ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂಸ್ಕ್ರುತದ ಇಪ್ಪತ್ತೆರಡು ಉಪಸರ್ಗಗಳ ಪಟ್ಟಿ

ಪ್ರವಿಪರಾಪಸಮನ್ವವ ನಿರ್ನಿಸೌ
ದುರತಿ ದುಷ್ಪ್ರತಿ ಸೂದಧಿ ಪರ್ಯಪಿ
ತದನು ಚಾಙಭಿನೀ ಉಪ ವಿಂಶತಿಃ
ದ್ವಿಸಹಿತೇತ್ಯುಪಸರ್ಗಸಮಾಹ್ವಯಃ||

ಇದು ಸಂಸ್ಕೃತದ ಇಪ್ಪತ್ತೆರಡು ಉಪಸರ್ಗಗಳನ್ನು ಪಟ್ಟಿ ಮಾಡುವ ಶ್ಲೋಕ. ಇದು ದ್ರುತವಿಲಂಬಿತ ವೃತ್ತದಲ್ಲಿದೆ ಲಕ್ಷಣ:-’ದ್ರುತವಿಲಂಬಿತಮಾಹ ನಭೌ ಭರೌ’. ೨೨ ಉಪಸರ್ಗಗಳು ಈ ಪದ್ಯದ ಪ್ರಕಾರ ಯಾವುವೆಂದರೆ

ಒಗಟುಗಳು - ೮

ಈ ಒಗಟುಗಳನ್ನು ಬಿಡಿಸಿರಿ.

೧. ಅಕ್ಕ ಅತ್ತರೆ ತಂಗೀನೂ ಅಳ್ತಾಳೆ.
೨. ಅಗಣಿ ಮರದ ಮೇಲೆ ಕೆಂಚಪ್ಪ ಡಾಕ್ಟ್ರು ಕುಂತವ್ರೆ. ಮುಟ್ಟೋಕೆ ಹೋದವರ ಕೈಗೆಲ್ಲಾ ಸೂಜಿ ಹಾಕ್ತಾರೆ.
೩. ಮೇಲೆ ಹಸಿರು, ಒಳಗೆ ಕೆಂಪು, ತಿಂದರೆ ತಂಪು.
೪. ಅಚ್ಚಯ್ಯನಂಗಡಿ, ಪುಚ್ಚಯ್ಯನಂಗಡಿ, ಎಲ್ಲಿ ನೋಡಿದರೂ ಒಂದೇ ಅಂಗಡಿ.

ಒಗಟುಗಳ ಕೃಪೆ: ಗೆಳೆಯ ದೀಪಕ್.

"ಗೂಗಲ್ ಅನಲ್ಯಾಟಿಕ್ಸ್" ಒಂದು ವಿಶೇಷ ಅನುಭವ

ಸಾಮಾನ್ಯವಾಗಿ ಕೆಲವರು ತಮ್ಮ ಜಾಲತಾಣಕ್ಕೆ ಎಷ್ಟು ಜನ ಬರುತ್ತಾರೆ ಎಂಬ ಮಾಹಿತಿಯನ್ನು ಪಡೆಯಲು ಹಿಟ್ ಕೌಂಟರ್ (Hit Counter) ಅನ್ನು ಅಳವಡಿಸುತ್ತಾರೆ.

ಕಾಮನಬಿಲ್ಲಿಗೆ ಬಣ್ಣ ಬರೋದು ಯಾವಾಗ?

ಬೆಂಗಳೂರಿನ ಎಲ್ಲ ಎಫ್.ಎಮ್ ವಾಹಿನಿಗಳು ಒಬ್ಬರಾದ ಮೇಲೆ ಒಬ್ಬರು ಅಂತ ಕನ್ನಡ ಅಪ್ಪಿಕೊಳ್ತಾ ಇರೋವಾಗ, ನಮ್ಮ "ಕನ್ನಡ ಕಾಮನಬಿಲ್ಲು (?)" ಎಫ್.ಎಮ್ ರೇನಬೋಗೆ ಬುದ್ಧಿ ಬರೋದು ಯಾವಾಗ ಅಂತಾ?

ಏನ್ ಗುರು ನಲ್ಲಿ ಬಂದಿದ್ದ ಈ ಬರಹ ಓದಿದಾಗ ಈ ಪ್ರಶ್ನೆ ಮೂಡಿತು. ಅಲ್ಲಿನ ೨ ಸಾಲು ಇಲ್ಲಿ ಹಾಕಿರುವೆ:

ಚಿಕಾಗೋ ನಗರದ, ' ಸ್ಯುಯೆಜ್ ಕಾಲುವೆ ’ !

'ಸಿಯರ್ಸ್ ಟವರ್,’ ನಿಂದ ಕೆಳಗೆ ಕಾಣಿಸುತ್ತಿರುವುದು, ಚಿಕಾಗೋ ನಗರದ ಊರಿನ ಮಧ್ಯೆಹರಿಯುತ್ತಿರುವ ’ಸ್ಯುಯೆಜ್ ಕಾಲುವೆ.’ ಇದು ಅಷ್ಟೇನೂ ದುರ್ನಾತ ಹೊಡೆಯುವುದಿಲ್ಲವೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಆದರೆ ನಾತವಂತೂ ಇದ್ದೇ ಇರುತ್ತೆ. ವಿಧಿಯಿಲ್ಲ. ಊರೆಂದಮೇಲೆ ಇವೆಲ್ಲಾ ಇರಲೇಬೇಕಲ್ಲವೇ ! ವಿಶ್ವವಿಖ್ಯಾತ, 'ಸಿಯರ್ಸ್ ಟವರ್,' ಮೇಲಿಂದ ನೋಡಿದಾಗ, ಸುಮಾರು ೪೦-೫೦ ಮೈಲಿಗಳದೂರದ ಪ್ರದೇಶಗಳು ಕಣ್ಣಿಗೆ ಬೀಳುತ್ತವೆ. ಚಿಕಾಗೋಹತ್ತಿರ, ’ಮಿಚಿಗನ್ ಸರೋವರ,’ ವಿರುವುದು, ಒಂದು ವರದಾನದಂತೆ. ಸರಕುಸಾಮಗ್ರಿಗಳನ್ನು ಸಾಗಿಸಲು ಇದು ಅತಿ ಸೋವಿಯಾದ ಪ್ರಕ್ರಿಯೆ.

ಮಿಚಿಗನ್ ಸರೋವರದ ಬದಿಯಲ್ಲೇ, ’ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯ,’ ವಿದೆ. ’ಚಿಕಾಗೋನದಿ” , ಊರಿನ ಹತ್ತಿರದಲ್ಲೇ ಹರಿಯುತ್ತದೆ. ಆದರೆ, ಚಿಕಾಗೋನಗರದ ಯಂತ್ರೀಕರಣದ ತ್ಯಾಜ್ಯವಸ್ತುಗಳು ಅದರ ನೀರಿಗೆ ಸೇರಿ, ಮಾಲಿನ್ಯತೆಯ ಮಟ್ಟ, ಮಿತಿಮೀರಿದೆ. ಅದರಿಂದ ಅದರ ಹರಿಯುವ ದಿಕ್ಕನ್ನು ಮಿಚಿಗನ್ ಸರೋವರದ ಕಡೆ, ಬಿಟ್ಟು ದಕ್ಶಿಣಕ್ಕೆ ಹೋಗುವಂತೆ, ಅಲ್ಲಿನ ಹಿರಿಯವ್ಯಕ್ತಿಗಳು ತಾಂತ್ರಿಕವಾಗಿ ಏರ್ಪಾಡುಮಾಡಿ, ಜಯಶೀಲರಾಗಿದ್ದಾರೆ. ವಿಜ್ಞಾನಿಗಳು ಹಾಗೂ ತಾಂತ್ರಜ್ಞರಿಗೆ ಇದೊಂದು ದೊಡ್ಡಸವಾಲಾಗಿತ್ತು.

’೫ ನೆಯ ಅಕ್ಕ ವಿಶ್ವಕನ್ನಡ ಸಮ್ಮೇಳನ,’ ಈ ನಗರದಲ್ಲೇ ಅದ್ಧೂರಿಯಿಂದ ೨೦೦೮ ರ ಆಗಸ್ಟ್ ೨೯, ೩೦, ೩೧ ರಂದು ಜರುಗಿತು. ಆ ದೃಷ್ಟಿಯಿಂದ ಚಿಕಾಗೋನಗರ ನಮಗೆ ಇನ್ನೂ ಹತ್ತಿರವಾಯಿತು. ನಮಗೆ, ಸ್ವಾಮೀ ವಿವೇಕಾನಂದರು, ೧೮೯೩ ರಲ್ಲಿ ವಿಶ್ವಮತಗಳ ಸಭೆಗಳು ಆಯೋಜಿಸಿ ನಡೆಸಿಕೊಟ್ಟ ಒಂದು ಸಮ್ಮೆಳನದ ಸ್ಥಳ,’ ವನ್ನು ಕಣ್ಣಾರೆ ಕಾಣುವ ತವಕವಿತ್ತು. ಆ ಸುಂದರದಿನದಂದು ಅವರು ಪ್ರಚಂಡ ಜನಸ್ಥೋಮವನ್ನು ಉದ್ದೇಶಿಸಿ ಮಾತಾಡಿದ್ದರು. ಪ್ರಾರಂಭದಲ್ಲೇ, ಅವರು ಎದ್ದುನಿಂತು, " ಸಿಸ್ಟರ್ಸ್ ಅಂಡ್ ಬ್ರದರ್ಸ್ ಆಫ್ ಅಮೆರಿಕ, ಎಂದಾಗ, ಅಲ್ಲಿನ ಜನರ ಮೈಮನಗಳಲ್ಲಿ ವಿದ್ಯುತ್ ಸಂಚಾರವಾಗಿತ್ತು. ತೇಜಃಪುಂಜವಾದ ಕಣ್ಣುಗಳು, ವಿಶಾಲ ಹಣೆ, ಅಗಲವಾದ ವಕ್ಷಸ್ಥಳ, ಅಜಾನುಬಾಹು, ಮುಖದಲ್ಲಿ ಮಂದಹಾಸ, ಮಾತಿನಲ್ಲಿ ಧೃಡತೆ, ಹಾಗೂ ಮನಸ್ಸನ್ನು ಮುಟ್ಟುವ ವಾಕ್ಝರಿ, ಇವೆಲ್ಲಾ ಅಮೆರಿಕನ್ ಪ್ರೇಕ್ಷಕವೃಂದವನ್ನು ದಿಗ್ಭ್ರಾಂತರನ್ನಾಗಿಯೂ ಮೂಕರನ್ನಾಗಿಯೂ ಮಾಡಿದ್ದವು. ಎಲ್ಲರೂ ಎಣಿಸಿದಂತೆ, ಭಾರತದಿಂದ ಬಂದ ಕಪ್ಪು ಮನುಷ್ಯ, ಎಲ್ಲರ ಕರುಣೆಗೆ ಪಾತ್ರನಾಗುವ ಅಪಾಯದಿಂದ ಮುಂದೆಹೋಗಿ, ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ, ನಮ್ಮದೇಶದ ವೇದಾಂತ, ಹಾಗೂ ತತ್ವಜ್ಞಾನದ ಪಾಠಗಳನ್ನು ಸಮಯೋಚಿತವಾಗಿಯೂ, ಅತ್ಯಂತ ಪ್ರಭಾವಶಾಲಿಯಾಗಿಯೂ, ತಿಳಿಯಹೇಳಿದ ವಿವೇಕಾನಂದರು, ಒಂದು ಇತಿಹಾಸವನ್ನೇ ಸೃಷ್ಟಿಸಿದ್ದರು. ಎಲ್ಲಕ್ಕಿಂತ ಮಿಗಿಲಾಗಿ, ಅವರ ವ್ಯಕ್ತಿತ್ವ ಅಮೆರಿಕದ ಜನರನ್ನು ಮರುಳುಮಾಡಿತ್ತು ! ನನಗೆ ಆ ಸ್ಥಳದಲ್ಲಿ ನಿಂತು, ಆ ದಿನದ ಸ್ವಾಮೀಜಿಯವರ ಭಾಷಣದ ಧ್ವನಿ-ಸುರಳಿಯನ್ನು ಆಲಿಸುವ ವ್ಯಾಮೋಹವಿತ್ತು !

ಸ್ನೇಹ-ವೈರ

ಒಬ್ಬ ಮಾನವತಾವಾದಿಯನ್ನು ಹೀಗೆ ಪ್ರಶ್ನಿಸಲಾಯಿತು.
'ನಿಮಗೆ ಶತ್ರುಗಳಿದ್ದಾರೆಯಾ?'
'ಇಲ್ಲ, ನನ್ನ ಶತ್ರುಗಳನ್ನೆಲ್ಲಾ ಸ೦ಹಾರ ಮಾಡಿದ್ದೇನೆ. ನನಗೆ ಶತ್ರುಗಳೇ ಇಲ್ಲ.'
'ಅದು ಹೇಗೆ?'
'ನನ್ನ ಶತ್ರುಗಳನ್ನೆಲ್ಲಾ ನನ್ನ ಸ್ನೇಹಿತರನ್ನಾಗಿ ಮಾಡಿಕೊ೦ಡಿದ್ದೇನೆ.'
ನ೦ತರ ಮರಣಶಯ್ಯೆಯಲ್ಲಿದ್ದ ಒಬ್ಬ ಸರ್ವಾಧಿಕಾರಿಯನ್ನು ಒಬ್ಬ ಪಾದ್ರಿ ಪ್ರಶ್ನಿಸಿದ.

ಪುರಂದರ ದಾಸರು ಮತ್ತು ಬತ್ತೀಸ ರಾಗಗಳು

ಪುರಂದರ ದಾಸರ ರಚನೆಗಳಲ್ಲಿ ಅವರ ಕಾಲದ ಸಂಗೀತದ ಬಗ್ಗೆ ಹಲವು ಹೊಳಹುಗಳು ನಮಗೆ ದೊರೆಯುತ್ತವೆ. ಅವರ ಕಾಲದ ರಾಗ ತಾಳಗಳು, ವಾದ್ಯಗಳು, ಹಾಡುವ ಬಗೆ ಈ ಮೊದಲಾದುವುಗಳನ್ನು ಅವರ ರಚನೆಗಳೊಳಗಿರುವ ಅಂತರಿಕ ಆಧಾರಗಳಿಂದ ನಾವು ಪಡೆಯಬಹುದು.

ಮೊದಲಿಗೆ ಈ ಹಾಡನ್ನು ನೋಡೋಣ:

ತುತ್ತುರು ತೂರೆಂದು ಬತ್ತಿಸರಾಗಗಳನ್ನು ಚಿತ್ತಜ ಜನಕ ತನ್ನ ಕೊಳಲಲ್ಲೂದಿದನು

ಕೊಳಲನ್ನು ನುಡಿಸುವಾದ ತುರ್-ತುರ್ ಎಂಬ ಸದ್ದಿನೊಡನೆ ಬರುವಂತಹ ರಂಜಕ ಪ್ರಯೋಗಗಳನ್ನು ಮಾಡುವ ಕೊಳಲು ವಾದಕರನ್ನು ನಾವು ನೋಡಿದ್ದೇವೆ. ಕೃಷ್ಣನು ಒಬ್ಬ ಚತುರ ಕೊಳಲು ನುಡಿಸುವ ಸಂಗೀತಗಾರನಾಗಿದ್ದ ಎನ್ನುವುದು ಪರಂಪರೆಯಿಂದ ಬಂದ ನಂಬಿಕೆ. ಆದರೆ, ಕೃಷ್ಣನು ಕೊಳಲು ನುಡಿಸಿದ್ದನ್ನು ನಾವಾರೂ ಕಂಡಿಲ್ಲ. ೧೫-೧೬ನೇ ಶತಮಾನದಲ್ಲಿ ಕೃಷ್ಣನ ಬಗ್ಗೆ ಹಾಡುವ ಪುರಂದರದಾಸರು, ಕೊಳಲು ನುಡಿಸುವಲ್ಲಿ ಇಂತಹ ಪ್ರಯೋಗಗಳ ಬಗ್ಗೆ
ಬರೆದಿದ್ದಾರೆಂದರೆ, ಅಂತಹ ಪ್ರಯೋಗಗಳನ್ನು ಕೊಳಲುವಾದಕರು ಸುಮಾರು ಐದುನೂರು ವರ್ಷಗಳಿಂದಲಾದರೂ ಮಾಡಿಕೊಂಡೇ ಬಂದಿದ್ದಾರೆ ಎನ್ನುವುದು ಮನದಟ್ಟಾಗುತ್ತದೆ. ಅಂದರೆ, ಪುರಂದರರು ತಾವು ಕಂಡ ಕೊಳಲು ನುಡಿಸುವ ವಿಧಾನವೊಂದನ್ನು ಕೃಷ್ಣನ ಕೊಳಲಲ್ಲಿ ತೋರಿಸಿದ್ದಾರೆಂದು ಹೇಳಬಹುದು. ಈ ಕಾರಣಕ್ಕಾಗಿಯೇ ದಾಸ ಸಾಹಿತ್ಯವನ್ನು ನಾವು ಆ ಕಾಲಕ್ಕೊಂದು ಕನ್ನಡಿ ಎಂದು ಹೇಳುವುದು ಸರಿಯಾದ ಮಾತು.

ಈ ಹಾಡು ಇನ್ನೂ ಇನ್ನೊಂದು ಬಗೆಯಲ್ಲಿ ಸಂಗೀತಾಭ್ಯಾಸಿಗಳಿಗೆ ಹೆಚ್ಚಾಯದ್ದಾಗುತ್ತೆ. ಪುರಂದರದಾಸರು ಲಕ್ಷಗಟ್ಟಲೆ ರಚನೆಗಳನ್ನು ಮಾಡಿದ್ದಾರೆಂದು ಪ್ರತೀತಿ ಇದೆ. ಆದರೆ, ಈಗ ನಮಗೆ ದೊರಕುವುದು ಒಂದೆರಡು ಸಾವಿರಗಳಷ್ಟು ಮಾತ್ರ. ಪುರಂದರದಾಸರನ್ನು ನಾವು ’ಕರ್ನಾಟಕ ಸಂಗೀತ ಪಿತಾಮಹ’ ಎಂದು ಕರೆಯುವುದು ನಿಜವಾದರೂ, ಅವರು ತಮ್ಮ ರಚನೆಗಳನ್ನು ಹಾಡುತ್ತಿದ್ದ ಮೂಲ ಮಟ್ಟು ಮುಕ್ಕಾಲುಪಾಲು ರಚನೆಗಳಿಗೆ ನಮ್ಮ ಕಾಲದವರೆಗೆ ಉಳಿದಿಲ್ಲ. ಆದರೆ, ಅವರ ಹಾಡುಗಳಲ್ಲಿರುವ ಒಳಗಿನ ಕುರುಹುಗಳಿಂದ ನಾವು ಅಂದಿನ ಕಾಲದ ಸಂಗೀತದ ಬಗ್ಗೆ ಹಲವು ವಿಚಾರಗಳನ್ನು ಅರಿಯಹುದಾಗಿದೆ. ಅಂತಹ ಹಾಡುಗಳಲ್ಲಿ, ’ತುತ್ತುರು ತೂರೆಂದು ಬತ್ತಿಸರಾಗಗಳನ್ನು’ ಎಂದು ಮೊದಲಾಗುವ ಈ ಹಾಡೂ ಒಂದಾಗಿದೆ.

ಗಳಿಕೆ ಹೇಗಿರಬೇಕು?

 

ಗಳಿಸುತಿರಬೇಕು ಹಣವ
ಉಳಿಸುತಲೂ ಜೊತೆಗೆ
ಬೆಳೆಸುತಲೂ ಇರಬೇಕು!
ಗಳಿಸದೇ ಮುಕ್ಕುತಿರೆ
ಅಳಿವುದದು ನಿಕ್ಕುವದಿ
ಮಲೆಯೆತ್ತರದೈಸಿರಿಯೂ!!

 

ಸಂಸ್ಕೃತ ಮೂಲ:

ಅರ್ಥಾನಾಮರ್ಜನಂ ಕಾರ್ಯಂ ವರ್ಧನಂ ರಕ್ಷಣಂ ತಥಾ
ಭಕ್ಷ್ಯಮಾಣೋ ನಿರಾದಾಯಃ ಸುಮೇರುರಪಿ ಹೀಯತೇ 

-ಹಂಸಾನಂದಿ

 

 

ಕವನ - ಒಲವು!!!!!

ಒಲವು!!!!!

ಒಲಿದೆ ನೀನು ಒಂದು ಕ್ಷಣಕೆ ನನ್ನ ಬಾಳ ಪಥದಲಿ
ನಡೆದೆ ನಾನು ಅದರ ಮೇಲೆ ನನ್ನ ಬಾಳ ರಥದಲಿ!

ಸವಿನೆನಪು ಸಾಕೊಂದು ಬಾಳಿನಾ ಅರ್ಥಕೆ
ಸವಿಯುತಿರೆ ಸಾಗಿಹುದು ಬದುಕಿನಾ ಪತಾಕೆ!

ಆ ಮಧುರ ಅನುಭವವು ಅಮರವಾಗಿದೆ ಮನಕೆ
ಆ ಅಧರ ಅದರುವಿಕೆ ಅರಸುತಿದೆ ಜೀವಕೆ!

ಬರದಿರಳು ನಿದಿರೆಯು ನಿನ್ನಂದ ನೆನೆಯದೆ
ಹಗಲಿರುಳು ಸಾಗದು ಮಕರಂದ ಸವಿಯದೆ!