ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂಪದದಿಂದ ಸಂಪಾದಿಸೋಣ

ನಾನಂತೂ ಕನ್ನಡ ಸಾಹಿತ್ಯ ವಿದ್ಯಾರ್ಥಿ. ನನಗೂ ತಂತ್ರಜ್ಞಾನಕ್ಕೂ ಎಣ್ಣೆ ಸೀಗೆಕಾಯಿ ಸಂಬಂಧ. ಅದರೂ ಅಸಕ್ತಿಯಿಂದ ಗಣಕದ ಬಳಕೆಯ ಕುರಿತು ಕಲಿತು ಕನ್ನಡ ಸಾಹಿತ್ಯದ ಸಂಸ್ಕೃತಿಯ ಕುರಿತು ನಮ್ಮ ಬೇರೆ ಬೇರೆ ಅಧ್ಯಯನ ಶಿಸ್ತುಗಳ ಪ್ರಿಯ ಯುವಜನತೆ ತಮ್ಮ ಅನಿಸಿಕೆಗಳನ್ನು ಹೀಗೆ ವ್ಯಕ್ತಪಡಿಸುತ್ತಾರೆ ಎಂಬ ಕುತೂಹಲ ನನ್ನದು. ಅದಕ್ಕಾಗಿ ಈ ಸಂಪದದ ಸಂಪರ್ಕಕ್ಕೆ ಬಂದೆ.

ಪರೋಪಕಾರಾರ್ಥಂ

ನಾನಾಗ ಬಿಹಾರದಲ್ಲಿದ್ದೆ. ಮನೆಗೆ ಫೋನ್ ಬಂದ ಹೊಸತರಲ್ಲೊಮ್ಮೆ ಅರ್ಧರಾತ್ರೆಯಲ್ಲಿ ಫೋನ್ ಗುಣುಗುಣಿಸಿತು. ಎತ್ತಿದೆ. ಫೋನ್ ಸ್ವಲ್ಪ ದಯಾಸಿಂಘ್ ಗೆ ಕೊಡಿ ಎಂದಿತು ದನಿ. ಇಲ್ಯಾರೂ ದಯಾ ಸಿಂಘ್ ಇಲ್ಲ ಎಂದೆ. ಅದು ಹೇಗೆ ಸಾಧ್ಯ? ಅವನು ಇದೇ ನಂಬರ್ ಕೊಟ್ಟಿದ್ದು ಎಂದಿತು ದನಿ. ಈ ನಂಬರ್ ನನ್ನದು, ನಿಮಗೆಲ್ಲೊ ತಪ್ಪಿರಬೇಕು ಎಂದೆ.

ತಲ್ಲಣದ ಸಮಯದಲ್ಲಿ ಸಜ್ಜನಿಕೆ ಮತ್ತು ಪ್ರೀತಿಯನ್ನು ಹುಡುಕುತ್ತಾ...

2001, ಸೆಪ್ಟೆಂಬರ್ 11 ರ ದಾಳಿ ಆದನಂತರ ಇಲ್ಲಿಯವರೆಗೆ ಅಮೆರಿಕದ ನೆಲದಲ್ಲಿ ಯಾವೊಂದು ಭಯೋತ್ಪಾದಕ ದಾಳಿಗಳೂ ಆಗಿಲ್ಲ. ಈ ಮಧ್ಯೆ ಅಮೆರಿಕ ನ್ಯಾಯಯುತವಾಗಿಯೆ ಅಫ್ಘಾನಿಸ್ತಾನಕ್ಕೆ ನುಗ್ಗಿದ್ದಷ್ಟೆ ಅಲ್ಲದೆ ಅಪಾರ ವಿರೋಧದ ನಡುವೆ ಇರಾಕಿಗೂ ನುಗ್ಗಿತು. ಇದು ಇಸ್ಲಾಮಿಕ್ ಮೂಲಭೂತವಾದಿ ಭಯೋತ್ಪಾದಕರಲ್ಲಿ ದ್ವೇಷವನ್ನು ಮತ್ತಷ್ಟು ಹೆಚ್ಚಿಸಿತು. ಆದರೂ ಅಮೆರಿಕದ ನೆಲದ ಮೇಲೆ ಮತ್ತೆ ದಾಳಿ ಮಾಡಲು ಅವರ ಕೈಯ್ಯಲ್ಲಿ ಸಾಧ್ಯವಾಗಿಲ್ಲ. ಅಂದರೆ ಅವರು ಪ್ರಯತ್ನಿಸಲಿಲ್ಲ ಅಂತಲ್ಲ. ಅವರು ಪ್ರಯತ್ನಪಟ್ಟರೆ ಎನ್ನುವುದೂ ತಿಳಿಯದಷ್ಟು ಸೂಕ್ಷ್ಮವಾಗಿ ಅಮೆರಿಕದ ಭದ್ರತಾ ದಳಗಳ Intelligence ವಿಭಾಗಗಳು ಕಾರ್ಯನಿರ್ವಹಿಸಿವೆ. ಭಯೋತ್ಪಾದನೆಯನ್ನು ಸಂಪೂರ್ಣವಾಗಿ Law & Order ವಿಷಯವನ್ನಾಗಿಯೆ ನೋಡಿ ಅವರು ಈ ಜಯ ಸಾಧಿಸಿದ್ದಾರೆ.

ಕಳೆದ ವಾರ ಮುಂಬಯಿಯಲ್ಲಿ ಮತ್ತೆ ಅದೆಷ್ಟನೆಯದೊ ಬಾರಿ ಸಂಕುಚಿತ ಕೋಮುವಾದಿಗಳು ದಾಳಿ ಮಾಡಿದ್ದಾರೆ. ಅಪಾರವಾದ ಅಂತರರಾಷ್ಟ್ರೀಯ ಆಯಾಮ ಗಳಿಸಿಕೊಂಡ ಈ ದಾಳಿ ಮೂರ್ನಾಲ್ಕು ದಿನಗಳ ಹೋರಾಟದ ಬಳಿಕ ಅಂತ್ಯವಾಗಿದೆ. ಕರ್ತವ್ಯಪಾಲಕರ, ಅಮಾಯಕರ, ವಿದೇಶಿಗಳ, ಪ್ರವಾಸಿಗಳ, ಬಡವರ, ಶ್ರೀಮಂತರ, ಒಟ್ಟಿನಲ್ಲಿ ಮನುಷ್ಯರ ಹತ್ಯೆಯಾಗಿದೆ. ದೇಶದ ಒಂದೆರಡು ರಾಜ್ಯಗಳ ಚುನಾವಣೆಯೂ ಈ ಘಟನೆಯಿಂದ ನಿರ್ಧಾರಿತವಾಗಿ ಹೋಗಿದೆ. ಉತ್ತರದ ರಾಜ್ಯಗಳಲ್ಲಿ ಒಂದು ಮಟ್ಟದ ಸಾಮಾಜಿಕ ನ್ಯಾಯಕ್ಕೆ ಕಾರಣನಾದ ಮಾಜಿ ಪ್ರಧಾನಿಯೊಬ್ಬನ ಸಾವು ಸುದ್ದಿಯೆ ಅಲ್ಲದಷ್ಟು ರೀತಿಯಲ್ಲಿ ನಗಣ್ಯವಾಗಿ ಹೋಗಿದೆ.

ಹಾಗೆಯೆ, ರಕ್ತಹರಿಸಿದ ಇದೇ ದುಷ್ಟರ ದುಷ್ಟ ದಾಯಾದಿಗಳು ನವೋಲ್ಲಾಸದಿಂದ ಜಿಗಿದೆದ್ದಿದ್ದಾರೆ.

ಇಂದು ಓದಿದ ವಚನ: ಸಕಲೇಶ ಮಾದರಸ: ದೊರಕೊಂಡಂತೆ ತಣಿದಿಹ

ದೊರಕೊಂಡಂತೆ ತಣಿದಿಹ ಮನದವರ ತೋರಾ
ದುಃಖಕ್ಕೆ ದೂರವಾಗಿಹರ ತೋರಾ
ಸದಾನಂದದಲ್ಲಿ ಸುಖಿಯಾಗಿಪ್ಪವರ ತೋರಾ
ಸಕಳೇಶ್ವರ ದೇವಾ 
ಎನಗಿದೇ ವರವು ಕಂಡಾ ತಂದೇ
[ಸಕಳೇಶ ಮಾದರಸ-೧೧೩೦. ಬಸವಣ್ಣನ ಹಿರಿಯ ಸಮಕಾಲೀನ. ಕಲ್ಲುಕುರಿಕೆ ಎಂಬ ಊರಿನ ಅರಸ. ತಂದೆಯ ಹೆಸರು ಮಲ್ಲಿಕಾರ್ಜುನ. ನಂತರದ ಕಾಲದಲ್ಲಿ ಬಂದ ಕೆರೆಯ ಪದ್ಮರಸ, ಕುಮಾರ ಪದ್ಮರಸ, ಪದ್ಮಣಾಂಕ ಎಂಬ ಕವಿಗಳು ಇವನ ವಂಶದವರು. ಮಾದರಸನ ೧೩೩ ವಚನಗಳು ದೊರೆತಿವೆ]
ಈ ವಚನವನ್ನು ಇವತ್ತು ಓದಿದಾಗ ’ದರ್ಶನ’ ಅನ್ನುವ ಮಾತಿನ ಇನ್ನೊಂದು ಅರ್ಥ ಹೊಳೆಯಿತು. 
ಏನು ದೊರೆಯುತ್ತದೆಯೋ ಅದರಲ್ಲೇ ತಣಿವನ್ನು, ತೃಪ್ತಿಯನ್ನು ಪಡೆದಿರುವವರನ್ನು ತೋರಿಸು. ದುಃಖಕ್ಕೆ ದೂರವಾಗಿರುವವರನ್ನು ತೋರಿಸು. ಸದಾ ಆನಂದದಲ್ಲಿ ಅಥವಾ ಸತ್ (ದೇವರು, ಸತ್ಯ) ಆನಂದದಲ್ಲಿ ಇರುವವರನ್ನು ತೋರಿಸು. ಇದೇ ನೀನು ಕೊಡಬಹುದಾದ ದೊಡ್ಡ ವರ.
ವಚನಕಾರ ಹೇಳುವ ಗುಣಗಳಿರುವವರು ಅಪೂರ್ವವೇ ಅಲ್ಲವೇ! ನೋಡುವುದಿದ್ದರೆ ಅಂಥವರನ್ನು ನೋಡಬೇಕು! ಆದರೆ ಅಂಥವರು ಎಷ್ಟು ಅಪೂರ್ವವೆಂದರೆ ಸ್ವತಃ ದೇವರೇ ನಮಗೆ ವರಕೊಟ್ಟು ಅವರು ಕಾಣುವ ಹಾಗೆ ಮಾಡಬೇಕು. ಅಂಥ ಗುಣಗಳು ಇರುವವರು ಇದ್ದರೆ ಅವರೇ ದೇವರು ತಾನೇ! ದೇವರಿಗೆ ಬಯಕೆ ಇಲ್ಲ, ದುಃಖವಿಲ್ಲ, ಅವನು ಸದಾನಂದ ಸ್ವರೂಪಿ ಅನ್ನುವ ಮಾತುಗಳು ಇವೆಯಲ್ಲ. ನಾವು, ನಮ್ಮಲ್ಲಿಲ್ಲದವನ್ನು, ಇರಬೇಕಾದವನ್ನು, ದುಃಖ ರಹಿತ, ತೃಪ್ತ, ಆನಂದ ಗುಣವನ್ನು ಒಟ್ಟಾಗಿಸಿ ದೇವರ ಕಲ್ಪನೆ ಮಾಡಿಕೊಂಡಿದ್ದೇವೆ. ಕಲ್ಪನೆಯ ದೇವರನ್ನು ಕಾಣುವುದಕ್ಕಿಂತ ಈ ಗುಣ ಇರುವ ಮನುಷ್ಯರನ್ನೇ ಕಂಡರೆ ಅದೇ ದೊಡ್ಡದು. 
’ದರ್ಶನ’ ವೆಂದರೆ ಇದೇ ಅಲ್ಲವೇ? ದೈವತ್ವವನ್ನು ಕಾಣುವುದು, ಅದೂ ನಮ್ಮ ಜೊತೆಯಲ್ಲೇ ಇರುವ ಮನುಷ್ಯರಲ್ಲಿ.

ಕನಸ ಕದಿಯುವವರು ಪ್ರಕೃತ

ಹ್ಯೋಯ್ ಎಲ್ಲರಿಗೂ ನನ್ನ

ನಮಸ್ಕಾರ

ಕುಂದಾಪುರರ್ದ ಕಡೆ ಎಂತ ಕಥೆ ಆಯ್ತ್ ಮಾರಾಯ್ರೆ?
ಅಲ್ಲ ಅಮಾಸೆಬೈಲು, ಶಂಕರನಾರಾಯಣ ಉಳ್ಳೂರು ಎಲ್ಲಾ ಎಂಥಾ ಜಾಗ ಮರಾಯ್ರೆ ಅದೂ ಈಗ ನಕ್ಸಲೈಟ್ ಎಲ್ಲಿಗೆ ಹೋಪುದು ಈಗ ಹೇಳಿ?

ಈ ಸಾರಿ ಸಿದ್ದಾಪುರದ ನನ್ನ ಬಾವನ ಮಗಳ ಮದುವೆ ಹೋಗಿದ್ದೆ. ಹಳೆಯ ನನ್ನ ಬಾಲ್ಯದ ಜಾಗವನ್ನೆಲ್ಲಾ ನೋಡಿದಾಗ ಮತ್ತೊಮ್ಮೆ ಮನವು ಹಸಿರಾಗಿತ್ತು.

ಸಾವಿನ ಕ್ಷಣಗಳುಜೀವನಕ್ಕೂ ಮರಣಕ್ಕೂ ಕೆಲವೇ ಕ್ಷಣಗಳದ್ದೇ ವ್ಯತ್ಯಾಸ ಅಷ್ಟೆ. ಜೈ ಜವಾನ್ ಜೈ ಕಿಸಾನ್ ಇಬ್ಬರ ಜೀವನದಲ್ಲೂ ಸಾವಿನಲ್ಲೂ ಸಾಮ್ಯತೆಯಿದೆ. ಈ ಕವನ

ಸಾವಿನ ಕ್ಷಣಗಳು

ರೈತನ
ಈ ಕ್ಷಣದ ಹಸಿವಿನ ಜತೆ
ಗ್ರೀಷ್ಮದ ಕರಿ ನೆರಳು
ಸ್ವಾರ್ಥ ಸಂಸಾರದ
ಈ ನನ್ನ ಬದುಕಿನಲ್ಲಿ
ಕಸುವಿಲ್ಲದ ಕೈಗಳಿಗೆ ಸಿಗುವುದು
ತನ್ನವರ ಆಸರೆಯಿಲ್ಲದ
ವಿಷಾದದ ಮರಳ ಸೊಉಧ
ಕದಡುತ್ತಿರುವ ಜಾಗತೀಕರಣದ ಜಗದಲ್ಲಿ
ಬಾಚಿಕೊಂಡ ಶೋಷಣೆಯ ಕರಾಳ ಕೈಗಳು,
ಕಲುಷಿತ ಬೀಜದ,ಸಾಲಸೋಲದ
ನೆಪದಲ್ಲಿ ನೆಲ,ಜಲ
ಮಣ್ಣು, ಕಲ್ಲು, ಮರ, ಲೂಟಿ

Aperture ಮತ್ತು Depth of Field

Shutter Speed ಅಲ್ಲದೇ ಛಾಯಾಗ್ರಹಣದಲ್ಲಿ ಬೆಳಕನ್ನು ನಿಯಂತ್ರಿಸಲು ಸಹಾಯಕವಾಗುವ ಇನ್ನೊಂದು ಅಂಶ "Aperture" ಅಥವಾ ಬೆಳಕಿಂಡಿ. ಚಿತ್ರ ತೆಗೆಯುವಾಗ ಲೆನ್ಸನ ತೆರವು ಎಷ್ಟು ದೊಡ್ಡದಿರುತ್ತ ದೋ ಅದೇ ಬೆಳಕಿಂಡಿ. ಈ ತೆರವು ದೊಡ್ಡದಾದಷ್ಟೂ ಕ್ಯಾಮರಾದ ಸೆನ್ಸರ್ಗೆ ತಲುಪುವ ಬೆಳಕಿನ ಪ್ರಮಾಣ ಅಧಿಕವಾಗಿರುತ್ತದೆ. ಬೆಳಕಿಂಡಿಯನ್ನು ಛಾಯಾಗ್ರಹಣದಲ್ಲಿ f/2.8, f/4, f/5.2, f/8 ಎಂದು 'f-stops'ಎಂಬ ಮಾನ ದಂಡದಿಂದ ಅಳೆಯುತ್ತಾರೆ. ಇಲ್ಲಿ 'f-stops'ನ ಬೆಲೆ ಜಾಸ್ತಿಯಾದಂತೆ ಬೆಳಕಿಂಡಿಯ ಗಾತ್ರ ಕಿರಿದಾಗುತ್ತದೆ ಮತ್ತು ಸೆನ್ಸರ್ಗೆ ತಲುಪುವ ಬೆಳಕಿನ ಪ್ರಮಾಣ ಕಡಿಮೆಯಾಗುತ್ತದೆ. ಉದಾಹರಣೆಗೆ f/8 ಗಿಂತ f/2.8ನ ಬೆಳಕಿಂಡಿ ದೊಡ್ಡದು.

ಆದರೆ ಈ ಬೆಳಕಿಂಡಿ ಕೇವಲ ಬೆಳಕನ್ನು ನಿಯಂತ್ರಿಸುವುದೂ ಅಲ್ಲದೇ "Depth of Field"ನ ಮೇಲೂ ತನ್ನ ಪರಿಣಾಮ ಬೀರುತ್ತದೆ. ಪಕ್ಕದ ಚಿತ್ರದಲ್ಲಿ ಮರದೆಲೆಯ ಚಿಗುರು ಸ್ಪುಟವಾಗಿ ಕಾಣಿಸಿ ಹಿಂದಿನ ಗುಡ್ಡವು ಅಸ್ಪಷ್ಟವಾಗಿದೆ. ಅಂದರೆ ಈ ಚಿತ್ರದಲ್ಲಿ "Depth of Field"ಕಡಿಮೆಯಿದೆ. ಇಲ್ಲಿ ಚಿಗುರು ನನ್ನ ಪ್ರಧಾನ ವಿಷಯವಾಗಿದ್ದು, ಚಿತ್ರ ನೋಡುವವರ ಗಮನ ಹಿನ್ನೆಲೆಗೆ ಸರಿಯುವುದನ್ನು ತಡೆಯಲು ಅದನ್ನು ಅಸ್ಪಷ್ಟವಾಗಿಸಲು ನಾನು ಬಳಸಿದ ಬೆಳಕಿಂಡಿ f/3.5. ಅಂದರೆ ಬೆಳಕಿಂಡಿ ಹೆಚ್ಚಾದಂತೆಲ್ಲಾ "Depth of Field" ಕಡಿಮೆಯಾಗುತ್ತದೆ. ಇದೇ ಚಿತ್ರವನ್ನು f/8 ನಿಂದ ತೆಗೆದಿದ್ದರೆ "Depth of Field" ಜಾಸ್ತಿಯಾಗಿ ಗುಡ್ಡವೂ ಸ್ಪಷ್ಟವಾಗಿ ಕಾಣಿಸುತ್ತಿತ್ತು.