ಹುಬ್ಬಳ್ಳಿ ಯ ಬಾಯಲ್ಲಿ ನೀರು ತರಿಸುವ ತಿನಿಸುಗಳು
ಈ ಹಾಳು ಬೆಂಗಳೂರಿಗೆ ಬಂದು ನಾಳೆಯ ಜನೇವರಿಗೆ ಎರಡು ವರ್ಷ ಆದರೇನು ಹುಬ್ಬಳ್ಳಿ ಇನ್ಣು ಮರೆತಿಲ್ಲ....
ಮುಖ್ಯವಾಗಿ ನೆನಪಾಗುವುದು ದುರಗದ ಬ್ಯೆಲಿನ ತಿನಿಸುಗಳು... ಆ ಗಿರ್ ಮಿಟ್ , ಆ ಮಿರ್ಚಿ , ಆ ಭಜಿ ಒಂದೇ ಎರಡೆ...
ಹೊರಗಿನಿಂದ ಬಂದವರು ತಂದ ಕಚೋರಿ, ಭೇಲ್, ಸಮೋಸಾ ಗಳು...... ಸಂಜೆ ಆದರೆ ಸಾಕು ಅಲ್ಲಿ ಹೊಸಲೋಕ ತೆಗೆದುಕೊಳ್ಳುತ್ತದೆ. ಮುಗಿ ಬೇಳುವ ಗಿರಾಕಿಗಳು , ಕುಶಲ ಅಂಗಡಿಯವರು, ಸುತ್ತಲಿನ ಪರಿಸರ ಹೇಗೆ ಇರಲಿ ಬಾಯಲ್ಲಿ ನೀರು
ಸೋರುವುದಂತೂ ನಿಜ ಅ ರುಚಿಗೆ....
ಇನ್ನು ಹೊಟೆಲ್ ಗಳ ವಿಶಯಕ್ಕೆ ಬಂದರೆ ಬಹಳ ಹಳೆಯ ಹೋಟೆಲ್ ಆದರೂ ಬ್ರಾಡ್ವೇದ ಕಾಮತ್ ಹೋಟೆಲ್ ತನ್ನ ರುಚಿ ಇನ್ನು
ಕಾಯ್ದುಕೊಂಡಿದೆ. ಇಲ್ಲಿ ಸಿಗುವ ಮಸಾಲೆ ದೋಸೆ ಯ ರುಚಿ ಅಪ್ರತಿಮ.....
ಅಂತೆಯೇ ಮತ್ತೊಂದು ಹಳೆಯ ಹೊಟೆಲ್ ಕೋರ್ಟ್ ಆವರಣದ ಕ್ಯಾಂಟಿನಿನ ಪೂರಿ ಭಾಜಿ... ಈ ಭಾಜಿಗೆ ಒಂಥರಾ ಸಿಹಿ ಮಿಶ್ರಿತ
ಖಾರದ ರುಚಿ ಖರೇ ಹೇಳಬೇಕು ಅಂದ್ರ ಯಾವ ಪಿಜ್ಜ , ಬರ್ಗರ್ ಈ ಭಾಜಿ ರುಚಿ ಮುಂದ ಮೂಲಿಸಮನ....
ಹಾಗೆ ನೋಡಿದ್ರ ಜಗತ್ತು ಬಹಳ ಬದಲಾಗೇದ ಆದ್ರ ಹುಬ್ಬಳ್ಳಿಯ ತಿನಿಸುಗಳು ಅದೇ ರುಚಿ ಕಾಯ್ದುಕೊಂಡು ಬಂದಿವೆ.....
ನನ್ನದೊಂದು ವಿನಂತಿ ಅದ ಹುಬ್ಬಳ್ಳಿ ಗೆ ಹೋದವರು ಹಂಗ್ ಬರಬ್ಯಾಡ್ರಿ.....
ನಾಲಿಗಿಗೆ ರುಚಿ ತೋರಿಸಿ ಬರ್ರಿ..... ಮತ್ತ ಮತ್ತ ಹುಬ್ಬಳ್ಳಿ ನಿಮಗ ಕರಿಸ್ಕೊತದ......
Comments
ಉ: ಹುಬ್ಬಳ್ಳಿ ಯ ಬಾಯಲ್ಲಿ ನೀರು ತರಿಸುವ ತಿನಿಸುಗಳು
In reply to ಉ: ಹುಬ್ಬಳ್ಳಿ ಯ ಬಾಯಲ್ಲಿ ನೀರು ತರಿಸುವ ತಿನಿಸುಗಳು by ASHOKKUMAR
ಉ: ಹುಬ್ಬಳ್ಳಿ ಯ ಬಾಯಲ್ಲಿ ನೀರು ತರಿಸುವ ತಿನಿಸುಗಳು