ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂಗೀತಾ..ಆಹಾ..ಉಹೂಂ

ಈಗಿನ ಮಕ್ಕಳು ಟಿ.ವಿ., ಕಂಪ್ಯೂಟರ್, ಸಿನೆಮಾ, ಸ್ಕೂಲ್, ಕ್ರಿಕೆಟ್‌ಗಳ ನಡುವೆಯೂ ಹಾಡು, ನೃತ್ಯ ಇತ್ಯಾದಿಗಳಲ್ಲಿ ಪರಿಣತರಾಗುವುದನ್ನು ನೋಡುವಾಗ ಸಂತೋಷವಾಗುತ್ತದೆ. ನಾನೂ ಸಂಗೀತಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದೆ! Instalmentನಲ್ಲಿ...

ಅರಿವು ಉಕ್ಕಿ ಹರಿದಾಗ...

ಹಿರಿಯರಾದ ಕೆಲವರಿಗೆ,
ಅರಿವು ತಲೆ ತುಂಬಿ,
ನೆರೆಯಂತೆ ಉಕ್ಕಿ
ಹರಿದು, ಕಣ್ಣ ಕವಿದು,
ಅರಿವ ಇರುವು ಅಳಿಸಿ,
ಕಿರಿಯರನ್ನಾಗಿಸುವುದಲ್ಲ!

--ಶ್ರೀ
(೨೭ - ನವಂಬರ್ - ೨೦೦೮)

ಹಿಂಸೆಯ ಬದುಕು

ಮುಂಬೈಯ ಲ್ಲಿ ಮತ್ತೆ ಉಗ್ರರ ಹಟಾತ್ತನೆ ಅಟ್ಟಹಾಸ ಮೆರೆದಿದೆ. ಎಷ್ಟೊಂದು ಜನ ಅಮಾಯಕರು ಪ್ರಾಣ ತೆತ್ತಿದ್ದಾರೆ. ಪೋಲೀಸರು ಗುಂಡಿಗೆ ಬಲಿಯಾಗಿದ್ದಾರೆ. ಇವೆಲ್ಲವನ್ನು ತಡೆಯುವುದು ಸಾಧ್ಯವೇ? ನುಗ್ಗಿಯೇ ನುಗ್ಗುತ್ತೇವೆ, ಕೊಂದೇ ಕೊಲ್ಲುತ್ತೇವೆ, ಹೇಗಾದರೂ ಸರಿ ಎಂತಾದರೂ ಸರಿ ನರಿ ನಾಯಿಗಳನ್ನು ಕೊಂದಂತೆ ಜನರನ್ನು ಕೊಲ್ಲುತ್ತೇವೆ - ಭಯ ಹುಟ್ಟಿಸುತ್ತೇವೆ - ಎಲ್ಲ ಧರ್ಮ ದೇವರಿಗಾಗಿ ಎನ್ನುವ ಹುಚ್ಚು ಕಲ್ಪನೆಗಳೇ ಕಟ್ಟಿಕೊಂಡ ಅಂಧ ಹೊಂತಕಾರಿಗಳನ್ನು ತಡೆಯುವುದು ತೀರ ಪ್ರಯಾಸದ್ದು. ಬೇರೆ ಬೆರೆ ಹೆಸರುಗಳಲ್ಲಿ, ಬೇರೆ ಬೇರೆ ಸಂಘಟನೆಗಳ ರೂಪದಲ್ಲಿ ಬೀಜಗಳು ಮೊಳೆಯತೊಡಗಿವೆ ಎನ್ನುವುದು ಅಧಿಕ ಆತಂಕಕ್ಕೆ ಒಡ್ಡುತ್ತಿದೆ.
ಇಂಥ ಆತಂಕವಾದದ ವಿರುದ್ಧ ನಮ್ಮ ಬದುಕಿನ ಹೋರಾಟ ಮುಂದುವರಿಯುವುದು ಅನಿವಾರ್ಯ. ಆಧುನಿಕ ಜೀವನದ ಬದುಕಿದು. ರೀತಿ ಇದು. ನಮ್ಮ ಜೀವನ ದಿನದಿಂದ ದಿನಕ್ಕೆ ಅಸಹನೀಯವಾಗತೊಡಗಿದೆ. ಹಿಂಸೆ ಮನೆಯ ಕೋಣೆ ಕೋಣೆಗಳಲ್ಲಿ ಟಿವಿ ಪರದೆ ಮೇಲೆ ಮೂಡುತ್ತ ಎಳೆಯ ಮಕ್ಕಳು ಕೂಡ ಜಡ್ಡುಗಟ್ಟತೊಡಗಿದ್ದಾರೆ.

ಧರ್ಮ, ರಾಷ್ಟ್ರಗಳ ಕಲ್ಪನೆಯೇ ಮನುಷ್ಯನಿಗೆ ಇರದಿದ್ದರೆ ಆಗುತ್ತಿತ್ತೇನೋ. ಎಲ್ಲ ಬಂದೂಕಿನ ನಳಿಗೆಯಿಂದ, ಹಿಂಸೆಯಿಂದಲೇ ಆಗುತ್ತದೆನ್ನುವುದು ಮನುಷ್ಯನಿಗೆ ರಕ್ಕದಲ್ಲಿ ಬಂದ ಹುಚ್ಹಿರಬೇಕು - ನಮ್ಮ ಇತಿಹಾಸಗಳೇ ಹೇಳುತ್ತವೆ.
ಆದರೆ ಇಂಥ ಆಕ್ರಮಣದಿಂದ ಜನರನ್ನು ತುಸು ಕಾಲ ಭಯ ಆತಂಕಕ್ಕೆ ಒಡ್ಡಬಹುದು. ಆದರೆ ಮತ್ತೆ ಮುಂಬಯಿ ಅಥವಾ ಮುಂಬಯಿಯಂಥ ಇನ್ಯಾವುದೇ ಭಾಗ ಪುಟಿದೇಳುತ್ತದೆ. ಇದು ಆ ಹೃದಯ ಹೀನ ಮಂದಿಗಳಿಗೇಕೆ ಅರ್ಥವಾಗುವುದಿಲ್ಲ? ಅಥವಾ ಅವರನ್ನು ಪರಿವರ್ತನೆ ಮಾಡುವುದಾದರೂ ಹೇಗೆ?
ಉಗ್ರವಾದ - ಎಲ್ಲೇ ಯಾವುದೇ ಹೆಸರಲ್ಲಿ ಬಂದರೂ ಅದನ್ನು ನಾವು ಖಂಡಿಸಬೇಕಾಗಿದೆ. ಇಂಥ ಖಂಡನೆಗಳು ಕೂಡ ಹೋರಾಟದ ಭಾಗವೇ.

ಪ್ರತಿಯೊಬ್ಬನೂ ಒ೦ದು ಧರ್ಮ

ಪ್ರತಿಯೊಬ್ಬನ ಚಿ೦ತನೆಯೂ ಒ೦ದು ಧರ್ಮವೇ. ಅದೇ ಕಾರಣಕ್ಕೆ ನಾನೆ೦ದೂ ಯಾವ ಧರ್ಮವನ್ನು ಹಿ೦ಬಾಲಿಸಲಿಲ್ಲ. ಏಕೆ೦ದರೆ ಧರ್ಮ ಒಳಗಿನ ವಿಚಾರ, ಹೊರಗಿನ ಆಚರಣೆಯಲ್ಲ.-

ಕೋಪ.

ನಿಂತಿರುವಾಗ ಕೋಪ ಬಂದರೆ, ಕುಳಿತುಕೊಳ್ಳಿ.
ನಿಮ್ಮ ಕೋಪ ಶಮನವಾಗದಿದ್ದರೆ, ಕಾಲುಚಾಚಿ ಮಲಗಿ.

ಕೆಲಸ

ಕೆಲಸ ಯಾವುದೇ ಆದರೂ ನಾನು ಅದನ್ನು ನಾಳೆಗೆ ಮುಂದೂಡುವುದಿಲ್ಲ.