ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬೋಗಿ ಸಂಖ್ಯೆ ಸಾ.೪

(ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾದ ಕಥೆ)
ಬಾಗಿಲಿನವರೆಗೂ ಉದ್ದಕ್ಕೆ ಇದ್ದ ಸರದಿಯನ್ನು ಸೇರಿಕೊಂಡು ಬಹಳ ಪ್ರಯಾಸದಿಂದ ಕೌಂಟರ್‍‍ನ ಬಳಿ ಬರುವಾಗ ಬೆವತು ಹೋಗಿದ್ದ ಮುಖವನ್ನು ಕರ್ಚಿಪ್‍ನಿಂದ ಒರೆಸಿಕೊಂಡು ಟಿಕೇಟ್‍ಗಾಗಿ ಕೈ ತೂರಿಸಿ, ಪಡೆದುಕೊಂಡು ಹಿಂತಿರುಗಿದ ಸ್ವರಳಿಗೆ ಆತ ಮತ್ತೊಮ್ಮೆ ಕಾಣಿಸಿದ!
ಅವಳ ಹಿಂದೆಯೆ ನಿಂತು ಆತ ಟಿಕೇಟು ಖರೀದಿಸಿದ್ದ! ಬಸ್ಸು ಇಳಿದು ರೈಲು ನಿಲ್ದಾಣದವರೆಗೆ ನಡೆದು ಬರುತ್ತಿರುವಾಗಲೂ ಆತ ಹಿಂಬಾಲಿಸಿಕೊಂಡೇ ಬಂದಿದ್ದ!
ಅಪರಿಚಿತ ಅವಳನ್ನು ಕಂಡು ಮುಗಳ್ನಕ್ಕ. ಸ್ವರ ಹೆದರಿ ಮೆಲ್ಲಗೆ ಮೈ ಅದುರಿಸಿದಳು. ರೈಲು ಬರಲು ಇನ್ನೂ ಅರ್ಧ ಗಂಟೆಯಿತ್ತು. ಅವನಿಂದ ತಪ್ಪಿಸಿಕೊಳ್ಳುವುದು ಅನಿವಾರ್ಯ. ವೇಗದ ನಡುಗೆಯಲ್ಲಿ ಪ್ಲಾಟ್‍ಫಾರಂನಲ್ಲಿ ಹೆಜ್ಜೆ ಸರಿಸುತ್ತಾ ಪುಸ್ತಕದ ಅಂಗಡಿಯ ಮುಂದೆ ನಿಂತು ಹಿಂತಿರುಗಿದಳು. ಅಪರಿಚಿತ ಕಾಣಿಸದಾದಾಗ ನಿಟ್ಟುಸಿರಿಟ್ಟು ಪುಸ್ತಕಗಳ ಕಡೆಗೆ ಗಮನ ಹರಿಸಿದಳು. ಒಂದೆರಡು ವಾರಪತ್ರಿಕೆಗಳನ್ನು ತೆಗೆದುಕೊಂಡು ಸಿಮೆಂಟ್ ಬೆಂಚಿನ ಕಡೆಗೆ ನಡೆಯುವಾಗ ಆತ ಅವಳ ಹಿಂದೆ ಮುಗುಳ್ನಗುತ್ತಾ ನಿಂತಿದ್ದ!
ಒಂದು ಕ್ಷಣ ಬೆದರಿದ ಹುಡುಗಿ ಸರಸರನೆ ನಡೆದು ಬಾಗಿಲ ಕಡೆಗಿದ್ದ ರೈಲ್ವೆ ಠಾಣೆಯ ಮುಂದಿನ ಬೆಂಚಿನ ಮೇಲೆ ಕುಳಿತು ನೋಡಿದಳು. ಆತ ಕಾಣಿಸಲಿಲ್ಲ. ನೋಡೋದಿಕ್ಕೆ ಸ್ಫುರದ್ರೂಪಿ ಯುವಕ. ದುಂಡು ಮುಖದ ದಪ್ಪ ಮೀಸೆಯ ಬಿಳಿ ಚಹರೆಯ ಯುವಕ ಆಕರ್ಷಕವಾಗಿದ್ದ. ಅಂತಹ ಸುಂದರ ಯುವಕ ತನ್ನ ಹಿಂದೆ ಬಿದ್ದಿದ್ದೇಕೆ? ಸ್ವರಳಿಗೆ ತಿಳಿಯಲಿಲ್ಲ.
ಆತ ಮಲೆಯಾಳಂ ಪತ್ರಿಕೆಯೊಂದನ್ನು ಹಿಡಿದುಕೊಂಡು ಘಳಿಗೆಗೊಮ್ಮೆ ಸ್ವರಳನ್ನು ಗಮನಿಸುತ್ತಿದ್ದ.
ಅಲ್ಲಲ್ಲಿ ನೇತು ಹಾಕಿದ್ದ ಟಿ.ವಿ. ಯಲ್ಲಿ ಯಾವುದೋ ಕನ್ನಡದ ಚಿತ್ರಗೀತೆಗಳು ಪ್ರಸಾರವಾಗುತ್ತಿದ್ದವು. ರೈಲ್ವೆ ನಿಲ್ದಾಣದಲ್ಲಿ ಅಷ್ಟೊಂದು ಜನರಿರಲಿಲ್ಲ. ಇನ್ನರ್ಧ ಗಂಟೆಯಲ್ಲಿ ಶೋರ್‍‍ನೂರ್‍‍ಗೆ ಹೊರಡುವ ರೈಲು ಫ್ಲಾಟ್‍ಫಾರಂ ಅನ್ನು ತಲುಪಲಿದೆ ಎಂದು ಉದ್ಗೋಷಕಿ ಹೇಳಿದ್ದರಿಂದ ಸ್ವರ ಅಲ್ಲಿಯೇ ಕುಳಿತಿದ್ದಳು.
ಇದ್ದಕ್ಕಿದ್ದಂತೆ ಟಕ್ ಟಕ್ ಸದ್ದಿನೊಂದಿಗೆ ಧ್ವನಿ ವರ್ಧಕದಲ್ಲಿ ಮಾತುಗಳು ಆರಂಭವಾದವು.

ವಚನ - ಜಾಲ!

ಹೊನ್ನು ಮಣ್ಣು ಹೆಣ್ಣಿಗೆ ಸಂಬಂದ ಪಟ್ಟಂತೆ ಅಲ್ಲಮ ಪ್ರಭುಗಳ ಒಂದು ವಚನ ಹೀಗಿದೆ.

ಹೊನ್ನು ಮಾಯೆ ಎಂಬರು ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆ ಎಂಬರು ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆ ಎಂಬರು ಮಣ್ಣು ಮಾಯೆಯಲ್ಲ
ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ

ಇದೆ ವಿಷಯಕ್ಕೆ ಸಂಬಂಧಿಸಿದಂತೆ ಸವಿತಾ ಅವ್ರು ಈ ಕೆಳಗಿನ ಎರಡು ವಚನಗಳನ್ನು ಹುಡುಕಿ ಪ್ರತಿಕ್ರಿಯಿಸಿದ್ದರು.

ನಿನ್ನಯ ಗುರುತು

ನನ್ನ ಎದೆಯಲಿ ಮೂಡಿದ ನೆನೆಪು

ನಿನ್ನ ಒಲವಿನ ಗುರುತು ಕಣೇ

ಗಗನದಿ ಮಿನುಗುವ ಚುಕ್ಕಿಯು ಕೂಡ

ನಿನ್ನ ಕಂಗಳ ಪ್ರತಿಬಿಂಬ ಕಣೇ

 

ಅರಳಿದ ತಾವರೆ ಎಲೆಗಳ ಮೇಲೆ

ನಾಟ್ಯವಾಡುವ ಪುಟ್ಟ ಇಬ್ಬನಿಯೇ

ಎಸ್. ಎಮ್. ಎಸ್. ಮಾಡಿ, ನೆತ್ತರು ಪಡೆಯಿರಿ.

ಇಂದು ಬೆಳಿಗ್ಗೆ ಮಿಂಚಂಚೆಯಲ್ಲಿ ಬಂದಿದ್ದನ್ನು ಇಲ್ಲಿ ಹಂಚಿಕೊಳ್ಳಲು ಇಷ್ಟಪಡುತ್ತೇನೆ.

ಈಗ, ಬೇಕಾಗಿರುವ ರಕ್ತವನ್ನು ಪಡೆಯುವುದು ತುಂಬಾ ಸುಲಭವಾಗಿದೆ.

ಮಾಡಬೇಕಾಗಿರುವುದು ಇಷ್ಟೆ.

ಭಾವಗೀತೆ

ಈ ಸ೦ಜೆ ಕೆಲಸದಿ೦ದ ಮನೆಗೆ ಬ೦ದು ದಿನನಿತ್ಯ ಹೋಗೋ ಹಾಗೆ ವ್ಯಾಯಮ (ಜಿಮ್) ಮಾಡಲು ಹೋಗಿ ನನ್ನ ಐಪಾಡ್ ಆನ್ ಮಾಡಿದಾಗ ಭಾವಗೀತೆಗಳ ಒ೦ದು ಫ಼ೋಲ್ಡರ್ ಕಾಣಿಸಿತು. ಸರಿ ಭಾವಗೀತೆ ಕೇಳಿ ಸುಮಾರು ದಿನ ಆಗಿದೆ ಕೇಳೋಣ ಅ೦ತ ಹಾಕಿದಾಗ ಜಿ ಎಸ್ ಶಿವರುದ್ರಪ್ಪನವರು ಬರೆದು ಸಿ.ಅಶ್ವಥ್ ರವರು ಹಾಡಿರುವ ಈ ಒ೦ದು ಸುಮಧುರ ಗಾನ ನನ್ನ ಮನ್ನಸೆಳೆಯಿತು.

ಬ್ರಾಹ್ಮಣನಾಗಲು

ಅವರಿವರು ಅಂದರು

ನಾನು ಬ್ರಾಹ್ಮಣನೆಂದು|

ನನಗರಿವಿತ್ತು ಅಲ್ಲವೆಂದು|

ನಿತ್ಯವೂ ಅದೇ ತುಡಿತ

ನಾನು ಬ್ರಾಹ್ಮಣನೇ?

ಅದೇ ಕೊಳಕು ಮಾತುಕತೆ

ಅದೇ ಕಾಡುಹರಟೆ

ಅದೇ ದುಶ್ಷ್ಚಿಂತೆ

ಅದೇ ದುಡಿತ

ಅದೇ ಭೋಗ

ಅದೇ ಜೀವನ ಜಂಜಾಟ

ಕೋಪ-ತಾಪ

ಮುನಿಸು-ಹೊಲಸು

ಹೊಡೆದಾಟ-ಬಡಿದಾಟ

ಎಲ್ಲವೂ ಶೂದ್ರಾತಿಶೂದ್ರ

ದಾಸರ ದಾಸ ಕನಕದಾಸ

ಕರ್ನಾಟಕದಲ್ಲಿ ಹರಿದಾಸ ಪರಂಪರೆ ಸುಮಾರು ೫೦೦ ವರ್ಷಗಳ ಬಹುದೊಡ್ಡ ಇತಿಹಾಸ ಹೊಂದಿದೆ. ಹಿಂದೂಸ್ಥಾನಿ ಸಂಗೀತ ಪಿತಾಮಹ ಪುರಂದರದಾಸರ ನಂತರ ಆ ಸ್ಥಾನದಲ್ಲಿ ನಿಲ್ಲುವುವರೆಂದರೆ ಕನಕದಾಸರು. ದಾಸ ಪರಂಪರೆ ಸಮಾಜದ ವರ್ಗ ಸಂಘರ್ಷ, ಜಾತಿ ಸಂಘರ್ಷವನ್ನು ಕರ್ಮುಠ ಸಿದ್ಧಾಂತಗಳನ್ನು ಹೆಕ್ಕಿ ಅದರ ನಿರುಪದ್ರವಿ ಗುಣಗಳನ್ನು ತಿಳಿಸಿದರು.

ದಾಸ ಶ್ರೇಷ್ಠ ಕನಕದಾಸ..

ಕರ್ನಾಟಕದಲ್ಲಿ ಹರಿದಾಸ ಪರಂಪರೆ ಸುಮಾರು ೫೦೦ ವರ್ಷಗಳ ಬಹುದೊಡ್ಡ ಇತಿಹಾಸ ಹೊಂದಿದೆ. ಹಿಂದೂಸ್ಥಾನಿ ಸಂಗೀತ ಪಿತಾಮಹ ಪುರಂದರದಾಸರ ನಂತರ ಆ ಸ್ಥಾನದಲ್ಲಿ ನಿಲ್ಲುವುವರೆಂದರೆ ಕನಕದಾಸರು. ದಾಸ ಪರಂಪರೆ ಸಮಾಜದ ವರ್ಗ ಸಂಘರ್ಷ, ಜಾತಿ ಸಂಘರ್ಷವನ್ನು ಕರ್ಮುಠ ಸಿದ್ಧಾಂತಗಳನ್ನು ಹೆಕ್ಕಿ ಅದರ ನಿರುಪದ್ರವಿ ಗುಣಗಳನ್ನು ತಿಳಿಸಿದರು.

ನಗೆ! ಬಗೆ-ಬಗೆ !!!

* ಹೆಂಡತಿ ಕೇಳಿದಳು : ಏನ್ರೀ, ನಮ್ ಸಿಂಗಾರಿಗೆ ಒಂದ್ ಗಂಡು ನೋಡಿದ್ವಲ್ಲಾ ಅದೇ ಸಾಫ್ಟ್ ವೇರ್ ಇಂಜಿನೀಯರ್ ಏನಾಯ್ತ್ರೀ ಅದು? ಆ ಮಧ್ಯಸ್ತ ಏನ್ ಹೇಳ್ದ?

ಗಂಡ : ಏನ್ ಹೇಳ್ದ ಅಂತ ಹೇಳ್ ಬಿಡ್ಲಾ? ಹೇಳೇ ಬಿಡ್ಲಾ?

ಹೆಂಡತಿ : ಹೇಳ್ರೀ, ಅದನ್ನೇ ಅಲ್ವಾ ಕೇಳ್ತಿರೋದು? ನಮ್ ಸಿಂಗಾರಿ ಏನಾಗಿದಾಳೆ? ತುಂಬಾ ಸುಂದರಿ.
ಗಂಡ : " ಅದು ಆಗ್ಲಿಲ್ಲ" ಕಣೆ.