ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

2 ಸಾಲಿನ ಮನದ ಮಾತು

"ಆತ್ಮೀಯರು ಯಾರು ಕಷ್ಟ್ ಕಾಲದಲ್ಲಿ ಬರಲ್ಲಾ.... ಕಷ್ಟ್ ಕಾಲದಲ್ಲಿ ಬರೋರೆಲ್ಲ ಅತ್ಮಿಯರಗಿರಲ್ಲಾ....!"

"ಬದುಕ ಬೇಕು ಅನ್ನೋರಿಗೆ Time ಇರಲ್ಲ........ Time ಇರೋರಿಗೆ ಬದುಕೋ ಅಸೆ ಇರಲ್ಲಾ ........!"

ಅವರು ಸಾವನ್ನೇ ಕೂಗಿ ಕರೆದರು!!

ಯಾರು ತಮ್ಮ ಸಾವನ್ನು ತಾವೇ ಹುಡುಕಿ ಹೋಗುತ್ತಾರೆ? ಆದರೆ ಕಳೆದವಾರ ಮುಂಬೈ ಮಾರಣ ಹೋಮದಲ್ಲಿ ಸಾವನ್ನು ಹುಡುಕಿಕೊಂಡು ಹೋದ ವೀರ ಪೋಲಿಸ್ ಅಧಿಕಾರಿಯ ಕತೆಯಿದು.

ಮುಂಬೈ ಮೂಲದ ಆಂಗ್ಲ ಪತ್ರಿಕೆಯೊಂದರಲ್ಲಿ ಬಂದಿದ್ದ ಮಾಹಿತಿಯಿದು, ಆ ವೀರನ ಬಗ್ಗೆ ಎಲ್ಲರಿಗೂ ತಿಳಿಯಲಿ ಎಂಬ ಉದ್ದೇಶದಿಂದ ಇಲ್ಲಿ ಬರೆಯುತಿದ್ದೇನೆ.

ರಾಕೆಟ್, ಟೆಲಿಸ್ಕೋಪ್ ಸಂಶೋಧನೆಯಾಗುವ ಮುಂಚೆಯೇ ಭಾರತೀಯರಿಗೆ ತಿಳಿದ್ದಿದ್ದವೇ?

ಹಳೇಬೀಡಿನ ಶಿಲ್ಪವೊಂದರಲ್ಲಿ ಟೆಲಿಸ್ಕೋಪಿನ ಬಳಕೆ ಇದೆ ಇದು ಕಟ್ಟಲ್ಪಟ್ಟಿದ್ದು 12ನೇ ಶತಮಾನದಲ್ಲಿ
ಆದರೆ ಟೆಲಿಸ್ಕೋಪಿನ ಸಂಶೋಧನೆಯಾಗಿದ್ದೇ 17ನೇ ಶತಮಾನದ ಆರಂಭದಲ್ಲಿ
ಲಿಂಕ್ ನೋಡಿ http://en.wikipedia.org/wiki/Telescope
ಹಾಗಿದ್ದಲ್ಲಿ ಭಾರತೀಯರಿಗೆ ಈ ಪರಿಕಲ್ಪನೆ ಮೊದಲೇ ಇದ್ದುದ್ದೇ . ಇದರ ಬಗ್ಗೆ ಸಂಶೋದಕರು ಏನನ್ನುತ್ತಾರೆ ಹಾಗೆಯೇ
ರಾಕೆಟ್‌ನ ಬಳಕೆ ಕೂಡ

ಕೊಡುಗೆ

ಮೇಘಮಾಲೆಯ ತುಂತುರಿನ ಸಿಂಚನದಿ
ಮಿಂದೆದ್ದ ಕುಸುಮ ಆಗಸವ
ನೋಡುತಾ ಮುಗುಳ್ನಕ್ಕಿತ್ತು

ಅರಳಿನಿಂತ ಕುಸುಮವನ್ನು ಚುಂಬಿಸುತಾ
ಬೀಸಿಬಂದ ಗಾಳಿ ಅದರ
ಪರಿಮಳವ ಘಮ್ಮನೆ ಹರಡಿತ್ತು

ಏನೇ ಆಗಲಿ ಒಳ್ಳೆಯದನ್ನೇ ಮಾಡಿ; ವಾರಕ್ಕೆರಡು ದಿನ ಧಾರಾವಾಹಿಯಾಗಿ

ಪ್ರಾಮಾಣಿಕರಾದವರಿಗೂ, ಕ್ರಿಯಾಶೀಲರಾದವರಿಗೂ, ಸ್ವಾರ್ಥವಿಲ್ಲದ ಪರೋಪಕಾರಿ ಗುಣ ಇರುವವರಿಗೂ ಎಲ್ಲಾ ಸಮಯದಲ್ಲೂ ಆಶಾವಾದವನ್ನು ಕಾಪಾಡಿಕೊಳ್ಳುವುದು ಒಂದು ದೊಡ್ಡ ಸವಾಲು. ಎಷ್ಟೋ ಬಾರಿ ಈ ಒಳ್ಳೆಯವರು ಸಿನಿಕತನಕ್ಕೆ ಒಳಗಾಗಿ ಎಲ್ಲವನ್ನೂ Negative ಆಗಿ ನೋಡಲು ಆರಂಭಿಸಿಬಿಡುತ್ತಾರೆ.

ಇಂದು ಓದಿದ ವಚನ:ಎಲ್ಲ ಹೂವೂ ಹಣ್ಣಾಗುವುದಿಲ್ಲ: ಜೇಡರ ದಾಸಿಮಯ್ಯ

ತೀವಿ ಕುಳ್ಳಿರ್ದ ಸಭೆ ಈಯಬಲ್ಲುದೆ ದಾನವ
ಸಾವರೆ ಸಂಗ್ರಾಮಕ್ಕೆ ಹೋದವರೆಲ್ಲ
ಇರಿಯಬಲ್ಲರೆ ನೂರಕ್ಕೊಬ್ಬ ಸಹಸ್ರಕ್ಕೊಬ್ಬ
ಹುಣಿಸೆಯ ಹೂವೆಲ್ಲ ಕಾಯಾಗಬಲ್ಲುದೆ ರಾಮನಾಥ
 
[ತೀವಿ-ತುಂಬಿ]
 
ಜೇಡರ ದಾಸಿಮಯ್ಯ ಆದ್ಯ ವಚನಕಾರ. ಬಸವ ಮೊದಲಾದ ಸುಪ್ರಸಿದ್ಧ ಶರಣೆರಲ್ಲರಿಗಿಂತ ಹಿಂದಿನವನು. ಗುಲಬರ್ಗಾ ಜಿಲ್ಲೆಯ ಮುದನೂರು ಈತ ಹುಟ್ಟಿದ ಊರು. ತಂದೆ-ಕಾಮಯ್ಯ, ತಾಯಿ-ಶಂಕರಿ, ಹೆಂಡತಿ-ದುಗ್ಗಳೆ. ನೇಯ್ಗೆಯ ಕಸುಬಿನ ವಚನಕಾರ ಈತ. ರಾಮನಾಥ ಅನ್ನುವುದು ಜೇಡರ ದಾಸಿಮಯ್ಯನ ಅಂಕಿತ. ಈತನ ೧೭೬ ವಚನಗಳು ದೊರೆತಿವೆ.
 
ಸಭೆಯಲ್ಲಿ ಸಾವಿರ ಜನ ಇರಬಹುದು. ಆದರೆ ಅವರೆಲ್ಲರೂ ದಾನಕೊಡುವುದಕ್ಕೆ ಮುಂದೆಬರುವವರಲ್ಲ. ಯುದ್ಧಕ್ಕೆ ಲಕ್ಷ ಜನ ಹೋಗಬಹುದು. ಹಾಗೆ ಹೋದವರೆಲ್ಲ ಸಾಯುವವರಲ್ಲ. ಯುದ್ಧದಲ್ಲಿ ಶತ್ರುವನ್ನು ಇರಿಯಬಲ್ಲವರು ನೂರರಲ್ಲಿಯೋ ಸಾವಿರದಲ್ಲಿಯೋ ಒಬ್ಬರಿದ್ದರೆ ಹೆಚ್ಚು. ಹುಣಿಸೆಯ ಮರದಲ್ಲಿ ಬಿಟ್ಟ ಹೂಗಳೆಲ್ಲ ಹುಣಿಸೆಯ ಕಾಯಿ ಆಗುವುದೇ? ಇದು ಜೇಡರ ದಾಸಿಮಯ್ಯ ಕೇಳುವ ಪ್ರಶ್ನೆ. ಇಲ್ಲ ಅನ್ನುವ ಉತ್ತರ ಕೇಳುವ ಧಾಟಿಯಲ್ಲಿಯೇ ಹೊಳೆಯುತ್ತದೆ.

ಅಭಿಸಾರಿಕೆ ಪದದ ಅರ್ಥ

ನೆನ್ನೆ "ಬಾ ಮಳೆಯೇ ಬಾ" ಹಾಡು ಕೇಳಿದೆ, ತುಂಬಾ ಸೊಗಸಾದ ಹಾಡು. ರಮೇಶ್ ಅವರ ಆಕ್ಸಿಡೆಂಟ್ ಚಿತ್ರದಲ್ಲಿ ಹಾಡಿನ ದೃಶ್ಯಗಳು ಕೂಡ ರಮಣೀಯ.
ತುಂಬಾ ಹಿಂದೆ ಇದೆ ಹಾಡನ್ನು ಭಾವಗೀತೆಯ ರೂಪದಲ್ಲಿ ಕೇಳಿದ್ದೆ
ಚಿತ್ರಕ್ಕಾಗಿ ಹಾಡನ್ನು ಉಪಯೋಗಿಸಿದಾಗ ಹಾಡಿನ ನೈಜ ಭಾವಕ್ಕೆ ಮೋಸ ಮಾಡಿಲ್ಲ ಅನ್ನಿಸ್ತು.
ವಿಷಯ ಏನು ಅಂದ್ರೆ, ಹಾಡಿನ ಮದ್ಯೆ ಒಂದು ಪದ ಇದೆ. ಅಭಿಸಾರಿಕೆ ಅಂತ.

ಒಗಟು - ಬಿಡಿಸಿ!!!!!!!!

೧. ಆಕಾಶದಾಗೆ ಅಪ್ಪಣ್ಣ;
ಕೆಳಗೆ ಬಿದ್ದರೆ ದುಪ್ಪಣ್ಣ;
ಹುಲ್ಲಿನಲ್ಲಿ ಅಡಗಣ್ಣ;
ಮಾರ್ಕೆಟ್ನಲ್ಲಿ ಮಾರಣ್ಣ.

೨. ಅಕ್ಕ ಅಕ್ಕ ಬಾವಿ ನೋಡು;
ಬಾವಿಯೊಳಗೆ ನೀರು ನೋಡು;
ನೀರಿನೊಳಗೆ ಬಳ್ಳಿ ನೋಡು;
ಬಳ್ಳಿಗೊಂಡು ಹೊವು ನೋಡು.

(ಉತ್ತರ: ಸದ್ಯದಲ್ಲೇ)

ನನಗೆ ಬ್ರೌನ್ ಕಲರ್ ಯಾಕೆ ಇಷ್ಟ?

ನನ್ನ ಪ್ರೀತಿಯ ನಲ್ಲೆ...

ಕಾಡುವರು ಎಲ್ಲರು ನನ್ನನ್ನು ಇಂದು
ಏಕೆ ನಿನಗೆ ಆಸೆ ಬರಿ ಬ್ರೌನ್ ಕಲರ್ ಎಂದು...
ಏನೆಂದು ಉತ್ತರಿಸಲಿ ನಾನು ಅವರಿಗೆ ಈಗ
ನೀ ಹಾಕಿದೆಯಲ್ಲ ಆ ಒಂದು ಬಣ್ಣಕ್ಕೆ ಬಿಟ್ಟು ಬೀರೆಲ್ಲಕ್ಕು ಬೀಗ...
ಇಷ್ಟು ಹೇಳಿದರೂ ಅರ್ಥವಾಗಲಿಲ್ಲ ನನ್ನ ಮನದ ವೇದನೆ
ಬಾ ನನ್ನಲ್ಲಿ ನಿಂತು ನೀನೆ ಉತ್ತರಿಸು ಅವರಿಗೆ ಬೇಗನೆ...
ಹೌದು ನಿನಗಾದರು ಏಕೆ ಇಷ್ಟ ಆ ಬಣ್ಣ ?