ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಾಸ್ಯ - ೫

ರೇಡಿಯೋ ಒಳಗೆ ಗಾಯಕ
ರಾಮಣ್ಣನ ರೇಡಿಯೋ ಕೆಟ್ಟು ಹೋಯ್ತು. ಬೇಸರದಿಂದ ರೇಡಿಯೋ ಓಪನ್ ಮಾಡಿ ನೋಡಿದರೆ ಅದರಲ್ಲಿ ಒಂದು ಜಿರಲೆ ಸತ್ತಿತ್ತು.
ರಾಮಣ್ಣ ದುಃಖಿಸಿದ - ಓ ದೇವರೇ, ಒಂದು ಒಳ್ಳೆಯ ಗಾಯಕನನ್ನೇ ಸಾಯಿಸಿಬಿಟ್ಟೆಯಾ!!!

ಹೋಲಿಕೆ
ಕ್ರಿಕೆಟ್ ತಂಡಗಳನ್ನು ಕನ್ನಡ ಸಿನಿಮಾ ರಂಗದ ನಾಯಕರಿಗೆ ಹೋಲಿಸಬಹುದಾದರೆ...........

ಕನ್ನಡ ದೇವಿ ಯಾರು ? ಭುವನೇಶ್ವರಿಯೋ ? ರಾಜರಾಜೇಶ್ವರಿಯೋ?

ಕನ್ನಡ ತಾಯಿ ಯಾರು ?
ಭುವನೇಶ್ವರಿಯೋ ? ರಾಜರಾಜೇಶ್ವರಿಯೋ?
ಕನ್ನಡ ತಾಯಿ ಭುವನೇಶ್ವರಿ ಎಂದು ಮೊದಲು ಹೇಳಿದ್ದು ಯಾರು?
ಈ ಭುವನೇಶ್ವರಿಯ ಗುಡಿಗಳು ಕರ್ನಾಟಕದಲ್ಲಿ ಎಲ್ಲೆಲ್ಲಿ ಇವೆ ? ಕೇರಳ , ತಮಿಳನಾಡಲ್ಲೂ ಇವೆ. ಭುವನದ ಒಡತಿ ಕನ್ನಡಕ್ಕೆ ಸೀಮಿತವಾದದ್ದು ಏಕೆ ?

ಗೋವಿಂದ ಸ್ವಾಮಿ ಎನ್ನುವ ಸಂತ -ಭಾಗ ೨

ಅವರು ಕೇರಳದಲ್ಲಿರುವ ಶ್ರೀಸ್ವಾಮಿ ಶಿವಾನಂದರ ಆಶ್ರಮಕ್ಕೆ ಬಂದು ಅವರ ಸಲಹೆ ಪಡೆದರು. ಶಿವಾನಂದರು ಅವರನ್ನು ನಿತ್ಯಾನಂದರ ಆಶ್ರಮಕ್ಕೆ ಕಳಿಸಿದರು. ಆಗ ನಿತ್ಯಾನಂದರು ಮುಂಬಯಿಯ ವಜ್ರೇಶ್ವರಿಯಲ್ಲಿ ಮತ್ತು ನಂತರ ಗಣೇಶಪುರಿಯಲ್ಲಿದ್ದರು. ಗೋವಿಂದಸ್ವಾಮಿಯವರು ಕೇರಳದಿಂದ ಪಾದಯಾತ್ರೆಯಲ್ಲಿ ಮುಂಬಯಿ ತಲಪಿದರು. ಆಗ ಅವರಿಗೆ ೨೮ ವರುಷ ಪ್ರಾಯ.

ನಾಡ ಕೋವಿ

ಸೀರೆಯ ನೆರಿಗೆಯನ್ನು ಎತ್ತಿ ಹಿಡಿದು ಎರಡೆರಡು ಮೆಟ್ಟಿಲುಗಳನ್ನು ಹಾರಿ ಬಂದು ಏದುಸಿರು ಬಿಡುತ್ತಾ ಕೋಣೆಯ ಬಾಗಿಲನ್ನು ಟಪಾರನೆ ಸರಿಸಿ ಒಳ ಬಂದಳು ಬೆದರಿದ ಹುಲ್ಲೆ ಅಲಕಾ. ಏನು ಮಾಡಬೇಕೆಂದು ತೋಚದೆ ಸ್ನಾನದ ಕೋಣೆಗೆ ನುಗ್ಗಿ ಕನ್ನಡಿ ನೋಡಿಕೊಂಡಳು. ಮೈಯೆಲ್ಲಾ ರಕ್ತ! ಉಟ್ಟ ಬಟ್ಟೆಯನ್ನು ತೋಯಿಸಿದೆ! ಹನಿ ನೀರಿಗೆ ಮೈಯೊಡ್ಡಿದಳು. ಎಷ್ಟೋ ಸಮಯದ ನಂತರ ಉದ್ವೇಗ ಕಡಿಮೆಯಾಗಿ ಮನಸ್ಸು ಸ್ಥಿಮಿತೆಗೆ ಬಂತು. ಮೈ ಒರಸಿ ಹೊರ ಬಂದಾಗ ಇನ್ನೂ ಎಚ್ಚರವಾಗಿಲ್ಲದೆ ಮಲಗೇ ಇದ್ದಳು ವೈಯಾರಿ ನಿಲೀಮಾ!
"ಎಷ್ಟೇ ಹೊತ್ತು ಅದು. ಹೊತ್ತು ಗೊತ್ತು ಇಲ್ಲದ ಕೆಲಸ. ಇನ್ನು ಮುಂದೆ ನಿನ್ನ ಬಾಸಿಗೆ ಸರಿಯಾಗಿ ಹೇಳ್ಬಿಡು. ಸಂಜೆ ಆರರ ನಂತರ ಕೆಲಸ ಮಾಡೋದಿಲ್ಲಾಂತ" ವೈಯಾರಿ ನಿದ್ದೆ ಕಣ್ಣಿನಲ್ಲೆ ಹೇಳಿದಳು.

ಅಲಕಾ ಒಮ್ಮೆಲೆ ವೈಯಾರಿಯ ಮಾತಿಗೆ ಬೆಚ್ಚಿ ಬಿದ್ದು ಸಾವರಿಸಿಕೊಂಡಳು. ಏನೋ ವಸ್ತುಗಳಿಗಾಗಿ ವಾರ್ಡ್ ರೋಬ್, ಮೇಜುಗಳನ್ನು ತಡಕಾಡಿದಳು. ತೂಗು ಹಾಕಿದ ಗಾಳಿ ಚೀಲದಲ್ಲಿ ಬೇಕಿದ್ದ ವಸ್ತುಗಳು ದೊರೆತಾಗ ತಟಕ್ಕನೆ ಬಾಗಿಲು ತೆರೆದು ಹೊರ ಬಂದಳು. ವೈಯಾರಿ ನಿದ್ದೆ ಮಂಪರಿನಲ್ಲಿ ಹೊರಳಿ,
"ಅಲಕಾ ಆ ವ್ಯಕ್ತಿ..." ಅಂದಳು. ಉತ್ತರವಿಲ್ಲ!
ಬೆದರಿದ ಹುಲ್ಲೆ ಮೆಟ್ಟಲಿಳಿದು ಕಾರ್ ಶೆಡ್ಡಿನ ಬಳಿ ಬಂದಳು. ಶೆಡ್ಡಿನ ಬಾಗಿಲು ಕಿರ್ ಸದ್ದಿನೊಂದಿಗೆ ತೆರೆದಾಗ ಉಸಿರು ಬಿಗಿ ಹಿಡಿದು, ಗೋಡೆಗೆ ಅಂಟಿದಂತೆ ನಿಂತಳು. ಯಾರು ಇಲ್ಲದನ್ನು ಗಮನಿಸಿ ಒಳ ಸರಿದು ಬಾಗಿಲು ಸರಿಸಿದಳು. ಹಳೇ ಕಾಲದ ಫೋರ್ಡ್ ಕಾರು ಧೂಳು ತುಂಬಿ ಮಲಗಿತ್ತು. ಬಾನೆಟ್ ಮೇಲೆ ಮಲಗಿಸಿದ್ದ ವ್ಯಕ್ತಿಯ ಮೂಗಿನ ಬಳಿ ಕೈ ಹಿಡಿದಳು. ಇನ್ನೂ ಉಸಿರಾಟವಿದೆ! ತುಂಬು ತೋಳಿನ ಅಂಗಿಯ ಗುಂಡಿಗಳನ್ನು ಬಿಚ್ಚಿ ಎದೆಯ ಭಾಗವನ್ನು ನೋಡಿದಳು. ರಕ್ತ ಇನ್ನೂ ಜಿನುಗುತಿತ್ತು. ಟಾರ್ಚ್ ಬೆಳಕಿನಲ್ಲಿ ಗಾಯವನ್ನು ನೋಡಿದಳು. ಗುಂಡೇಟಿನಿಂದ ಆದ ಗಾಯ! ಸಧ್ಯ ಅಪಾಯದಿಂದ ಪಾರಾಗಿದ್ದಾನೆ. ನಿಟ್ಟುಸಿರಿಟ್ಟಳು ಅಲಕಾ. ಗಾಯವನ್ನು ಒರಸಿ ಮುಲಾಮು ಹಚ್ಚಿ ಎದೆಯ ಸುತ್ತಾ ಬಟ್ಟೆಯನ್ನು ಬಿಗಿಯಾಗಿ ಕಟ್ಟಿದಳು.
ಆತ ಮೆಲ್ಲನೆ ಮುಲುಗಿದ!

ಯಾಕೆ ಅಂದ್ರೆ ಕನ್ನಡ ಭಾಷೆ ಸ್ಪಷ್ಟ, ಸುಂದರ ಮತ್ತು ನಿಖರ

ಮೊನ್ನೆ ಸಂಪದದಲ್ಲಿ ಬಶೀರ್ ರವರ ಲೇಖನ ಒದಿದೆ.. ಅದರ ಪ್ರಕಾರ ಇಂಗ್ಲೀಶ್ ಶಬ್ದಗಳಲ್ಲಿ ಅಕ್ಷರಗಳನ್ನು ಅದಲು ಬದಲು ಮಾಡಿ ಬರೆದರೂ ಸರಿಯಾಗೆ ಓದಬಹುದಂತೆ.. ಯಾಕೆ ಅಂದ್ರೆ ನಮ್ಮ ಮನಸ್ಸು ಇಂಗ್ಲೀಶ್ ಪದಗಳ ಅಕ್ಷರಗಳನ್ನು ಬಿಡಿಸಿ ಓದುವುದಂತೆ.. ಹೌದು ಇದು ಸರಿ...

http://sampada.net/blog/cherambane/10/11/2008/13464

ಉದಾಹರಣೆಗೆ :

The rset can be a toatl mses and you can sitll raed it wouthit porbelm. Tihs is bcuseae we do not raed ervey lteter by itslef but the wrod as a wlohe.

ಕಾಣ್ಕೆ

ಜಗದೊಳಿರುವ ಒಲವನೆಲ್ಲ
ಕಣ್ಣಿನಲ್ಲಿ ತುಂಬಿದೆ
ಪ್ರೀತಿಯೊಂದು ಅದ್ಬುತ
ಪ್ರೀತಿಯೊಂದೆ ಅಮೃತ
ಕೊಡುವೆನೊಂದು ಕಾಣಿಕೆ
ಇಲ್ಲವದಕೆ ಹೋಲಿಕೆ
ಒಲವೆ ಭಾವ ಚಂದ್ರಿಕೆ
ತೊರೆದು ಹೋದೆ ಏತಕೆ
ಕೊಂಡು ಹೋಗೆ ಕಾನೇಕೆ
ನನ್ನ ಪುಟ್ಟ ಬಾಲಿಕೆ
ಜಗದ ಜೀವದಾತಕೆ
ಬೆಚ್ಚಿ ಬಿದ್ದೆ ಏತಕೆ
ದೇವ ಮೆಚ್ಚಿ ನಿನ್ನನೆ
ಕರೆದು ಕೊಂಡ ಸುಮ್ಮನೆ
ಹೊಳೆವ ಕಣ್ಣು ಮುಚ್ಚಿದೆ

ಮಜಾ ಮಾಡಿ ಕನ್ನಡ ರೇಡಿಯೋ


24 ಘಂಟೆ ನಿರಂತರವಾಗಿ ಹೊಸ ಮತ್ತು ಹಳೆ ಕನ್ನಡ ಚಿತ್ರಗಳನ್ನ ಪ್ರಸಾರ ಮಾಡುವ, ಕೇಳಿದ ಹಾಡಗಳನ್ನೇ ಘಂಟೆಕಳೆದು ಪುನಾರ್ವರ್ತನೆ ಮಾಡದ ಮತ್ತು ಮುಖ್ಯವಾಗಿ ರೇಡಿಯೋ ಜಾಕಿ ಅಥವಾ ಜಾಹಿರಾತಿನ ಕಾಟವಿಲ್ಲದ ರೇಡಿಯೋ ಸ್ಟೇಷನ್.

ನಾ ಕಂಡಂತೆ...ಕನ್ನಡ ರಾಜ್ಯೋತ್ಸವ...ನಮ್ಮಾಫೀಸ್ನಲ್ಲಿ!

ಕಾರ್ಯಕ್ರಮ ಯಾವತ್ತು ಮಾಡೋದು? ಹೊಸದಾಗಿ ಏನೇನು ಮಾಡಬಹುದು? ಯಾವ್ಯಾವ ಸ್ಪರ್ಧೆಗಳು? ಮತ್ತು ಯಾರ್ಯಾರು ನಡೆಸಿಕೊಡ್ತಾರೆ…..ಆಸಕ್ತಿ ಇರೋವರೆಲ್ಲಾ ಸೇರಿಕೊಂಡು ಒಂದು ತಿಂಗಳು ಮುಂಚೆನೇ ಮಂತ್ರಾಲೋಚನೆ(discuss) ಮಾಡಿದ್ವಿ. :)

ಉಡುಪಿಯ ಬಗ್ಗೆ ಮಾಹಿತಿ ಬೇಕಿದೆ ?

ಪ್ರಿಯ ಗೆಳೆಯರೆ,

ನಿಮ್ಮಲ್ಲಿ ಉಡುಪಿ ಅಲೆವೂರು ಮತ್ತದರ ಸುತ್ತ-ಮುತ್ತದ ಪ್ರದೇಶದ ಬಗ್ಗೆ ಮಾಹಿತಿಯಿದ್ದರೆ ದಯವಿಟ್ಟು ತಿಳಿಸಿ.