ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇರಿತ

ಹುಡುಗೀ...ನಿನ್ನ ಮೊನಚು ಕಣ್ಣುಗಳು ನನ್ನ ನೋಡದೆ ಇರದೇ..?
ಪ್ರಿತಿಯಿದ್ದರೆ...ಮತ್ಯಾಕೆ ನನ್ನೆದೆಗೆ ಆ ಕಣ್ಣಿನಿಂದ ಹಾಗೆ ಇರಿದೆ...?

ಅವನೂ ಅವಳೂ ಹೀಗಿದ್ದರು ...

ಬಳಪಕ್ಕಾಗಿ ಅವನೂ ಅವಳೂ ಜಗಳವಾಡುತ್ತಾರೆ ...ಟೀಚರ್ ಬಯ್ಯುತ್ತಾರೆ...
ಇಬ್ಬರೂ ಅಳುತ್ತಾರೆ...

ಮಣ್ಣಿನಲ್ಲಿ ಇಬ್ಬರೂ ಆಡುತ್ತಾರೆ... ಮೈಗೆಲ್ಲಾ ಮಣ್ಣು ಮೆತ್ತಿಕೊಳ್ಳುತ್ತಾರೆ...
ಆಟ ಮುಂದುವರಿಯುತ್ತದೆ ...

ಕಾಲೇಜಿನಲ್ಲಿ ಅವಳು ಚಿಗರೆಯಂತೆ ಓಡಾಡುತ್ತಾಳೆ... ಆತ ಪ್ರೀತಿಸುತ್ತಾನೆ...
ಅವಳು ಒಪ್ಪುತ್ತಾಳೆ...

ಮಗನನ್ನು ಯಾರು ಖರೀದಿ ಮಾಡುವಿರಿ?

ವರ್ಷಗಳ ಹಿ೦ದೆ ಒಬ್ಬ ಶ್ರೀಮ೦ತನಿದ್ದ, ಹಾಗೆಯೇ ಅವನಿಗೊಬ್ಬ ಮುದ್ದಿನ ಮಗನಿದ್ದ. ಇಬ್ಬರಿಗೂ ಜಗತ್ತಿನ ವಿಖ್ಯಾತ ಚಿತ್ರಕಲೆಗಳನ್ನು ಸ೦ಗ್ರಹಿಸುವ ಹುಚ್ಚು ಹವ್ಯಾಸವಿತ್ತು. ಇಬ್ಬರೂ ಪ್ರಪ೦ಚವನ್ನು ಹಲವಾರು ಬಾರಿ ಸುತ್ತಿ ಅತ್ಯ೦ತ ಸು೦ದರ ಹಾಗೂ ದುಬಾರಿಯ ಚಿತ್ರಗಳನ್ನು ತಮ್ಮ ಚಿತ್ರ ಖಜಾನೆಗೆ ಸೇರಿಸುತ್ತಿದ್ದರು.

ಮುಂದುವರೆದ ಭಾರತತೀರ್ಥ ( ಮಹಾಭಾರತದ ಓದು !) - ೨

( http://sampada.net/blog/shreekantmishrikoti/26/12/2007/6794 ) ದಿಂದ ಮುಂದುವರೆದಿದ್ದು .. ಅಲ್ಲಿ ಮುಂದುವರೆದೀತು ಅಂತ ಹೆದರಿಸಿದ್ದೆ ... ಈ ಬೆದರಿಕೆಯನ್ನ ಜಾರಿಗೆ ತಂದಿದ್ದೀನಿ ! )
ಇದು ಲೀನಕ್ಸ್ ನಿಂದ ಕನ್ನಡ ಬರಹದ ಟೆಸ್ಟಿಂಗ್ ಕೂಡ ....

ಧ್ಯಾನವೂ, ಓಶೋ ಧ್ಯಾನ ಶಿಬಿರವೂ

ಓಶೋ ಧ್ಯಾನ ಶಿಬಿರದಲ್ಲಿನ ನನ್ನ ಅನುಭವಗಳ ಬಗ್ಗೆ ಬರೆಯಬೇಕೆಂದು ಶಿಬಿರಕ್ಕೆ ಹೋಗಿ ಬಂದಾಗಿನಿಂದಲೂ ಅಂದುಕೊಳ್ಳುತ್ತಲೇ ಇದ್ದೆ. ಆದರೆ, ಮೊದಲೆರಡು ಭಾಗಗಳನ್ನು ಸಲೀಸಾಗಿ ಬರೆದುಬಿಟ್ಟೆ. ಮೂರನೇ ಭಾಗವನ್ನು ಬರೆಯಲು ಸಾಧ್ಯವೇ ಆಗಿರಲಿಲ್ಲ. ನನ್ನಂತೆಯೇ ಓಶೋ ಪ್ರೇಮಿಯಾದ ನನ್ನ ಪ್ರೀತಿಯ ಯುವ ಗೆಳೆಯ ಸುಪ್ರೀತ್ ಕೂಡ ಈ ಬಗ್ಗೆ ಒತ್ತಾಯಿಸುತ್ತಲೇ ಇದ್ದ.

ನಾವೇನು ಬೇಕು ಅಂತಲೇ ಯುದ್ದಕ್ಕೆ ಹೋಗ್ತೀವ? ಜಗತ್ತಿಗೆ ಶಾಂತಿ ಬೊದಿಸಿದ, ಬುದ್ಧ,ಮಹಾವೀರ ,ಗಾಂಧಿ ಮುಂತಾದ ಮಹಾತ್ಮರು ಹುಟ್ಟಿದ ನಾಡಿದು.

 

ನಾವೇನು ಬೇಕು ಅಂತಲೇ ಯುದ್ದಕ್ಕೆ ಹೋಗ್ತೀವ?

ಜಗತ್ತಿಗೆ ಶಾಂತಿ ಬೊದಿಸಿದ, ಬುದ್ಧ,ಮಹಾವೀರ ,ಗಾಂಧಿ ಮುಂತಾದ ಮಹಾತ್ಮರು ಹುಟ್ಟಿದ ನಾಡಿದು. ಆದರೆ ನಮ್ಮ ಶಾಂತಿ ಸಹಬಾಳ್ವೆಗೆ ಈ ಪಕ್ಕದ ದೇಶದವರು ಆಗಾಗ್ಗ ಧಾಳಿ ಮಾಡಿ ನಮ್ಮನ್ನು ಕೆಣಕುತ್ತಿದ್ದಾರೆ...

ಮೊದಲು ಶಾಂತಿ ನಂತರ ಕ್ರಾಂತಿ ನಮ್ಮ ಗುಣ.....

ಕಲಿಕೆ ಹೀಗಾದರೆ ಹೇಗೆ!?

ಕಲಿಕೆ ಹೀಗಾದರೆ ಹೇಗೆ!?
ಯಾವುದೇ ವಿದ್ಯೆಯನ್ನು ಗಂಭೀರವಾಗಿ ಕಲಿಯುವವರನ್ನು ನಾವು ಇಲ್ಲಿ ಗಣನೆಗೆ ತೆಗೆದುಕೊಳ್ಳ ಬೇಕಾಗಿಲ್ಲ. ಆದರೆ ಹಿರಿಯರ ಬಲವಂತಕ್ಕೆ ಅಥವಾ ಸುಮ್ಮನೇ ಕಾಲ ಕಳೆಯಲೆಂದು ಕಲಿಯುವವರ ಚಿಂತನೆ ಹೇಗಿರಬಹುದೆಂಬುದರ ಬಗ್ಗೆ ಇಲ್ಲಿ ಒಂದು ಮಂಥನ ಅಷ್ಟೇ.

ಪ್ರೇಮ ಬ್ರಹ್ಮ

ಒಲವೆಂಬ ದೀವಟಿಗೆಯ
ಹೊತ್ತು ಹೊರಟಿದ್ದೇನೆ
ಜಗದಂಧಕಾರವನು
ಕಳೆವೆನೆಂಬ ಭ್ರಮೆಯಿಂದ
ಸತ್ಯವರಿಯೆ
ಸತ್ವವರಿಯೆ
ಪ್ರಾಣವರಿಯೆ
ಪೂರ್ಣವರಿಯೆ
ಆತ್ಮನರಿಯೆ
ಬ್ರಹ್ಮನರಿಯೆ
ಪ್ರೀತಿಯೊಂದೆ ಸಾಕೆನಗೆ
ಜಗವ ಬೆಳಕಾಗಿಸಲು
ಹು೦ಬನಾರ್ಭಟಕೆ
ಜಗ ನಕ್ಕಿತು
'ನಿನ್ನ ಬೆಳಕು
ನಿನ್ನ ಸುತ್ತ
ನಿನ್ನ ಜನಕೆ ಮಾತ್ರ'
ಬೆಪ್ಪೆ ನಾನು, ಹೊತ್ತೆ
ಅದೇ ಹಳೆಯ ಒಲವ ದೀಪ
ಬ್ರಹ್ಮ ಬಂದ