ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಏನಂತೀರಿ..??

ಹೊನ್ನು
ಮಾಯೆ ಎಂಬರು
ಹೌದು
ಹೊನ್ನು ಮಾಯೆ.
ಹೆಣ್ಣು
ಮಾಯೆ ಎಂಬರು
ಹೌದು
ಹೆಣ್ಣು ಮಾಯೆ.
ಮಣ್ಣು
ಮಾಯೆ ಎಂಬರು
ಹೌದು
ಮಣ್ಣೂ ಮಾಯೆ.

ಆದರೆ...

ಆದರೆ ...

ಈ ಹೊನ್ನು, ಹೆಣ್ಣು, ಮಣ್ಣುಗಳ
ಬೆನ್ನೇರಿ ಹೋಗುವ
ಹೋಗುವ
ಗಂಡು..ಹ್ಞಾಂ..ಗಂಡು...?
ನಾಯೇ..ನಾಯೇ...ನಾಯೇ..!!??
ಏನಂತೀರಿ..??

-ಪ್ರಶಾಂತ್ ಎಂ.ಸಿ.

ಕಾಡದಿರಲೆಂದಿಗೂ ಭೂತ ಭವಿಷ್ಯದ ಚಿಂತೆ!

ಸಖೀ,
ನೋಡು ಮರೆಯಾದ ಆ ಸೂರ್ಯ ಪಡುವಣದ ಕಡಲಲ್ಲಿ
ಸೆರೆಯಾದೆ ಇಲ್ಲಿ ನಾನು ನಿನ್ನ ಈ ಬಾಹು ಬಂಧನದಲ್ಲಿ

ದಿನದ ನೋವುಗಳನ್ನೆಲ್ಲಾ ನಾವು ಮರೆಯೋಣ ಬಾ
ನಮ್ಮದೇ ಲೋಕದಲ್ಲಿ ಒಂದಾಗಿ ವಿಹರಿಸೋಣ ಬಾ

ಕೊಂಡೊಯ್ಯಲಿ ನಮ್ಮನ್ನುತ್ತುಂಗಕ್ಕೆ ಸುಖದ ಮತ್ತು ಏರಿ
ನೋಡಿಕೊಂಡಿರು ಬೀಳದಂತೆ ನಾನಿನ್ನ ತೆಕ್ಕೆಯಿಂದ ಜಾರಿ

ಹುಣ್ಣಿಮೆಯ ಚಂದಿರನು ನಗುವಂತೆ ಆ ಬಾನಂಗಳದಲ್ಲಿ

ಹಾವೇರಿ ಗೋಲಿಬಾರ್..ನೈಜ ಘಟನೆಗಳ ಚಿತ್ರಣ..ಪುಸ್ತಕ ಹಾಗು ಸಿ.ಡಿ.ಬಿಡುಗಡೆ ಸಮಾರಂಭ.

ರಸಗೊಬ್ಬರಕ್ಕಾಗಿ ಪರಿತಪಿಸಿ ಹೋರಾಟಕ್ಕಿಳಿದಿದ್ದ ಹಾವೇರಿ ರೈತರ ಮೇಲಿನ ಗೋಲಿಬಾರ್ ಅನಿರೀಕ್ಷಿತ ಹಾಗು ಆಕಸ್ಮಿಕ. ಆದರೆ ಪೊಲೀಸರ ಬಂದೂಕಿನಿಂದ ಗುಂಡು ಸಿಡಿದ ಕ್ಷಣದಿಂದ ಪ್ರಜ್ನಾವಂತರಾದಿಯಾಗಿ ರಾಜ್ಯದಾದ್ಯಂತ ಸಾರ್ವಜನಿಕರಲ್ಲಿ ಮೂಡಿದ ಪ್ರಶ್ನೆಗಳು ಸಾವಿರಾರು. ಗೋಲಿಬಾರ್ ಆಗಿದ್ದೇಕೆ? ಗುಂಡು ಸಿಡಿದಿದ್ದೆಲ್ಲಿಂದ? ಆ ಕ್ಷಣದಲ್ಲಿ ಅಲ್ಲಿ ನಡೆದಿದ್ದಾರೂ ಏನು?

ಅಮ್ಮ…

ಅಮ್ಮನೊಡನೆ ಕಣ್ಣಲ್ಲಿ
ಕಣ್ಣಿಟ್ಟು ಮಾತನಾಡಲಾಗುತ್ತಿಲ್ಲ,
ಯಾವ ಸ್ಕೂಲಿಗೆ ಹೋಗದಿದ್ದರೂ
ನನ್ನ ಕಣ್ಣನ್ನು ಚೆನ್ನಾಗಿ ಓದಬಲ್ಲಳು…

ಕೈತುತ್ತು ನೀಡುತಿರುವಾಗ
ಅವಳ ಸಾವಿರ ಕಾಳಜಿಯ ಪ್ರಶ್ನೆಗಳು,
ಉತ್ತರಿಸುವಾಗ ಮೂಡಿದ
ಗದ್ಗದತೆಯನ್ನು ಅನ್ನದಗುಳು
ನುಂಗುವ ನೆಪದಲ್ಲಿ ಮರೆಮಾಚುತ್ತಿದ್ದೇನೆ..

ಯಾಕೋ ಸನಿಹ ಸುಳಿಯಲೂ
ಧೈರ್ಯ ಸಾಲುತಿಲ್ಲ..

ಅತಿಥಿ - ಅಭ್ಯಾಗತ

ತುಂಬ ಹಿಂದೆ ಎಲ್ಲೊ ಕೇಳಿದ ನೆನಪು. ಆ ಆಧಾರದಲ್ಲಿ ಬರೆಯುತ್ತಿದ್ದೇನೆ.

ಅತಿಥಿ ಅಂದ್ರೆ ಕರೆಸಿ ಕೊಂಡು ( invite ಮಾಡಿಸಿಕೊಂಡು) ಬರುತ್ತಾನಲ್ಲ ಅವನು. invitee.

ಕರೆಸಿಕೊಳ್ಳದೆ ಅನಿರೀಕ್ಷಿತವಾಗಿ ಬರುವವನಿಗೆ ಅಭ್ಯಾಗತ ಅನ್ನೋ ಹೆಸರು ಇದೆ ಅಂತೆ.

ಆದರೆ ನಾವು ಇಂದು ಅಭ್ಯಾಗತರನ್ನೇ ಅತಿಥಿ ಮಾಡಿಕೊಂಡಿದ್ದೇವೆ. ಇರಲಿ ಇದೆಲ್ಲಾ ಸಂಸ್ಕ್ರತ! :)

ಕಾಸರಗೋಡಿನ ಕನ್ನಡಿಗರ ಹೋರಾಟಕ್ಕೆ ಕ.ರ.ವೇ. ಬೆಂಬಲ - ಮಿಂಚೆ ಬಂದಿತ್ತು

ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವ ಹೋರಾಟವನ್ನು ಕರ್ನಾಟಕ ರಕ್ಷಣಾ ವೇದಿಕೆ ಮಂಗಳೂರಿನಿಂದ ಬೆಂಗಳೂರಿಗೆ ಕೊಂಡೊಯ್ಯಲಿದೆ ಎಂದು ವೇದಿಕೆ ಅಧ್ಯಕ್ಷ ನಾರಾಯಣ ಗೌಡರು ಘೋಷಿಸಿದರು. ಅದರ ವರದಿಯನ್ನು ಇಲ್ಲಿ ಓದಿ

http://karave.blogspot.com/ 2008/11/blog-post.html

ಈ ಮಗುವಿನ ಕೈನಲ್ಲಿ ಅವನ ತಂದೆಯ ಕೊಲೆ ಆಗುತ್ತದೆ

ಆಕೆ ನಡುಗಿ ಹೋದಳು. ಅವಳ ಗಂಡ ಜೋರಾಗಿ ನಕ್ಕು ಮಗುವನ್ನು ಹತ್ತಿರಕ್ಕೆಳೆದುಕೊಂಡ . ಜ್ಯೋತಿಷಿ ಮಾತ್ರ ಗಂಭೀರವಾಗಿ ಮೇಲಿನ ಮಾತನ್ನು ಹೇಳಿದ.
"ಸ್ವಾಮಿ ನೀವು ಹೇಳ್ತಿರೋದು ನಿಜಾನಾ? ಇನ್ನೊಂದು ಸಲ ನೋಡಿ . ಎಲ್ಲೋ ಜಾತಕ ಬದಲಾಗಿರಬೇಕು" ಆಕೆ ಗಡಿಬಿಡಿಯಿಂದ ಹೇಳಿದಳು.
"ಇಲ್ಲ ನಿಮ್ಮ ಮಗುವಿನ ರಾಶೀನೆ ಹಾಗಿದೆ.
ಅವನ ಜಾತಕದಲ್ಲೇ ಈ ಥರ ಇದೆ."
ಅವಳು ಜೋರಾಗಿ ಉಸಿರೆಳೆದುಕೊಂಡಳು

Sepillng Msikate - ನಿಮಗೆ ಇಂಗ್ಲಿಷ್ ತಪ್ಪಿಲ್ಲದೆ ಓದ್ಲಿಕ್ಕೆ ಬರುತ್ತಾ? ಇದನ್ನೊಮ್ಮೆ ಓದಿ ನೋಡಿ

This is quite amazing! really.

Aoccdrnig to a rscheearch at an Elingsh uinervtisy, it deosn't mttaer in waht oredr the ltteers in a wrod are, the olny iprmoetnt tihng is taht frist and lsat ltteer is at the rghit pclae. The rset can be a toatl mses and you can sitll raed it wouthit porbelm. Tihs is bcuseae we do not raed ervey lteter by itslef but the wrod as a wlohe.

Ceehrs!!!!

ಭಾರತಕ್ಕೆ ಮರಳಿ ಬಂದ ಬಾರ್ಡರ್‍-ಗವಾಸ್ಕರ್‍ ಟ್ರೋಫಿ

ಭಾರತ ತಂಡದ ವಿಜಯೋತ್ಸವ... ಇಂದು ಕ್ರಿಕೆಟ್ ಲೋಕದಲ್ಲಿ ಭಾರತಕ್ಕೆ ಅತ್ಯಂತ ಸ್ಮರಣೀಯ ದಿನ.

ಇಂದು ಭಾರತ ಆಸ್ಟ್ರೇಲಿಯಾವನ್ನು ೧೭೨ ರನ್ ಗಳ ಅಂತರದಿಂದ ಸೋಲಿಸಿ ಬಾರ್ಡರ್‍-ಗವಾಸ್ಕರ್‍ ಟ್ರೋಫಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.

೨೦೦೪ರಲ್ಲಿ ಭಾರತದಲ್ಲಿ ಆಡಿದ್ದಾಗ ಈ ಟ್ರೋಫಿಯನ್ನು ಆಸ್ಟ್ರೇಲಿಯಾಗೆ ಬಿಟ್ಟುಕೊಟ್ಟಿತ್ತು.

೨೦೦೭/೦೮ ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯಲ್ಲೂ ಭಾರತ ೨-೧ ಅಂತರದಿಂದ ಸೋತಿತ್ತು.