುವ' ಒಂದು ಪ್ರಸಂಗ

ನನ್ನ ಮೊಬೈಲ್ ಗೊಂದು ಮಿಸ್ಡ್ ಕಾಲ್. ಇದು ಯಾರು ಎಂದು ಕೇಳಿ ರಿಪ್ಲೇ ಮಾಡಿದೆ. ತಕ್ಷಣವೇ ಅಲ್ಲಿಂದ ಶುರುವಾಯ್ತು ಮೆಸೇಜುಗಳ ಸುರಿಮಳೆ. ನಮ್ಮ ನಡುವಿನ ಸಂಭಾಷಣೆಯನ್ನು ಹಾಗೆಯೇ ನೀಡಿದರೆ ಚೆನ್ನ.
'ನೀವು ರಚನ್ ಅಲ್ವಾ? '
'ಅಲ್ಲ, ನಾನು ರಚನ್ ಅಲ್ಲ'
'ನಿಮ್ಮ ಹೆಸರು ಕೇಳಬಹುದೇ?'
'ಕ್ಷಮಿಸಿ, ಗುರುತಿಲ್ಲದವರಿಗೆ ಪರಿಚಯ ಹೇಳಲಾರೆ'

ತಂತಾನೇ ಅರಳುವ ಹಿರಿಮೆ

ಹಿರಿಮೆಯಿರಲು ಮನುಜರಲಿ
ಅರಳುವುವು ಅವು ತಾವಾಗಿ.
ಪರಿಮಳ ಸೂಸಲು ಕತ್ತುರಿಗೆ
ಹೇರಬೇಕೇನು ಒತ್ತಾಯ?

ಸಂಸ್ಕೃತ ಮೂಲ:

ಯದಿ ಸಂತಿ ಗುಣಾಃ ಪುಂಸಾಂ ವಿಕಸಂತ್ಯೇವ ತೇ ಸ್ವಯಂ
ನ ಹಿ ಕಸ್ತೂರಿಕಾಮೋದಃ ಶಪಥೇನ ವಿಭಾವ್ಯತೇ

-ಹಂಸಾನಂದಿ

ಇಂದು ಓದಿದ ವಚನ: ಲೀಢವಾಗಿರಬಾರದು: ಸಿದ್ಧರಾಮ

ನೋಡುವುದು ನೋಡಲೇ ಬೇಕು
ಮಾಡುವುದು ಮಾಡಲೇ ಬೇಕು
ನೋಡಿ ಮಾಡಿ ಮನದಲ್ಲಿ ಲೀಢವಾಗಿರಬಾರದು ನೋಡಾ
ಕಪಿಲಸಿದ್ಧಮಲ್ಲಿಕಾರ್ಜುನಾ

[ಲೀಢ-ನೆಕ್ಕು, ಆಸ್ವಾದಿಸು, ರುಚಿ ನೋಡು].

ಸಿದ್ಧರಾಮನ ಈ ವಚನ ವೈರಾಗ್ಯವೆಂಬ ಕಲ್ಪನೆಯ ಭಾಷ್ಯದಂತಿದೆ.

ನಾನು ನಿನ್ನ ಬೇರೆ ಪ್ರಿಯಕರನಂತಲ್ಲ ಪ್ರಿಯೆ

ನಾನು ನಿನ್ನ ಬೇರೆ ಪ್ರಿಯಕರನಂತಲ್ಲ ಪ್ರಿಯೆ!
ಅವನು ನಿನಗೆ ಮೋಡ ತಂದು ಕೊಟ್ಟರೆ
ನಾನು ನಿನಗೆ ಮಳೆ ಹನಿಯಾಗಿ ಸುರಿವೆ
ಅವನು ನಿನಗೆ ಉರಿವ ದೀಪ ಕೊಟ್ಟರೆ
ನಾನು ನಿನಗೆ ಹೊಳೆವ ಚಂದಿರನನ್ನು ತರುವೆ
ಅವನು ನಿನಗೆ ಮರದ ಹೂಗಳನ್ನು ಕಿತ್ತುಕೊಟ್ಟರೆ
ನಾನು ನಿನಗೆ ಮರವಾಗಿ ನೆರಳನಿಡುವೆ
ಅವನು ನಿನಗೆ ಹಡಗನ್ನು ಕೊಟ್ಟರೆ
ನಾನದರ ನಾವಿಕನಾಗಿ ಜೊತೆಯಲ್ಲಿ ಸಾಗುವೆ.