ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ತುಳು ಭಾಷೆ

ನಿಮ್ಮಲ್ಲಿ ಯಾರಿಗಾದರೂ ತುಳು ಭಾಷೆ ಗೊತ್ತಿದ್ದರೆ ದಯವಿಟ್ಟು ಕಲಿಸಿಕೊಡಿ.

ನಾವು ಕನ್ನಡದಲ್ಲಿ ೧ನೇ ತರಗತಿಯಲ್ಲಿ ಕಲಿತ ಹಾಗೆ ಅವನು ರಾಮ, ಅವಳು ಕಮಲ, ರಾಮನ ಮಗ ಭೀಮ, ಹೀಗೆ ಹೇಳಿಕೊಡಲು ಸಾಧ್ಯವೇ ??

ಶತಕ

ಮಾರುದ್ದ ಜಡೆ, ಮೋಹಕ ಕಂಗಳವಳು
ಮಾತನಾಡಿಸಿದರೆ ನಾಚುವಳು, ದೂರ ಸರಿದರೆ ಕಳ್ಳ ನೋಟವ ಬೀರುವಳು
ಮಾತನಾಡಳೆಂದು ಬೇರೆ ಹುಡುಗಿಯರೊಡನೆ ಹರಟಿದರೆ ಹುಸಿ ಮುನಿಸ ತೋರುವಳು

ಹೊಸ ಉಡುಗೆಯ ತೊಟ್ಟು ವಯ್ಯಾರ ತೋರುವಳು
ಅವಳ ಅಂದವ ಹೊಗಳಿದರೆ ಕೆಂಪಾಗುವಳು
ಗಮನಿಸದಿರೆ ವಾರಗಳುರುಳಿದರೂ ಬಳಿ ಸುಳಿಯಳು

ಹಗಲೆಲ್ಲಾ ದೂರವಾಣಿಯಲ್ಲಿ ಪಿಸು ಮಾತು, ಸದ್ದು

ಅತಿಥಿ ದೇವೋ ಭವ

ನನ್ನದೇ ಜಾಗದಲ್ಲಿ
ನಿನಗೊಂದು ಮನೆ
ಬಾ ಬಾರೋ ಅತಿಥಿ
(ಅತಿಥಿ ದೇವೋ ಭವ)
ಚೆನ್ನಾಯಿತೆ ಜಾಗ?
ಹೇಳು , ಇನ್ನೇನು ಬೇಕೀಗ?
ಓಹೋ!
ನೀನಿರುವ ಜಾಗ ಮಾತ್ರ
ನಿನ್ನದಾಗಬೇಕೆ, ಸರಿ
ನಾವು ನೂರು ನೀನೊಬ್ಬ
ಭಾರವಲ್ಲ, ಹೋದರೆ ಹೋಯ್ತು
ನಿನಗೆ ಇರಲಿ ಜಾಗ.
(ಅತಿಥಿ ದೇವೋ ಭವ)
ಏನೆಂದೆ!
ನಿನ್ನವರನು
ಕರೆತರುವೆನೆಂದೆಯಾ
ನಿನ್ನ ಸ್ಥಳ ನಿನ್ನಿಷ್ಟ
ಅದಕೇಕೆ ನನ್ನಪ್ಪಣೆ?-----

ಹಸಿರು ಮಿಡತೆ

(ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಕಥೆ)

ಮೇಜಿನ ಮೇಲಿದ್ದ ದೀಪದ ಜೊತೆಗೆ ಆಟವಾಡುತ್ತಾ ತಟ್ಟನೆ ಏನೋ ನೆನಪಿಸಿಕೊಂಡು ಮೈ ಅದುರಿಸಿದಳು ರಚನಾ!
ರಾತ್ರೋ ರಾತ್ರಿ ಮುಗಿಲೆತ್ತರಕ್ಕೆ ಬೆಳೆದು ನಿಂತ ಆವರಣ ಗೋಡೆಯ ಹಿಂದಿರುವುದೇನು? ಅನ್ನುವ ಕುತೂಹಲ ಇನ್ನೂ ತಣಿದಿರಲಿಲ್ಲ! ಗೇಟ್‍ನ ಸಂಧಿಗೆ ಕಣ್ಣುಗಳನ್ನು ತೂರಿಸಿ ಹುಡುಕುವ ಪ್ರಯತ್ನ ಮಾಡುತ್ತಿದ್ದಳು.
ತಾನು ಓಡಾಡಿದ ಸ್ಯಾಮ್ ಅಂಕಲ್‍ನ ಎಸ್ಟೇಟ್ ಅದು! ಕಿತ್ತಳೆ ಹಣ್ಣುಗಳನ್ನು ಕಿತ್ತು, ಸ್ಯಾಮ್ ಅಂಕಲ್‍ನ ಜೊತೆಗೆ ಎಸ್ಟೇಟ್‍ನ ಹುಲ್ಲುಗಳ ಮೇಲೆ ನಡೆದಾಡಿದ್ದಳು. ಕೈಯಲ್ಲಿ ಕೋವಿ ಹಿಡಿದುಕೊಂಡೆ ಆತ ಜೀಪನ್ನೇರುತ್ತಿದ್ದ!
ಕಿತ್ತಳೆಯ ಸಿಪ್ಪೆ ಸುಲಿದು ಅದೆಷ್ಟೋ ಬಾರಿ ಅದರ ರಸವನ್ನು ಅವನ ಕಣ್ಣಿಗೆ ಹಾರಿಸಿದ್ದಳು.
"ನೀನು ಬಾರಿ ಚಾಲಾಕಿನ ಹುಡುಗಿ. ಹಸಿರು ಮಿಡತೆ ತರಹ ಚುರುಕಾಗಿದ್ದಿಯಾ. ನೀನು ಈ ಎಸ್ಟೇಟ್‍ಗೆ ಮಗಳಾಗಿ ಬರ್ತೀಯಾ? ಈ ಎಸ್ಟೇಟ್‍ಗೆ ನಿನಗಿಂತ ಒಳ್ಳೆ ವಾರ್‍ಅಸುದಾರರು ಬೇರಾರು ಸಿಗಲಿಕ್ಕಿಲ್ಲ. ನೀನೇ ಸರಿಯಾದ ಒಡತಿ" ಮಕ್ಕಳಿಲ್ಲದ ಸ್ಯಾಮ್ ಅಂಕಲ್‍ನ ಕಣ್ಣುಗಳಲ್ಲಿ ಆಸೆಯ ದೀಪವಿತ್ತು.
"ಅಂಕಲ್, ನೀವು ನನ್ನ ಛೇಡಿಸ್ತಿದ್ದೀರಾ?... ಇಷ್ಟು ದೊಡ್ಡ ಎಸ್ಟೇಟ್‍ನ ನಾನು ನಿಭಾಯಿಸಲಾರೆ. ನಿಮ್ಮ ಜೊತೆಗೆ ಸುತ್ತಾಡೋದಿಕ್ಕೆ ನಾನು ಬರ್ತೀನಿ.."
ಸ್ಯಾಮ್‍ನ ಕಣ್ಣುಗಳು ಹನಿಗೂಡಿದವು.
"ವೈಶಾಲಿ ಹೋದ ನಂತರ ನನ್ನ ಆಸಕ್ತಿಯೆಲ್ಲಾ ಬಿದ್ದೋಯ್ತು. ನಿನ್ನ ತಂದೆ ಗಿರಿಯಪ್ಪನ ಕೇಳ್ದೆ. `ನನಗಿರೋಳು ಒಬ್ಳೆ ಮಗಳು. ಹೇಗಯ್ಯಾ ನಿನ್ನ ಎಸ್ಟೇಟ್‍ಗೆ ಕಳುಹಿಸ್ಲಿ?' ಅಂದು ನಿರಾಕರಿಸಿ ಬಿಟ್ಟ. ಎಸ್ಟೇಟನ್ನು ಮಾರೋದಿಕ್ಕೆ ನಂಗೆ ಇಷ್ಟವಿಲ್ಲ. ನಿನ್ನಂತಹ ಚುರುಕಿನ ಹುಡುಗಿ ನನ್ನ ಎಸ್ಟೇಟಿಗೆ ಬೇಕಿತ್ತು"
"ಅಂಕಲ್, ನಾನು ಯಾವತ್ತೂ ನಿಮ್ಮ ಜೊತೆಗಿರ್ತೀನಿ. ಆದರೆ ಎಸ್ಟೇಟ್‍ನ ವಾರಸುದಾರಿಕೆ ಬೇಡ"
ಅವಳ ಮಾತಿಗೆ ಪ್ರೀತಿಯಿಂದ ಮೈದಡವಿದ್ದ...
ಆಲೋಚನೆಯ ಗುಂಗಿನಲ್ಲಿರುವಾಗಲೇ ಅವಳಿಗೆ ಗೋಚರಿಸಿತ್ತು, ಗೋಡೆಯ ಮೇಲೆ ಬಿದ್ದ ನೆರಳು!

ಉಗ್ರರಿಂದ ಬಂದ ಬುಲೆಟ್ ಎದುರಿಗಿದ್ದವನ ಧರ್ಮ ಕೇಳಿ ಒಳ ನುಗ್ಗಿತ್ತಾ?

"ಸಾಮಾನ್ಯವಾಗಿ ಎಲ್ಲರೂ ಬದುಕಿ ಸಾಯುತ್ತಾರೆ, ಆದರೆ ಇವರು ಸತ್ತು ಬದುಕಿದ್ದಾರೆ"

ತಿಪಟೂರು, ತಿಪ್ಪೇಸ್ವಾಮಿ

ಒಂದೊಂದುಸಾರಿ ಹೀಗೆ ಕೆಲವು ಹೆಸರುಗಳು 'ಇವುಗಳ ಅರ್ಥ ಏನಿರಬಹುದು?' ಎಂದು ಕಾಡಲು ಶುರುಮಾಡುತ್ತವೆ.

ತಿಪಟೂರುಮತ್ತು ತುಮಕೂರು ಎರಡರಲ್ಲೂ ಎರಡು ಪದಗಳಿಗೆ. ಊರು ಅನ್ನುವುದು ಉತ್ತರ ಪದ, ಅಥವ ನಮಗೆ ಈಗ ಅರ್ಥ ತಿಳಿಯದಿರುವ ಮೊದಲ ಪದಕ್ಕೆ ಸೇರ್ಪಡೆಯಾಗಿರುವ ಸಾಮಾನ್ಯವಾಚಕ.ಅದು ಗೊತ್ತು. ಆದರೆ ‘ತಿಪಟ' ಅಥವ ‘ತಿಪಟು', ‘ತುಮಕ' ಅಥವ 'ತುಮುಕು' ಅಂದರೆ?

ಇವು ಕನ್ನಡದಪದಗಳೋ, ಅಥವ ದ್ರಾವಿಡ ಮೂಲದ ಪದಗಳೋ, ಅರ್ಥ
ಏನು ಎಂದು ಬಹಳ ದಿನಗಳಿಂದ ಯೋಚನೆ ಮಾಡುತ್ತಲೇ ಇದ್ದೆ. ಇತ್ತೀಚೆಗೆಉಡುಪಿಯ ಗೋವಿಂದ ಪೈ
ಸಂಶೋಧನ ಕೇಂದ್ರದವರು ಬಹಳ ಹಿಂದೆಯೇ ಪ್ರಕಟಿಸಿದ ತುಳು ನಿಘಂಟನ್ನು ನೋಡುತ್ತಿರುವಾಗಈ
ಪದಗಳನ್ನೇ ಹೋಲುವ ಪದಗಳು ಕಂಡು ಆಶ್ಚರ್ಯವಾಯಿತು. ತುಳು ಭಾಷೆಯಲ್ಲಿ ಈಗ ಕನ್ನಡದಲ್ಲಿ
ಬಳಕೆ ತಪ್ಪಿರುವಎಷ್ಟೋ ರೂಪಗಳಿವೆಯಲ್ಲ, ಹಾಗಾಗಿ ತುಳು ಪದಗಳ ಮೂಲಕಇವನ್ನು ಅರ್ಥಮಾಡಿಕೊಳ್ಳಬಹುದೇ ಅನ್ನಿಸಿತು. ಎರಡು ಸಾಧ್ಯತೆಗಳು ಹೊಳೆದವು:

ಆಡಿ ಬಾ ಕಂದ...

ಆಡಿ ಬಾ ಕಂದ... ಈ ವಾಕ್ಯವನ್ನು ಕೇಳಿದಾಗ ಅಥವಾ ಓದಿದಾಗ ತಕ್ಷಣ ನಮ್ಮ ಕಣ್ಮುಂದೆ ಬರುವ ದೃಶ್ಯ, ತಾಯಿ-ಮಗುವಿನ ಬಾಂಧವ್ಯ, ಪ್ರೀತಿ, ವಾತ್ಸಲ್ಯ. ತಾಯಿ ಮಗುವಿಗೆ ಹೇಳುತ್ತಾಳೆ, ಆಟವಾಡಿ ಬಾ ಕಂದ ಹಾಲಿನಲ್ಲಿ ಬಂಗಾರದ ಮೋರೆಯನ್ನು ತೊಳೆದೇನು ಎನ್ನುತ್ತ ಕಂದಮ್ಮನಿಗೆ ಪ್ರೀತಿಯಿಂದ ಕರೆ ನೀಡುತ್ತಾಳೆ.

ಕನ್ನಡಿಗರ ನುಡಿ

"ಎಂಥ ಸೌಂದರ್ಯ ನೋಡು, ನಮ್ಮ ಕರುನಾಡ ಬೀಡು..." ಎಂದು ಹಾಡಿಹೊಗಳಿರುವ ಕವಿಗಳ ನಾಡು, ಕಲೆಗಳ ನೆಲೆಬೀಡು, ಸಂಸ್ಕೃತಿಯ ತವರೂರು, ಈ ಚಂದದ, ಗಂಧದ, ಚೆಲುವ ಕರುನಾಡು, ವೈವಿಧ್ಯತೆಗೆ ಹೆಸರು ಈ ಕರುನಾಡು.

"ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು..." ಎಂದು ಹೇಳಿದ ಮನದಟ್ಟು ಮಾಡಿಸಿದ ನಡೋಜ ಕುವೆಂಪು ಹುಟ್ಟಿದ ನಾಡು ಇದು.

ಯೋಧನಿಗೆ ನಮನ

ತಾಯೆ ಭಾರತಿಯೆ
ನಿನ್ನ ಸಿರಿಯಡಿಗೆ
ಬಂದಿತೊಂದು ಗಂಧ
ತನ್ನ ಜನಕಾಗಿ
ಮಣ್ಣ ಋಣಕಾಗಿ
ಬಲಿಯಾದ ವೀರ ಯೋಧ

ನಾನು ನನದಿಲ್ಲ
ಗುರಿಯೇ ಅವಗೆಲ್ಲಾ
ದೇಶವೊಂದೇ ವ್ಯಾಪ್ತಿ
ಮನದಿ ಅಳುಕಿಲ್ಲ
ಹಗೆಯ ಭಯವಿಲ್ಲ
ಇದುವೇ ಅವನ ರೀತಿ

ಮೋಸದಿಂದ
ಒಳನುಗ್ಗಿ ಬಂದ
ಶತ್ರುವಿಗೆಷ್ಟು ಧೈರ್ಯ
ಹಗೆಯ ಎದೆಯೊಳಗೆ
ನಡುಕ ಹುಟ್ಟಿಸುತ
ಬಂದ ನೋಡು ಯೋಧ

ಮಾತೆ ಭಾರತಿಯೆ
ನಿನ್ನ ರಕ್ಷಣೆಯು