ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದಾಹ

ಈ ಚಿತ್ರ ಮಿಂಚಂಚೆ ಮೂಲಕ ಬಂತು.

ಯಾಕೋ ಗೊತ್ತಿಲ್ಲ., ಈ ಚಿತ್ರ ಕಾಡುತಿದೆ..

"ದಾಹಗಳೆಶ್ಟು ತರಹ,
"ನೀನಗಿನ್ನೂ ಅರಿವಿಲ್ಲಾ......!!"

ದ್ರೌಪದಿಯ ಸೀರೆ ಸೆಳೆವಾಗ...

ದ್ರೌಪದಿಯ ಸೀರೆ ಸೆಳೆವಾಗ...
------------------------

ಸೀರೆಯನ್ನೆಳೆದಾಗ
ದ್ರೌಪದಿ ಕೂಗಿದಳು 'ಕೃಷ್ಣಾ'....
ಥಟ್ಟನೆ ಬಿತ್ತು ಕೆನ್ನೆಗೆ ಏಟು...
'ಕೃಷ್ಣನನ್ನೇಕೆ ಕರೆಯುವೆ,
ನಾನು ಅರ್ಜುನ!' :)

~~~ * ~~~

ಸೀರೆಯನ್ನೆಳೆದಾಗ
ದ್ರೌಪದಿ ಕೂಗಿದಳು 'ಅರ್ಜುನಾ...'
ಅರ್ಜುನ ಬರಲಿಲ್ಲ...
ಥಟ್ಟನೆ ಬೀಸಿ ಕೆನ್ನೆಗೆ ಏಟು,
ಕೂಗಿದಳು 'ಕೃಷ್ಣಾ...' :)

--ಶ್ರೀ

ನನ್ನೊಲವ ಸಖಿ

ಹೆಜ್ಜೆಗೊಂದು ಹೂವರಳಿ
ಮಾತಿನಲ್ಲಿ ಗೀತ ತುಂಬಿ
ಕಂಗಳಲಿ ಚೆಲುವ ಸೂಸಿ
ಬಂದವಳು ನನ್ನೊಲವ ಸಖಿ

ಆಕಾಶದ ತಾರೆಯಲ್ಲ
ಮಿಣುಕಾಡುವ ಚುಕ್ಕಿಯಲ್ಲ
ನಗೆಚಂದ್ರಿಕೆಯ ಸುರಿಸಿ
ಬಂದವಳು ನನ್ನೊಲವ ಸಖಿ

ಸಾಗರನ ರತ್ನದಂತೆ
ಅಡಗಿರುವ ಮುತ್ತಂತೆ
ರೆಪ್ಪೆಯೊಳಗೆ ಸ್ಫಟಿಕ ಧರಿಸಿ
ಬಂದವಳು ನನ್ನೊಲವ ಸಖಿ

ಹುಸಿಗೋಪ
ಮುಗ್ಧನಗುವಿಗೆ
ಸಂಜೆರಂಗನು ಪೂಸಿ
ಬಂದವಳು ನನ್ನೊಲವ ಸಖಿ

ಅಶ್ರು ತರ್ಪಣ

ಅಶ್ರುತರ್ಪಣ:

ಭಯೋತ್ಪಾದಕರ ಗುಂಡಿಗೆ ಬಲಿಯಾದ ಮುಂಬೈ ಪೋಲೀಸರಿಗೆ,

ಅಮಾಯಕರಿಗೆ.

ಇಲ್ಲಿತನಕ ೧೦೧ ಜನರ ಬಲಿ

೩೦೦ ಜನರಿಗೆ ಗಾಯ; ಬದುಕುಳಿಯುವವರೆಷ್ಟೋ, ಬಲಿಯಾಗುವವರೆಷ್ಟೋ;

ಏನೀ ಹುಚ್ಚಾಟ?

ಯಾರ ಸಿಟ್ಟಿಗೆ ಯಾರ ಬಲಿ?

ಇನ್ನಾದರೂ ಎಚ್ಚರ! ಎಚ್ಚರ! ಎಚ್ಚರ!!

ದೇಶದ  ಉಳಿವಿಗಾಗಿ ಸಂಪದಿಕರ ಕೊಡುಗೆ ಏನು?

ನಿತ್ಯಾಗ್ನಿಹೋಮ

ಹೋಮ ಧೂಮ
ನಿತ್ಯ ಸತ್ಯ
ಅಧ್ವರ್ಯುವಿಲ್ಲ
ಮಂತ್ರವಿಲ್ಲ ತಂತ್ರವಿಲ್ಲ
ನಡೆಯುತಿದೆ ನಿತ್ಯ
ತಲೆಗೊಂದರಂತೆ
ವಿಧಾತನಾರ್ಭಟಕೆ
ಭುಗಿಲೆದ್ದ ಅಗ್ನಿದೇವ
ತನ್ನದೇ ರಾಜ್ಯವೆಂಬಂತೆ
ಸುತ್ತುವರೆದ.
ಪ್ರಜೆ ದಿಕ್ಕಾಪಾಲು
ಆದರೂ ಅದರೊಳಗೆ
ನಡೆಯುತ್ತಾನೆ ಪ್ರಜೆ
ಧೂಪ ಧೂಮ
ತನ್ನದೇ ಎಂಬಂತೆ
ತನ್ನದೇ ಶೃಷ್ಟಿ
ಈ ಯಾಗ ಯಂತ್ರ
ಅದು ಅವನಿಗೂ ಗೊತ್ತು
ತನ್ನದೇ ಬಲೆಯೊಳಗೆ

ಹೆಲ್ಮೆಟ್ ಹಿಂದಿನ ಮುಖ

ಹುಡುಗಿ ಒಳಗೇ ನಗುತ್ತಾಳೆ
ಪ್ರೀತಿ ಶುರುವಾಗಿ ವಾರವಿರಬಹುದು
ಅವನ ಪ್ರತಿ ಮಾತಿಗೂ
ಇವಳು ನಗುತ್ತಾಳೆ
ಮೊಬೈಲು ರಿಂಗಣಿಸಿದಾಗ
ಮಾತಿನ ಕಾಮನಬಿಲ್ಲು
ಗಂಟೆ ನಿಮಿಷಗಳ ಅರಿವಿಲ್ಲ
ಪ್ರೀತಿಯೆಂದರೆ ಇದೇ ಇರಬಹುದು
ನಾನೂ ನೋಡುತ್ತಲೇ ಇದ್ದೇನೆ
ಗಾಡಿ ಓಡಿಸುವಾಗಲೂ
ಮಾತಿಗೆ ಬಿಡುವಿಲ್ಲ
ಹೆಲ್ಮೆಟ್ ಒಳಗೆ ಮೌನ
ಮಾತು , ಹುಸಿಕೋಪ, ನಾಚಿಕೆ
ಎಲ್ಲಾ ಏನೇನಿಲ್ಲ ?

"ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ": ದೀಪಕ್ ಚೋಪ್ರ

ಮುಂಬೈನಲ್ಲಿ ನಿನ್ನೆ ನಡೆದದ್ದರ ಸಂಬಂಧ ಸಿ ಎನ್ ಎನ್ ಚ್ಯಾನೆಲ್ಲಿನ ಲ್ಯಾರಿ ಕಿಂಗ್ ಲೈವ್ ಕಾರ್ಯಕ್ರಮದಲ್ಲಿ ದೀಪಕ್ ಚೋಪ್ರ, "ಈ ರೀತಿ ಯೋಜನೆ ರೂಪಿಸಿ ಕಾರ್ಯನಿರ್ವಹಹಿಸುವವರ ಹಿಂದೆ ಯಾರಿದ್ದಾರೆ? ಇವರಿಗೆ ಹಣ ಹೊಂದಿಸುತ್ತಿರುವವರು ಯಾರು?