ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮುಂಬೈ - ಹೀನ ಕೃತ್ಯ

ಕೆಲವು ತಿಂಗಳ ಹಿಂದೆಯಷ್ಟೆ ಈ ಮಹಾನಗರಿಯ ಪ್ರವಾಸ ಮಾಡಿದ್ದೆ. ಇಂದು ಅದೇ ನಗರಿಯು ದುಷ್ಖತ್ಯದ ತಾಣವಾಗಿರುವುದು ನಂಬಲಸಾಧ್ಯವಾಗಿದೆ.

ನೂರಾರು ಸಾವು, ನೂರಾರು ಗಾಯಾಳು- ಅಮಾಯಕರು, ಪೊಲೀಸರು, ಸೈನಿಕರು. ಏನೀ ದುಷ್ಟರ ಅಟ್ಟಹಾಸ? ಈ ರೀತಿಯ ಮತಿಗೆಟ್ಟ ಜನರ ದುಷ್ಕೄತ್ಯ, ಜಾತಿಯ ಹೆಸರಿನಲ್ಲಿ ಸುಳ್ಳು ಭ್ರಮೆಯ ಹುಚ್ಚುತನ? ಹುಚ್ಚು ಬಹಳ ಸಣ್ಣ ಪದವೆನಿಸುತ್ತದೆ.

ಇಂದು ಓದಿದ ವಚನ: ರಸವನರಿವುದಕ್ಕೆ: ಶಿವಲೆಂಕ ಮಂಚಣ್ಣ

ಇಂದು ಓದಿದ ವಚನ
ರಸವನರಿವುದಕ್ಕೆ ಜಿಹ್ವೆಯಾಗಿ ಬಂದು
ಗಂಧವನರಿವುದಕ್ಕೆ ನಾಸಿಕವಾಗಿ ಬಂದು
ರೂಪವನರಿವುದಕ್ಕೆ ಅಕ್ಷಿಯಾಗಿ ಬಂದು
ಶಬ್ದವನರಿವುದಕ್ಕೆ ಶ್ರೋತ್ರವಾಗಿ ಬಂದು
ಸ್ಪರ್ಶವನರಿವುದಕ್ಕೆ ತ್ವಕ್ಕಾಗಿ ಬಂದು
ಇಂತೀ ಘಟದ ಮಧ್ಯದಲ್ಲಿ ನಿಂದು
ಪಂಚವಕ್ತ್ರನಾದೆಯಲ್ಲ
ಈಶಾನ್ಯ ಮೂರ್ತಿ ಮಲ್ಲಿಕಾರ್ಜುನ ಲಿಂಗವೇ
[ಇದು ಶಿವಲೆಂಕ ಮಂಚಣ್ಣನ ವಚನ. ಈತ ಮೂಲತಃ ಕಾಶಿಯವನು, ಪಂಡಿತ ಪರಂಪರೆಗೆ ಸೇರಿದವನು. ಉರಿಲಿಂಗದೇವ ಎಂಬ ಮತ್ತೊಬ್ಬ ಶರಣನ ಗುರು. ಕಾಲ ಕ್ರಿಶ ೧೧೬೦. ಇವನ ೧೩೨ ವಚನಗಳು ಸಿಕ್ಕಿವೆ.
ಘಟ-ಮಡಕೆ, ಪಾತ್ರೆ, ದೇಹ; ಪಂಚವಕ್ತ್ರ-ಐದು ಮುಖಗಳಿರುವನು, ಶಿವ; ಸದ್ಯೋಜಾತ, ಅಘೋರ, ತತ್ಪುರುಷ, ವಾಮದೇವ, ಈಶಾನ ಇವು ಶಿವನ ಐದು ಮುಖಗಳ ಹೆಸರು] 
ದೇವರು ಹೊರಗೆ ಎಲ್ಲೋ ಇಲ್ಲ, ಇರುವುದು ನಮ್ಮೊಳಗೇ ಅನ್ನುವುದು ವಚನಕಾರರ ನಿಲುವು. ಇಲ್ಲಿಯೂ ಅಧೇ ಮಾತು ಇದೆ. ರುಚಿ ತಿಳಿಯುವ ನಾಲಗೆ, ವಾಸನೆ ಹಿಡಿಯುವ ಮೂಗು, ರೂಪವನ್ನು ಕಾಣುವ ಕಣ್ಣು, ಸ್ಪರ್ಶವನ್ನು ಅರಿಯುವ ಚರ್ಮವಾಗಿ ದೇವರು ಈ ಘಟದ ಮಧ್ಯದಲ್ಲಿ ಬಂದು ಪ್ರತ್ಯಕ್ಷನಾಗಿದ್ದಾನೆ.

ಧರ್ಮ ನಿರಪೇಕ್ಷತ್ತಾವಾದಿ ಬುಲೆಟ್ !

ರಾಕೇಶ್ ಶೆಟ್ಟಿ ಬರೆದ ಧರ್ಮದ ಬಗ್ಗೆ ಕಾಳಜಿ ಇಲ್ಲದ ಬುಲೆಟ್ ಬರಹ ಇದನ್ನು ಬರೆಯಲು ಪ್ರೇರೇಪಿಸಿತು. ಒಂದು ರೀತಿ ಬುಲೆಟ್ ಧರ್ಮನಿರಪೇಕ್ಷಿತಾವಾದಿ. "Bullet is a secularist." Or "Bullet is a equal opportunity killer." It does not treat one better than the other". ಬುಲೆಟ್ ಕೊಲ್ಲುವಾಗ ಎಲ್ಲರಿಗೂ ಸಮಾನ ಅವಕಾಶವನ್ನು ನೀಡುತ್ತದೆ. ತಾರತಮ್ಯ ಇಲ್ಲ.

ಒಗಟು

ಕಳೆದ ಶತಮಾನದ ಮೂವತ್ತರ ದಶಕದ ಆರಂಭದಲ್ಲಿ ಬಂದ ಅರೇಬೀಯ ಮೂಲದ ಅಮೇರಿಕಾದ ಪ್ರಸಿದ್ಧ ಕವಿ ಇಲ್ಯಾ ಅಬು ಮಾದಿ ಜೀವನದ ಅರ್ಥದ ಹುಡುಕಾಟದ ಪ್ರಯತ್ನದಲ್ಲಿ ನಿರರ್ಥಕತೆಯನ್ನು ಕಾಣುವದನ್ನು ತನ್ನ ಪ್ರಸಿದ್ಧ ಅರೇಬಿ ಕವನ "ಒಗಟು"ನಲ್ಲಿ ‍ ವಿವರಿಸುತ್ತಾನೆ.

ನಾನು ಎಲ್ಲಿಂದ ಬಂದೆನೋ ಗೊತ್ತಿಲ್ಲ, ಆದರೆ ಬಂದೆ.
ನನ್ನ ಮುಂದೆ ಹಾದಿ ಹಾಸಿತ್ತು, ನಡೆದೆ.

ಭಾಷಾವೈವಿಧ್ಯತೆಯೆಂಬ ಹೂವಿನ ತೋಟ

ಇಂದು ಅಳ್ವಾಸ್ ನುಡಿಸಿರಿ 2008. ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಲನ. ಇಡೀ ರಾಜ್ಯದ ಜನತೆಯೇ ಹೆಮ್ಮೆ ಪಡುವಂತೆ ಇಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ. ಕೇವಲ ಸಾಹಿತ್ಯ ಮಾತ್ರವಲ್ಲ. ಸಂಗೀತ,ಹಾಡು, ನಾಟಕ, ಸಾಂಸ್ಕ್ರುತಿಕ ಕಾರ್ಯಕ್ರಮ , ಹಾಸ್ಯ ಇತ್ಯಾದಿಗಳ ಒಟ್ಟು ಸಮುಚ್ಚಾಯ.

ನಮ್ಮ ಸರಕಾರ ಇದ್ದರೇನು ಇಲ್ಲದೇ ಇದ್ದರೇನು ಸ್ವಾಮೀ?

ಬೇರೆ ರಾಜ್ಯದ ಬಂಧುಗಳ ಬಡಿದೆಬ್ಬಿಸಿ ಹೊಡೆದೋಡಿಸಿದ
ಮಾತೃಭೂಮಿಯ ಸ್ವಯಂಘೋಷಿತ ಸೈನಿಕರು ಇಂದೆಲ್ಲಿ
ಬಚ್ಚಿಟ್ಟುಕೊಂಡಿದ್ದರು?

ಹೊರದೇಶದಿಂದ ನಮ್ಮೂರೊಳಗೆ ನುಸುಳಿ ಬಂದು
ನಮ್ಮವರನ್ನೇ ಹೊಡೆದುರುಳಿಸಿ ದೇಶವನೇ ನಡುಗಿಸಿ
ಮೆರೆದಾಗ ಇವರೆಲ್ಲಿದ್ದರು?

ತಮ್ಮ ಬಂಧುಗಳನ್ನೇ ನಿರ್ದಯಿಗಳಾಗಿ ಹೊಡೆಯಲು
ಹೇಸದವರು ಪರದೇಶೀಯರ ಮುಂದೆ ಅದೇಕೆ ಹೀಗೆ

ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ

ಮುಂಬೈನಲ್ಲಾದ ಹೇಯ ಕೃತ್ಯಕ್ಕೆ ಈಗಾಗಲೆ ಅನೇಕರು ತಮ್ಮ ಆಕ್ರೋಶ ಮತ್ತು ದುಃಖಗಳನ್ನು ಇಲ್ಲಿ ವ್ಯಕ್ತ ಪಡಿಸಿದ್ದಾರೆ. ಈ ಸಮಯದಲ್ಲಿ ನಮ್ಮ ದೇಶದ ಜನರಲ್ಲಿ ನನ್ನ ಒಂದು ಪ್ರಾಮಾಣಿಕ ಮನವಿ. ದಯವಿಟ್ಟು ಈ ಅಂಶಗಳನ್ನು ಗಮನಿಸಬೇಕು ಎಂದು ಕೋರುತ್ತೇನೆ.