"ಗೂಗಲ್ ಅನಲ್ಯಾಟಿಕ್ಸ್" ಒಂದು ವಿಶೇಷ ಅನುಭವ

"ಗೂಗಲ್ ಅನಲ್ಯಾಟಿಕ್ಸ್" ಒಂದು ವಿಶೇಷ ಅನುಭವ

ಸಾಮಾನ್ಯವಾಗಿ ಕೆಲವರು ತಮ್ಮ ಜಾಲತಾಣಕ್ಕೆ ಎಷ್ಟು ಜನ ಬರುತ್ತಾರೆ ಎಂಬ ಮಾಹಿತಿಯನ್ನು ಪಡೆಯಲು ಹಿಟ್ ಕೌಂಟರ್ (Hit Counter) ಅನ್ನು ಅಳವಡಿಸುತ್ತಾರೆ. ಆದರೆ ಇದರಿಂದ ನಿಮ್ಮ ತಾಣಕ್ಕೆ ಬರುವ ಜಾಲಿಗರನ್ನು ಪರಿಪೂರ್ಣವಾಗಿ ಟ್ರ್ಯಾಕ್ ಮಾಡಲು ಸಾಧ್ಯವಿಲ್ಲ ಆದರೆ ಇದರ ಬದಲು ನೀವು ಗೂಗಲ್ ಅನಲ್ಯಾಟಿಕ್ಸ್ ಅನ್ನು ಬಳಸಿದರೆ ನಿಮ್ಮ ತಾಣಕ್ಕೆ ಬರುವ ಜಾಲಿಗರನ್ನು ಹೆಚ್ಚು ಪರಿಣಾಮಕಾರಿಯಾಗಿ ಟ್ರ್ಯಾಕ್ ಮಾಡಬಹುದು. ಇದನ್ನು ಮಾಡಲು ಗೂಗಲ್ ನಲ್ಲಿ ನಿಮ್ಮ ಒಂದು ಖಾತೆ (Account) ಇದಬೇಕು ಅಷ್ಟೆ ಮತ್ತು ಇದು ಸಂಪೂರ್ಣ ಉಚಿತವಾಗಿದೆ.

ಉಪಯೋಗಗಳು:

೧] ಎಷ್ಟು ಜನ ನಿಮ್ಮ ತಾಣಕ್ಕೆ ಬರುವರು
೨] ಎಲ್ಲಿಂದ ಬರುವರು (ಭೂಪಟ ಸಮೇತ)
೩] ನಿಮ್ಮ ತಾಣದ ಯಾವ ಪುಟಕ್ಕೆ ಹೋಗುವರು ಮತ್ತು ಎಷ್ಟು ಸಮಯ ಅಲ್ಲಿ ಇರುವರು
೪] ನೇರವಾಗಿ (Direct visitors) ಅಥವಾ ಬೇರೆ ಜಾಲತಾಣದ (Referral site) ಮುಖಾಂತರ ಬರುವರಾ

ನಾನು ಕೇವಲ ಕೆಲವನ್ನು ಮಾತ್ರ ನೀಡಿದ್ದೇನೆ. ಹೆಚ್ಚಿನ ಮಾಹಿತಿಗೆ ತಾವು http://www.google.com/analytics ಗೆ ಹೋಗಬಹುದು. :)

ನಿಮ್ಮವ
ಶ್ರೀನಿವಾಸ
http://compuinkannada.987mb.com

Rating
No votes yet