ಒಬ್ಬ ದಡ್ಡ ಧೀರನಾದ!

ಒಬ್ಬ ದಡ್ಡ ಧೀರನಾದ!

ಬರಹ

ಕಥೆ-೩

ಒಬ್ಬ ದಡ್ಡ ಧೀರನಾದ!

ರಾಮಲಿಂಗಾಶ್ರಮ ಎಂಬ ಒಂದು ಆಶ್ರಮ. ಆ ಆಶ್ರಮವು ಒಂದು ಶಾಲೆಯನ್ನು ನಡೆಸುತಿತ್ತು. ಆ ಶಾಲೆಯಲ್ಲಿ ಅನೇಕ ವಿದ್ಯಾರ್ಥಿಗಳು ಇದ್ದರು. ಅಲ್ಲಿ ಚೆನ್ನಗಿ ಪಾಠ ಪ್ರವಚನಗಳು ಸಾಗುತಿದ್ದವು. ಒಂದು ದಿನ ಅಶ್ರಮದ ಸ್ವಾಮಿಜಿ ಶಾಲೆಗೆ ಬೇಟಿ ಕೊಟ್ಟು ವಿದ್ಯರ್ಥಿಗಳ ಜೊತೆ ಮತನಾಡಹತ್ತಿದರು. ಅವರು ಎಲ್ಲರ ಬುದ್ದಿಶಕ್ತಿಯನ್ನು ಟೆಸ್ಟ್ ಮಡುತಿದ್ದಗ ರಾಮ ಎಂಬ ಒಬ್ಬ ಹುಡುಗನಿಗೆ ಗಣಿತದ ವಿಷಯದ ಮೇಲೆ ಪ್ರಶ್ನೆಯನ್ನು ಕೇಳಿದರು. ಆದರೆ ಆತನಿಗೆ ಉತ್ತರಿಸಲು ಬರ್ಲಿಲ್ಲ. ಆತ ೧೦ ನೇ ತರಗೆತಿ ಕಟ್ಟಿದ್ದ. ಆತನಿಗೆ ಗಣಿತ ವಿಷಯ ಬಹಳ ಕಷ್ಟವಾಗಿತ್ತು. ಆತನಿಗೆ ಈ ವಿಷಯ ತಲೆಗೆ ಹತ್ತುತ್ತಿರಲಿಲ್ಲವಾದ್ದರಿಂದ ಯಾವ ಗುರುಗಳೂ ಆತನಿಗೆ ಗಣಿತವನ್ನು ಹೇಳಿಕೊಡಲು ಒಪ್ಪುತಿರಲಿಲ್ಲ. ಆದ್ದರಿನ್ಂದ ಆತನಿಗೆ ಪರೀಕ್ಷೆ ಹತ್ತಿರವಾದಂಗೂ ಬಹಳ ಹೆದರಿಕೆ ಪ್ರಾರಂಭವಗಿತ್ತು. ಆತ ಹಲ್ಲಿಯಲ್ಲಿದ್ದರಿಂದ ಅವನಿಗೆ ಸರಿಯಾಗಿ ಬುಕ್ಸ್ ಸಿಕ್ಕಿರಲಿಲ್ಲ ಹಾಗು ಆತನ ತಂದೆ ತಾಯಿಯೂ ಸಹ ಓದಿದವರಾಗಿರಲಿಲ್ಲ. ಆ ಶಾಲೆಯಲ್ಲಿ ಸರಿಯಾದ ಸ್ವೌಲಬ್ಯಗಳು ಇರಲಿಲ್ಲವಾದ್ದ್ದರಿಂದ ಆತನಿಗೆ ಸರಿಯಾಗಿ ಕಲಿಯಲು ಆಗಲಿಲ್ಲ. ಆತ ಬಹಳ ದಡ್ದನಾಗಿದ್ದ. ಆಗ ಅವನಿಗೆ ಬಹಳ ಹೆದರಿಕೆಯಿಂದ, ಬೇಸರದಿಂದ ಆತ್ಮಹತ್ಯೆ ಮಡುವ ಸಲುವಾಗಿ ಶಲೆಯ ಬಾವಿಯ ಹತ್ತಿರ ಹೋದ. ಆದರೆ ಅದೇ ಸಮಯಕ್ಕೆ ಆಸ್ರಮದ ಸ್ವಾಮಿಜಿ ಬಂದು ಅವನನ್ನು ತಡೆದು ಅವನ ಕಷ್ಟ ಕೆಳಿದರು. ಆಗ ಆ ಬಾಲಕ ಸ್ವಾಮಿಜಿಗೆ, " ಸ್ವಾಮಿಜಿ,ನಿಮ್ಮ ಹತ್ತಿರ ಒಂದು ವಿಚಾರ ಕೇಳಬೇಕೆಂದಿದ್ದೇನೆ. ಕೇಳಲೆ?" ಎಂದ. ಅದಕ್ಕೆ ಸ್ವಾಮಿಜಿ ಕೇಳು ಎಂದಾಗ, ಆ ಬಾಲಕ " ದಯವಿಟ್ಟು ನನಗೊಬ್ಬನಿಗೆ ಸ್ವಲ್ಪ ಲೆಕ್ಕ ಹೇಳಿಕೊಡುತ್ತೀರ?" ಎಂದು ಬಹಳ ದನ್ಯ ಭಾವದಿಂದ ಕೇಳಿದ.
ಆಗ ಸ್ವಾಮಿಜಿ" ಆಗಲಿ ಹೇಳಿಕೊಡುತ್ತೇನೆ. ನಿತ್ಯವೂ ೩೦ ನಿಮಿಷ ಅದಕ್ಕಾಗಿ ಮೀಸಲಿಡುತ್ತೇನೆ. ಏನು ಸಂಕೋಚ ಬೇಡ. ಊಟವಾದ ಮೇಲೆ ಬಾ." ಎಂದರು. ಆಶ್ರಮದಲ್ಲಿ ಚೆನ್ನಾಗಿ ಅಧ್ಯಯನ ಮಾಡದ,’ಸೋಮಾರಿ’,’ದಡ್ಡ’, ’ಪರೀಕ್ಷೆಯಲ್ಲಿ ಕಾಪಿ,ಮೇಸ್ಟ್ರಿಗೆ ಟೋಪಿ’ ಎಂಬೆಲ್ಲಾ ಬಿರುದುಗಳನ್ನು ಪಡೆದ ಹುಡುಗ ಎಂದು ಸ್ವಾಮಿಜಿಗೆ ಮೊದಲೇ ತಿಳಿದಿತ್ತು. ಸಮಯಕ್ಕೆ ಸರಿಯಾಗಿ ಆತ ಪುಸ್ತಕ ಪೆನ್ನನ್ನು ತೆಗೆದುಕೊಂಡು ಸ್ವಾಮಿಜಿಯ ಕೋಣೆಗೆ ಬಂದ. ಅವನ ಗಣಿತದ ಮಟ್ಟ ೩ ನೇ ತರಗೆತಿಯಸ್ಟರದು. ಅದಕ್ಕಿಂತ ಹೆಚಿನದಲ್ಲ. ಇವನಿಗೆ ಗಣಿತ ಭೋಧನೆ ಮಾಡಿ ಇವನನ್ನು ಪಾಸ್ ಮಾಡಲು ನನ್ನಿಂದ ಸಾದ್ಯನಾ? ಎಂದು ಯೋಚಿಸಿದರು ಸ್ವಾಮಿಜಿ.
ಸುಮಾರು ೩ವರೆ ತಿಂಗಳುಗಳ ಕಾಲ ಒಂದು ದಿನವೂ ತಪ್ಪದೆ ನಿಷ್ಟೆಯಿಂದ ಲೆಕ್ಕವನ್ನು ಹೇಳಿಸಿಕೊಂಡು ಬಂದ. ಆತನಲ್ಲಿ ಮೊದಲು ಆತ್ಮವಿಶ್ವಾಸ ಮತ್ತು ಅಭಿರುಚಿ ಉಂಟಾಗಲೆಂದು ಅವನು ಒಂದು ತಪ್ಪು ಮಡಲು ಸಾಧ್ಯವಿರದಂಥ ಸುಮಾರು ೧೦೦ ಲೆಕ್ಕಗಳನ್ನು ಕೊಟ್ಟರು. ಈ ಲೆಕ್ಕಗಳು ಮೊದಮೊದಲು ಸುಲಭವಾಗಿದ್ದು ೫೦ ರ ನಂತರ ಕ್ರಮವಾಗಿ ಕಠಿಣವಾಗಿದ್ದವು. ಮೊದಲ ದಿನ ಹತ್ತು ಲೆಕ್ಕಗಳನ್ನು ಸರಿಯಾಗಿ ಮಾಡಿದಾಗ ’ವೆರಿಗುಡ್, ಸರಿಯಾಗಿ ಮಾಡಿದಿ.ನಿನಗೆ ಲೆಕ್ಕದಲ್ಲಿ ಅಭಿರುಚಿ ಇದೆ’ ಎಂದರು. ೧೦೦ ಲೆಕ್ಕಗಳನ್ನು ತಪ್ಪಿಲ್ಲದೆ ಮಾಡುವಂತಾಗಬೇಕು ಎಂಬುದು ಅವರ ಯೋಜನೆಯಾಗಿತ್ತು. ಅದು ದೇವರ ದಯೆಯಿಂದ ಯಶಸ್ವಿಯಾಯಿತು. ನೂರು ಲೆಕ್ಕಗಳನ್ನು ತಪ್ಪಿಲ್ಲದೆ ಮಾಡಿದಾಗ ’ ಯಾರಯ್ಯ ನಿನಗೆ ಲೆಕ್ಕ ಮಾಡಲು ಬರುವುದಿಲ್ಲ ಎಂದು ಹೆಳಿದವರು? ನೀನು ಒಂದೇ ಒಂದು ತಪ್ಪು ಮಡಲಿಲ್ಲ! ನೋಡು ಈ ಬಾರಿ ನಿನಗೆ ೭೦% ಬರುತ್ತದೆ ಪರೀಕ್ಷೆಯಲ್ಲಿ!’ ಎಂದರು.
ಅವನ ಆತ್ಮವಿಶ್ವಾಸ ಚಿಗುರಿ ಉತ್ಸಾಹ ಗರಿಗೆದರಿದನ್ನು ನೋಡಿ ಸ್ವಾಮಿಜಿಗೆ ಸಂತೋಷವಾಯಿತು. ರಾತ್ರಿ ಎಂಟು ವರೆ ಗಂಟೆ ಯಿಂದ ಕೆಲವೊಮ್ಮೆ ಹತ್ತೂವರೆ ಗಂಟೆಯ ತನಕ ಅವನು ಲೆಕ್ಕ ಮಾಡುತ್ತಿದ್ದ. ಮುಂದೆ ಅವನು ನಾಲ್ಕು ತಿಂಗಳ ನಂತರ ಪರೀಕ್ಷೆಯಲ್ಲಿ ಕಾಪಿ ಹೊಡೆಯದೇ ಸ್ವಂತ ಬುದ್ದಿಯನ್ನುಪಯೋಗಿಸಿ ನೂರರಲ್ಲಿ ಎಪ್ಪತ್ತು ಅಂಕಗಳನ್ನು ಪಡೆದ. ಆಗ ಅವನಲ್ಲಿ ಕಂಡು ಬಂದ ಆತ್ಮತ್ರುಪ್ತಿ, ಆನಂದಗಳನ್ನು ವರ್ಣಿಸಲು ಶಬ್ದಗಳಿಗೆ ಶಬ್ದ ಸಾಲದು! ಅವನ ಅಭಿವುದ್ದಿಯ ಕತೆಯನ್ನು ಕೇಳಿದ ಅವನ ತಂದೆತಾಯಿ ಆಸ್ರಮಕ್ಕೆ ಬಂದು ಸ್ವಾಮಿಜಿಯನ್ನು ಕಂಡು ಸಂತೋಷದ ಕಂಬನಿಯಿಂದ ಕ್ರುತಗ್ಯತೆಯ ಮಾತುಗಳನ್ನು ಹೇಳಿ ವಂದಿಸಿದರು. ಆದರೆ ನಿಜ ಹೇಳಬೇಕೆಂದರೆ ಆ ವಿದ್ಯಾರ್ಥಿಯು ನಿಜವಾಗಿಯೂ ದಡ್ಡನಾಗಿರಲಿಲ್ಲ. ಅವನ ತಂದೆ ಓದು ಬರಹ ಬಲ್ಲ ವಿದ್ಯಾವಂತರು ಮಾತ್ರವಲ್ಲ, ವಿದ್ವಂಸನೂ ಆಗಿದ್ದರು. ಅವರ ಆತುರವೋ, ವಿಶಿಸ್ಟವೋ, ಅಥವ ದೋಷವೋ ಮಕ್ಕಳು ಬೇಗನೆ ಓದಿ ಮುಂದೆ ಬರಬೇಕೆಂಬ ಆತುರದವರು. ಅವರು ತಾವು ಕಲಿಯುತಿದ್ದಾಗ ಎಲ್ಲಾ ಕ್ಲಾಸಿನಲ್ಲೂ ಪ್ರಥಮ ದರ್ಜೆಯವರರಾಗಿದ್ದರು. ಯಾವುದೇ ವಿಚಾರವನ್ನು ಬೇಗನೆ ಗ್ರಹಿಸಬಲ್ಲವರಾಗಿದ್ದರು. ಮಗನನ್ನು ಮಹಾ ಮೇಧವಿಯನ್ನಾಗಿ ಮಾಡಲು ಅವನು ೪ ನೇ ವಯಸ್ಸಿನಲ್ಲಿದ್ದಗಿನಿಂದಲೆ ಗಣಿತವನ್ನು ತುರುಕಲು ತೊಡಗಿದ್ದರು. ಅವನು ಥಟ್ಟನೆ ಗ್ರಹಿಸದಿದ್ದಾಗ ಹೊಡೆದು ಹೆಳಿಕೊಡಲು ಹೋಗಿ ವಿಫಲರಾಗಿದ್ದರು. ಹೀಗೆಯೇ ಮುಂದುವರೆಯುತ್ತಾ ಹೋದಂತೆ ಅವನಲ್ಲಿ ಗಣಿತದ ಬಗ್ಗೆ ಅಸಡ್ಡೆ, ಭಯ ಆವರಿಸಿ ಓದುವುದರಲ್ಲಿ ಹಿಂದೆ ಬಿದ್ದಿದ್ದ.ಅವನ ತಂದೆ ಅವನನ್ನು ’ಕಲಿಯುವುದರಲ್ಲಿ ಹಿಂದೆ,ಊಟದಲ್ಲಿ ಮುಂದೆ’ ಎಂದು ಚಟಾಕಿ ಹಾರಿಸುತಿದ್ದರು. ಹುಡುಗ ಆಗಲೇ ತನಗೆ ಲೆಕ್ಕ ಬಾರದು ಎಂದುಕೊಂಡು ತನಗರಿವಿಲ್ಲದೇ ಲೆಕ್ಕವನ್ನು ದ್ವೇಷಿಸತೊಡಗಿದ. ಆತ ಶಾಲೆಗೆ ಸೇರಿಕೊಂಡಾಗ ಅಲ್ಲಿಯೂ ಇತರ ವಿದ್ಯಾರ್ಥಿಗಳೊಂದಿಗೆ ತನ್ನನ್ನು ಹೋಲಿಸಿಕೊಂಡಾಗ ತಾನು ಲೆಕ್ಕದಲ್ಲಿ ಹಿಂದೆ ಎಂಬುದನ್ನು ಇಷ್ಟವಿಲ್ಲದಿದ್ದರೂ ಒಪ್ಪಬೇಕಾಯಿತು. ಹೀಗೆ ಆತ ಕಲಿಯುವುದರಲ್ಲಿ ಹಿಂದೆ ಬಿದ್ದಿದ್ದ. ಆದರೆ ಸ್ವಾಮಿಜಿ ಆತನ ಮನವರಿತು, ಆತನ ಶಕ್ತಿಯನ್ನರಿತು, ಆತನಿಗೆ ಅವನ ಶಕ್ತಿಯನ್ನು ಅವನಿಗೆ ತೋರಿಸಿ ಅವನಿಗೆ ಆತ್ಮವಿಶ್ವಾಸ ಬರುವ ಹಾಗೆ ಮಾಡಿ ಎಲ್ಲರಂತೆ ಓದಿನಲ್ಲಿ ಮುಂದೆ ಬರುವ ಹಾಗೆ ಮಾಡಿದರು.

---------------------------------------------------------------------------------------------------------
ವಿ.ಹೆಚ್.