ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮುತ್ತುಗಕ್ಕೆ ಮೂರೇ ಎಲೆ!

ಅರಸ ಮೆಚ್ಚಿ ಎಷ್ಟು ಕೊಡುವ?
ಬರೆದಷ್ಟು ಹಣೆಯಲಿ ಬೊಮ್ಮ!
ಇರುಳುಹಗಲು ಸುರಿದರೂ ಮಳೆ
ಮೂರೇ ಎಲೆ ಮುತ್ತುಗಕೆ*

*- ಮುತ್ತುಗದ ಎಲೆಗಳು ಮೂರುಮೂರಾಗಿ ಒಟ್ಟಾಗಿರುತ್ತವೆ. ಅಲ್ಲದೆ, ಮೂಲದಲ್ಲಿ ಅರಸ ಎಂದಿದ್ದರೂ, ಇವತ್ತಿಗೂ ಹೊಂದುವ ಮಾತು ಎಂದು ನನಗನಿಸುತ್ತೆ.

ಚಿತ್ರ : ವಿಕಿಪಿಡಿಯಾದಿಂದ

ಸಂಸ್ಕೃತ ಮೂಲ:

ಮಗು

ಮಗು

ಕಣ್ತೆರೆದ ಕ್ಷಣದಿ ಕಥೆ
ಸಾವಿರ ಹೇಳುವ,
ಕಾತರತೆಯ ಮನೆ ಮಾಡಿಹ
ಮತ್ತೆ ಮಿಟುಕಿಸುವ ಕಣ್ಗಳು,
ಅರಳಿದ ತುಟಿಗಳು,
ಸಂಚಲನಗೊಳ್ಳುವ ಚಿಗುರುಗೆನ್ನೆ,
ಕಾಗುಣಿತ ಬರೆವ ಕೆಂಪಾದ
ಹಸಿ ಬೆರಳುಗಳು

ಕಾಡಿ, ಬೇಡಿ, ಅತ್ತು ಅಳಿಸುವ
ಮುಗ್ಧತೆಯ ಮಹಪೂರ
ಎದೆಯ ಭಾವನೆಗಳು ತೊದಲು
ಮಾತಾಗಿ, ಮಾ, ಅಮ್ಮಾ ಅನಿಸಿದ್ದು
ಮತ್ತೆ ನೆನಪಿಸುವುದು
ಅಂಬೆಗಾಲಿಕ್ಕುವ ಆ ದಿನಗಳು

ಕಂಬನಿ

ಕಂಬನಿ

ನಿಂತಿರುವೆ
ಸುಡುವ ಬಿಸಿಲನು ಕಾದು
ಕಂಬನಿ ಜಾರುವ ಮೊದಲೆ ಒಣಗಲು
ಬತ್ತಿಸಲು ನನ್ನೆದೆಯ ಬಂಜರು

ಕಾಯುತ್ತಿರುವೆ
ಸುರಿವ ಜಡಿಮಳೆಗೆ
ಜಾರುತ್ತಿರುವ ನೋವ ಮರೆಸಲು
ತೋಯಿಸಿ ಹರಿವ ಕಣ್ಣೀರು

ಸೂರ್ಯ ಮುಳುಗುತ್ತಿರೆ
ಬಾಚಿ ತಬ್ಬುವುದು ನನ್ನ ಕತ್ತಲು
ಅಳುವ ಕೂಸ ಸಂತೈಸುವ
ತಾಯಿಯಂತೆ

ಲೋಕದ ಕಣ್ಣಿಗೆ ನಾನಳುವುದ
ಕಾಣಿಸಬೇಕಿಲ್ಲ ನನಗೆ

ಸಾಂಸ್ಕೃತಿಕ ಅನಾಥರು.......

ನನ್ನ ಸ್ನೇಹಿತೆ ಒಬ್ರು ಅವರ college ನಲ್ಲಿ ಹಾಡಿನ ಸ್ಪರ್ಧೆಗೆ ಹಾಡಿನ ಸಾಹಿತ್ಯ ಬೇಕು ಎಲ್ಲಿ ಸಿಗುತ್ತೆ? ಅಂತ ನನ್ನ ವಿಚಾರಿಸಿದರು. ಸರಿ, ನಾನು ಅವರಿಗೆ ಸಹಾಯ ಮಾಡೋಣ ಅಂತ ಹುಡುಕೋಕ್ಕೆ ಶುರು ಮಾಡಿದೆ..

ನೇರ್ಪಾಡು, ನೇರ್ಗೇಡು

ಈ ಲೇಖನವನ್ನು ಓದುವ ಮುನ್ನ ನನ್ನ ದಿನಕ್ಕೊಂದು ಪದದಡಿಯ ’ನೇರ್, ನೇರ’ ಓದಿ.
ನೇರ್ಪಾಡು/ನೇರ್ವಾಡು=ದುರಸ್ತಿ, repair ಎಂದು ಬೞಸಬಹುದು.
ನೇರ್ಗೇಡು=ಹಾೞಾದ ಸ್ಥಿತಿ, state of being out of order, or impaired, or being impaired ಅರ್ಥದಲ್ಲಿ ಬೞಸಬಹುದು.

ನೇರ್, ನೇರ

ನೇರ್, ನೇರ=ನೆಟ್ಟಗೆ, ಸರಿಯಾದ, ಡೊಂಕಿಲ್ಲದ್ದು.

ಈ ಪದವನ್ನು ಪಡು ಮತ್ತು ಕೆಡು ಜೊತೆ ಬೞಸಿ ನೇರ್ಪಡು/ನೇರ್ವಡು=ದುರಸ್ತಿಯಾಗು ಎಂದು ಬೞಸಬಹುದು. ನೇರ್ಗೆಡು=ಹಾೞಾಗು (out of order, impair, to be impaired) ಅರ್ಥದಲ್ಲಿ ಬೞಸಬಹುದು.

ಆಗ ನೇರ್ಪಾಡು/ನೇರ್ವಾಡು=ದುರಸ್ತಿ ಎಂಬ ಪದವನ್ನು

ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ? - ಭಾಗ ೩?!?!?

ಎಲ್ಲರಿಗೂ ನಮಸ್ಕಾರ,
"ರ್ರೀ ಮನೆಗೆ ಎಷ್ಟು ಹೊತ್ತಿಗೆ ಬರ್ತೀರಿ?" ಸರಣಿ ಲೀಖನಗಳನ್ನು ನಿಲ್ಲಿಸಬೇಕಾಗಿ ಬರುತ್ತಿದೆ, ಕ್ಷಮೆಯಿರಲಿ. ಕೆಲವು ತೂಕದ ವ್ಯಕ್ತಿಗಳ ಆಜ್ಞೆಯ ಮೇರೆಗೆ ನಾನು ತುಂಬ ಕಷ್ಟವೆನಿಸುವ ಈ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಲಿದ್ದೇನೆ.

ಕರುನಾಡು ಉಗಮವಾಗಿ ೫೦ ವರ್ಷ ಸಂದ ಹಾಗೂ ಕರುನಾಡಿನ , ನಮ್ಮ ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಥಾನ ಬಂದ ಈ ಸಂದರ್ಬದಲ್ಲಿ ಅಣ್ಣಾವ್ರು ಇದ್ದಿದ್ದರೆ?

ಕರುನಾಡು ಉಗಮವಾಗಿ ೫೦ ವರ್ಷ ಸಂದ ಹಾಗೂ ಕರುನಾಡಿನ , ನಮ್ಮ ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಥಾನ ಬಂದ ಈ ಸಂದರ್ಬದಲ್ಲಿ ಅಣ್ಣಾವ್ರು ಇದ್ದಿದ್ದರೆ ಈ ೨ ಸಂದರ್ಬದಲ್ಲಿ ನಮ್ಮ ಖುಷಿ ಇನ್ನೊ ಅರ್ಥಪೂರ್ಣ ಆಗಿರುತ್ತಿತ್ತು ಅಲ್ಲವೇ?

ಅವರಿಗೆ ಕರುನಾಡ/ ಕನ್ನಡ ನುಡಿ ಮೇಲಿದ್ದ ಅಭಿಮಾನ , ಗೊತ್ತಿದ್ದದ್ದೇ.