ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಿಮ್ಮಲ್ಲಿ ಒಬ್ಬ ಸಂಶೋಧಕನಿದ್ದಾನೆಯೇ?

ಸ್ನೇಹಿತರೆ,

ನಿಮ್ಮಲ್ಲಿ ಒಬ್ಬ ಸಂಶೋಧಕನಿದ್ದಾನೆಯೇ? ಈ ಪ್ರಶ್ನೆ ಹಾಕಿಕೊಂಡರೇ ಎಲ್ಲರಲ್ಲೂ ಇದ್ದಾನೆ. ಮಕ್ಕಳಲ್ಲಿ ಕ್ರಿಯಾಶೀಲನಾಗಿರುವ ಇವನು ನಂತರ ಸ್ವಲ್ಪ ಮಂಕಾಗುತ್ತಾನೆ. ಆದರೆ ನೀವು ಕಂಡು ಕೊಂಡ ಕೆಲವು ವಿಷಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದಲ್ಲ. ಹಾಗಾದರೆ ಇನ್ನೇಕೆ ತಡ ಶುರು ಮಾಡಿ......

ಪಾರ್ಶ್ವ (ಒಂದು ಮಗ್ಗುಲು)

ಕಲಸಿ ಹೋಯಿತೇನು
ನೀರಿನೊಳಗೆ ರವಿಕಿರಣ
ಬೇರಾಗಿಸಲು ಸಾಧ್ಯವೇ?
ಮನದಾಳದ ಭಾವನೆಗಳೂ
ಹೀಗೇ ಕಲಸಿ ಹೋಗಿವೆ
ನಾನೂ ಬೇರಾಗಿಸಲಾರೆ
ಫಳಗುಡುವ ನೀರಿನೊಳಗೆ
ಅಸಂಖ್ಯ ಅಲೆಗಳು
ಸೂರ್ಯನನ್ನೇ ಹೊತ್ತೊಯ್ಯುತಿದೆ
ಎಲ್ಲಿಗೋ ಕಾಣದೂರಿಗೆ.
ಒಳಸರಿದ ಮನದೊಳಗೆ
ಸಾವಿರಾರು ಗೆರೆಗಳು
ಮುಖವನ್ನೇ ಮುಚ್ಚಿವೆ
ನಿನಗೂ ಕಾಣದಂತೆ.

ಮೇಲೇರಿ ಬಂದ ಸೂರ್ಯ
ಹೆಗಲ ಮೇಲೆ ಕೈಹಾಕಿ

virtual ಮುಂತಾದುವುಗಳಿಗೆ ಕನ್ನಡದಲ್ಲಿ ಏನೆಂದು ಬಳಸಬಹುದು?

Virtual, Virtualization, ಹಾಗು paravirtualization ಪದಗಳಿಗೆ ಕನ್ನಡದಲ್ಲಿ ಏನೆಂದು ಬಳಸಬಹುದು?

ಅಥವ ಹಾಗೆ ಕನ್ನಡೀಕರಿಸಿದರೆ ಹೇಗೆ (ಉದಾ: virtual ಗೆ 'ವರ್ಚುವಲ್')? ಸಂಪದಿಗರೆ ನಿಮ್ಮ ಅಭಿಪ್ರಾಯ ತಿಳಿಸಿ...

ಬಳಕೆ: ವರ್ಚುವಲ್ ಗಣಕ

 

ಸಂಸ್ಕೃತದ ಈ ಒಗಟುಗಳನ್ನು ಬಿಡಿಸಿ (ಅರ್ಥ ಕೊಟ್ಟಿದೆ)

ಅಪದೋ ದೂರಗಾಮೀ ಚ ಸಾಕ್ಷರೋ ನ ಚ ಪಂಡಿತಃ
ಅಮುಖಃ ಸ್ಫುಟವಕ್ತಾ ಚ ಯೋ ಜಾನಾತಿ ಸ ಪಂಡಿತಃ||

ಅರ್ಥ: ಕಾಲಿಲ್ಲದಿದ್ದರೂ ದೂರ ಹೋಗುತ್ತಾನೆ. ಅಕ್ಷರಗಳು ಇದ್ದರೂ ಪಂಡಿತನಲ್ಲ. ಮುಖವಿಲ್ಲ ಆದರೂ ಸುಲಲಿತವಾಗಿ ಮಾತಾಡುತ್ತಾನೆ. ಇವನು ಯಾರೆಂದು ತಿಳಿದವನೇ ಪಂಡಿತ.

ಏಕಾಕ್ಷೀ ಹಿ ನ ವಾಯಸಃ ದ್ವಿಜಿಹ್ವಾ ನ ಚ ಸರ್ಪಿಣೀ
ಪಂಚಭರ್ತ್ರೀ ನ ಪಾಂಚಾಲೀ ಯೋ ಜಾನಾತಿ ಸ ಪಂಡಿತಃ||

ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ

ನಮ್ಮ ತಾಯಿಯ ಅಜ್ಜಿಯ ಊರು ಈ ಕಣಕಟ್ಟೆ. ಅಲ್ಲಿನ ದೇವಿ ದುಗ್ಗಮ್ಮನನ್ನು ನೋಡಲು ಹೊರಟಿದ್ದಾದರೂ ನಮ್ಮ ಮುತ್ತಜ್ಜಿಯ ಊರು , ಅಲ್ಲಿನ ನಮ್ಮ ಅಜ್ಜಿಯ ಮನೆ,ಎಲ್ಲವನ್ನೂ ನೋಡುವ ಆಸೆಯೇ ನಮ್ಮಲ್ಲಿ ಹೆಚ್ಚಾಗಿದ್ದು ಸುಳ್ಳಲ್ಲ.

ಸಾಧ್ಯವಾದರೆ ಒಮ್ಮೆ

ಸಾಧ್ಯವಾದರೆ ಒಮ್ಮೆ
ತಂಗಾಳಿಯ ಹಿಡಿದು
ಜೇಬಿನೊಳಗೆ ತುಂಬಬೇಕು
ಕೆಂಜ್ವಾಲೆಯನು ಹಿಡಿದು
ಡಬ್ಬಿಯೊಳಗೆ ತುಂಬಿಡಬೇಕು
ಮಗುವಿನ ನಗೆಯಂತೆ
ಮತ್ತೊಮ್ಮೆ ನಗಬೇಕು
ಹೀಗೇ ಇನ್ನೂ ಹಲವಾರು
ಕೈಲಾಗದವನ ಚಡಪಡಿಕೆ

ಸಾಧ್ಯವಾದರೆ ಒಮ್ಮೆ
ಎಲ್ಲೆರೆದುರು ನಿಂತು
ಕಂಠ ಹರಿವನಕ ಕೂಗಬೇಕು
ಅಣಕಿಸಿದವನ ಮುಖಕ್ಕೆ
ಕಪ್ಪು ಮಸಿ ಹಚ್ಚಬೇಕು
ಚುಚ್ಚುನುಡಿಯಾಡಿದವನಿಗೆ

ಲಷ್ಕರೆ ಮುಖಂಡ ಹಫೀಜ್ ಪಾಕಿಸ್ತಾನದ ಗೌರವಾನ್ವಿತ ವ್ಯಕ್ತಿ

ಇಂದಿನ ಪತ್ರಿಕೆಯಲ್ಲಿ ಪ್ರಕಟವಾದ ಪಾಕ್ ಗೆ ಕಠೀಣ ಸಂದೇಶ ಓದಿ ನಿಜಕ್ಕೂ ಗೊಂದಲವಾಯಿತು. ಮೊನ್ನೆ ಮುಂಬಯಿಯಲ್ಲಿ ರಕ್ತಪಾತ ನಡೆಸಿದ ಲಷ್ಕರೆ ಮುಖಂಡ ಹಫೀಜ್ ಪಾಕಿಸ್ತಾನದ ಗೌರವಾನ್ವಿತ ವ್ಯಕ್ತಿ. ಅವನ ಜೀವಕ್ಕೂ ಅಪಾಯ ಇದೆಯಂತೆ.

ಅಲ್ಲಿ ಎಲ್ಲಿ ಸೇರುತ್ತದೆ?

ಅಲ್ಲಿ ಎಲ್ಲಿ ಸೇರುತ್ತದೆ?
ಹಾಗೆನ್ದರೇನು ಸ್ವಾಮೀ....ಅಲ್ಲೆಲ್ಲೋ ಸೇರುತ್ತೆ ನನ್ಗೇನ್ ಗೊತ್ತು..ಅನ್ಬೇಡಿ, ಯಾಕೆನ್ದರೆ ಅಲ್ಲಿ ಎಲ್ಲಾ ಕಡೆ ಬೇಕಾಗುತ್ತೆ ಕಾಣ್ರಿ...ಇದು ಏಳನೇ ವಿಭಕ್ತಿ ಪ್ರತ್ಯಯ ಪ್ರಕರಣ.
 
ಈವೊತ್ತಿನ್ ರೂಢಿಯನ್ತೆ ಏಳನೇ ವಿಭಕ್ತಿ ನಲ್ಲಿ ಅಲ್ಲವೇ..ಇನ್ನೆಲ್ಲಿ ಅಲ್ಲಿ..ಛೇ..ಬಿಡಿ ಸ್ವಾಮೀ..ವಿಷ್ಯಕ್ಕೆ ಬರ್ತೇನೆ.

ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ

ಮುಂಬೈ ನಲ್ಲಿ ಕಳೆದ ವಾರ ನಡೆದ ಭಯೋತ್ಪಾದನೆ ಇಡಿ ದೇಶವನ್ನೇ ತಲ್ಲಣ ಗೊಳಿಸಿದೆ.  ಭಗವಂತನ ದಯೆಯಿಂದ ಅಂತ ಘಟನೆ ಮುಂದೆ ದೇಶದಲ್ಲಿ ಎಲ್ಲೂ ಸಂಭವಿಸದಿರಲಿ ಎಂದು ಪ್ರಾರ್ಥಿಸೋಣ.