ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಭಯೋತ್ಪಾದಕರಿಗೆ ಜೈ

ತಡೀರಿ, ತಡೀರೀ.. ನೀವು ಕೈಗೆ ಸಿಕ್ಕಿದ್ದನ್ನು ಈ ಲೇಖನದ ಮೇಲೆ ಎಸೆದರೆ ಹಾಳಾಗುವುದು ನಿಮ್ಮದೇ ಕಂಪ್ಯೂಟರ್. ನಾನು ರಾಜಕಾರಣಿಗಳ ತರಹ ನಿಮ್ಮಿಂದ ಸೇಫ್ ದೂರದಲ್ಲಿದ್ದೇನೆ. :)

ನಿಮ್ಮೆಲ್ಲರ ಕಣ್ಣು ಇತ್ಲಾಗೆ ತಿರುಗಬೇಕು. ಕೆಲವರ ಕಣ್ಣು ಕೆಂಪಾಗಬೇಕು. ಅಂತಹ ಸೆನ್ಸೇಶನಲ್ ಹೆಡ್ಡಿಂಗ್ ಬೇಕಿತ್ತು ನನಗೆ. ಅದಕ್ಕೇ..

ಪೊೞ್ತೆಡೆಗಳಱಿಪ ಶಬ್ದಂಗಳ ಕೊನೆಯ ಹ್ರಸ್ವಸ್ವರಂಗಳ್ ದುರ್ಬಲಂಗಳ್

ಹೊತ್ತು ಮತ್ತು ಸ್ಥಳ (ಎಡೆ) ಸೂಚಿಸುವ ಶಬ್ದಗಳ ಕೊನೆಯ ಹ್ರಸ್ವಸ್ವರಗಳು ದುರ್ಬಲಗಳು. ಅಂದರೆ ಕಾಲ ಮತ್ತು ಸ್ಥಳಸೂಚಕ ಶಬ್ದಗಳ ಕೊನೆಯ ಹ್ರಸ್ವ ಸ್ವರಗಳು ಸಂಧಿಯಾಗುವಾಗ ಲೋಪವಾಗುತ್ತವೆ.

ಸಾವಿರ ಕನಸುಗಳ ನಗರ

ಸಾವಿರ ಕನಸುಗಳ ನಗರ
ನೋಡಲು ಬಲು ಸುಂದರ
ಕಾಣುವಾಗಲೇ ಕುಸಿಯಿತು ನೂರಾರು ಕನಸುಗಳ ಗೋಪುರ
ಕಟ್ಟಿಹೋದರು ಎಲಬುಗಳ ಹಂದಿರ

ಮರುಗಟ್ಟಿವೆ ಬಿಸಿ ನೆತ್ತರನದಿಗಳು ಹರೆಯಲಾರದೆ
ಮರುಕಹುಟ್ಟಿದೆ ಮುಗ್ಧ ಹಸುಳೆಗಳ ಮೇಲೆ ದುಃಖ ತಡೆಯಲಾರದೆ
ತಣ್ಣಗಾಗಿವೆ ನರನಾಡಿಗಳು ಇಂದು
ಕೊನೆಯಿಲ್ಲವೆ ಇದಕ್ಕೆ ಎಂದೆಂದೂ

ಮಿತಿಯಿದೆ ಸಾಗರಕೆ ಮಿತಿಯಿಲ್ಲ ಸಹನೆಗೆ

ಹೀಗೆ ಕೆಲವು ಖಾಸಗೀ ಹನಿಗಳು

೧) ಬ್ಯಾಡಗಿ ಕಾಯಿ ನೋಡಲು ಕೆಂಪು

ತಿನ್ನಲು ಖಾರ...

ನಿನ್ನ ತುಟಿಯೂ ಕೆಂಪು...

ರುಚಿ ಮಧುರಾತಿ ಮಧುರ .

೨) ಮುತ್ತಿಡುವಾಗ ಚುಚ್ಚಬಹುದೆಂದು
ತೆಗೆಯ ಹೊರಟೆ ಮೀಸೆ
ತುಟಿಯ ಸಿಹಿ ಜತೆ ಅದರ
ಕಚಗುಳಿಯೂ ಇರ್ಲಿ ಅವಳ ಆಶೆ......

೩) ಚುಂಬನಕ್ಕೆ ಬೇಕೆಬೇಕು ಪಾರ್ಟನರ್
ಆದ್ರೆ ..ಓರ್ವ ಆಕ್ಟೀವ್ ಇನ್ನೊಬ್ಬ ಸ್ಲೀಪಿಂಗ್

ಹುಳುಗಳು ಸಾರ್, ನಾವು ಹುಳುಗಳು

ಹುಳುಗಳು ಸಾರ್, ನಾವು ಹುಳುಗಳು
(ತುಳಿಸಿಕೊ೦ಡವರು, ಶೋಷಿತರು)

ನಾವಿದ್ದರೆಷ್ಟು, ಎದ್ದರೆಷ್ಟು, ಬಿದ್ದರೆಷ್ಟು?
ಯಾರೊದ್ದರೇನು ನಮಗೇನು?
ಯಾರಿಗೇನಾಗಬೇಕು?
ಸತ್ತು ಹೂತರೂ ಮರುಗುವುದಿಲ್ಲ.
ಕರಗುವುದಿಲ್ಲ ಅವರ ಎದೆ,
ಹುಳುಗಳ೦ತೆ ನಾವು.

ಇರುವೆ ಸತ್ತರೆ, ಜಿರಲೆ ಸತ್ತರೆ
ನಾಯಿ ಸತ್ತರೆ ನಿಮಗೇನಾದರೂ
ಅನಿಸುವುದೇ
ಬಹುಶಃ ಏನೂ ಅನಿಸುವುದಿಲ್ಲ.
ಹೀಗೆಯೇ ನಾವು.

ಇತಿಹಾಸದಿಂದ ಪಾಠ ಕಲಿಯದೇ..ಭವಿಷ್ಯದಲ್ಲಿ ನಾವು ಇತಿಹಾಸ ನಿರ್ಮಿಸಬಲ್ಲೆವೇ?

ತಿಂಗಳಿಗೊಮ್ಮೆ ಸಸೂತ್ರವಾಗಿ ಪಗಾರ ಎಣಿಸುವ ನನ್ನಂತಹ ಮಂದಿಯ ದೃಷ್ಟಿಯಲ್ಲಿ ‘ಅಭಿವೃದ್ಧಿ’ ಎಂಬುದರ ಪರಿಭಾಷೆ ಬೇರೆಯೇ ಇದೆ. ಪರಿಸರ ಪ್ರೇಮಿಗಳ ನಿಲುವು ಈ ಕುರಿತಂತೆ ಸಾಮಾನ್ಯರಿಗೆ ಅರಗಿಸಿಕೊಳ್ಳುವ ರೀತಿಯಲ್ಲಿ ಇಲ್ಲ. ವರ್ಷಪೂರ್ತಿ ಹೊಲದಲ್ಲಿ ಬೆವರು ಹರಿಸಿ ದುಡಿಯುವ, ವರ್ಷದ ಕೊನೆಗೆ ಮಾನ್ಸೂನ್ ಗಳೊಂದಿಗೆ ಜೂಜಾಡುತ್ತ, ಕೃಷಿ ಸಂಸ್ಕೃತಿಯ ಈ ನಾಡಿನಲ್ಲಿ ಬದುಕುವ ನೇಗಿಲಯೋಗಿಯ ದೃಷ್ಟಿಯಲ್ಲಿ ‘ಅಭಿವೃದ್ಧಿ’ ಪದದ ವ್ಯಾಖ್ಯೆ ಬೇರೆಯೇ. ಹಾಗೆಯೇ ನಮ್ಮ ಪಿತ್ಥ ಏರಿಸುವ ವಿತ್ತಮಂತ್ರಿಗಳು, ಅರ್ಥಶಾಸ್ತ್ರಜ್ಞರ ದೃಷ್ಟಿಯಲ್ಲಿ ಅಭಿವೃದ್ಧಿ ಎಂಬುದೇ ವಿಚಿತ್ರ ಕಲ್ಪನೆ!

ಇತ್ತೀಚೆಗೆ ಗುರುಗಳಾದ ಬಕ್ಕೇಮನೆ ನಾಗೇಶ್ ಹೆಗಡೆ ತಮ್ಮ ಲೇಖನದಲ್ಲಿ ಒಂದೆಡೆ ಸೂಚ್ಯವಾದ ಪ್ರಶ್ನೆ ಕೇಳಿದ್ದರು. ನಮ್ಮ ನಾಡಿನ ಅರಣ್ಯದಲ್ಲಿ ಯಾವುದೋ ಮೂಲೆಯಲ್ಲಿ ಒಂದು ಗಿಡ ಹುಟ್ಟಿ ಬೆಳೆದರೆ ಅದರಿಂದ ರಾಷ್ಟ್ರೀಯ ವರಮಾನಕ್ಕೆ ಏನೂ ಕೊಡುಗೆ ಇಲ್ಲ. ಅದನ್ನು ಕತ್ತರಿಸಿ, ಮಾರುಕಟ್ಟೆಗೆ ಸಾಗಿಸಿ, ಗಿರಾಕಿಗೆ ಮಾರಿ ಹಣ ಪಡೆದರೆ ಅದು ರಾಷ್ಟ್ರದ ಸಂಪತ್ತಿಗೆ ಜೋಡಣೆಯಾಗುತ್ತದೆ!

ಹಾಗೆಯೇ ನದಿಯೊಂದು ತನ್ನ ಪಾಡಿಗೆ ತಾನು ಪರಿಶುದ್ಧವಾಗಿ ಹರಿದುಕೊಂಡಿದ್ದರೆ, ಜನಗಳ, ಜಾನುವಾರುಗಳ ಬಾಯಾರಿಕೆ ತೀರಿಸುತ್ತಿದ್ದರೆ ರಾಷ್ಟ್ರೀಯ ಆದಾಯಕ್ಕೆ ಅದು ಸೇರ್ಪಡೆಯಾಗಲಾರದು. ಹಾಗೆ ಹರಿಯುತ್ತಿರುವ ನದಿಗೆ ಅಡ್ಡಲಾಗಿ ಆಣೆಕಟ್ಟು ಕಟ್ಟಿ, ವಿದ್ಯುತ್ ಉತ್ಪಾದನೆಗೆ ಅಣಿಗೊಳಿಸಿ; ಸಾಲದ್ದಕ್ಕೆ ಆ ನೀರನ್ನು ಕೈಗಾರಿಕೆಗಳು ಸೇರಿದಂತೆ ವಿವಿಧೋದ್ದೇಶ ಯೋಜನೆಗಳಿಗೆ ಬಳಸುವಂತೆ ಯೋಜನೆ ರೂಪಿಸಿದರೆ ಆ ಲಾಭ ಮಾತ್ರ ‘ಅಭಿವೃದ್ಧಿ’ ದರಕ್ಕೆ ಸೇರ್ಪಡೆಯಾಗುತ್ತದೆ. ಹಾಗಾದರೆ ಎಲ್ಲವನ್ನೂ ಕೇವಲ ಹಣದ ಮಾನದಂಡದಲ್ಲಿ ಅಳೆಯುವಂತಾದರೆ, ಮೌಲ್ಯ ಗುರುತಿಸುವಂತಾದರೆ ಮಾತ್ರ ಅದು ‘ಹೌದು’, ಇಲ್ಲದಿದ್ದರೆ ‘ವೇಸ್ಟ್’ ಎಂದು ತೀರ್ಮಾನಿಸುವುದೇ..?

ಸಹಕರಿಸಿ - ಶಾರ್ಜದಲ್ಲಿ ಕೆಲಸ

ಪ್ರೀತಿಯ ಗೆಳೆಯರೆ,

ಮಧ್ಯಾಹ್ನ ಒಂದು ಕನ್ಸಲ್ಟೆಂಟ್ಸ್ ಮುಖಾಂತರ ಶಾರ್ಜಾದಲ್ಲಿನ ಡಿ.ಎ. ಡೆಸ್ಕ್ ಎಂಬ ಕಂಪನಿಯಲ್ಲಿ ನನಗೊಂದು ಕೆಲಸದ ಅವಕಾಶ ಬಂದಿದೆ. ಈ ಮಂಗಳವಾರ ಆದರ ಸಂದರ್ಶನ ಇದ್ದು, ನನಗೆ ತಿಳಿದವರು ಕೆಳಗಿನ ಪ್ರಶ್ನೆಗಳಿಗೆ ಸಮಾಧಾನ ನೀಡುತ್ತೀರಾ....... ಅಥವಾ ನಿಮ್ಮ ಸ್ನೇಹಿತರು ಯಾರಾದರು ಕೆಲಸ ಮಾಡುತ್ತಿದ್ದರೆ ಅವರ ಈ-ಅಂಚೆ ವಿಳಾಸವನ್ನು ತಿಳಿಸಿ.

ಹುಬ್ಬಳ್ಳಿ ಯ ಬಾಯಲ್ಲಿ ನೀರು ತರಿಸುವ ತಿನಿಸುಗಳು

ಈ ಹಾಳು ಬೆಂಗಳೂರಿಗೆ ಬಂದು ನಾಳೆಯ ಜನೇವರಿಗೆ ಎರಡು ವರ್ಷ ಆದರೇನು ಹುಬ್ಬಳ್ಳಿ ಇನ್ಣು ಮರೆತಿಲ್ಲ....

ಮುಖ್ಯವಾಗಿ ನೆನಪಾಗುವುದು ದುರಗದ ಬ್ಯೆಲಿನ ತಿನಿಸುಗಳು... ಆ ಗಿರ್ ಮಿಟ್ , ಆ ಮಿರ್ಚಿ , ಆ ಭಜಿ ಒಂದೇ ಎರಡೆ...

ಕೊನೆಗೂ ಕ್ಷಮೆ ಕೇಳಿದ ಕೇರಳದ ಮುಖ್ಯ ಮಂತ್ರಿ ಆಚ್ಯುತಾನಂದನ್

ಲಿಂಕ್ ನೋಡಿ, ಲಿಂಕ್ ನೋಡಿ , ಲಿಂಕ್ ನೋಡಿ, ಲಿಂಕ್ ನೋಡಿ, ಲಿಂಕ್ ನೋಡಿ
http://www.expressindia.com/latest-news/Kerala-CM-Achuthanandan-finally-says-sorry/393728/