ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮರೆಯಲಾರದ ಸಣ್ಣ ಕಥೆಗಳು - ೪

ಹಿಂದೆ ಕೆಲವು ಮರೆಯಲಾರದ ಸಣ್ಣ ಕಥೆಗಳ ವಿಷಯ ಬರೆದಿದ್ದೆ. ಅತ್ತಲಾಗಿ ಮಿಶ್ರಿಕೋಟಿಯವರೂ ಒಂದು ಕಥೆಯ ಬಗ್ಗೆ ಬರೆದಿದ್ದನ್ನು ನೋಡಿ, ತಕ್ಷಣ ನನಗೆ ಹೊಳೆದ ಕಥೆ  ಸಂಜಯ ಹಾವನೂರರ ’ಲಿಫ್ಟ್’. ಇದು ಮಿಶ್ರಿಕೋಟಿಯವರ ಮುಂಬಯಿ ನಂಟಿನಿಂದಲೇ? ಇರಬಹದೇನೋ, ಏಕೆಂದರೆ ಈ ಕಥೆ ನಡೆಯುವುದಂತೂ ಮುಂಬಯಿಯಲ್ಲೇ.

ಇದು ಹಳೆಯ ಕಥೆಯೇ? ಬಹುಪಾಲು ಸಂಪದಿಗರಿಗೆ ಇದ್ದರೂ ಇರಬಹುದು. ಆದರೆ, ನಾನು ಮುಂಚೆ ಹೇಳಿದ ಹಳೆಯ ಕಥೆಗಳಷ್ಟಂತೂ ಹಳೆಯದಲ್ಲ. ೧೯೮೩-೮೪ರಲ್ಲೋ ಏನೋ ಇದು ಮಯೂರದಲ್ಲಿ ಪ್ರಕಟವಾಗಿತ್ತು. ನಂತರ ಭಾರತೀಯ ಭಾಷೆಗಳಲ್ಲಿ ಬಂದಿರುವ ವೈಜ್ಞಾನಿಕ ಹಿನ್ನಲೆಯ (science fiction)  ಕಥೆಗಳನ್ನೆಲ್ಲ ಒಟ್ಟುಗೂಡಿಸಿರುವ  ಕಥಾಸಂಕಲನವೊಂದರಲ್ಲಿ ಈ ಕಥೆ  ಇಂಗ್ಲಿಷ್ ಗೆ "The Lift" ಎಂಬ ಹೆಸರಲ್ಲೇ ಅನುವಾದವಾಗಿದೆಯೆಂದು ಎಲ್ಲೋ ಓದಿದ ನೆನಪು.

ಸ್ವರ್ಗದ ನೀರು -ಒಂದು ದರವೇಶಿ ಕತೆ

ಗೌರಿ ಲಂಕೇಶ್ ಅವರ ’ದರವೇಶಿ ಕತೆಗಳು’ ಎಂಬ ಸೂಫಿ ಸಂಪ್ರದಾಯದ ಕತೆಗಳ ಸಂಗ್ರಹದ ಅನುವಾದವನ್ನು ಕೊಂಡು ಓದಿದೆ.

ಅಲ್ಲಿನ ಒಂದು ಕತೆ ಕೇಳಿ .

ಹೊಳೆಯುವುದು ತಾರೆ, ಉಳಿಯುವುದು ಆಕಾಶ

ಸದ್ಯ ಲಭ್ಯವಿರುವ ಮಾಧ್ಯಮಗಳಲ್ಲಿ ಸಿನಿಮಾ ಅತ್ಯಂತ ಶಕ್ತಿಶಾಲಿಯಾದುದು ಎಂಬುದರಲ್ಲಿ ಯಾರಿಗೂ ಸಂಶಯ ಇರಲಿಕ್ಕಿಲ್ಲ. ಅತಿ ಪ್ರಬಲವಾದ, ಹಾಗೇ ಪರಿಣಾಮಕಾರಿಯಾಗಿ ಹೆಚ್ಚು ಜನರನ್ನು ತಲುಪಬಲ್ಲ ಸಮೂಹ ಮಾಧ್ಯಮ ಇದಾಗಿರುವುದರಿಂದ, ಹಣ ಹೂಡಿಕೆಗೆ ಪ್ರಶಸ್ತವಾದ ಉದ್ದಿಮೆಯೂ ಇದೇ ಆಗಿದೆ. ಲಾಭ ಪಡೆಯುವುದೇ ಹೂಡಿಕೆದಾರನ ಉದ್ದೇಶವಾಗಿರುವುದರಿಂದ ಸಹಜವಾಗಿ ಹಣ ಮತ್ತು ಖ್ಯಾತಿ ಈ ಉದ್ಯಮದ ಮುಖ್ಯ ಉಸಿರಾಗಿದೆ.

ಮಾಲೆ

ಕನಸುಗಳ ಹೆಣೆದು
ಮಾಲೆಯಾಗಿಸಿದ್ದೇನೆ
ನನ್ನ ಕೊರಳಿಗೆ ನನ್ನವೇ
ಕನಸುಗಳು
ಒಮ್ಮೊಮ್ಮೆ ನಾನೇ
ಕನಸಾಗಿದ್ದೇನೆ
ಭಾವನೆಗಳ ಹಿಡಿಯಲು
ಹೋಗಿ ಹೆನವಾಗಿದ್ದೇನೆ
ನಾ ಸತ್ತು ವರ್ಷಗಳಾಯ್ತು
ಆದರೂ ಬದುಕಿದ್ದೇನೆ
ಬದುಕು ಬರಡಾಗಿ
ಅಲ್ಲೊಮ್ಮೆ ಇಲ್ಲೊಮ್ಮೆ
ಪ್ರೀತಿ ಚಿಲುಮೆ ಕಂಡರೂ
ಅದು ಮರೀಚಿಕೆ
ನಾ ಹಿಡಿಯಲಾರೆ,ಅದೂ
ಸಿಗುವುದಿಲ್ಲ ಕನಿಕರಿಸಿ

ಪ್ರಸವ

ಮಿಸುಕಾಡುತಿದೆ
ಒಳಗಿನ ಜೀವ
ಅಳುತ್ತಿದೆಯೇನೋ?
ಹಸಿವಾಗಿರಬೇಕು
ಕೈಕಾಲಾಡಿಸುತ್ತಿದೆ
ತಿರುಗುತ್ತಿದೆ
ಸೇರಲೋಲ್ಲದು ಊಟ
ಇದೆನಿದರ ಆತ
ಆದರೂ
ಸೇರಿಸಿಕೊಂಡು ತಿನ್ನುತ್ತೇನೆ
ನಮಗಾಗಿ
ನೋವಿದೆ ಕಣ್ಣಲ್ಲಿ ನೀರು
ಬಿಗಿಯಾಗಿದ್ದೇನೆ
ಹಲ್ಕಡಿದು, ಕಣ್ಮುಚ್ಚಿ
ಒಂದೆರಡು ಗಂಟೆ
ಒಳಗಿನ ಜೀವ
ಹೊರಬಂದರೆ ಸಾಕು
ಮುಕ್ತಿ

ನನ್ನವರು

ಆ ಮನೆ
ಅವಳಿಗಿನ್ನೂ ಹೊಸತು
ಮೌನದೊಡನೆ ಬೆರತು
ಕೆಲವೊಮ್ಮೆ ನಗುವಳು
ನೆನಪನ್ನೇ ನೋಡುವಳು

ಮದುವೆಗೆ ಮುಂಚೆ
ರಿಂಗಣಿಸಿದಾಗ ಫೋನು
ಹಲೋ,ಹೇಳಿ, ಮತ್ತೆ , ಏನು
ಇಷ್ಟೇ ಮಾತು ಬೇರೇನಿಲ್ಲ
ಅತ್ತಲಿಂದ ಹಾಸ್ಯದಂಬಾರಿ
ಇವಳ ನಗು ನಿಮಿಷಕ್ಕೊಂದು ಬಾರಿ

ತಟ್ಟೆಯೊಳಗೆ ಬೆರಳಾಡಿಸುತ
ಒಳಗೊಳಗೇ ನಗುವಳು
(ಏನೆನಿಸುವುದೋ)
ಕೇಳಿದರೆ ಮತ್ತೆ ಮೌನ
ಹುಸಿಕೋಪ, ಮುದ್ದುಮುಖ

ರಕ್ಷಣೆಯ ಹೆಸರಿನಲ್ಲೊಂದು ದುಬಾರಿ ಯೋಜನೆ

ನಿನ್ನೆಯ ಪತ್ರಿಕೆಯಲ್ಲಿ ಒಂದು ಸುದ್ದಿ ಅಂದರೆ ಸರಕಾರಿ ಪ್ರಕಟನೆ ನನ್ನ ಗಮನ ಸೆಳೆಯಿತು. ೨೦ ಕೋಟಿ ರೂಪಾಯಿ ವೆಚ್ಚದಲ್ಲಿ ೩೦೦೦ ಮೀನುಗಾರಿಕಾ ದೋಣಿಗಳಿಗೆ ಜಿಪಿಎಸ್ ಅಳವಡಿಕೆಗೆ ಕೇಂದ್ರ ಸರಕಾರಕ್ಕೆ ಅಹವಾಲು. ಪಾಕಿಸ್ತಾನದ ಬಯೋತ್ಪಾದಕರಿಗೆ ಸಮುದ್ರದಲ್ಲಿ ಮುಂಬಯಿಗೆ ದಾರಿ ತೋರಲು ಉಪಯೋಗಿಸಿದ ಕಾರಣ ಜಿಪಿಎಸ್ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಕಲ್ಯಾಣಂ ತುಳಸಿ ಕಲ್ಯಾಣಂ ಕೀರ್ತನೆ

ಕೊನೆಗೂ ಈ ಹಾಡು ಸಿಕ್ಕಿತು.

ಈ ಕೀರ್ತನೆಯನ್ನುಶ್ರೀ ವಿದ್ಯಾಭೂಷಣರು "ಆರಭಿ" ರಾಗದಲ್ಲಿ ತುಂಬಾ ಸೊಗಸಾಗಿ ಹಾಡಿದ್ದಾರೆ. 

ಕಲ್ಯಾಣಂ ತುಳಸಿ ಕಲ್ಯಾಣಂ
ಕಲ್ಯಾಣಂ ತುಳಸಿ ಕಲ್ಯಾಣಂ||

ಕಲ್ಯಾಣವೇ ನಮ್ಮ ಕೃಷ್ಣ ಶ್ರೀ ತುಳಸಿಗೆ
ಬಲ್ಲಿದ ಶ್ರೀ ವಾಸುದೇವನಿಗೆ||ಕಲ್ಯಾಣಂ..||