ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇಂದು ಓದಿದ ವಚನ:ಗೆಲುವೋ ಸೋಲೋ ಚಿಂತೆ ಬೇಡ:ಸಗರದ ಬೊಮ್ಮಣ್ಣ

ಗೆಲ್ಲ ಸೋಲ ಬಲ್ಲವರಿಗೇಕೆ
ಅದು ಬೆಳ್ಳರ ಗುಣ
ಪಥವೆಲ್ಲರಲಿ ನಿಹಿತನಾಗಿ
ಅತಿಶಯದ ವಿಷಯದಲ್ಲಿ ಗತನಾಗದೆ
ಸರ್ವವನರಿತು
ಗತಮಯಕ್ಕೆ ಅತೀತನಾಗು
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ
'ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ' ಎಂಬುದು ಸಗರದ ಬೊಮ್ಮಣ್ಣ ಎಂಬ ವಚನಕಾರನ ಅಂಕಿತನಾಮ. ಗುಲ್ಬರ್ಗಾ ಜಿಲ್ಲೆಯ ಸಗರದವನು ಈತ. ಕಾಲ ಸುಮಾರು ಕ್ರಿಶ. ೧೧೬೦. ಈತನ ಹೆಂಡತಿ ಶಿವದೇವಿ. ಈತ ಗಣಾಚಾರ ಪ್ರವೃತ್ತಿಯವನು (ಇಂದಿನ ಅರ್ಥದ ಮಿಲಿಟೆಂಟ್) ಎಂಬ ಮಾತಿದೆ. ಆತ ವಿಶೇಷವಾಗಿ ಜೈನ ವಿರೋಧಿಯಾಗಿದ್ದ ಎಂಬ ಮಾತಿದೆ.

ಮುಂಬೈ : ಪ್ರಶ್ನೆಗಳು?

ಮೊನ್ನೆ ನಡೆದ ದಾರುಣಹೋಮ ನಿಜವಾಗಿಯೂ ನಡೀತೆ? ಯಾತಕ್ಕಾಗಿ ನಡೀತು? ಮುಂಬೈ ಮ್ಯಾಲೆ ಆತಂಕವಾದಿಗಳ ದಾಳಿ ನನ್ನಲ್ಲಿ ಹುಟ್ಟಿಸಿದ ಪ್ರಶ್ನೆಗಳು. ನಿಮಗೆ ಉತ್ತರ ಗೊತ್ತಿದ್ದರೆ ಹೇಳಿ, ಅಥವಾ ನಿಮ್ಮ ಪ್ರಶ್ನೆಗಳನ್ನೂ ಸೇರಿಸಿ. ಈ ಭೀಕರ ಕ್ರಿತ್ಯ ಏಕೆ ನಡೀತು ಅನ್ನೊದಾದ್ರೂ ತಿಳಿಲಿ.

ಕೇಳದು ಪ್ರೀತಿ ಯಾವ ವರವನು

ನಿಸ್ತೇಜಿತ ಮೊಬೈಲ್ ನನ್ನ ನೋಡಿ ನಕ್ಕಿತು
ನನಗಾಗಿ ಬಂದ ಸಂದೇಶವ ತೊರುತ್ತ ಹೇಳಿತು
ಕಾಯುವಿಕೆಯು ಕಾವೇರುವುದರಿಂದ
ಬಾರದು ನಿನ್ನಾಕೆಯ ಸಂದೇಶ
ಇಗೋ
ನಿನ್ನ ಮನದೆನ್ನೆಯ ಮನದ ಇಂಗಿತ
ತುಂಬಿ ನಿಂತಿದೆ ಆಕೆಯ ಹ್ರುದಯ
ಹೇಳಲು ತವಕಿಸಿದೆ ಭಾವನೆಯ ಬಗೆ ಬಗೆಯ
ಮುಖ ತಿರುಗಿಸಿ ನಿಂತಿದೆ ಜಾಲ
ಒಡೆಯಾ
ತೀರಿಸುವೆಯಾ ಆಕೆಯ ಈ ಒಂದು ಆಸೆಯಾ

ಚಿಪ್ಸ್ ಮತ್ತು ಸಿಗರೇಟು

ಅರ್ಪಣೆ - ಮಹೇಶರ ಸಿಗರೇಟು ಕವನ ಮತ್ತು ಅಲ್ಲೊಬ್ಬರ ಪ್ರತಿಕ್ರಿಯೆಗೆ :-)

ನಿನ್ನೆ ನನ್ನ ಮಗ ಪ್ರಿಂಗಲ್ಸ್ ಚಿಪ್ಸ್ ದಬ್ಬದ ಬಳಿ ನಿಂತು ಹೇಳಿದ, "ಒಂದೇ ಒಂದು ತೆಗೆದುಕೊಳ್ಳುತ್ತೇನೆ".
ನಾನು ಆ ಚಿಪ್ಸಿನ ಜಾಹಿರಾತಿನಲ್ಲಿ ಹೇಳುವಂತೆ ಹೇಳಿದೆ, "ಒಂದಕ್ಕೇ ನೀನು ನಿಲ್ಲಿಸುವುದಿಲ್ಲ, ನಿಲ್ಲಿಸಲಾರೆ!"

ಹಿರಿಯರ ಆಸೆ

http://parentswish.com/site01/big.html
ಪ್ರಿಯ ಸ್ನೇಹಿತರೇ,
ಈ ವೀಡಿಯೋ ಕ್ಲಿಪಿಂಗ್‍ನಿಂದ ನಾವು ಕಲಿಯೋದು ಇದೆ ಎಂದು ನನಗನ್ನಿಸಿತು. ಇದನ್ನು ನನಗೆ ಈ ಮೈಲ್‍ನಲ್ಲಿ ನನ್ನ ಮಗಳು ಕಳಿಸಿದಳು. ಮನಮುಟ್ಟುವಂತಿತ್ತು. ಅದಕ್ಕೆ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಯಿತು. ಕೇಳಿ, ನೋಡಿ, ತಮ್ಮ ಅಭಿಪ್ರಾಯ ತಿಳಿಸುತ್ತೀರಿ ಎಂದು ನಂಬಲೇ?

ನಿಮ್ಮ ಚಿತ್ರದಲ್ಲಿ "Rules of Thirds"ನ ಪ್ರಯೋಗ

ಚಿಕ್ಕಂದಿನಲ್ಲಿ ಸಾಮಾನ್ಯವಾಗಿ ಚಿತ್ರ ಬಿಡಿಸದವರ ಸಂಖ್ಯೆ ತೀರಾ ಕಡಿಮೆ. ಬಾಲಮಂಗಳದಲ್ಲಿ ಬರುತ್ತಿದ್ದ ಪಾತ್ರಗಳು ನನ್ನ ನೆಚ್ಚಿನ ವಿಷಯವಾಗಿದ್ದರೂ, ನನ್ನ ಕಲ್ಪನೆಯ ಪ್ರೇರಿತ ಚಿತ್ರ ಸಾಮಾನ್ಯವಾಗಿ ಮನೆಯದ್ದಾಗಿತ್ತು. ಖಾಲಿ ಹಾಳೆಯ ಮಧ್ಯದಲ್ಲಿ ಚೌಕಾಕಾರದ ಒಂದು ಆಕೃತಿ, ಮಧ್ಯದಲ್ಲಿ ತೆರೆದ ಬಾಗಿಲು, ಅದರ ಅಕ್ಕ ಪಕ್ಕದಲ್ಲಿ ಕಿಟಕಿ, ಅದರ ಸರಳು, ಹೆಂಚಿನದ್ದೊಂದು ಸೂರು, ಎರಡು ಮೆಟ್ಟಿಲು ನನ್ನ ಮನೆ ಇಲ್ಲಿಗೆ ಸಂಪೂರ್ಣ. ಆದರೆ ಇದೇ ಚಿತ್ರವನ್ನು ಎಷ್ಟು ಬಾರಿ ಬಿಡಿಸುವುದು, ಮನೆಯ ಪಕ್ಕದಲ್ಲಿ ನದಿಯೊಂದು ಇದ್ದರೆ ಎಷ್ಟು ಚೆನ್ನ. ಆದರೆ ಮಧ್ಯದಲ್ಲಿ ಮನೆ ಬಿಡಿಸಿದರೆ ನದಿಗೆ ಜಾಗ ಎಲ್ಲಿ? ಮನೆಯನ್ನು ಕೊಂಚ ಬಲಕ್ಕೆ ಸರಿಸಿದರೆ ಪಕ್ಕದಲ್ಲೊಂದು ನದಿ ಬಿಡಿಸಬಹುದು. ಬರೀ ನದಿ ಇದ್ದರೆ ಸಾಕೇ,ಹಿನ್ನೆಲೆಯಲ್ಲಿ ಗುಡ್ಡ ಬೆಟ್ಟ ಇದ್ದರೆ? ಮತ್ತೆ ಜಾಗದ ಅಭಾವ, ಮನೆಯನ್ನು ಸ್ವಲ್ಪ ಕೆಳಕ್ಕೆ ತಂದು, ಹಿನ್ನೆಲೆಯಲ್ಲಿ ಗುಡ್ಡ ಬರೆದು, ಪಕ್ಕದಲ್ಲಿ ಅಂಕುಡೊಂಕಾಗಿ ಹರಿಯುವ ನದಿಯ ಚಿತ್ರ ಬರೆದರೆ? ಇವನ್ನೆಲ್ಲಾ ಸೇರಿಸಿ ಚಿತ್ರ ಬರೆದಾಗ ಮಧ್ಯದಲ್ಲಿ ಒಂಟಿಯಾಗಿ ಕೂತ ಹಳೇಯ ಚಿತ್ರಕ್ಕಿಂತ, ಇದು ಚೆನ್ನಾಗಿ ಕಾಣಿಸಿತು.

ಕಾರಣ, ನನಗೆ ತಿಳಿಯದಂತೆಯೇ ನಾನಿಲ್ಲಿ ಚಿತ್ರ ಸಂಯೋಜನೆಯ ಒಂದು ನಿಯಮವನ್ನು ಪಾಲಿಸಿದ್ದಕ್ಕೆ ಮತ್ತು ಮೂಲ ವಿಷಯಕ್ಕೆ ಪೂರಕವಾದ ಇನ್ನಿತರ ವಿಷಯವನ್ನು ಬಳಸಿದ್ದರಿಂದ. ಈ ನಿಯಮದಂತೆ ಚಿತ್ರವನ್ನು ೨ ಅಡ್ಡ ಗೆರೆ, ೨ ಉದ್ದ ಗೆರೆ ಎಳೆದು ಸರಿಯಾದ ೯ ಭಾಗ ಮಾಡಿದರೆ, ಸಿಗುವ ಗೆರೆಗಳೊಂದಿಗೆ ಅಥವಾ ಅದು ಕೂಡುವ ಸ್ಥಳದಲ್ಲಿ ನಮ್ಮ ವಿಷಯವನ್ನು ಇರಿಸಬೇಕು. ಚಿತ್ರ ಪರಿಣತರ ಸಂಶೋಧನೆಯಿಂದ ಕಂಡು ಬಂದ ವಿಷಯವೇನೆಂದರೆ ಚಿತ್ರವನ್ನು ನೋಡುವವರ ದೃಷ್ಟಿ ಸ್ವಾಭಾವಿಕವಾಗಿ ಈ ೪ ಬಿಂದುವಿನ ಮೇಲೆ ಬೀಳುವುದು. ಆದ್ದರಿಂದ ನಮ್ಮ ಮೂಲ ವಿಷಯವನ್ನು ಫ್ರೇಮಿನ ಮಧ್ಯದಲ್ಲಿಡದೆ ಈ ನಾಲ್ಕು ಬಿಂದುವಿನಲ್ಲಿ ಒಂದು ಕಡೆ ಇರಿಸಬೇಕು, ಆಗ ವೀಕ್ಷಕರ ಮೇಲೆ ನಮ್ಮ ಚಿತ್ರ ಹೆಚ್ಚಿನ ಪರಿಣಾಮ ಬೀರುತ್ತದೆ.

ದಿನಕ್ಕೆ ಎಷ್ಟು ಸಿಗರೇಟು ಸೇದುತ್ತೀರ?,ಯಾಕೆ ಸೇದುತ್ತೀರ?,ನೀವು ಸಿಗರೇಟು ಬಿಡಲು ಎಷ್ಟು ಸಾರಿ ಪ್ರಯತ್ನಿಸಿದ್ದೀರಾ?

ದಿನಕ್ಕೆ ಎಷ್ಟು ಸಿಗರೇಟು ಸೇದುತ್ತೀರ?

ಯಾಕೆ ಸೇದುತ್ತೀರ?

ನೀವು ಸಿಗರೇಟು ಬಿಡಲು ಎಷ್ಟು ಸಾರಿ ಪ್ರಯತ್ನಿಸಿದ್ದೀರಾ?

ನಿಮ್ಮ ಸಿಗರೇಟು ಸಹವಾಸ ಹೇಗೆ ಶುರು ಆಯ್ತು? 

ನಾನು ನನ್ನ ಕಥೆ ಮೊದಲು ಹೇಳುತ್ತೇನೆ......


ಕಣ್ಣು-ಕುರುಡು ಹುಡುಗಿ (ಒಂದು ಚಿಕ್ಕ ಕಥೆ )....

 

 

 

ಒಂದು ಊರಲ್ಲಿ ಒಬ್ಬ ಕುರುಡು ಹುಡುಗಿ ಇದ್ದಳು, ಅವಳು ಅವಳನ್ನೇ ತಾನು ಕುರುಡಿ ಆಗಿರುವ ಕಾರಣ ತನ್ನನ್ನೇ ದ್ವೆಶಿಸುತ್ತಿದ್ದಳು,

ಅವಳು ಪ್ರತಿಯೊಬ್ಬರನ್ನು,ಅವಳ ಪ್ರಿಯತಮನ ಹೊರತಾಗಿ ದ್ವೆಶಿಸುತ್ತಿದ್ದಳು, ಒಂದು ದಿನ ಅವಳು ಅವಳ ಪ್ರಿಯತಮನಿಗೆ , ಒಂದು ವೇಳೆ ಅವನು ಅವಳಿಗೆ ಕಣ್ಣು ಮರಳಿ ಬರಲು ಸಹಾಯ ಮಾಡಿದರೆ/ದೃಷ್ಟಿ ಬಂದು ಜಗತ್ತನ್ನು ನೋಡಲು ಸಹಾಯ ಮಾಡಿದರೆ , ಅವನನ್ನು ಮದುವೆಯಾಗುವುದಾಗಿ ಹೇಳಿದಳು.

ಸ್ಥಿತಪ್ರಜ್ಞ

ಒಬ್ಬ ವಯಸ್ಸಾದ ರೈತ ತನ್ನ ಬೆಳೆಗೋಸ್ಕರ ಹಲವಾರು ವರ್ಷಗಳು ದುಡಿದಿದ್ದ. ಒ೦ದು ದಿನ ಅವನ ಕುದುರೆ ಓಡಿ ಹೋಯಿತು. ಈ ಸುದ್ದಿ ತಿಳಿದ ನೆರೆಯವರು ಅವನನ್ನು ನೋಡಲು ಬ೦ದರು.
"ಎ೦ಥಾ ದುರದೃಷ್ಟ". ಅವರು ಕನಿಕರಿಸಿದರು.
"ನೋಡೋಣ" ರೈತ ಉತ್ತರಿಸಿದ.
ಮರುದಿನ ಬೆಳಗ್ಗೆ ಅವನ ಕುದುರೆ ಹಿ೦ತಿರುಗಿತು. ತನ್ನ ಜೊತೆಗೆ ಇತರ ಮೂರು ಕುದುರೆಗಳನ್ನೂ ತ೦ದಿತ್ತು.

ಕಾಡುಹಂದಿ ಮತ್ತು ಮೈಕಲ್ ಜಾಕ್ಸನ್!

ಕಾಡು ಹಂದಿ ಮತ್ತು ಮೈಕಲ್ ಜಾಕ್ಸನ್!

ನಾನು ಈ ಲೇಖನಕ್ಕೆ ನೀಡಿದ ಶೀರ್ಷಿಕೆ ತಮಾಷೆಯಾಗಿದೆ ಅಲ್ವೆ? ನೀವು ಯೋಚನೆ ಮಾಡ್ತಿರಬಹುದು. ನಮ್ಮೂರ ಕಾಡು ಹಂದಿಗೂ ಅಂತಾರಾಷ್ಟ್ರೀಯ ಖ್ಯಾತಿಯ ಪಾಪ್ ಗಾಯಕ ಮೈಕಲ್ ಜಾಕ್ಸನ್ ಅವರಿಗೂ ಅದ್ಯಾವ ಬಾದರಾಯಣ ಸಂಬಂಧ ಇದ್ದೀತು? ಇದೆ.

ಅದು ಹೀಗೆ...

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಈ ಕಾಡು ಹಂದಿಗಳ (ಉ.ಕ. ಭಾಗದಲ್ಲಿ ಮಿಕ, ಅರ್ಥಾತ್ ಕೋರೆ ಇರುವ ಭಯಂಕರ ದೈತ್ಯ ಗಾತ್ರದ ಹಂದಿ) ಉಪಟಳ ವಿಪರೀತ. ನೇಗಿಲಯೋಗಿಯ ಬಿತ್ತನೆಗೆ, ಬೆಳೆಗೆ ಹಾಗು ಹೊಲದ ಬದುವಿಗೆ ಹಾಕಲಾದ ತಂತಿಯ ಬೇಲಿಗೆ ಈ ಮಿಕಗಳಿಂದ ಸಂಭವಿಸುವ ಹಾನಿ ಅವರ ನಿದ್ದೆ ಗೆಡಿಸಿದೆ. ಹಾಗಾಗಿ ಅವರು ಇವುಗಳ ನಿಯಂತ್ರಣಕ್ಕೆ ತಮ್ಮದೇ ಆದ ಉಪಾಯಗಳನ್ನು ಕಂಡುಕೊಂಡಿದ್ದಾರೆ. ಆ ಅನುಭವದಲ್ಲಿ ಅಮೃತತ್ವವಿದೆ.