ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕ್ಶಮಿಸು ನಾ ರಾಧೆಯಲ್ಲ-೨

ಅಂದು ಮತ್ತೆ ಕಿರಣ್ ಬಂದ ."ಪ್ರಿಯಾ" ಮೊತ್ತ ಮೊದಲ ಬಾರಿಗೆ ನನ್ನ ಹೆಸರನ್ನು ಕರೆದಾಗ ಮೈಯಲ್ಲಿ ಎನೋ ಅರಿಯದ ಪುಳಕ. ಅಭಿ ಮೊದಲ ರಾತ್ರಿ ಹತ್ತಿರ ಬಂದಾಗಲೂ ಹೀಗಾಗಿರಲಿಲ್ಲವೇನೋ "ಸಾರಿ ನಾನು ತುಂಬಾ ದಿನ ಹೀಗೆ ನಿರೀಕ್ಷೆ ಇಟ್ಟುಕೊಂಡು ಇರೋಕೆ ಆಗ್ತಾ ಇಲ್ಲ, ನಾನು ಹೇಳುತ್ತಿರೋದು ಮಾಡುತ್ತಿರೋದು ತಪ್ಪು ಅಂತ ನನಗೂ ಗೊತ್ತು .

ಆಧ್ಯಾತ್ಮಿಕತೆಯಲ್ಲಿ ಸ್ತ್ರೀ ಮತ್ತು ಪುರುಷ

ಹೆಣ್ಣು ಆಧ್ಯಾತ್ಮಿಕ ಸಾಧನೆಯಲ್ಲಿ ಪ್ರಗತಿ, ಉನ್ನತಿ ಸಾಧಿಸಿದ೦ತೆಲ್ಲ ತನ್ನ ಇಡೀ ದೇಹವನ್ನು ಮುಚ್ಚಿಕೊಳ್ಳುತ್ತಾಳೆ. ಭೌತಿಕವಾದ, ಭೋಗವಾದ ಜಾಸ್ತಿಯಾದ೦ತೆಲ್ಲ ಬೆತ್ತಲಾಗುತ್ತಾಳೆ. ಉದಾ: ಬ್ರಹ್ಮಕುಮಾರಿ ಸನ್ಯಾಸಿನಿಯರು, ಇತರ ಸಾಧ್ವಿಗಳು.

ಅಹ೦ಕಾರ

ಶತ್ರು ದೇಶವನ್ನು ಮಣಿಸಿದ ನ೦ತರ ಸೇನಾ ಪಡೇಯ ಮುಖ್ಯಸ್ಥ ಊರಿಗೆ ಊರನ್ನೇ ನೆಲ ಸಮಮಾಡತೊಡಗಿದ. ಕ್ರೌರ್ಯ, ಅಟ್ಟಹಾಸ ಪ್ರದರ್ಶಿಸತೊಡಗಿದ. ಊರ ಕೊನೆಯಲ್ಲಿ ಒ೦ದು ಗುಡಿಸಲು ಕಾಣಿಸಿತು. ತನ್ನ ಸೇನೆಯೊ೦ದಿಗೆ ದ೦ಡನಾಯಕ ಬ೦ದ. ಆ ಮನೆಯನ್ನೂ ನೆಲಸಮ ಮಾಡಬೇಕೆನ್ನುವಷ್ಟರಲ್ಲಿ ಅಲ್ಲೊಬ್ಬ ಸನ್ಯಾಸಿ ಕಾಣಿಸಿದ.

ಪೈಪೋಟಿ

ನಿನ್ನ ಹೊಳೆವ ನತ್ತಿನ ಜೋಡಿ

ಪೈಪೋಟಿ ಹೂಡುತೈತಿ, ನಿನ್ನ ಕಣ್ಣು.

ಕಣ್ಣೂ ನಿಂದ, ನತ್ತೂ ನಿಂದ,

ಆದರೂ ಆ ಕಣ್ಣಿನ ಚೆಂದs ಚೆಂದ.

 

ಹಾರಾಡು ನಿನ್ನ ದಾವಣಿ ಜೋಡಿ

ಪೈಪೋಟಿ ಹೂಡತೈತಿ, ನಿನ್ನ ಕೂದಲು.

ದಾವಣಿನೂ ನಿಂದ, ಜಡೆಯೂ ನಿಂದ,

ಆದರೂ ಆ ಮುಂಗುರುಳ ಅಂದಾನೇ ಅಂದ.

 

ನೀ ತೊಟ್ಟಿರು ತಿಳಿಗುಲಾಬಿ ಅರಿಬಿ ಜೋಡಿ

ಕರ್ನಾಟಕ ಸಂಗೀತದ ೭೨ ಮೇಳ ರಾಗಗಳು...

ಕರ್ನಾಟಕ ಸಂಗೀತದ ಎಪ್ಪತ್ತೇಳು ಮೇಳ ರಾಗಗಳ ಪಟ್ಟಿ ಇಲ್ಲಿದೆ.

ಇಲ್ಲಿ ಪ್ರತಿ ಆರು ರಾಗಗಳಿಗೆ ಒಂದೊಂದು ಚಕ್ರಗಳಿವೆ. ಈ ಚಕ್ರಗಳ ಮಹತ್ವ ನನಗೆ ಅಷ್ಟು ತಿಳಿದಿಲ್ಲ. ಯಾರಾದರೂ ದಯವಿಟ್ಟು ತಿಳಿಸಿ...

ಹಾಗೇ ಎಡಗಡೆಯಲ್ಲಿರುವ ಮೊದಲ ೩೬ ರಾಗಗಳಲ್ಲಿ ಶುದ್ಧ ಮಧ್ಯಮವಿದೆ. 

ಹಾಗೇನೇ ಬಲಗಡೆಯಲ್ಲಿರುವ ಕೊನೆಯ ೩೬ ರಾಗಗಳಲ್ಲಿ ಪ್ರತಿ ಮಧ್ಯಮವಿದೆ.

ಉಳಿದಂತೆ, ರಿಷಭ, ಗಾಂಧಾರ, ಧೈವತ, ನಿಷಾದಗಳು ರಾಗಗಳ ಪಟ್ಟಿಯಲ್ಲಿವೆ.

ಯಾವ ಯಾವ ರಾಗಗಳಿಗೆ ಯಾವ ಯಾವ ಸ್ವರ ಬರುತ್ತದೆಂದು ಸುಲಭವಾಗಿ ತಿಳಿದುಕೊಳ್ಳಬಹುದು... 

ಮರವೇರಿ.. ಸಂಚುಹೂಡಿ ಪಕ್ಷಿಗಳ ರಕ್ತಹೀರುವ ಅಂಗೈ ಗಾತ್ರದ ಜೇಡ ನೋಡಿದ್ದೀರಾ?

ಮರವೇರಿ ರೆಂಬೆ-ಕೊಂಬೆಗಳ ಮೇಲೆ ತನ್ನ ಜೊಲ್ಲು ರೂಪದ ಅಂಟು ಸ್ರವಿಸಿ, ಸಂಚು ಹೂಡಿ..ಬೆಕ್ಕಿನಂತೆ ಜಪ್ಪಿಸಿ ಕುಳಿತು ಸಿಕ್ಕಿ ಬೀಳುವ ಪಕ್ಷಿಗಳ ರಕ್ತ ಹೀರುವ ಅಂಗೈ ಗಾತ್ರದ ಜೇಡ ನೋಡಿದ್ದೀರಾ? ಹರ್ಷ..

ಧಾರವಾಡದ ಹೆಸರಾಂತ ಚಾರಣಿಗ ಪ್ರೊ.ಜಿ.ಎಸ್.ಕಲ್ಲೂರ್ ಅವರಿಂದ ಏಕಾಏಕಿ ಇಂದು ಬೆಳಿಗ್ಗೆ ದೂರವಾಣಿ ಕರೆ; ಹಾಗು ಅಪರೂಪದ ಮಾಹಿತಿ ವಿನಿಮಯ. ಹಿಮಾಲಯದ ಹಿಮಾಚ್ಛಾದಿತ ಗುಡ್ಡಗಳ ಚಾರಣ ಕೈಗೊಳ್ಳಲು ಹೋದವರು ಯಾವ ಪೂರ್ವ ಸೂಚನೆ ನೀಡದೇ ಧಾರವಾಡಕ್ಕೆ ಬಂದಿಳಿದ ಸುದ್ದಿ ಅಶ್ಚರ್ಯ ಮೂಡಿಸಿತು.

‘ಸರ್..ಇಲ್ಲ ನಾನು ಅಂತಹ ಜೇಡ ನೋಡಿಲ್ಲ’ ಎಂದು ಉತ್ತರಿಸಿದೆ. ಪ್ರೊ.ಕಲ್ಲೂರ್ ಡಾ.ಸಂಜೀವಣ್ಣ ನಡೆಸುವ ಮಾಳಮಡ್ಡಿಯ ‘ಬಾಲ ಬಳಗ’ ಶಾಲಾ ಆವರಣಕ್ಕೆ ಬರಲು ಹೇಳಿದರು. ನಾನು ತಡ ಮಾಡಲಿಲ್ಲ. ಸದಾ ‘ಸುದ್ದಿ ವಾಸನೆ ಗ್ರಹಿಸಬಲ್ಲ ಮೂಗು’ ಜಾಗೃತವಾಗಿ ಇಟ್ಟುಕೊಂಡಿರುವ ಅಣ್ಣ ಛಾಯಾಪತ್ರಕರ್ತ ಕೇದಾರನಾಥ್ ಹಾಲು ಕುಡಿದಷ್ಟು ಸಂತೋಷದಲ್ಲಿ ಸ್ಥಳಕ್ಕೆ ಧಾವಿಸಿದರು.

ಪ್ರೊ.ಕಲ್ಲೂರ್ ಅತ್ಯಂತ ಜಾಗರೂಕರಾಗಿ, ಪ್ಲಾಸ್ಟಿಕ್ ಬಾಟಲಿಯಲ್ಲಿ ಉಸಿರುಗಟ್ಟದಂತೆ ಈ ‘ವಿಶೇಷ ಅಥಿತಿ’ಯನ್ನು ಬಂಧಿಸಿ ಇಟ್ಟಿದ್ದರು. ಮೈ ಮೇಲೆ ಜಿಬ್ರಾದಂತೆ ಕಪ್ಪು ಪಟ್ಟಿಯನ್ನು ಹೊಂದಿದ್ದ ದೈತ್ಯ ಜೇಡ. ಸಮೀಪದಿಂದ ನೋಡಿದರೆ ಚಿರತೆಯ ಮೈಬಣ್ಣ-ನಡುವೆ ಕಪ್ಪು ಪಟ್ಟಿಗಳು. ಕೈ ಇಟ್ಟು ನೋಡಿದರೆ ದೊಡ್ಡ ಕೈಯ ಅಂಗೈ ಮೀರಿಸುವಷ್ಟು ಗಾತ್ರ. ಹೆಬ್ಬೆಟ್ಟು ಗಾತ್ರದ ದೇಹ. ತೋರು ಬೆರಳಿನಷ್ಟು ಉದ್ದ ಕಾಲುಗಳು. ಕಾಲುಗಳ ದಪ್ಪ ಸುಮಾರು ಮಕ್ಕಳ ಕಿರುಬೆರಳು ಗಾತ್ರ!

ವಿರಹ ಗೀತ

ಎದೆಯಾಳದ ನೆನಪುಗಳ
ಮರೆಯುವೆಯಾ ಗೆಳತಿ ?
ಒಣಮರದ ಮೇಲಿರುವ
ಒಂದೇ ಹಸಿರೆಲೆಯಲ್ಲವೇ ಅದು?
ಮನದಾಳದ ಕನಸುಗಳ
ಅಳಿಸುವೆಯಾ ಗೆಳತಿ?
ನೀಲಾಕಾಶದ ನಡುವೆ
ಹೊಳೆವ ತಾರೆಯಲ್ಲವೇ ಅದು?
ಕಣ್ಣಿನಾಳದ ಒಲವನ್ನು
ತೊರೆಯುವೆಯಾ ಗೆಳತಿ?
ಸಾಗರನ ಒಡಲೊಳಗೆ
ಸಿಕ್ಕ ರತ್ನವಲ್ಲವೇ ಅದು?
ಅಂತರಾಳದ ಭಾವವನ್ನು
ಕೊಲ್ಲುವೆಯಾ ಗೆಳತಿ?
ಸೋತ ಕಂಗಳೊಳಗೆ
ಬಂದ ಕಣ್ಣೇರಲ್ಲವೇ ಅದು?

ಬ್ರಹ್ಮ ಭ್ರೂಣ

ಕೋಪಗೊಂಡನೆ ಚಂದಿರ
ತೇಜಸ್ವಿ ತಪಸ್ವಿ ಬ್ರಹ್ಮ
ಎತ್ತಲೋ ನೋಡಿ
ತನ್ನೆಲ್ಲಾ ಕೊಪದುರಿಯ
ಚಿತ್ರಿಸಿದ ಚಿತ್ರದಲಿ
ತಣ್ಣಗಿನ ಬೇಸರದಲಿ
ಚಂದಿರನೊಳಗೆ ಕಳೆಯಿರಬಹುದು
ಚಂದಿರನೆ ಕಲೆಯಾದರೆ?
ಬ್ರಹ್ಮ ತಳಮಳಿಸಿದ
ಇದೇನಿದು ತನ್ನಾಟ?
ಕೋಪವನ್ನು ಹೀಗೆ ತೋರಬಹುದೇ?
ಒಳಗೆ ಹಹರಿನ ಮೇಲಿದ್ದ
ದ್ವೇಷ ಅಸೂಯೆಗಳನ್ನಿಲ್ಲಿಇಟ್ಟೆನೆ
ನಾರಾಯಣಾ ಇದೇನಿದು ಆಟ