ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಲ್ಪನೆಯು ಕನ್ಯೆ…

ಕಾದಿರುವುದೀ ಮನ ನಿನ್ನ ಬರುವಿಕೆಗಾಗಿ
ಕಾಯುತಿದೆ ಈ ಹೃದಯ ನಿನ್ನೊಲುಮೆಗಾಗಿ..

ನಿನ್ನ ಕಲ್ಪನೆಯದೊಂದು ಚಿತ್ರವನು ಹೃದಯದಿ ಹೊಂದಿರುವೆನು
ನಿನ್ನಂದವನು ನಾ ಕಂಡಿಲ್ಲ, ನಿನ್ನಯ ಚೆಲುವನ್ನು ಸೃಷ್ಟಿಕರ್ತನೇಬಲ್ಲನು…

ನನ್ನ ಕಲ್ಪನೆಯ ಬೆಡಗಿ ನೀ ಹೀಗಿರಬಹುದೆಂದು
ಚಿತ್ರಿಸಿರುವೆ ನಿನ್ನದೇ ರೂಪವನೊಂದು…

ಮುದ್ದಾದ ಸವಿಮಾತು ನನ್ನ ಕಿವಿಗೆ ಸಾಕು

ನಿದಾನ, ನಿಧಾನ

ನಿದಾನ=ಇದು ಸಂಸ್ಕೃತಪದ. ಯಾಕೆ ಈ ಪದವನ್ನು ಹೇೞುತ್ತಿದ್ದೇನೆಂದರೆ ಜನ ತಪ್ಪಾಗಿ ಇದನ್ನು ’ನಿಧಾನ’ ಎಂದು ಬೞಸುತ್ತಾರೆ
ನಿದಾನ=ವೇಗವಿಲ್ಲದಂತೆ, ಮೆಲ್ಲನೆ.

ನಿಧಾನ=ಇದೂ ಸಂಸ್ಕೃತ ಪದ ಇದಱರ್ಥ ಹುದುಗಿಸಿಟ್ಟ ಸಂಪತ್ತು, ನಿಧಿ.

ಇವೆರಡಱ ಬೞಕೆಯಲ್ಲಿ ಕನ್ನಡಿಗರ ಅಜ್ಞಾನವಿದೆ.

ಮತ್ತೊಮ್ಮೆ
ನಿದಾನ=ಮೆಲ್ಲನೆ, ವೇಗವಿಲ್ಲದೆ
ನಿಧಾನ=ನಿಧಿ ಅಥವಾ ಅಡಗಿಸಿಟ್ಟ ಸಂಪತ್ತು

ಅಕ್ಕನ ಮಗಳು ಇಂಜಿನೀರ್ ಆದಾಗ :)

ಮೊನ್ನೆ ನಾನು ಮಂಗಳೂರಿನ ಅಕ್ಕನ ಮನೆಗೆ ಹೋಗಿದ್ದಾಗ ನಡೆದ ಘಟನೆ.

ಅಕ್ಕನ ಮಗಳಿಗೆ ಈಗ ಮೂರು ವರ್ಷ, ತುಂಬಾ ಅಂದರೆ ತುಂಬಾ ಮಾತಾಡುತ್ತಾಳೆ. ನಾನು ಹೋದಾಗ ಊರಿಂದ ಅಪ್ಪ, ಅಮ್ಮನೂ ಮಂಗಳೂರಿಗೆ ಬಂದಿದ್ದರು.

ನನ್ನ ಅಮ್ಮನ ಮತ್ತು ಅವಳ(ಅಕ್ಕನ ಮಗಳು) ಮಾತುಕಥೆ ಹೀಗಿದೆ  
"ನೀನು ದೊಡ್ಡವಳಾದ ಮೇಲೆ ಡಾಕ್ಟರ್ ಆಗ್ತೀಯ? "

ಗಿರೀಶ್ ಕಾಸರವಳ್ಳಿ ಗೌರವಾರ್ಥ "ಸಿನೆಮಾ ರಸಗ್ರಹಣ ಶಿಬಿರ"

ಸ್ನೇಹಿತರೆ,
 
ಸಂವಾದ ಡಾಟ್ ಕಾಂ(http://samvaada.com) ದೃಶ್ಯ ಮಾಧ್ಯಮಗಳಿಗೆಂದೇ ಹುಟ್ಟು ಹಾಕಿರುವ ನೂತನ ಅಂತರ್ಜಾಲ ತಾಣ.
 
ಸಂವಾದ  ಡಾಟ್ ಕಾಂ ನ ಅಡಿಯಲ್ಲಿ ಇದೇ ನವೆಂಬರ್ ೨೨ ಮತ್ತು ೨೩ ರಂದು ಗಿರೀಶ್ ಕಾಸರವಳ್ಳಿ ಗೌರವಾರ್ಥ " ನನ್ನ ಸಂದರ್ಭದಲ್ಲಿ ಪರ್ಯಾಯ ಸಿನೆಮಾ" ಎಂಬ ವಿಷಯದ ಕುರಿತು ಸಿನೆಮಾ ರಸಗ್ರಹಣ ಶಿಬಿರ ನಡೆಯಲಿದೆ.

ಹಾಸ್ಯ - ೭

ಶರಾಬು
ಶರಾಬು ದೇಶದ ಜನರನ್ನು ನಿರ್ಗತಿಕರನ್ನಾಗಿ ಮಾಡುತ್ತಿರುವ ರಾಕ್ಷಸ.
ಬನ್ನಿ, ಎಲ್ಲರೂ ಸೇರಿ ಒಂದೊಂದು ಬಾಟಲಿ ಕುಡಿದು ಎಲ್ಲವನ್ನು ಖಾಲಿ ಮಾಡೋಣ!!!

ವಿಚಿತ್ರ
ಗಂಡ ಕುಡಿದ ಅಮಲಿನಲ್ಲಿ ಹೆಂಡತಿಯ ಹತ್ತಿರ ಬಂದು ಹೇಳಿದ:
'ಲೇ, ಇವತ್ತು ಒಂದು ಭಾರಿ ವಾಹನ ನನ್ನ ಮೇಲೆ ಹರಿದ್ರು ನಾನು ಸಾಯಲಿಲ್ಲ ಕಣೇ'

ನವೆಂಬರ್ ೧೮

 

"ನಿತ್ಯ ಹುಟ್ಟಿ ಮುಳುಗುವ ರವಿ"

ಹುಟ್ಟುಹಬ್ಬ ನನಗೆಂದೂ ಯಾವ ಕಾರಣಕ್ಕೂ ವಿಶೇಷ ಎನಿಸಿದ್ದಿಲ್ಲ. ಒಂದೊಮ್ಮೆ ಮತ್ತೊಂದು ವರುಷ ಕಳೆದುಹೋಯಿತಲ್ಲ ಎಂಬ ಬೇಸರ ಮೂಡಿಸುತ್ತಿದ್ದುದಂತೂ ನಿಜ. ಆದರೆ ಅದೂ ಹೆಚ್ಚು ಹೊತ್ತು ಮನಸ್ಸಿನಲ್ಲುಳಿಯುತ್ತಿರಲಿಲ್ಲ. ಹುಟ್ಟುಹಬ್ಬದ ಕೇಕ್, ಕೇಕ್ ಕಟ್ ಮಾಡುವ ಸಂದರ್ಭದಲ್ಲಿ ನೆರೆಯುವ ಜನ, ಆ ನಂತರದ ಘಳಿಗೆ, ನೆರೆದವರಿಂದ ಸಿಗಬಹುದಾದ ಉಡುಗೊರೆ - ಇವು ಯಾವೂ ನನಗೆಂದೂ ಆಸಕ್ತಿ ಹುಟ್ಟಿಸಿದ್ದಿಲ್ಲ. ಕಾಲೇಜಿನ ಕ್ಲಾಸ್ ರೂಮಿನಲ್ಲಿ ಯಾರದ್ದಾದರೂ 'ಬರ್ತ್ ಡೇ'ಗೆಂದು ಕ್ಲಾಸ್ ಮುಗಿಯುತ್ತಲೇ ಕೇಕ್ ಕಟ್ ಮಾಡಿಸಿದ ಸಮೂಹ ಕೇಕೆ ಹಾಕುತ್ತಿದ್ದರೆ ನನ್ನ ಮನಸ್ಸು ನನ್ನನ್ನು ಅದೆಲ್ಲದರಿಂದ ದೂರ ಓಡುವಂತೆ ಮಾಡುತ್ತಿತ್ತು. ಅದೇ ಆ 'ಬರ್ತ್ ಡೇ ಬೇಬಿ'ಯಿಂದ 'ಟ್ರೀಟ್' ಸಿಕ್ಕ ನಂತರ ಬರ್ತ್ ಡೇ ಯಾರದ್ದು ಎಂಬುದೂ ನೆನಪಿರದಂತೆ ಇರುತ್ತಿದ್ದ ದೃಶ್ಯ ಕೇಕ್ ಕಟ್ ಮಾಡಿಸಿದವರ ವಿಶ್ವಾಸ ಎಷ್ಟಿರಬಹುದು ಎಂಬುದರ ಬಗ್ಗೆ ಅಪಾರ ಆಲೋಚನೆಗಳು ಸುಳಿದು ಹೋಗುವಂತೆ ಮಾಡುತ್ತಿತ್ತು.

ಹುಟ್ಟುಹಬ್ಬ ಆಚರಣೆ ಅವರವರ ಭಾವನೆಗಳಿಗೆ, ಆದರ್ಶಗಳಿಗೆ, ಆಲೋಚನೆಯ ರೀತಿಗೆ ಬಿಟ್ಟದ್ದು ಎಂದು ನನಗನಿಸುತ್ತದೆ. ತಮಗೆ ನೆಮ್ಮದಿ ಸಿಗುವ, ತಮಗೆ ಸಂತೋಷ ಉಂಟುಮಾಡುವ ಯಾವುದೇ ಆಚರಣೆ ಅಂದಿನ 'ಹಬ್ಬ'ವಾಗಬಹುದು ಎಂದು ನನ್ನ ಅನಿಸಿಕೆ. ಅದು ತನಗಿಷ್ಟವಾದ ಕೆಲಸದಲ್ಲಿ ತೊಡಗಿಕೊಳ್ಳುವುದಿರಬಹುದು, ತನಗೆ ಇಷ್ಟವಾದೆಡೆ ಕುಳಿತು ಸಮಯ ಕಳೆಯುವುದಿರಬಹುದು. ಯಾವ ಆಚರಣೆಯನ್ನೂ ಕೀಳಾಗಿ ನೋಡಬೇಕಿಲ್ಲ, ಯಾವ ಆಚರಣೆಯನ್ನೂ ಆಡಂಬರದಿಂದ ಕಾಣಬೇಕಿಲ್ಲ. ಕೊನೆಗೆ ಆ 'ಹಬ್ಬ' ನಡೆಸಿದ ರೀತಿಗೊಂದು ನಾವು ಅರಿಯದ ಕಾರಣವೇ ಇದ್ದಿರುತ್ತದೆ. ಒಂದೊಮ್ಮೆ ಅರಿತರೂ ಅರಿಯದಂತಿರುತ್ತೇವೆ. ಅವರವರ ಇಷ್ಟದಂತೆ ಇರಬಹುದು ಆಚರಣೆ. ಅವರವರ ಸ್ವಂತದ ವಿಚಾರ.

ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ

ಕರ್ನಾಟಕ ರಕ್ಷಣಾ ವೇದಿಕೆಯ ಅಂತರ್ಜಾಲ ತಾಣದಲ್ಲಿ ಈ ಆಹ್ವಾನ ಪತ್ರಿಕೆ ನೋಡಿದೆ.
ಅವ್ರ ಅನುಮತಿ ಪಡೆದು ಇಲ್ಲಿ ಹಾಕಕತ್ತಿನಿ.
ಬರಹ ಓದ್ರಿ ಭಾಳ ಚೊಲೋ ಬರದಾರ, ನಿಜಕ್ಕೂ ನಾವೆಲ್ಲ ಯಾಕ ಜಾಗೃತರಾಗಬೇಕು ಅನ್ನೋದನ್ನ ಬಿಡಿಸಿ ಹೇಳ್ಯಾರ.

ಆಹ್ವಾನ ಪತ್ರಿಕಾ ನೋಡಾಕ ಈ ಕೊಂಡಿ ಕುಕ್ಕ್ರಿ
http://karnatakarakshanavedike.org/modes/view/86/vishva-kannadigara-jagruti-samavesha.html

ನವ ವಧುವಿಗೆ ಕಿವಿ ಮಾತು (ಹೀಗೆ ಸುಮ್ಮನೆ)

ನಿನ್ನೊಲವಿನ ಚೆಲುವನಿಗೆ
ಗೆಲುವಾಗುವ ಮುನ್ನ
ಅರಿತು ನಡೆ ಬೆರೆತು ನಡೆ
ಸೊಗಸಿಹುದು ಬಾಳಿನಲಿ

ಮನದೊಳಗಿನ ಪ್ರೇಮಿಗೆ
ಒಲವಾಗುವ ಮುನ್ನ
ಅವನೆಡೆಗೆ ಮಾತಾಗಿಬಿಡು
ಬೆಳಕಿಹುದು ಬದುಕಿನಲಿ

ಕಣ್ಣೊಳಗಿನ ಕನಸುಗಳಿಗೆ
ಮಾತಾಗುವ ಮುನ್ನ
ಅವನಳತೆಗೆ ಕಿವಿಯಾಗಿಬಿಡು
ಸಿಹಿಯಿಹುದು ಬಾಳಿನಲಿ

ಮನೆಯೊಳಗಿನ ದೀವಿಗೆಗೆ
ಬೆಳಕಾಗುವ ಮುನ್ನ
ಮನೆಮನಗಳಿಗೆ ಹೂವಾಗಿಬಿಡು