ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಒಗಟಿಗೆ ಉತ್ತರ

ಕಳೆದ ಶತಮಾನದ ಮೂವತ್ತರ ದಶಕದ ಆರಂಭದಲ್ಲಿ ಬಂದ ಅರೇಬಿಯ ಮೂಲದ ಅಮೇರಿಕಾದ ಪ್ರಸಿದ್ಧ ಕವಿ ಇಲ್ಯಾ ಅಬು ಮಾದಿ ಜೀವನದ ಅರ್ಥದ ಹುದುಕಾಟದ ಪ್ರಯತ್ನದಲ್ಲಿ ನಿರರ್ಥಕತೆಯನ್ನು ಕಾಣುವದನ್ನು ತನ್ನ ಪ್ರಸಿದ್ಧ ಅರೇಬಿ ಕವನ "ಒಗಟು"ನಲ್ಲಿ ವಿವರಿಸುತ್ತಾನೆ.

ರೆಂಬೆ ಕೊಂಬೆಗಳಿಲ್ಲದ ಮರಗಳು

’ನಾನು ಇಂಥವರ ಶಿಷ್ಯ ಅಥವಾ ಶಿಷ್ಯೆ’ ಎಂಬ ಮಾತನ್ನು ಆಗಾಗ ಕೇಳುತ್ತಿರುತ್ತೇವೆ. ’ಗುರುವಿಗೆ ತಕ್ಕ ಶಿಷ್ಯ/ಶಿಷ್ಯೆ’ ಎಂಬ ಮಾತೂ ಉಂಟು.

ದಡ ಕಾಣದ ಯಾನ- ಜೀವನ

ಬಾಯಾರಿಸಿ ದಣಿವಾರಿಸಿಕೋ
ನಿಲ್ಲದಿರಲಿ ಪಯಣ
ಗರಿ ಬಿಚ್ಚಿ ಎದೆ ಸೆಟೆಸಿಕೋ
ಮುಂದುವರಿಯಲಿ ಯಾನ

ತುಂಬು ನೀರ ನದಿಯಿರಲಿ
ದಡ ಕಾಣದ ಯಾನ
ಇವು ಯಾವುವೂ ತರದಿರಲಿ
ಈ ಪಯಣಕೆ ವಿಘ್ನ

ಛಲವಿರಲಿ ಹುರುಪಿರಲಿ
ಗುರಿಸೇರುವ ಹಸಿವಿರಲಿ
ಆ ಗಮ್ಯದ ಈ ದೂರವ
ಕ್ರಮಿಸುವ ಮನಸ್ಸಿನಲಿ

ಈ ಜಗದೇ ಶಕ್ತಿಯೊಂದಿದೆ
ಎಲ್ಲದರ ಹಿಂದೆ
ನಿನ್ನಾವೆಗೆ ಅಂಬಿಗ ನೀ
ಸಾಗುತಲಿರು ಮುಂದೆ

ನನ್ನ ಮೃದಂಗಾಭ್ಯಾಸ

ನಾನೇನೂ ಸಂಗೀತದ ಹಿನ್ನೆಲೆ ಇದ್ದ ಮನೆಯಿಂದ ಬಂದವನಲ್ಲ. ನನ್ನ ಅಮ್ಮ ಊರ ಗಣೇಶೋತ್ಸವದಂದು ಭಕ್ತಿ ಗೀತೆ, ಭಾವ ಗೀತೆ, ಚಿತ್ರ ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಬಹುಮಾನ ಪಡೆಯುತ್ತಿದ್ದಳಾದರೂ, ಆಕೆಯೇನೂ ಶಾಸ್ತ್ರೀಯವಾಗಿ ಸಂಗೀತ ಅಭ್ಯಾಸ ಮಾಡಿದವಳಲ್ಲ. ಆದ್ದರಿಂದ ಸಂಗೀತದ ಗಂಧ ಗಾಳಿ ಇಲ್ಲದೇ ಇದ್ದರೂ, ಮನೆಯಲ್ಲಿ ಅಪ್ಪ ಹಾಕುತ್ತಿದ್ದ ಕಾಳಿಂಗರಾಯರದ್ದೊ, ಅಶ್ವಥ್ಥರದ್ದೋ, ರಫಿಯದ್ದೋ ಗಾನ ಸುಧೆಯಲ್ಲಿ ತೇಲಿ, ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಒಬ್ಬನೇ ಹಾಡಿಕೊಂಡು ಚಪಲ ತೀರಿಸಿಕೊಂಡದ್ದು ಇದೆ. ಅಲ್ಲದೆ ಚಿಕ್ಕಂದಿನಲ್ಲಿ ಊರಲ್ಲಾಗುತ್ತಿದ್ದ ಬಯಲಾಟದ ಚಂಡೆ, ಮದ್ದಳೆ, ಭಾಗವತಿಗೆ ಕೇಳಿ ಮನೆಯಲ್ಲಿರುವ ಪಾತ್ರೆ, ಡಬ್ಬಿ ಸೌಟು ಹಿಡಿದುಕೊಂಡು ಅವರನ್ನು ಅನುಸರಿಸ ಹೋಗಿ ಅಮ್ಮನಿಂದ ಬೈಸಿಕೊಂಡದ್ದಿದೆ.

ಇಂಜಿನಿಯರ್ಗೆಂದು ಊರನ್ನು ಬಿಟ್ಟು, ಸ್ವತಂತ್ರವಾದ ನನ್ನ ಮನಸ್ಸಿಗೆ ಸಂಗೀತ ಕಲಿಯಬೇಕೆಂಬ ಹಂಬಲ ಒಂದು ಮೂಲೆಯಲ್ಲಿ ಮೊಳೆತಿತ್ತು.ಹುಟ್ಟಿನಿಂದಲೇ ಆಲಸಿಯಾದ ನಾನು ಯಾವ ಬಗೆಯ ಸಂಗೀತ, ಯಾವ ಗುರುಗಳಲ್ಲಿ ಕಲಿಯಬೇಕು ಎಂಬ ಯೋಚನೆಯನ್ನು ಮನಸ್ಸಿಗೆ ತಂದುಕೊಳ್ಳದೇ ಸುಖವಾಗಿದ್ದೆ. ಹಂಬಲ ಜಾಸ್ತಿಯಾದಾಗ ಗುರುಗಳು ತಾನಾಗಿಯೇ ಒಲಿಯುತ್ತಾರೆ ಎಂಬ ಮಾತು ನನ್ನ ಜೀವನದಲ್ಲಿ ದಿಟವಾಯ್ತು. ನನ್ನ ವಿದ್ಯಾರ್ಥಿ ನಿಲಯದವನೇ ಆದ ರಾಮಮೂರ್ತಿ ತಬಲಾ ಕಲಿಯುವ ತನ್ನ ಹಂಬಲವನ್ನು ವ್ಯಕ್ತಪಡಿಸಿ, ಗುರುಗಳನ್ನೂ ಹುಡುಕಿರುವುದಾಗಿ ತಿಳಿಸಿದ. ತಬಲಾ ಆದರೆ ತಬಲಾ, ಎನೋ ಒಂದು ಕಲಿತರಾಯಿತು ಎಂದು ನಿರ್ಧರಿಸಿ ನಾನೂ ಅವನ ಜೊತೆ ಸೇರಿದೆ.

ಉಗ್ರರ ಮುಂಬೈ ದಾಳಿ ಹಾಗು ವಿದ್ಯುನ್ಮಾನ ಮಾಧ್ಯಮಗಳ ಭಯೋತ್ಪಾದನೆ!

ಮಾಧ್ಯಮಗಳ ಭಯೋತ್ಪಾದನೆ...

ಉದಾಹರಣೆ ೧:
ಉಡುಪಿಯ ಶಾಸಕ ರಘುಪತಿ ಭಟ್ ಅವರ ಕೌಟುಂಬಿಕ ಕಲಹ ತಾರಕಕ್ಕೇರಿದ್ದು, ಅದನ್ನು ನಮ್ಮ ಕನ್ನಡದ ವಿದ್ಯುನ್ಮಾನ ಸುದ್ದಿ ವಾಹಿನಿಗಳು ರಾಷ್ಟ್ರೀಯ ವಿಪತ್ತು ಎನ್ನುವಂತೆ ಬಿಂಬಿಸಿದ್ದು, ಕೌಟುಂಬಿಕ ಕಲಹಕ್ಕಿಂತ ಈ ನೇರ ಪ್ರಸಾರದಿಂದ ಮನನೊಂದು ಅವರ ಶ್ರೀಮತಿ ಪದ್ಮಪ್ರಿಯಾ ದೆಹಲಿಯ ನಿವಾಸ ಸಂಕೀರ್ಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು..ಶಾಸಕರ ಆಪ್ತಮಿತ್ರ ಅತುಲ್ ಅವರಿಗೂ ಪದ್ಮಪ್ರಿಯಾಗೂ ಸಂಬಂಧ ಕಲ್ಪಿಸಿ ನಮ್ಮ ಮಾಧ್ಯಮಗಳು ಟಿ.ಆರ್.ಪಿ ಹೆಚ್ಚಿಸಿಕೊಂಡಿದ್ದು ನೆನಪು ಮಾಡಿಕೊಳ್ಳಿ. (ಸತ್ಯ ಇನ್ನು ಬಯಲಿಗೆ ಬರಬೇಕಿದೆ.)

ಉದಾಹರಣೆ ೨:
ದೆಹಲಿ ಸಮೀಪದ ನೋಯ್ಡಾದಲ್ಲಿ ಜರುಗಿದ ‘ಆರುಷಿ’ ಕೊಲೆ ಪ್ರಕರಣ, ಮಾಧ್ಯಮಗಳು ಪೊಲೀಸರ ಹೇಳಿಕೆ ಉಲ್ಲೇಖಿಸಿ, ಆರುಷಿ ಮನೆಯ ಕೆಲಸದಾಳನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಕ್ಕಾಗಿ ಆಕೆಯ ತಂದೆ ದಂತ ವೈದ್ಯ ಡಾ.ರಾಜೇಶ್ ತಲ್ವಾರ್ ‘ಮನೆತನದ ಗೌರವ ಕಾಪಾಡಿಕೊಳ್ಳುವ’ ಉದ್ದೇಶದಿಂದ ಕೊಂದಿರುವುದಾಗಿ ಮಾಧ್ಯಮಗಳು ವರದಿ ಮಾಡಿದ್ದವು. ನಂತರದ ಬೆಳವಣಿಗೆಗಳು ಆಘಾತಕಾರಿ ತಿರುವು ಪಡೆದವು. ಸತ್ಯ ಬೆಳಕಿಗೆ ಬಂತು. ಮಾಧ್ಯಮ ಹಾಗು ಪೊಲೀಸ್ ಇಬ್ಬರೂ ಮುಮ್ಮುಖವಾಗಿ ಬಿದ್ದರು!

ಹೀಗಾದಾಗ ಮಾಧ್ಯಮಗಳ ಸುದ್ದಿ, ಮಾಹಿತಿ, ವಿಶ್ಲೇಷಣೆ, ಸಮೀಕ್ಷೆ, ಸಂದರ್ಶನ, ಫಾಲೋ-ಅಪ್, ತಜ್ನರ ಅಭಿಮತ ಇವೆಲ್ಲವುದರ ವಸ್ತುನಿಷ್ಠತೆ, ಸತ್ಯನಿಷ್ಠತೆ, ಸಾರ್ವಜನಿಕ ಹಿತಾಸಕ್ತಿಯ ಆಶಯ-ಒಲವುಗಳು, ಐಕ್ಯತೆ, ಗೌಪ್ಯತೆ ಹಾಗು ಸಂವಿಧಾನ ಬದ್ಧ ಸ್ವಯಂ ನಿಯಂತ್ರಣ ಎಲ್ಲವೂ ಪ್ರಶ್ನಾರ್ಹವಾಗುತ್ತವೆ. ಉತ್ತರಿಸಲಾಗದ, ಉತ್ತರಿಸಿದರೂ ಸಮರ್ಪಕವಾಗದ, ಅರ್ಧ ಸತ್ಯ ಟಾಂ..ಟಾಂ..ಎನಿಸಿದ, ಜನ ಬಯಸದಿದ್ದರೂ ನೀಡಿದ ‘ಸಂತೃಪ್ತಿ’ ಇವು ಅನುಭವಿಸಬೇಕಾಗುತ್ತದೆ.

ವಿಷಾದ

ಅಕಾರಣ ಹುಟ್ಟಿ ಬಿಡುವ ಈ ವಿಷಾದ

ಈ ಇಹದ ಸುಖಸವಲತ್ತುಗಳನ್ನೆಲ್ಲ ನಿರಾಕರಿಸಿ

ಶಬ್ದಾರ್ಥಗಳ ಮಿತಿಯ ಮೀರುವುದು

 

ಎದೆಯೊಳಗೆ ನವನೀತ ಕಡೆಯುತ್ತಲೇ

ಉತ್ತುಂಗಕ್ಕೇರಿದ ಕನಸನ್ನೊಡೆಯುವುದು

ಯಾವುದೋ ಮುರಳಿಯ ಕರೆಗೆ ಕಿವಿಗೊಡುವುದು

 

ಪೊಡಮಡುವೆ, ಹೇ ವಿಷಾದವೇ

ಸುಡುವಗ್ನಿಗೆ ಉದಕವಾಗುವ ನಿನ್ನ ನೆರವಿಗೆ

ನಿನ್ನ ಮೌನ ಭರದ ನಡಿಗೆ

ನೀ ನೀಡುವ ಆಜ್ಷೆಯನು ಗಾಳಿ ಎದುರು ನೋಡುತ್ತಿದೆ
ಜೀವದಿ ಉಸಿರಾಡಿ ನಿನ್ನುಸಿರಿನ ಜೊತೆ ನನ್ನ ಸೇರಲು

*** *** ***
ಮಳೆ ಗಾಳಿ ಸುನಾಮಿ ಜೋರಾಗಿ ಬೀಸಿ ಬೀಸಿ ಬಂದರೂ
ನಿನ್ನ ಮೌನ ಭರದ ನಡಿಗೆ ಮುಂದೆ ಎಲ್ಲಾ ಸೋತಿವೆ

*** *** ***
ಅಂದು ತುಟಿಗೆ ನೀಡಿದ ಒಂದೇ ಒಂದು ಹನಿ ಮುತ್ತು
ಇಂದು ತುಂಬು ಕಡಲಾಗಿ ಅಲೆ ರೂಪದಿ ಮನ ತಬ್ಬಿದೆ

*** *** ***

ಉಗ್ರರ ಮುಂದಿನ ಗುರಿ: ವಿಂಡ್ಸರ್ ಮ್ಯಾನರ್, ಬೆಂಗಳೂರು?

ವಿ.ಕ ವರದಿ ಪ್ರಕಾರ, ಉಗ್ರರ ಮುಂದಿನ ಗುರಿ, ಬೆಂಗಳೂರು. ಅದರಲ್ಲೂ ಐ.ಟಿ ಕಂಪನಿಗಳು ಹಾಗೂ ಪಂಚತಾರಾ ಹೋಟೆಲ್ ಗಳು.

http://www.vijaykarnatakaepaper.com/epaper/pdf/2008/11/29/20081129aA001101004.pdf

ಉಗ್ರರ ಮುಂದಿನ ಗುರಿ: ವಿಂಡ್ಸರ್ ಮ್ಯಾನರ್, ಬೆಂಗಳೂರು?

ವಿ.ಕ ವರದಿ ಪ್ರಕಾರ, ಉಗ್ರರ ಮುಂದಿನ ಗುರಿ, ಬೆಂಗಳೂರು. ಅದರಲ್ಲೂ ಐ.ಟಿ ಕಂಪನಿಗಳು ಹಾಗೂ ಪಂಚತಾರಾ ಹೋಟೆಲ್ ಗಳು.

http://www.vijaykarnatakaepaper.com/epaper/pdf/2008/11/29/20081129aA001101004.pdf