ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನನ್ನ ಬಗ್ಗೆ....

ಮತ್ತೆ ಮತ್ತೆ ಹುಟ್ಟುವ ಅಪರೂಪದ ಕನಸುಗಳಿಗೆ ಪುಟ್ಟ ಗೂಡು ಕಟ್ಟಿ ಕೊಡುವ
ಅತ್ತು ಅತ್ತು ಕಾಡುವ ನೆನಪಾಗುವ ನೆನಪುಗಳಿಗೆ ನಗುವ ನೆರಳ ತೋರಿಸುವ
ಕೈಯ ಹಿಡಿಧು ಮನಸು ಬಿಗಿದು ಸುಂದರ ಬದುಕಿಗೆ ಎಂದಿಗೂ ಜೊತೆಯಾಗುವ
ಮನದ ಮನೆಯೊಳಗೆ ಪ್ರೀತಿ ಹುಟ್ಟಿಸಿ ನಗುತ ನಗಿಸುವ ಗೆಳೆಯ .....!!!
- ಗುರು

ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು

ಮತಾಂತರದ ಬಗ್ಗೆ ಈಗಾಗಲೇ ಸುಧೀರ್ಘ ಚರ್ಚೆಗಳು ನಡೆದಿವೆ. ನನ್ನ ಅನಿಸಿಕೆಗಳು ಮತಾಂತರದ ವಿರುದ್ಧವಾಗಿ ಅಥವಾ ಪರವಾಗಿ ಇಲ್ಲ. ಇದೊಂತರ ನಮ್ಮನ್ನ ನಾವು ಕನ್ನಡಿಯಲ್ಲಿ ನೋಡಿಕೊಂಡು, ಸರಿಯಿಲ್ಲದ ಕಡೆ ತಿದ್ದಿಕೊಂಡು ಹೋಗುವ ಹಾಗೆ. ನಾನು ಗಮನಿಸಿದಂತಹ ಸಂಗತಿಗಳನ್ನು ಹೇಳಲು ಇಷ್ಟಪಡುತ್ತೇನೆ ಅಥವಾ ಪ್ರಯತ್ನಪಟ್ಟಿದ್ದೇನೆ.

ಯೆರೆ ಗೌಡ - 100 ರಣಜಿ ಪಂದ್ಯಗಳ ಗೌರವ

ಯೆರೆ ಗೌಡ ಈಗ ೧೦೦ ರಣಜಿ ಪಂದ್ಯಗಳ ಸರದಾರ. ಕೆಳೆದೆರಡು ಋತುಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಈಗ ಮತ್ತೆ ರೈಲ್ವೇಸ್-ಗೆ ಮರಳಿದ್ದಾರೆ. ಉದ್ಯೋಗ ನೀಡಿರುವ ರೈಲ್ವೇಸ್ ಬಾಸ್-ಗಳು ಈ ಬಾರಿ ರೈಲ್ವೇಸ್ ಪರವಾಗಿಯೇ ಆಡಬೇಕೆಂದು ತಾಕೀತು ಮಾಡಿರುವಾಗ ಬೇರೆ ದಾರಿ ಕಾಣದೆ ಯೆರೆ ಕರ್ನಾಟಕವನ್ನು ಬಿಟ್ಟು ಮತ್ತೆ ರೈಲ್ವೇಸ್ ಕಡೆ ತೆರಳಿದ್ದಾರೆ.

ಮಕ್ಕಳ ಹಾಡು

ನನ್ನ ಮಗಳಿಗೆ ಇಂಗ್ಲೀಷ್ ರೈಮ್ಸ್  ಅನ್ನು  ಕನ್ನಡಕ್ಕೆ   ಅನುವಾದಿಸಿ ಹೇಳ್ಬೇಕು ಆಗ ಹೊಳೆದ ಕೆಲವು ಸಾಲುಗಳು

ಪುಟ್ಟಿ ಜೊತೆ ಇತ್ತೊಂದು ಕುರಿಮರಿ
ಅದರ ಆಟ ಏನ್ಹೇಳ್ತೀತಿರಿ ರೀ

ಬಣ್ಣ ಅದರದು ಬಿಳುಪು
ಕಣ್ಣ್ಣು ಫಳ ಫಳ ಹೊಳಪು

ಎಲ್ಲಿಗೋದ್ರೂ ಪುಟ್ಟಿ , ಅವಳ ಬೆನ್ನು ಹತ್ತಿ
ಮರಿ ಹೋಗ್ತಿತ್ತು ಬಿಟ್ಟು ತನ್ನ ಹಟ್ಟಿ

ಕೇರಳ ರಾಜ್ಯದ ಮುಖ್ಯಮಂತ್ರಿಯವರ ಹೇಳಿಕೆ

ಕೇರಳದ ಮುಖ್ಯಮಂತ್ರಿಗಳು "ಸಂದೀಪ್ ಉಣ್ಣಿಕೃಷ್ಣನ್ ಮೆ| ಆಗಿದ್ದರಿಂದ ಅವರ ಮನೆಗೆ ಹೋಗಿದ್ದೆ. ಅವರು ಮೆ| ಆಗಿರದಿದ್ದರೆ ಸಂದೀಪ್ ಉಣ್ಣಿಕೃಷ್ಣನ್ ನವರ ತಂದೆಯ ಮನೆಗೆ ನಾಯಿ ಕೂಡಾ ಹೋಗುತ್ತಿರಲಿಲ್ಲಾ." ಎಂದು ಹೇಳಿದ್ದರು ಎಂದು ವಾರ್ತೆಚ್ಯಾನೆಲ್ ಗಳು ಮತಕ್ಕೆ ಹಾಕಿದ್ದಾರೆ. ಇದು ಸರಿಯೇ?

ಉಗ್ರವಾದ - ಇದೊಂದು ಹಳೇ ಉದ್ಯೋಗ

ಈ ಉಗ್ರವಾದ ಎಂಬೋದು ಇಂದು ನಿನ್ನೆಯದಲ್ಲ. ಹಿಂದಿನಿಂದಲೂ ಇದು ಇದ್ದೇ ಇದೆ. ಮನುಷ್ಯ ಇದರ ನೆರಳಲ್ಲಿ ಹಿಂದೆಯೂ ಬದುಕುತ್ತಿದ್ದ, ಈಗಲೂ ಬದುಕುತ್ತಿದ್ದಾನೆ. ನಮ್ಮ ಹಿಂದಿನ ಪುರಾಣ ಪ್ರಕರಣಗಳನ್ನೇ ನೋಡಿದರೆ ಇದು ಸುಲಭ ವೇದ್ಯ.

ಕಳಚಿಬೀಳುವ ಮುಖವಾಡ

ಹಿಂದೂ ಉಗ್ರ - ಮೀಡಿಯಾದ ಮತ್ತೊಂದು ಮ್ಯಾಜಿಕಲ್ ಪದ.... ಇಷ್ಟು ವರ್ಷ ಎಂಥಾದ್ದೆ ಉಗ್ರವಾದ ಈ ದೇಶ ಕಂಡಿದ್ರು ಸಹಿಸಿದ್ರು ಸಹ "ಕೆಲವು ಹಿಂದೂಗಳ ಮಾಡಿದ ಅತ್ಯಂತ ಹೇಯ ಕೃತ್ಯ" (೫ ಮುಗ್ದ/ಅಮಾಯಕ ವೋಟು ಬ್ಯಾಂಕ್ ನ ಹತ್ಯೆ) ಹಿಂದೂ ವಿರೋಧಿ ಸಮಾಜದವರಿಗೆ ನುಂಗಲಾರದ ತುತ್ತಾಗಿದೆ.