ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಮ್ಮೂರಿನಲ್ಲಿ ಹೀಗೊಂದು ರಸದೌತಣ

ನಮ್ಮೂರಿನಲ್ಲಿ ಹೀಗೊಂದು ರಸದೌತಣ
ದರ್ಶನೇ ಸ್ಪರ್ಶನೇ ಚಾಸ್ಯ ಭೋಗ ಸ್ವರ್ಗಾಪವರ್ಗದೇ
ಪುನೀತೋ ವಿಪ್ರ ಹತ್ಯಾದಿ ಪಾತಕೇ ಪತಿತಂಜನಂ
ದಂಡಶ್ಶಂಬುರುಮಾ ತಂತ್ರೀ ಕಕುಭಿಃ ಕಮಲಾಪತಿಃ
ಇಂದಿರಾ ಪತ್ರಿಕಾ ಬ್ರಹ್ಮ ತುಂಬು ನಾಭಿ ಸರಸ್ವತೀ
ದೋರಕೋ ವಾಸುಕೀರ್ಜೀವಾ ಸುಧಾಂಶುಸ್ಸಾರಿಕಾ ರವಿಃ
ಸರ್ವದೇವಮಯೀ ತಸ್ಮಾತ್ ವೀಣೀಯಂ ಸರ್ವಮಂಗಳಾ||

ಸಂಪದದಲ್ಲಿ ಈ ಸಂಜೆ...

ಇಂದು ಸಂಪದ ಸಮುದಾಯದಲ್ಲಿ ಅತಿಥಿಗಳ ಸಂಖ್ಯೆ ಹೆಚ್ಚಿತ್ತು. ಸದಸ್ಯರ ಸಂಖ್ಯೆ ಕಡಿಮೆ ಇತ್ತು.

ಇಂದು ಸಂಜೆ ನಾಲ್ಕು ಘಂಟೆ ಐವತ್ತೇಳು ನಿಮಿಷಕ್ಕೆ ಸಂಪದದ ವೆಬ್ ಪೇಜ್ ನಲ್ಲಿ ಈ ರೀತಿ ಇತ್ತು.

"ಈಗಿನಂತೆ 0 ಸದಸ್ಯರು ಮತ್ತು 350 ಅತಿಥಿಗಳು ಆನ್ಲೈನ್ ಇರುವರು".

ನಂತರ ನಾನು ಲಾಗಿನ್ ಆದೆ. ಆಗ ಸಂಪದದ ವೆಬ್ ಪೇಜ್ ನಲ್ಲಿ ಈ ರೀತಿ ಇತ್ತು.

ವಚನಕಾರರು - ೨

ಬಸವಣ್ಣಬಸವಣ್ಣನವರು (೧೧೩೦ - ೧೧೬೭): ಭಕ್ತಿ ಭಂಡಾರಿ ಬಸವಣ್ಣನವರು ಸಮಾಜ ಸುಧಾರಕರು. ಜನರಲ್ಲಿ ಮೇಲುಕೀಳೆಂಬ ಭಾವನೆಯನ್ನು ತೊಡೆದು ಹಾಕಲು ಯತ್ನಿಸಿ ಭಾವೈಕ್ಯತೆಯನ್ನು ಸಾಧಿಸಲು ಶ್ರಮಿಸಿದರು. ವೀರಶೈವ ಮತವನ್ನು ಬಲಪಡಿಸಿದರು.

ಗಹನವಾದ ವಿಷಯಗಳನ್ನು ವಚನಗಳ ಮೂಲಕ ತಿಳಿಗನ್ನಡದಲ್ಲಿ ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿದರು. ಹನ್ನೆರಡನೆಯ ಶತಮಾನದಲ್ಲೇ ಸಾಮಾಜಿಕ ಪ್ರಜ್ಞೆಯನ್ನು ಜನರಲ್ಲಿ ಮೂಡಿಸುವಂಥಹ ಕಾರ್ಯವು ಕನ್ನಡಿಗರಾದ ಇವರಿಂದ ನಡೆಯಿತು.

ಮೌನ....

ಮಾತಾಡಬೇಕಿದ್ದ
ಸಾವಿರ ವಿಷಯಗಳು
ಪದಸ್ಪರ್ಶದಿಂದ
ಅರ್ಥಕಳೆದುಕೊಳ್ಳುವುದೇನೊ
ಎಂಬ ಭೀತಿಯಲ್ಲಿನ ಸ್ಥಿತಿ...

ಅವಳ ಕೈಬೆರಳನು
ನನ್ನ ಅಂಗೈಯೊಳಗೆ
ಹುದುಗಿಸಿಕೊಂಡು ಗಂಟೆಗಟ್ಟಲೆ
ತುಟಿಯಲ್ಲಾಡಿಸದಿದ್ದರೂ
ಎಲ್ಲಾ ಹೇಳುವಂತಹ
ಸಂತೃಪ್ತ ಘಳಿಗೆಗಳು...

ತುಟಿಗೆ ಬೀಗ
ಜಡಿದಿರುವಾಗ
ಕಣ್ಣಿನ ನಾಲಿಗೆ
ಚರ್ಮದ ಬಾಯಿಗೆ
ತುಡಿತವೆಲ್ಲವ
ತೋಡಿಕೊಳ್ಳುವ

ನೀತಿ ಪದಗಳು

ಓದದ ಬಾಯ್,ಅಮೃತಾನ್ನವ ಮೋದದ ಬಾಯ್

ಸಜ್ಜನರ್ಕಳಮ್ ಪ್ರಿಯದಿಂದಮ್ ಆದರಿಸದ ಬಾಯ್,

ಅದು ತಾಮ್ ಮೇದಿನಿಯೊಳ್ ಬಿಲದ ಬಾಯಕ್ಕು ಚೂಡಾರತ್ನ|

ಸದ್ವಿಚಾರಗಳನ್ನು ಓದದ ಬಾಯಿ

ಒಳ್ಳೆಯ ಆಹಾರವನ್ನು ತಿನ್ನದ ಬಾಯಿ

ಸಜ್ಜನರನ್ನು ಪ್ರಿಯದಿಂದ ಆದರಿಸದ ಬಾಯಿ-ಅದು ಭೂಮಿಯಲ್ಲಿ ಬಿಲದ ಬಾಯಿದ್ದಂತೆ.

ಎಷ್ಟು ಅರ್ಥ ಗರ್ಭಿತವಲ್ಲವೇ?

ಮೆಜೆಸ್ಟಿಕ್ ನಲ್ಲಿ ಒಂದು ರಾತ್ರಿ....

ಮೊಬೈಲು ರಿಂಗಾಗ್ತ ಇತ್ತು... ಎದ್ದು ನೋಡಿದ್ರೆ ಯಾವುದೋ ಲ್ಯಾಂಡ್ ಲೈನ್ ನಂಬರ್ರು 080 ಅಲ್ಲ 0839 ಯಾರಪ್ಪ ಇದು..

’ ಹೇಳಿ’

’ ಅಣ್ಣಾ ನಾನು .. ಸುರೇಶ’

’ ಸುರೇಶನ ..’
ಕಣ್ಣು ಮುಚ್ಚೇ ಇತ್ತು ಯಾವ ಸುರೇಶ ಗೊತ್ತಾಗ್ಲಿಲ್ಲ..

’ ಅಣ್ಣಾ ನಾನು ಸುರೆಶ್ ಮೂರು ವರ್ಷದ ಹಿಂದೆ ಮೆಜೆಸ್ಟಿಕ್ ನಲ್ಲಿ ಸಿಕ್ಕಿದ್ದೆ... ಜಯದೇವ ಹಾಸ್ಪಿಟಲ್.. ನನ್ನ ಡ್ರಾಯಿಂಗ್ ಮಾಡಿದ್ರಿ .. ನೆನಪಾಯ್ತಾ...?’

ಟೈಮ್ ನೋಡ್ದೆ ಸಂಜೆ ಐದು ಮೂರು ದಿನಗಳಿಂದ ನಿದ್ದೆ ಇಲ್ದೀರ ವಿವೇಕನಿಗೆ ಅವನ ಆಫೀಸ್ ಗೆ ಬೇಕಾಗಿದ್ದ ಪೈಂಟಿಂಗ್ಸ್ ಮಾಡಿ ಬೆಳಗ್ಗೆ ಒಂಬತ್ತು ಘಂಟೆಗೆ ಬಂದು ಮಲ್ಗಿದ್ದೋನು ಈಗ ಈ ಫೋನ್ ಬಂದಾಗ ಎಚ್ಚರ ಆಗ್ತಾ ಇರೋದು... ನಿದ್ದೆ ಮೂಡ್ ನಲ್ಲಿ ಸರಿಯಾಗಿ ನೆನಪಾಗ್ಲಿಲ್ಲ... ನನ್ನ ನಂಬರ್ಗೆ ಫೋನ್ ಮಾಡಿದ್ದಾನೆ... ಯಾರೋ ಇರ್ಲಿ..

’ಹೇಳಪ್ಪ ಹೇಗಿದ್ದೀಯ.. ಆರಾಮ...’