ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡ ಭಾಷೆಯ ಕೆಲವು ಸ್ಥಿತ್ಯಂತರಗಳು

ಕನ್ನಡ ಭಾಷೆ ಹಲವು ಬದಲಾವಣೆಗಳನ್ನು ಕಂಡಿದೆ. ಎಲ್ಲರಿಗೂ ಗೊತ್ತಿರುವಂತೆ ವ->ಬ, ಪ->ಹ, ಮಧ್ಯದಲ್ಲಿ ರ್, ಲ್, ೞ್ ಕೆಲವು ವೇಳೆ ಳ್ ಗಳೆಲ್ಲ ಲೋಪವಾಗುವುದು ಕಾಣುತ್ತದೆ. ವ->ಬ ಆಗಿದ್ದು ತೀರಾ ಹೞೆಯ ವಿಚಾರ. ಕನ್ನಡದಲ್ಲಿ ವಕಾರದಿಂದ ಪ್ರಾರಂಭವಾಗುವ ಪದಗಳೇ ಇಲ್ಲವೇನೋ ಭ್ರಮೆಯಾಗುವಷ್ಟು ವಕಾರ ಬಕಾರವಾಗುವುದನ್ನು ಕಾಣುತ್ತೇವೆ.

ಬನದ ಬದುಕು - ಛಾಯಚಿತ್ರ ಪ್ರದರ್ಶನ

ಹೀಗೆ ವೇಗವಾಗಿ ಸಾಗುತಿರುವ ಬದುಕಿನಲ್ಲಿ ನಾವು ನಮ್ಮ ಸುತ್ತಲಿನ ಪ್ರಕೃತಿಯನ್ನು ಮರೆತಿದ್ದೇವೆಯೆ?, ಎನ್ನುವ ಪ್ರಶ್ನೆ ಒಮ್ಮೆಯಾದರೂ ಎಲ್ಲರಲ್ಲೂ ಮೂಡಿಯೇ ಇರುತ್ತೆ. ಆ ದೇವರು ಕೊಟ್ಟ, ತಂದೆ ತಾಯಿಗಿಂತಲೂ ಹೆಚ್ಚು ಆರೈಕೆ ಮಾಡಿ ನಮಗೆ ಉಸಿರಿತ್ತ ವನವನ್ನು ಕಡಿದು ನಾವು ನಮ್ಮದೇ ನಿರ್ಜೀವ ಕಾಂಕ್ರೀಟ್ ಕಾಡನ್ನು ಕಟ್ಟಿಕೊಳ್ಳುತಿದ್ದೇವೆ.

ಒಗಟುಗಳು!!!

೧. ಎಳೆಯ ವಯಸ್ನಾಗೆ ತಿಳಿಹಸಿರು
ಬೆಳೆದಾಗ ಅಚ್ಚ ಹಸಿರು
ಮುದಿವಯಸ್ನಾಗೆ ಕೆಂಬಣ್ಣ
ಎಣ್ಣೆಯಾಗ್ ಮುಳುಗೆದ್ದಾಗ ಕರಿಬಣ್ಣ.

೨. ಬೆಟ್ಟದ ಬೆಡಗಿ
ಉಪಾರಪ್ಪನ ಮಗಳು
ಚುರುಕು ಚಿಟಕಿ
ಹುಣುಸೂರ್ ಗೆಳತ್ ಜತೆಗೆ
ಉಂಡರೆ ಊಟ ರುಚಿಗೆ.

(ಉತ್ತರ - ಮುಂಬರುವ ಬರವಣಿಗೆಯಲ್ಲಿ)

ತ್ರಿಪದಿ ೨೭-೨೮-೨೯-೩೦

ಕಾಡುವವನು ನೀನೆ ನೀಡುವವನು ನೀನೆ
ಕಾಡಿದರೆ ಕಾಡು ನೀಡಿದರೆ ನೀಡು ನಾ ನಿನ್ನ
ದೂಡುವವನಲ್ಲ ಪ್ರಭುಶಂಕರ

ಹುಟ್ಟಿರುವೆ ಭೀಮನಮಾವಾಸ್ಯೆಯಂದು
ಇಟ್ಟಿರುವೆ ಮನದಲ್ಲಿ ಶಿವನ ಪೆಸರನ್ನು
ಕೊಟ್ಟಿರುವ ಎನ್ನ ಪೆಸರೆ ಪ್ರಭುಶಂಕರ

ಗುರಿಯಿಲ್ಲದ ಗುರು ಹೊಲ್ಲ ಇರಿಯುವ ನುಡಿ ಹೊಲ್ಲ
ಅರಿವಿಲ್ಲದ ಬಾಳು ಹೊಲ್ಲ ಜರಿಯುವ ನಡೆ ಹೊಲ್ಲ
ಹರನಿಲ್ಲದ ಗುಡಿ ಹೊಲ್ಲ ಪ್ರಭುಶಂಕರ

ಭಾರತಾಂಬೆಯ ವೀರ ಪುತ್ರರಿವರು, ಮುಂಬೈ ಮಾರಣಹೋಮದ ಹುತಾತ್ಮರಿವರು

ಮುಂಬೈ ಮಾರಣ ಹೋಮದಲ್ಲಿ , ನಮ್ಮ ನಾಳೆಗಳಿಗಾಗಿ, ತಾಯ್ನೆಲದ ರಕ್ಷಣೆಗಾಗಿ ಹುತಾತ್ಮರಾದ ವೀರ ಯೋಧರ ಹೆಸರಿದು. ಮಿಂಚಂಚೆಯಲ್ಲಿ ಬಂದಿದ್ದು. ನನಗೆ ಸಿಕ್ಕ ಮಾಚಿತಿಯಿಷ್ಟು, ಇನ್ನು ಯಾವುದಾದರು ಹೆಸರಿದ್ದರೆ ದಯವಿಟ್ಟು ಇಲ್ಲಿ ಸೇರಿಸಿ

ಭಾರತಾಂಬೆಯ ಈ ವೀರ ಪುತ್ರರು ಅಮರರಾಗಲಿ .

ಕಾನ್ಸ್ ಟೇಬಲ್ - ಜಯವಂತ್ ಪಾಟೀಲ್
ಕಾನ್ಸ್ ಟೇಬಲ್ - ಯೋಗೇಶ್ ಪಾಟೀಲ್

(ಇನ್ನೊಂದು) ಸೋಮಾರಿತನದ ಪರಮಾವಧಿ...

ಇದು ನಿಜವಾಗಿ ನಡೆದದ್ದು...

ನನ್ ಗೆಳೆಯ: ನಾನು ಯಾವಾಗಲೂ T-shirt‍'ಏ ಹಾಕೋದು...

ನಾನು: ಯಾಕೋ? ಎಲ್ಲಾ ತರಹದ ಬಟ್ಟೆ ಹಾಕ್ಕೊ ನಿನಗೆ ಚೆನ್ನಾಗಿ ಕಾಣತ್ತೆ...

ನನ್ ಗೆಳೆಯ: ಗುಂಡಿಯೆಲ್ಲಾ ಯಾರು ಹಾಕ್ತಾರೆ ಹೋಗೊ...ನಾನು ಸಕ್ಕತ್ ಸೋಮಾರಿ...ಅದಕ್ಕೆ ಬರೀ T-shirt ಹಾಕ್ಕೊಳೋದು !!!

--ಶ್ರೀ

ಬೆಂಗಳೂರು ಹಬ್ಬ ಬೇಕಾ?

ನಮ್ಮ ಕಡಲೆಕಾಯಿ ಪರಿಷೆ, ಕರಗ, ರಾಜ್ಯೋತ್ಸವ, ಕನ್ನಡ ಸಾಹಿತ್ಯ ಸಮ್ಮೇಳನ, ಅಣ್ಣಮ್ಮ ಜಾತ್ರೆ,ಸಾಹಿತ್ಯ ಪರಿಷತ್ತಿನ ಕಟ್ಟಡ ಮರು ನಿರ್ಮಾಣ, ಕನ್ನಡ ಪುಸ್ತಕಗಳ ಪ್ರಕಟಣೆ-ಬಿಡುಗಡೆ ಕಾರ್ಯಕ್ರಮ, ನಾಡು-ನುಡಿ ಕಟ್ಟಲು ಶ್ರಮಿಸಿದ ಮಹನೀಯರ ಜನ್ಮ ದಿನಾಚರಣೆ, ಸಾಹಿತಿ, ಕಲಾವಿದರ ಸ್ಮಾರಕ-ಜನ್ಮ ಶತಮಾನೋತ್ಸವ, ನಾಡಿನ ರಂಗಭೂಮಿ-ಜಾನಪದ-ಗ್ರಾಮೀಣ ಕಲೆ-ಕಲಾವಿದರ ಪೋಷಣೆ ಸರಿಯಾಗಿ ನೆ

ನೆಮ್ಮದಿ

ಆಫೀಸಿನಿಂದ ಮನೆಗೆ ಬಂದ ಮೇಲೆ ರಾತ್ರಿ ಬಹಳ ಸಮಯದವರೆಗೂ ನನ್ನ ವೆಬ್ ಸೈಟ್ ಕೆಲಸ ಮಾಡುತ್ತಾ ಇದ್ದೆ. ಕೊನೆಗೂ ಅದು ಒಂದು ಹಂತಕ್ಕೆ ತಲುಪಿದ್ದು ಮೊದಲ ಆವೃತ್ತಿ  ಬಿಡುಗಡೆಗೊಂಡಿದೆ. ಹಾಗಾಗಿ ಇವತ್ತು ಮನೆಗೆ ಬಂದಾಗ ಮಾಡಲು ಏನೂ ಕೆಲಸ ಇಲ್ಲ ಅಂತ ಅನ್ನಿಸುತ್ತಿತ್ತು, ಏನೋ ಕಳೆದು ಕೊಂಡಂತಹ ಅನುಭವ, ಜೊತೇಗೆ ನಂದೂ ಒಂದು ವೆಬ್ ಸೈಟ್ ಆಯ್ತು ಅಂತ ಖುಷಿನೂ ಆಗ್ತಿತ್ತು.

ಟಾಜ್, ಒಬೆರಾಯ್ ಹೋಟೆಲ್ ಗಳು, ನಾ. ಹೌಸ್, ಹಾಗೂ ಸಿ.ಎಸ್. ಟಿ, ಕಾಮಾ ಆ, ಗಳಲ್ಲಿ ಆದ ನರಮೇಧ, ಹಾಸ್ಟೇಜಸ್ ಗಳ ಆಕ್ರಂದನಗಳಿಂದಲೂ ..ನಿಷ್ಕ್ರಿಯತೆ ?

ಮುಂಬೈನ, ಟಾಜ್, ಒಬೆರಾಯ್ ಹೋಟೆಲ್ ಗಳು, ನಾರಿಮನ್ ಹೌಸ್, ಹಾಗೂ ಸಿ.ಎಸ್. ಟಿ, ಕಾಮಾ ಆಸ್ಪತ್ರೆ,ಗಳಲ್ಲಿ ಆದ ನರಮೇಧ, ಹಾಸ್ಟೇಜಸ್ ಗಳ ಆಕ್ರಂದನಗಳಿಂದಲೂ ಪಾಠಕಲಿಯದ ವ್ಯವಸ್ಥೆಯ-ರುವಾರಿಗಳ ಕಾರ್ಯವೈಖರಿಯಲ್ಲಿ, ಇನ್ನೂ ಏಕೆ ಈ ನಿಷ್ಕ್ರಿಯತೆ ?