ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕುವೆಂಪು ವಿರುದ್ಧ ದೇವುಡು "ಪಿತೂರಿ" ಮತ್ತು ಅಂತರ್ಜಾತಿ ವಿವಾಹ

ಡಾ. ಪ್ರಭುಶಂಕರರ "ಹೀಗಿದ್ದರು ಕುವೆಂಪು" ಲೇಖನದಲ್ಲಿನ ಈ ಕೆಳಗಿನ ಸಂದರ್ಭಕ್ಕೆ ಪೀಠಿಕೆ ಅಥವ ವಿವರಣೆ ಬೇಕಾಗಿಲ್ಲ, ಅಲ್ಲವೆ?

1967 ರ ಅಕ್ಟೋಬರ್. ಆ ವೇಳೆಗೆ ನಾನು ಕುವೆಂಪುರವರ ಮನೆಯವರಲ್ಲಿ ಒಬ್ಬನಾಗಿದ್ದೆ. ಒಂದು ಸಂಜೆ ನಾನು, ಕೆಲವೇ ವಾರಗಳಲ್ಲಿ ನನ್ನ ಪತ್ನಿಯಾಗಲಿದ್ದ ಡಾ. ಶಾಂತಾ ಅವರೊಡನೆ ಕುವೆಂಪು ಅವರ ಮನೆಗೆ ಹೋದೆ.

ಹುಳುಗಳು ಸಾರ್, ನಾವು ಹುಳುಗಳು

ಹುಳುಗಳು ಸಾರ್, ನಾವು ಹುಳುಗಳು
(ತುಳಿಸಿಕೊ೦ಡವರು, ಶೋಷಿತರು)

ನಾವಿದ್ದರೆಷ್ಟು, ಎದ್ದರೆಷ್ಟು, ಬಿದ್ದರೆಷ್ಟು?
ಯಾರೊದ್ದರೇನು ನಮಗೇನು?
ಯಾರಿಗೇನಾಗಬೇಕು?
ಸತ್ತು ಹೂತರೂ ಮರುಗುವುದಿಲ್ಲ.
ಕರಗುವುದಿಲ್ಲ ಅವರ ಎದೆ,
ಹುಳುಗಳ೦ತೆ ನಾವು.

ಇರುವೆ ಸತ್ತರೆ, ಜಿರಲೆ ಸತ್ತರೆ
ನಾಯಿ ಸತ್ತರೆ ನಿಮಗೇನಾದರೂ
ಅನಿಸುವುದೇ
ಬಹುಶಃ ಏನೂ ಅನಿಸುವುದಿಲ್ಲ.
ಹೀಗೆಯೇ ನಾವು.

ಚೆಲುವು ಇರುವುದೆಲ್ಲಿ?

ಎಲ್ಲಿಹುದು ಸಾಜದಲಿ
ಚೆಲುವಾದ್ದು ಅಲ್ಲದುದು?
ಒಲುಮೆ ಎಲ್ಲಿಹುದದುವೆ
ಚೆಲುವೆಂದು ತೋರುವುದು!

ಮೂಲ ಸಂಸ್ಕೃತ ಶ್ಲೋಕ (ಹಿತೋಪದೇಶದ ಸುಹೃದ್ಭೇದದಿಂದ):

ಕಿಮಪ್ಯಸ್ತಿ ಸ್ವಭಾವೇನ ಕಿಂ ಸುಂದರಮಸುಂದರಮ್
ಯದೇವ ರೋಚತೇ ಯಸ್ಮೈ ತದ್ಭವೇತ್ತಸ್ಯ ಸುಂದರಮ್

-ಹಂಸಾನಂದಿ

 

ಭೂತವಿಲ್ಲ..ಪಿಶಾಚಿ ಇಲ್ಲ..ಇದ್ದರೂ..ಇರಬಹುದೇ?!

ವಿಚಿತ್ರವಾದ ಕನಸು..ಅದು ನಿಜವಾಗ್ಲೂ ಕನಸೋ ಅಲ್ಲವೋ ಅನ್ನೋ ಅನುಮಾನ ನನಗಿದ್ದೇ ಇದೆ.
ಎಂದಿನಂತೆ ಮಕ್ಕಳನ್ನ ಮಲಗಿಸಿ ಯಾವುದೋ ಪುಸ್ತಕದ ಎರಡು ಪುಟಗಳನ್ನ ಓದಿ ನಿದ್ದೆ ಮಾಡಿದ್ದೆ. ಯಾವುದೋ ಪುಸ್ತಕ ಅಂದ ಮಾತ್ರಕ್ಕೆ ಕೈಗೆ ಸಿಕ್ಕಿದ್ದು ಅಂತ ನೀವು ತಿಳ್ಕೋಬಾರದು.ಈ ವಿಷಯದಲ್ಲಿ ನಾನು ತುಂಬಾ ಕಟ್ಟುನಿಟ್ಟು. ಶುಭ ಯೋಚನೆ ಶುಭ ನಿರೀಕ್ಷೆಗಳನ್ನೇ ತಲೆದಿಂಬಾಗಿಸಿ;ಬೆಳಗ್ಗೆ ಉತ್ಸಹದಿಂದ ಏಳುವಿರಿ ಅನ್ನೋ ಮಾತಿನ ಮೇಲಿರೋ ವಿಶ್ವಾಸದಿಂದಲೋ ಅಥವಾ ಯಂಡಮೂರಿಯಿಂದ ಸ್ಟೀವನ್ ಕಿಂಗ್ ತನಕ ಪಬ್ಲಿಷ್ ಆಗಿರುವ ಭೂತದ ಕಥೆಗಳನ್ನೆಲ್ಲ ಅವ್ಯಾಹತವಾಗಿ ಓದಿ ನೈಟ್ಮೇರ್ ತಾಳಲಾಗದ ನನ್ನ ಸುಪ್ತ ಮನಸ್ಸು ಕೊಟ್ಟ ಗುಪ್ತ ಸೂಚನೆಯಿಂದಲೋ ಅಂತೂ ಈಗ.... ಮಲಗೊಕೆ ಮುಂಚೆ ನನ್ನ ಮಸ್ತಕಕ್ಕೆ ಹಿತವಾಗುವಂತಹ ಪುಸ್ತಕಗಳನ್ನೇ ಓದೋದು.

ಹಾಯಾಗಿ ನಿದ್ದೆ ಮಾಡ್ತಾ ಇರಬೇಕಾದ್ರೆ ಏನೋ ಸದ್ದಾಗಿ ಎಚ್ಚರವಾದಂತಾಯ್ತು. ನನ್ನ ಮಂಚದ ಕಾಲ ಹತ್ತಿರ ಚೌಕಳಿ ಶರಟು ಧರಿಸಿದ ಯಾವನೋ ಒಬ್ಬ ನಿಂತು ಚಪ್ಪಾಳೆ ತಟ್ಟಿ ನನ್ನನ್ನೆಬ್ಬಿಸುತ್ತಾ ಏನೋ ಹೇಳ್ತಾ ಇದಾನೆ. ನಮ್ಮ ಸೂಟ್ ಕೇಸು ಬಟ್ಟೆ ಬರೆ ಹರಡಿದ್ದ ಇನ್ನೊಂದು ರೂಮಿನ ಮಂಚದ ಕಡೆ ಕೈತೋರಿಸಿ ತಾನು ಮಲಗೋ ಜಾಗ ಅಂತ ಅಸಹನೆ ತೋರಿಸ್ತಾ ಕಂಪ್ಲೇಂಟ್ ಮಾಡ್ತಾ ಇದಾನೆ ಅಂತ ನನಗೆ ಗೊತ್ತಾಯಿತು ಅಥವ ಅನ್ನಿಸಿತು.ಆತ ಮಂಚದ ಪಕ್ಕದ ಗೋಡೆಗೆ ಆತುಕೊಂಡು ಬರೀ ಪುಸ್ತಕಗಳನ್ನ ಇಟ್ಟಿದ್ದ ಕಪಾಟಿನ ಪಕ್ಕ ಬಂದ ಹಾಗೆ ಏನೋ ಸರಪರ ಸದ್ದುಮಾಡಿ ನನ್ನ ಎಬ್ಬಿಸಲು ಪ್ರಯತ್ನಿಸಿದ ಅನ್ನೋದ್ರಲ್ಲಿ ನನ್ನ ಕನಸು ಮುಗಿದಿತ್ತು.

ಮರು ದಿನ ಎಲ್ಲೋ ಹೊರ ಹೊರಟಾಗ ನನ್ನ ಸುಪುತ್ರ ಪುಸ್ತಕದ ಕಪಾಟಿನ ಕೆಳಗಿನ ಶಲ್ಫಿಂದ ಅವನ jacketನ ತೆಗೆದು ಹಾಕಿಕೊಂಡ.ಕನಸಲ್ಲಿ ಕೇಳಿದ ಸರಪರ ಶಬ್ದಕ್ಕೂ ಪಾಲಿಸ್ಟರ್ ಜೇಕೆಟ್ ಉಜ್ಜಿದಾಗ ಮಾಡೋ ಸದ್ದಿಗೂ ತಾಳೆ ಹಾಕಿ ನನಗೆ ಅಚ್ಚರಿಯಾಯ್ತು.ಜೇಕೆಟ್ ಅಲ್ಲಿದೆ ಅಂತ್ಲೇ ನನಗೆ ಗೊತ್ತಿರಲಿಲ್ಲ.ನಿಜವಾಗ್ಲೂ ನಾ ಕಂಡಿದ್ದು ಕನಸೇನಾ ಅಥವಾ....ಇಲ್ಲ ಏನೋ ಲಾಜಿಕಲ್ ವಿವರಣೆ ಇದ್ದೇ ಇರತ್ತೆ ಅಂದ್ಕೊಂಡೆ. ಪತಿರಾಯರಿಗೆ ಹೇಳುವ ಚಪಲವಾದರೂ ...ಆಮೇಲೆ ನನಗೆಂದೇ ಅವರು ರಾತ್ರಿ ಹೊತ್ತು ಪ್ರೀತಿಯಿಂದ 'ಆಯೇಗ..ಆಯೇಗ' ಅಂತ ಹಾಡೇ ಹಾಡುವ ಜೋಗುಳದ ಕಲ್ಪನೆಯಿಂದ ಸುಮ್ಮನಾದೆ.

ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?

ಹೇಳಿದ್ದ ಕೇಳಲೊಂದು ಶಬುದವಾಯಿತ್ತಯ್ಯ
ತೋರಿದ್ದ ಹಿಡಿಯಲೊಂದು ರೂಪಾಯಿತ್ತಯ್ಯ
ನಚ್ಚಿನ ಮಚ್ಚಿಕೆ ಅದು ನಿಶ್ಚಿಂತವೆಂತಪ್ಪುದು
ಸಿಮ್ಮಲಿಗೆಯ ಚೆನ್ನರಾಮಲಿಂಗನೆಂಬನ್ನಕ್ಕ
 
ಚಂದಿಮರಸನ ವಚನ ಇದು. ಈತ ಬಸವಣ್ಣನವರ ಹಿರಿಯ ಸಮಕಾಲೀನ. ಕಾಲ, ಕ್ರಿಶ. ಸುಮಾರು ೧೧೬೦. ಕೃಷ್ಣಾ ನದಿಯ ತೀರದ ಚಿಮ್ಮಲಿಗೆ ಇವನ ಊರು. ಹುಟ್ಟಿನಿಂದ ಬ್ರಾಹ್ಮಣನಾದ ಚಂದಿಮರಸ ನಿಗುಣಯೋಗಿ ಎಂಬ ಗುರುವಿನಿಂದ ದೀಕ್ಷೆ ಪಡೆದು ಶರಣನಾದ. ಸಿಮ್ಮಲಿಗೆಯ ಚೆನ್ನರಾಮ ಇವನ ಅಂಕಿತ. ಇವನ ೧೫೭ ವಚನಗಳು ದೊರೆತಿವೆ.

ಗಾದೆಗಳು!!!

ಖಾಲಿ ಇರುವ ಜಾಗಗಳನ್ನು ಪದಗಳಿಂದ ತುಂಬಿ ಗಾದೆಗಳನ್ನು ಪೂರ್ತಿ ಮಾಡಿ!

೧. ಆರು ದೊಸೆ ಕೊಟ್ಟರೆ ಅತ್ತೇ ಕಡೆ,----------------------------------------.
೨. ಧರ್ಮಕ್ಕೆ ದಟ್ಟಿ ಕೊಟ್ಟರೆ,----------------------------------------------.
೩. ಅಂಬಲಿ ಕುಡಿಯುವರಿಗೆ,-----------------------------------------------.
೪. ನೆಲಕ್ಕೆ ಬಿದ್ದರೂ,-----------------------------------------------------.
೫. ಪಾಪಿ ಸಮುದ್ರಕ್ಕೆ ಬಿದ್ದರೂ,--------------------------------------------.

ಬೆಂಗಳೂರು ಆಸ್ಟ್ರೋನಾಮಿಕಲ್ ಸೊಸೈಟಿಯ ಆಕಾಶ ವೀಕ್ಷ್ಹಣೆ ಕಾರ್ಯಕ್ರಮ

http://www.bas.org.in/Home/events/2008/06/12/observation-session-hosahalli-sunday-6th-dec-2008

ಈ ಶನಿವಾರ ಬೆಂಗಳೂರು ಆಸ್ಟ್ರೊನಾಮಿಕಲ್ ಸೊಸೈಟಿ (ಬೆಂಗಳೂರಿನ ಆಮೆಚ್ಯುರ್ ಆಸ್ಟ್ರಾನಾಮಿ ಕ್ಲಬ್ಬುಗಳಲ್ಲಿ ಒಂದು) ಯವರು ಒಂದು ಆಕಾಶ ವೀಕ್ಷಣೆ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದಾರೆ.

ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶಕ್ಕೆ ಕರೆ

ಕನ್ನಡ ನಾಡು ಇಂದು ಅತ್ಯಂತ ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ. ಒಂದು ಕಡೆ ತೀವ್ರವಾದ ಜಾಗತಿಕ ಆರ್ಥಿಕ ಹಿಂಜರಿತದಿಂದ ನಮ್ಮ ಬದುಕಿನ ಮೇಲಾಗಿರುವ ಕೆಟ್ಟ ಪರಿಣಾಮಗಳು. ಇನ್ನೊಂದೆಡೆ ಭಯೋತ್ಪಾದಕರು ಅಮಾಯಕ ನಾಗರೀಕರನ್ನು ಅಮಾನವೀಯವಾಗಿ ಕೊಲ್ಲುತ್ತಾ ದೇಶದ ಭದ್ರತೆಗೇ ಒಡ್ಡುತ್ತಿರುವ ಸವಾಲುಗಳು.