ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಯಾರಮ್ಮ ನಿನಗೆ ಸಮ ನೀನು ನಿರುಪಮ....

ಯಾರ ಬಳಿಯಲ್ಲಾದರು "ಯಾರಮ್ಮ ನಿನಗೆ ಸಮ ನೀನು ನಿರುಪಮ....." ಹಾಡು ಮತ್ತು ಸಾಹಿತ್ಯ ಇದ್ದರೆ ಹಂಚಿಕೊಳ್ಳುವಿರಾ?
ಮೊನ್ನೆ ಸ್ನೇಹಿತನ ಮದುವೆಗೆಂದು ಊರಿಗೆ ಹೋದಾಗ ಒಬ್ಬರು ಈ ಹಾಡನ್ನು ಹೇಳಿದರು. ಅಮ್ಮನ ಬಗೆಗಿನ ಈ ಭಾವಗೀತೆ ತುಂಬಾ ಮಧುರವಾಗಿದೆ.

ಪ್ರೇಮ ಸಂಗೀತ

ನಾನೂ ಒಮ್ಮೊಮ್ಮೆ ಹಾಡುತ್ತೇನೆ
ಒಮ್ಮೆ ಆರೋಹಣ
ಒಮ್ಮೆ ಅವರೋಹಣ
ಯಾರಿಗೂ ಕೇಳದಂತೆ
ನನ್ನೊಳಗೆ ನಾನೇ ಗುನುಗುತ್ತೇನೆ

ನನ್ನ ಸ೦ಗೀತದಿ೦ಪಿಗೆ
ನಾನೇ ಮನಸೋಲುತ್ತೇನೆ
ತಾಳ ತಪ್ಪಿದರೂ ನನಗೆ ನಾನೇ
ರಾಗ ವಿರಾಗವಾದರೂ ನನಗೆ ನಾನೇ
ಗಾಯಕ ಕೇಳುಗ ನಾನೇ ತಾನೆ

ನನ್ನ ಪ್ರೇಮ ರಾಗಕೆ ಈಗ
ಇವಳೊಬ್ಬಳು ಹೊಸ ಜೋಡಿ
ಅವಳ ತಾಳಕ್ಕೆ ತಾಳ ಸೇರಿಸಿ
ಹಾಡಿ ಕಚೇರಿ ನಡೆಸಿ

ತ್ರಿಪದಿ ೨೪-೨೫-೨೬

ಧ್ಯಾನದಲ್ಲಿ ಸದಾ ನಿನ್ನ ನಾಮವಿರಲು
ಜ್ಞಾನದಲ್ಲಿ ಸದಾ ನಿನ್ನ ದಿವ್ಯವಿರಲು
ಮಾನ ಸನ್ಮಾನದ ಚಿಂತೆಯಿರದು ಪ್ರಭುಶಂಕರ

ಕಷ್ಟವು ನಿನ್ನಿಂದಲೇ ಇಷ್ಟವು ನಿನ್ನಿಂದಲೇ
ಕಷ್ಟ ಇಷ್ಟಗಳಿಂದ ಎನ್ನ ಮನವು ಮಾತ್ರ
ಭ್ರಷ್ಟವಾಗದಿರಲಿ ಪ್ರಭುಶಂಕರ

ಹರೆಯ ಯೌವನದಲ್ಲಿ ಅಹಂ ಇಂದ
ಮೆರೆವ ಹರೆಯದವಳಿಗೆ ಯಾವ ದೇವರ
ಹರಕೆಯು ಬಾರದು ಪ್ರಭುಶಂಕರ

ನಿಮ್ಮೊಳು ಕಾಣದ ಕಾಣ್ಕೆ

ಅರಿವೆನಗೆ
ತಿಳಿವೆನಗೆ
ಒಳವೆನಗೆ
ಗೆಲುವೆನಗೆ ಕಣ್ಣಿಗೆ ಕಂಡಂತೆ
ಸಾದನೆಗೆ ಕೊನೆಯುಂಟೆ
ಜಗವೆನಗೆ
ಸೊಗಮೆನಗೆ
ವಿಧಿಯೆನಗೆ
ಶ್ರೀ ಎನಗೆ
ಸ್ಪರ್ಶಕೆ ಸಿಕ್ಕಂತೆ
ಬದುಕಿಗೆ ಸಾವುಂಟೆ
ಗುರುವೆನಗೆ
ಗುರಿಯೆನಗೆ
ಜೊತೆಯೆನಗೆ
ಸರಿಯೆನಗೆ
ಕಿವಿಯು ಕೇಳ್ವನ್ತೆ
ಜೀವಕೆ ಸಾವುಂಟೆ
ನಮ್ಮೊಳಗೆ
ನಿಮ್ಮೊಳಗೆ
ಜಗದೊಳಗೆ
ಜನರೊಳಗೆ
ಇರುವ ಒಂದಂಶ
ನಡೆನೀನ್ ಎಂಬುದ್ಘೋಶ

ಕೋಪವೇಕೆ ಕನಕಾಂಗಿ

ಕೋಪವೇಕೆ ಕನಕಾಂಗಿ
ಮರೆಯಾದರೆ ಮತ್ತೆ ನಾನು ಏಕಾಂಗಿ
ಹುಣ್ಣಿಮೆಯ ಮುಖದೊಳಗೇಕೆ ಅಮಾವಾಸ್ಯೆಯ ಇಣುಕು
ಅರಳಲಿ ತುಟಿ ಮತ್ತೆ ಬೆಳಗಲಿ ನಿನ್ನ ಮುಖದ ಬೆಳಕು

ಸಿರಿಸಾಗರ ನನ್ನಲ್ಲಿಲ್ಲ
ಹಡಗು ಕಟ್ಟುವ ಮನಸ್ಸು ನನ್ನದಲ್ಲ
ಪ್ರೇಮಸಾಗರದೊಳಗೊಂದು ದೋಣಿ ಕಟ್ಟಿ ತೆಲಿಸುವೆನು ಕೇಳು ಗೆಳತಿ
ತೌರಸುಖವು ನನ್ನಲ್ಲಿಲ್ಲ
ಅರಮನೆಯ ಕನಸು ತೋರಿಸುವುದಿಲ್ಲ

"ಕಾರಣ"

'ನನ್ನ ಜೋರಾದ ಹ್ರದಯದ ಬಡಿತಕೆ ಕಾರಣ ನಾ ತಿಳಿದಿದ್ದೆ,
ಅದು ನಿನ್ನ ನೆನಪುಗಳ ಪ್ರಭಾವವೆಂದು,
ಆದರೆ ಆಮೇಲೆ ತಿಳಿಯಿತು ಅದಕ್ಕೆ ಕಾರಣ
ನನ್ನ ದೇಹದಲ್ಲಿಯ ರಕ್ತದ ಅಭಾವವೆಂದು’

ರಾಜು ಬಾಡಗಿ

ರಾಜ್ಯವು ವಿದ್ಯ್ಯುತ್ ಅಭಾವದಿಂದ ತತ್ತರಿಸುತ್ತಿರುವಾಗ, ಬೆಂಗಳೂರಿನಲ್ಲಿ ಹೊನಲು ಬೆಳಕಿನ ಪಂದ್ಯವಾಡಿದ್ದು ಎಷ್ಟು ಸರಿ?

ನಮ್ಮ ರಾಜ್ಯವು ವಿದ್ಯ್ಯುತ್ ಅಭಾವದಿಂದ ತತ್ತರಿಸುತ್ತಿರುವಾಗ, ಬೆಂಗಳೂರಿನಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯವಾಡಿದ್ದು ಎಷ್ಟು ಸರಿ?

ಬಲ್ಲವರು ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸುವಿರಾ?
- ಹೊನಲು ಬೆಳಕಿನ ಪಂದ್ಯದಲ್ಲಿ ಖರ್ಚಾಗುವ ವಿದ್ಯುತ್ ಎಷ್ಟು?
- ಈ ವಿದ್ಯುತ್‍ ಪ್ರಮಾಣ ಸರಾಸರಿ ಎಷ್ಟು ಮನೆಗಳ ನಿರ್ವಹಣೆ ಮಾಡಬಹುದು?

ಬೆಂಗಳೂರು ಪುಸ್ತಕ ಹಬ್ಬ - ಮಕ್ಕಳ ಕಥೆ, ಹಾಡುಗಳು - ಇತರೆ

ಇಂಗ್ಲೀಷಿನಲ್ಲಿ ಕಳುಹಿಸಿದ್ದಕ್ಕೆ ಕ್ಷಮೆ ಕೋರುತ್ತೇನೆ...

Snehitare,
Bengalooru
pustaka habba looked unique to me this time. The reason being a lot of good work
that has happened in making kannada reach the common man.
Some
highlights:

ಸೋಮಾರಿತನದ ಪರಮಾವಧಿ...

ಸೋಮಾರಿತನದ ಪರಮಾವಧಿ

ಮೊದಲನೆಯ ಕಳ್ಳ : ಇಂದು ನಾವು ಬ್ಯಾಂಕಿನಿಂದ ಲೂಟಿ ಮಾಡಿದ ಹಣವನ್ನು ಎಣಿಸೋಣವೇ? 

ಎರಡನೆಯ ಕಳ್ಳ : ನನಗೆ ಬಹಳ ದಣಿವಾಗಿದೆ. ನಾಳೆಯ ದಿನಪತ್ರಿಕೆಯಲ್ಲಿ ಓದಿ ತಿಳಿಯೋಣವಂತೆ...