ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಿಶೇಷ ಸಂದರ್ಶನ: ಶ್ರೀ ಧರ್ಮಾವಲಂಬಿ ಸ್ವಾಭಿಮಾನಿ ಬಾಬಾರೊಂದಿಗೆ

ಆತ್ಮಹತ್ಯೆ
ಮಾಡಿಕೊಂಡಿದ್ದರಿಂದ ನಗೆ ಸಾಮ್ರಾಟರ alter ego ನಾಪತ್ತೆಯಾಗಿತ್ತು. ಹಲವರು ಅದು
ಯಮಧರ್ಮರಾಯನದೋ ಇಲ್ಲವೇ ಚಿತ್ರಗುಪ್ತನದೋ ಸಂದರ್ಶನ ಮಾಡುವುದರಲ್ಲಿ ಬ್ಯುಸಿಯಾಗಿರಬಹುದು
ಎಂಬ ವದಂತಿಗಳನ್ನು ಹರಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಸಾಮ್ರಾಟರನ್ನು ದೇವಲೋಕದಿಂದ

ಬತ್ತಿದ ಕೆರೆಯಲ್ಲಿ ಮಳೆ ನೀರು ಬಿತ್ತಿ

ಅದು ೨೦೦೩ರ ಸಮಯ.

ಗದಗ ಜಿಲ್ಲೆ ರೋಣ ತಾಲೂಕಿನ ಹಾಲಕೆರೆ ಅನ್ನದಾನಸ್ವಾಮಿಗಳು ಒಂದು ವಿಷಯದ ಬಗ್ಗೆ ಬಹಳ ಚಿಂತಿಸಿದ್ದರು. ನರೇಗಲ್‌ನ ತಮ್ಮ ಸಂಸ್ಥೆಯ ಪ್ರೌಢಶಾಲೆ ಮತ್ತು ಕಾಲೇಜುಗಳ ಬಳಕೆಗಾಗಿ ಕೊರೆಸಿದ್ದ ಏಳು ಕೊಳವೆ ಬಾವಿಗಳ ಪೈಕಿ ಐದು ಬಿಕ್ಕತೊಡಗಿದ್ದವು. ಇನ್ನೆರಡು ಕೊಳವೆ ಬಾವಿಗಳಲ್ಲಿ ಬರುತ್ತಿದ್ದ ಕೇವಲ ಅರ್ಧ ಇಂಚು ನೀರು ಯಾವ ಕ್ಷಣದಲ್ಲಾದರೂ ಕಡಿಮೆಯಾಗುವ ಲಕ್ಷಣವಿತ್ತು. ಸತತ ಮೂರನೇ ವರ್ಷ ಬರ ಪರಿಸ್ಥಿತಿ ಎದುರಿಸುತ್ತಿದ್ದ ಈ ಪ್ರದೇಶದಲ್ಲಿ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಿಗೆ ಹೇಗೆ ನೀರು ಪೂರೈಸುವುದು? ಎಂದು ಸ್ವಾಮಿಗಳು ಚಿಂತಿತರಾಗಿದ್ದರು.

ಇಂಥದೇ ಚಿಂತೆ ನರೇಗಲ್ಲಿನ ದೊಡ್ಡ ಕೆರೆಯಲ್ಲಿ ಕೊಳವೆ ಬಾವಿ ತೋಡಿಸಿದವರಿಗೂ ಕಾಡತೊಡಗಿತ್ತು. ಎರಡು ದಶಕಗಳ ಹಿಂದೆ ಇಡೀ ಪಟ್ಟಣದ ನೀರಿನ ಅಗತ್ಯ ಪೂರೈಸಿ, ನೂರಾರು ಎಕರೆಗಳ ಪೈರಿಗೆ ಒಂದು ಅವಧಿಗೆ ನೀರುಣಿಸುತ್ತಿದ್ದ ನರೇಗಲ್ಲಿನ ಕೆರೆಯಲ್ಲಿ ಹೂಳು ತುಂಬಿ, ಮಳೆಯಿಲ್ಲದೇ ಬತ್ತಿಹೋಗಿತ್ತು. ಕೆರೆ ಅಂಗಳದಲ್ಲಿ ಕೊಳವೆ ಬಾವಿ ಕೊರೆಸಿ, ನೀರು ಮೊಗೆಯುವ ಉದ್ದೇಶ ಕೂಡ ವಿಫಲವಾಗುವ ಲಕ್ಷಣಗಳು ಕಂಡಾಗ ಈ ನೀರನ್ನೇ ನೆಚ್ಚಿಕೊಂಡವರು ಹತಾಶರಾಗಿದ್ದರು.

ಪನ್ನೀರೋ.. ಕಣ್ಣೀರೋ..

ಸಪ್ತಪದಿ ತುಳಿಯಲು ಹೊರಟ
ಗೆಳತಿಯ ನೋಡಲು ಹೋಗಿದ್ದೆ
ನಾ ಸಪ್ತರ್ಷಿ ಕಲ್ಯಾಣ ಮಂದಿರಕ್ಕೆ

ಸಪ್ತ ಸ್ವರಗಳ ಹಿಮ್ಮೇಳ ಮೊಳಗುತಿದ್ದ
ಕಲ್ಯಾಣ ಮಂದಿರದೊಳಗೆ ಕಾಲಿಡುತಿದ್ದಂತೆ
'ಪನ್ನೀರ ಸ್ವಾಗತ' ಕೋರಲು ನಿಂತಿದ್ದ
ಅವಳ ನೋಡಿದೆ, ಆಹಾ! ಜಗತ್ ಸುಂದರಿಯವಳು

ನಾ ಕೊಟ್ಟ ನಗೆ ಮಲ್ಲಿಗೆಯ ಮುಡಿದವಳಿಗೆ
ಬೆಳ್ಳಿ ಕಾಲುಂಗುರವ ತೊಡಿಸಿ,ನನ್ನ
ಹೃದಯದ ಮನೆಗೆ ಸ್ವಾಗತಿಸಲೇ

ಬರುತ್ತತರುತ್ತಂಗಳ್ಗೆ ಬರ್ತತರ್ತಂಗಳೋಡುಶಿಷ್ಟಂಗಳ್ ಬತ್ತತತ್ತಂಗಳ್ ಗಾವಿಲಂಗಳ್ ಅಂತೆಯೇ ಹೋಗುತ್ತಾಗುತ್ತಂಗಳ್ಗೆ ಹೊಗ್ತಾಗ್ತಂಗಳ್ ಹೋಯ್ತಾಯ್ತಂಗಳ್

ಬರುತ್ತ, ತರುತ್ತಗಳಿಗೆ ಶಿಷ್ಟರು ವೇಗವಾಗಿ ಬರ್ತ ತರ್ತ ಎಂದರೆ ಹಳ್ಳಿಗರು ಬತ್ತ ತತ್ತ ಎಂದು ಬೞಸುತ್ತಾರೆ.
ಬರುತ್ತಾರೆ->ಬರ್ತಾರೆ->ಬತ್ತಾರೆ. ಹಾಗೆಯೇ ತರ್ ರೂಪಗಳು ಹಾಗೆ ಆಗುತ್ತ ಹೋಗುತ್ತ ವೇಗಶಿಷ್ಟರೂಪ ಆಗ್ತ, ಹೋಗ್ತ. ಹಳ್ಳಿಗರ ಬಾಯಲ್ಲಿ ಆಯ್ತ, ಹೋಯ್ತ ಅಂದರೆ ಆಯ್ತದೆ, ಹೋಯ್ತದೆ ಎನ್ನುತ್ತಾರೆ.

ಗಾದೆಗಳು - ಗಂಡ-ಹೆಂಡತಿ ! (ಗಂಡಸು-ಹೆಂಗಸು- ಸಂಬಂಧಪಟ್ಟ ಗಾದೆಗಳು)

ಕಳೆದ ಬಾರಿ ಸುಮ್ಮನೆ ೧೦ ಗಾದೆಗಳನ್ನು ಬರೆದಿದ್ದೆ. ಈ ಸಾರಿ ಒಂದು ವಿಷಯವನ್ನಿಟ್ಟುಕೊಂಡು ಅದರ ಮೇಲೆ ಗೊತ್ತಿರುವ ಗಾದೆಗಳನ್ನು ಬರೆದರೆ ಇನ್ನೂ ಹೆಚ್ಚು ಮಜ ಸಿಗುತ್ತೆ ಅಂತ ನನ್ನ ಅನಿಸಿಕೆ. ನೀವೆಲ್ಲಾ ಏನಂತೀರಾ? ಅಂದಹಾಗೆ, ನನ್ನ ಗಾದೆಗಳು-ಅರಿವು ಲೇಖನಕ್ಕೆ ಪ್ರತಿಕ್ರಿಯಿಸಿದ ನಿಮಗೆಲ್ಲಾ ಹೃತ್ಪೂರ್ವಕ ಧನ್ಯವಾದಗಳು! ಕೆಳಗಿದೆ ಇನ್ನಷ್ಟು ಗಾದೆಗಳು!

‘ಅಕ್ಕ ಸೀತಾ ನಾನೂ ನಿನ್ನಂತೆ ಶಂಕಿತ’

ಅವತ್ತು, ಪೀರ್‌ಬಾಷಾ ಅವರ ಮಾತೃಭೂಮಿಕವನ ಬಹಳಷ್ಟು ಜನರಿಗೆ ಅರಗಿಸಿಕೊಳ್ಳುವುದು ಕಷ್ಟ ಎಂದು ಗೆಳೆಯ ಕುಮಾರ್ ತಮ್ಮ ಬ್ಲಾಗಿನಲ್ಲಿ ಹೇಳಿದ್ದರು.

ಪ್ರಶ್ನೆಗಳು ?

"ಇತ್ತೀಚೆಗೆ ಯಾಕೋ ಸರಿಯಾಗಿ ನಿದ್ದೆ ಬರ್ತಾ ಇಲ್ಲ. ಬೇಡದ ಯೋಚನೆಗಳು. ಕೆಲವೊಮ್ಮೆ ನಿದ್ದೆ ಬಂದಿದ್ರು ಬೆಂಬಿಡದೆ ಕಾಡಿಸುವ ಸಾವಿನ ಕನಸುಗಳು. ಕನಸುಗಳಿಗೆ ಅದೆಷ್ಟು ಶಕ್ತಿ. ನಮ್ಮಲ್ಲೇ ಹುಟ್ಟಿ, ನಮ್ಮ ಆಲೋಚನೆಗಳಲ್ಲೇ ಬೆಳೆದು, ನಮ್ಮನೆ ತಿನ್ನಲು ಬಯಸುತ್ತವೆ. ಪ್ರತಿಯೊಂದು ಕನಸಿಗೂ ಅರ್ಥ ಇದೆಯಾ? ಅವೇನು ಭವಿಷ್ಯದ ಮುನ್ಸೂಚನೆಗಳೇ, ಭೂತಕಾಲದ ಪಾಪದ ಪ್ರಜ್ನೆಗಳೆ?

ಕಣ್ಣುಗಳಲ್ಲಿ ಕನಸುಗಳಿವೆ, ಆದರೆ.......

ಬೆಳ್ತಂಗಡಿ ತಾಲೂಕಿನ ಕೊಕ್ಕಡ ಎಂಬ ಊರಲ್ಲಿರುವ ಒಂದು ಬಡ ಕುಟುಂಬ. ಗಂಡ ಟ್ಯಾಕ್ಷಿ ಡ್ರೈವರ್. ಹೆಸರು ಬಿಜು ಎಂ.ಎಸ್. ಪತ್ನಿ ಲಲಿತಾ ಬಿ.ಎಮ್. ಲ್ಯಾಬ್ ಟೆಕ್ನೀಷಿಯನ್. ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದವರಿಗೆ ೨೦೦೭ ನವಂಬರ್ ೬ ಸಂತೋಷದ ದಿನವಾಗಿತ್ತು. ಆದರೆ ಸಂತೋಷದ ಜತೆಗೆ ತಾಪತ್ರಯಗಳ ಸುರಿಮಳೆಯೇ ಸುರಿಯಲು ತೊಡಗಿತು.