ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಧೃವ

ಇದನ್ನು ಮೂರನೇ ತರಗತಿಯಲ್ಲಿ ಓದಿದ ನೆನಪು

"ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ಆದರೆ ಸಾಧಿಸುವ ಛಲ ಮನುಷ್ಯನಿಗೆ ಬೇಕು, ತಾನು ಹಿಡಿದ ಕಾರ್ಯದಲ್ಲಿ ಧೃಢವಾದ ನಂಬಿಕೆ, ಅಚಲವಾದ ಮನಸ್ಸು, ನಿರಂತರ ಪರಿಶ್ರಮದಿಂದ ಭಗವಂತನನ್ನು ಕಾಣಬಲ್ಲೆ"

ಎಂದು ನಾರದರು ಹಸುಳೆ ಧೃವನಿಗೆ ಉಪದೇಶಿಸಿದರು.

ಕಲಿಕೆಗೆಲ್ಲಿದೆ ಕೊನೆ...

ನಾನೆಲ್ಲ ಕಲಿತೆಯೆನ್ನಲು ಏನಿದೆ ಲೆಕ್ಕ?
ಕಲಿತದ್ದು ಸಾಸಿವೆಯಷ್ಟು, ಕಲಿಯಬೇಕಾದದ್ದು ಬೆಟ್ಟದಷ್ಟು
ಹೀಗಿರುವಾಗ ಕಲಿಕೆಗೆಲ್ಲಿದೆ ಕೊನೆ?

ದಿನ ದಿನವೂ ಕ್ಷಣ ಕ್ಷಣವೂ ಹೊಸತನ್ನು
ಕಲಿಯಬೇಕೆಂಬ ಹಂಬಲ ಕಾಡುತಿರಲು
ಕಲಿಕೆಗೆಲ್ಲಿದೆ ಕೊನೆ?

ನಿನ್ನೆ ಕಲಿತಿದು ಇಂದಿಗೆ ಹಳಸಲು
ಹೊಸತಿಗೆ ತಲೆಬಾಗು ಇಂದು
ಹೀಗೆ ದಿನ ದಿನವೂ ಹೊಸತಿರಲು ಕಲಿಕೆಗೆಲ್ಲಿದೆ ಕೊನೆ?

"ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ"

ರೋಮ್‌ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು ನುಡಿಸುತ್ತಿದ್ದನಂತೆ. ಈಗ ಆ ನೀರೋ ಯಾರಿರಬಹುದು? ಈ ಪ್ರಶ್ನೆಗೆ ಉತ್ತರ ಹುಯಡುಕಲು ಯಾರೂ ತಡಕಾಡುವುದಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್‌ ಅಂತ ಸುಲಭವಾಗಿ ಹೇಳಿಬಿಡ್ತಾರೆ.

ಸಂತೋಷಕ್ಕೆ............. (ಗೀತಾ) ಜಪಾನಿ ವೇದಿಕೆಯಲ್ಲಿ

ನಮ್ಮ ಎಲ್ಲರ ಮೆಚ್ಚಿನ ನಟ ನಿರ್ದೇಶಕ ಶಂಕ್ರಣ್ಣನ ಹಾಡು ಜಪಾನಿನ ಸಂತೋಷ ರಸಸಂಜೆಯಲ್ಲಿ ನೀವು ಕೇಳಿ,

"ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?" - ಭಾಗ ೫

ನಮಸ್ಕಾರ,
ನನ್ನ ಪ್ರಕಾರ ಎಲ್ಲರೂ ನನ್ನ ರೀತಿ "ಹೆಂಡತಿಯ ಜೊತೆಗಿನ ಭಿನ್ನಾಭಿಪ್ರಾಯಗಳನ್ನು" ಹಂಚಿಕೊಳ್ಳಬೇಕು, ಯಾಕಪ್ಪ ನಾವು ನೆಮ್ಮದಿಯಾಗಿರುವುದು ನಿನಗೆ ಇಷ್ಟವಿಲ್ಲವೇ ಎಂದು ನೀವು ಕೇಳಬಹುದು, ಉತ್ತರಕ್ಕಾಗಿ ನೀವು ಈ ಲೇಖನ ಓದಿ.

ಆಟೋ ಬೆನ್ನುಡಿ

ನೀವು ದಿನ ನಿತ್ಯ ರಸ್ತೆಗಳಲ್ಲಿ ತಿರುಗಾಡುವಾಗ ಅಥವಾ ಟ್ರಾಫ಼ಿಕ್ ಜಾಮ್ನಲ್ಲಿ ಸಿಲುಕಿದ್ದಾಗ ಕಾಣಸಿಗುವ ಆಟೋ ಬೆನ್ನುಡಿಯನ್ನು ಗಮನಿಸಿದ್ದೀರಾ...........

ಬರೇ ನೋಡಿದ ಬರಹಗಳಲ್ಲದೆ ನಿಮ್ಮ ಸ್ವಂತ ಬೆನ್ನುಡಿಗಳನ್ನು ಸೇರಿಸಿ.

ಉದಾ : ಪ್ರೀತಿಯ ಗೆಳೆಯ ಮೋಸದ ಗೆಳತಿ
ನಾ ನಿನ್ನ ಮರೆಯಲಾರೆ,
ನನ್ನ ಪ್ರೀತಿಯ ಹುಡುಗಿ,
ಮರೆಯಲಾಗದ ಆ... ಮೋಸದ ಕ್ಷಣಗಳು.....

ನನ್ನ ನೆರಳು

ನನ್ನ ನೆರಳು ಹಗಲು ಇರಳು
ಬೆನ್ನ ಹಿಂದೆ ಇರುವುದು
ಜೀವವಿದ್ದು ಹೋದಮೇಲೂ...
ನನ್ನ ಜೊತೆಗೆ ಬರುವುದು

ದೇಹಕುಂಟು ನೋವು ಮನಕು
ನೆರಳಿಗಿಲ್ಲ ಅದರ ಮರಗು
ಜೀವ ಹೋದ ಮೇಲೇ ಮರಣ
ನೆರಳಿಗಿಲ್ಲ ಕೊನೆಯ ಪಯಣ

ಜಾತಿಭೇದವಿಲ್ಲ ನಿನಗೆ
ಎಲ್ಲರಲ್ಲೂ ಬಂದೆ ಕೆಳಗೆ
ಜೀವ ಮಾತ್ರವಿಲ್ಲ ನಿನಗೆ
ನಿನ್ನ ಒಳಗೂ ನಾನೇ ಕೊನೆಗೆ

ನನ್ನ ಮಾತು ನಿನ್ನ ಮೌನ
ಕಪ್ಪು ಮಾತ್ರ ನಿನ್ನ ಬಣ್ಣ

ಅಬ್ಬಾ!!! ಎಂಥಾ ಆಚರಣೆ!!!

ಹೆಂಡತಿ: ಆ ಚಿತ್ರದಲ್ಲಿರುವ ಕುಡುಕನನ್ನು ನೋಡ್ತಾ ಇದ್ದೀರಾ?

ಗಂಡ: ಹಾ ಹೌದು!!! ಅದರಲ್ಲೇನಿದೆ ವಿಶೇಷ?

ಹೆಂಡತಿ: ಹತ್ತು ವರ್ಷಗಳ ಹಿಂದೆ ಈತನನ್ನು ಮದುವೆಯಾಗಲು ನಾನು ಒಪ್ಪಿರಲಿಲ್ಲ.

ಗಂಡ: ಅದಕ್ಕೇನೀಗ? 

ಹೆಂಡತಿ: ಅಂದಿನಿಂದ ಇಂದಿನವರೆಗೂ ಈತ ಕುಡುಯುತ್ತಿದ್ದಾನೆ.

ಕರ್ನಾಟಕ ರಕ್ಷಣಾ ವೇದಿಕೆಯ "ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ" - ಅಧ್ಯಕ್ಷರ ಆಹ್ವಾನ

ಇತ್ತೀಚಿನ ಬೆಳವಣಿಗೆಯನ್ನ ಗಮನಿಸಿದ್ರ ಭಾಳ ಕೆಟ್ಟ ಅನ್ನಿಸ್ತತಿ. ನಮ್ಮ ರಾಜೆಕೀಯ ಪಕ್ಷಗಳು ಒಬ್ಬರ ಮ್ಯಾಲೆ ಇನ್ನೊಬ್ರು ಕಾಗಿ ಕುಂದುರ್ಸೋ ಕೆಲಸದಾಗ ಅದಾರ. ಹಂಗ ಇದರ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ನಿಲುವು ಏನೈತಿ ಅಂತ ಓದಿ ನೋಡ್ರಿ. ಜಾಗತಿಕ ಬಿಕ್ಕಟ್ಟು, ಅನಿಯಂತ್ರಿತ ವಲಸೆಗಳಿಂದ ಆಗೋ ಪರಿಣಾಮಗಳ ಬಗ್ಗೆ ಚರ್ಚೆ ಮಾಡ್ಯಾರ.